೯. ಶ್ರೀಮದ್-ಭಗವದ್ಗೀತಾ-ಪೀಠಿಕಾ ೬
೯. ಶ್ರೀಮದ್-ಭಗವದ್ಗೀತಾ-ಪೀಠಿಕಾ ೭
(೨೪) ಶ್ರೀಮದ್ಭಗವದ್ಗೀತಾ-ಭಾಷ್ಯಾರ್ಕಪ್ರಕಾಶಃ ಶ್ರೀಶಾಂಕರಭಾಷ್ಯೋಪೇತಃ— ಶ್ರೀಬೆಲ್ಲಂಕೊಂಡ ರಾಮರಾಯಕವೀಂದ್ರವಿರಚಿತಃ
ಉಪೋದ್ಘಾತಃ
ಶಿವನಾಮ್ನಿ ವಿಭಾವಿತೇऽನ್ತರಂಗೇ ಮಹತಿ ಜ್ಯೋತಿಷಿ ಮಾನಿನೀಮಯಾರ್ಥೇ |
ದುರಿತಾನ್ಯಪಯಾನ್ತಿ ದೂರದೂರಂ ಮುಹುರಾಯಾನ್ತಿ ಮಹನ್ತಿ ಮಂಗಲಾನಿ ||
(ಮಾನಿನೀಮಯಾರ್ಥೇ) ಅತ್ಯಂತ ಗೌರವಯುತವಾದ ಪರಮಪುರುಷಾರ್ಥವೆನಿಸಿದ ಮೋಕ್ಷಾರ್ಥವನ್ನು, (ಅನ್ತರಂಗೇ) ಅಂತರಂಗದ, (ಮಹತಿ ಜ್ಯೋತಿಷಿ) ಮಹತ್ ಜ್ಯೋತಿಸ್ವರೂಪನಾದ, (ಶಿವನಾಮ್ನಿ ವಿ-ಭಾವಿತೇ) ಶಿವನೆಂಬ ನಾಮದಲ್ಲಿ ವಿಶೇಷವಾಗಿ ಭಾವಿಸಿದಾಗ, (ದುರಿತಾನಿ ದೂರದೂರಮ್ ಅಪಯಾನ್ತಿ) ಪಾಪಗಳೆಲ್ಲ ದೂರ ದೂರ ಸರಿದು, (ಮುಹುಃ, ಮಹನ್ತಿ ಮಂಗಲಾನಿ ಆಯಾನ್ತಿ) ಮತ್ತೆ ಮತ್ತೆ ಮಹಾ ಮಂಗಲಗಳೇ ಬಂದೊದಗುತ್ತವೆ.
ಸ್ಮೃತೇ ಸಕಲಕಲ್ಯಾಣ-ಭಾಜನಂ ಯತ್ರ ಜಾಯತೇ |
ಪುರುಷಸ್ತಮಜಂ ನಿತ್ಯಂ ವ್ರಜಾಮಿ ಶರಣಂ ಹರಿಮ್ ||
(ಪುರುಷಃ ಸ್ಮೃತೇ) ಪರಮಪುರುಷನನ್ನು ಸ್ಮರಿಸಲಾಗಿ, (ಸಕಲಕಲ್ಯಾಣಭಾಜನಂ ಯತ್ರ ಜಾಯತೇ) ಸಕಲಕಲ್ಯಾಣಕ್ಕೂ ಪಾತ್ರತೆಯು ಎಲ್ಲಿ ಉಂಟಾಗುವುದೋ, (ತಂ ಶರಣಮ್, ಅಜಮ್) ಅಂತಹ ಶರಣಾಗತರಿಗೆ ಆಶ್ರಯನಾದ ಜನ್ಮರಹಿತನೂ, (ನಿತ್ಯಂ ಹರಿಂ) ನಿತ್ಯನೂ ಆದ ಶ್ರೀಹರಿಯನ್ನು, (ನಿತ್ಯಂ ಶರಣಂ ವ್ರಜಾಮಿ) ಸದಾ ಶರಣುಹೊಂದುತ್ತೇನೆ.
ಆತಾಮ್ರಪಾಣಿಕಮಲಪ್ರಣಯಪ್ರತೋದಮಾಲೋಲಹಾರಮಣಿಕುಂಡಲಹೇಮಸೂತ್ರಮ್ |
ಆವಿಶ್ಶ್ರಮಾಂಬುಕಣಮಂಬುದನೀಲಮವ್ಯಾದಾದ್ಯಂ ಧನಂಜಯರಥಾಭರಣಂ ಮಹೋ ನಃ ||
(ಆ-ತಾಮ್ರ-ಪಾಣಿಕಮಲ-ಪ್ರ-ಣಯ-ಪ್ರತೋದಮ್) ಕೆಂಪಾದ ಕರಕಮಲಗಳಿಂದ ಚಾಟಿಯ(ಪ್ರತೋದವ)ನ್ನು ಬಿಗಿಯಾಗಿ ಹಿಡಿದಿರುವ, (ಆ-ಲೋಲ-ಹಾರ-ಮಣಿಕುಂಡಲ-ಹೇಮಸೂತ್ರಮ್) ಓಲಾಡುತ್ತಿರುವ ಹಾರ, ಮಣಿಮಯ ಕರ್ಣಕುಂಡಲಗಳು, ಚಿನ್ನದ ಹಾರ—ಇವುಗಳನ್ನು ಧರಿಸಿರುವ, (ಶ್ರಮಾಂಬುಕಣಮ್) ದುಷ್ಟಸಂಹಾರಾದಿ ಲೀಲೆಗಳಿಂದ ಶ್ರಾಂತನಾಗಿ (ಸುಸ್ತಾಗಿ) ಬೆವರಹನಿಗಳು (ಆವಿಃ) ಸ್ಪಷ್ಟವಾಗಿ ತೋರುವಂತಹ ಮೈಯುಳ್ಳ, (ಅಂಬುದ-ನೀಲಮ್) ನೀಲಮೇಘವರ್ಣನಾದ, (ಧನಂಜಯರಥಾಭರಣಮ್) ಪಾರ್ಥನ ರಥಕ್ಕೆ ಅಲಂಕಾರಪ್ರಾಯನಾದ, (ಆದ್ಯಮ್) ಎಲ್ಲಕ್ಕೂ ಮೊದಲಿನವನೂ ಮುಖ್ಯನೂ, (ಮಹಃ) ತೇಜಃಪುಂಜನೂ, ಸರ್ವಪೂಜ್ಯನೂ ಆದ ಜಗದ್ಗುರು ವಾಸುದೇವ ಕೃಷ್ಣನು, (ನಃ = ಅಸ್ಮಾನ್) ನಮ್ಮನ್ನು, (ಅವ್ಯಾತ್) ರಕ್ಷಿಸಲಿ.
ಶ್ರೀಮದ್ಧಯಗ್ರೀವಪದಾರವಿಂದ-ಮಾರಂದಸಾನಂದಮನೋಮಿಲಿಂದಃ |
ರಾಮಃ ಕವಿರ್ವ್ಯಾಪ್ರಿಯತೇ ಯಥಾರ್ಥ-ಗೀತಾರ್ಥಭಾಷ್ಯಾರ್ಥವಿಮರ್ಶನಾರ್ಥೇ ||
ಶ್ರೀಮದ್ ಹಯಗ್ರೀವರ ಪಾದಕಮಲದ್ವಯದ ಮಕರಂದವನ್ನು, ಆನಂದಭರಿತವಾದ ಚಿತ್ತವುಳ್ಳವನಾಗಿ ಪಾದಕಮಲದಲ್ಲೇ ನೆಟ್ಟ (ಮಿಲಿತ) ಮನವುಳ್ಳವನಾಗಿ ಸದಾ ಹೀರುತ್ತಿರುವ ಕವಿಯಾದ ಈ ಬೆಲ್ಲಂಕೊಂಡರಾಮರಾಯನು, ಯಥಾರ್ಥವಾದ— ಗೀತೆಯ ಅರ್ಥವನ್ನೂ ಗೀತಾಶಾಂಕರಭಾಷ್ಯದ ಅರ್ಥವನ್ನೂ ಚೆನ್ನಾಗಿ ವಿಮರ್ಶಿಸಲು (ಪರಿಶೋಧಿಸಲು, ವಿವೇಚಿಸಲು) ವ್ಯಾಪಕವಾಗಿ ವಿಸ್ತರಿಸುತ್ತಾನೆ / ವ್ಯಾಖ್ಯಾನಿಸುತ್ತಾನೆ / ವಿಸ್ತರಿಸುವುದರಲ್ಲಿ ಪ್ರೀತಿಯುಳ್ಳವನಾಗಿದ್ದಾನೆ.
ಅಸ್ತಿ ಖಲು ಭುವಿ ಸಮಸ್ತಾಸ್ತಿಕಜನೈರಪೌರುಷೇಯತಯಾ ಸ್ವತಃ ಪ್ರಮಾಣತಯಾ ಚಾಭ್ಯುಪಗತಃ ಪರಮೇಶ್ವರಾಜ್ಞಾರೂಪಃ ಸ್ಮೃತ್ಯಾದಿಮೂಲಪ್ರಮಾಣಂ ವೇದ ಇತಿ ಮಹಚ್ಛಾಸ್ತ್ರಮ್ | ಅನೇನ ಹಿ ಶಾಸ್ಯತೇ— ‘ಅಹರಹಸ್ಸನ್ಧ್ಯಾಮುಪಾಸೀತ, ಯಾವಜ್ಜೀವಮಗ್ನಿಹೋತ್ರಂ ಜುಹುಯಾತ್, ನ ಪರದಾರಾನ್ ಗಚ್ಛೇತ್, ನ ಸುರಾಂ ಪಿಬೇ’ ದಿತ್ಯಾದಿವಿಧಿನಿಷೇಧಸನ್ತತಿಃ।
ಸಮಸ್ತ ಆಸ್ತಿಕ (ವೇದಪ್ರಾಮಾಣ್ಯವಾದಿ) ಜನರಿಂದ ಅಪೌರುಷೇಯವೆಂದೂ ಸ್ವತಃ ಪ್ರಮಾಣವೆಂದೂ ಪರಿಗಣಿತವಾದ, ಪರಮೇಶ್ವರನ ಆಜ್ಞಾರೂಪವಾಗಿ ಪ್ರಭುಸಂಮತಶಾಸ್ತ್ರವೆನಿಸಿದ, ಸ್ಮೃತ್ಯಾದಿಗಳಿಗೂ ಮೂಲಪ್ರಮಾಣವಾದ ವೇದವೆಂಬ ಮಹತ್ತಮವಾದ ಶಾಸ್ತ್ರವು ಈ ಭುವಿಯಲ್ಲಿ ಇರುವುದಷ್ಟೆ? ಇದರಿಂದಲೇ ಶಾಸನಮಾಡಲ್ಪಡುತ್ತದೆ— “ದಿನದಿನವೂ ಸಂಧ್ಯೋಪಾಸನೆಯನ್ನು ಮಾಡಬೇಕು, ಜೀವವಿರುವ ತನಕವೂ ಅಗ್ನಿಹೋತ್ರವನ್ನು ಅನುಷ್ಠಾನಿಸಬೇಕು, ಪರಪತ್ನೀಸಮಾಗಮವನ್ನು ಮಾಡಬಾರದು, ಮದ್ಯವನ್ನು ಕುಡಿಯಬಾರದು” ಇತ್ಯಾದಿ ವಿಧಿ (ಮಾಡಬೇಕಾದದ್ದು), ನಿಷೇಧ (ಮಾಡಬಾರದ್ದು) ಸಮೂಹವು.
ಅಯಂ ಚ ಪೂರ್ವೋತ್ತರಭಾಗದ್ವಯಾತ್ಮಕಃ- ತತ್ರ ಕರ್ಮಕಾಣ್ಡಪ್ರತಿಪಾದಕಃ ಪೂರ್ವೋ ಭಾಗಃ- ಯಸ್ಯೈವ ಮೀಮಾಂಸಾ ಜೈಮಿನಿನಾ ಕೃತಾ ‘ಅಥಾತೋ ಧರ್ಮಜಿಜ್ಞಾಸೇ' ತ್ಯಾದಿನಾ - ಪೂರ್ವಮೀಮಾಂಸಾಶಾಸ್ತ್ರಮಿತಿ ವ್ಯವಹ್ರಿಯತೇ । ಸಾಧ್ಯಧರ್ಮಪ್ರತಿಪಾದಕಶ್ಚಾಯಮಭ್ಯುದಯಹೇತುಶ್ಚಿತ್ತಶುದ್ಧಿಜನಕತಯಾ ಜ್ಞಾನೋತ್ಪತ್ತಿಹೇತುಶ್ಚ । ಏತದುಕ್ತಕರ್ಮಮಾರ್ಗ ಏವ ‘ಕರ್ಮಯೋಗೇನ ಯೋಗಿನಾ' ಮಿತಿ ಗೀತಾಶಾಸ್ತ್ರೇ ಕರ್ಮಯೋಗ ಇತಿ ಪ್ರತಿಪಾದಿತಃ ।
ಇದಾದರೋ (ವೇದವಾದರೋ) ಪೂರ್ವ ಹಾಗೂ ಉತ್ತರವೆಂದು ೨ ವಿಭಾಗವಾಗಿರುವುದು— ಅದರಲ್ಲಿ ಕರ್ಮಕಾಂಡಪ್ರತಿಪಾದಕವಾದ ಪೂರ್ವಭಾಗವು— ಯಾವುದರ ಮೀಮಾಂಸೆಯು “ಅಥಾತೋ ಧರ್ಮಜಿಜ್ಞಾಸಾ” (ಆ ಬಳಿಕ, ಆದ್ದರಿಂದ ಧರ್ಮದ ಕುರಿತಾದ ಜಿಜ್ಞಾಸೆಯು) ಇತ್ಯಾದಿಯಾಗಿ ಜೈಮಿನಿಯಿಂದ ಮಾಡಲ್ಪಟ್ಟಿದೆಯೋ ಅದು— ಪೂರ್ವಮೀಮಾಂಸಾಶಾಸ್ತ್ರವೆಂದು ವ್ಯವಹರಿಸಲ್ಪಡುತ್ತದೆ. ಸಾಧ್ಯ(ಸಾಧಿಸಲು ಯೋಗ್ಯವಾದ)ಧರ್ಮಪ್ರತಿಪಾದಕವಾದ ಇದು ಲೌಕಿಕ ಅಭ್ಯುದಯಕ್ಕೆ ಕಾರಣವೂ, ಚಿತ್ತಶುದ್ಧಿಯನ್ನುಂಟು ಮಾಡುವುದರಿಂದ ಜ್ಞಾನೋತ್ಪತ್ತಿಗೆ ಕಾರಣವೂ ಆಗಿದೆ. ಹೀಗೆ ಹೇಳಿದ ಕರ್ಮಮಾರ್ಗವೇ ‘ಕರ್ಮಯೋಗದಿಂದ ಯೋಗಿಗಳ’ ಎಂದು ಗೀತಾಶಾಸ್ತ್ರದಲ್ಲಿ ಕರ್ಮಯೋಗವೆಂದು ಪ್ರತಿಪಾದಿತವಾಗಿದೆ.
ಅಥ ಜ್ಞಾನಕಾಣ್ಡಪ್ರತಿಪಾದಕ ಉತ್ತರೋ ಭಾಗಃ- ಯಸ್ಯೈವ ಮೀಮಾಂಸಾ ವ್ಯಾಸೇನ ಕೃತಾ ‘ಅಥಾತೋ ಬ್ರಹ್ಮಜಿಜ್ಞಾ’ಸೇತ್ಯಾದಿನಾ- ಉತ್ತರಮೀಮಾಂಸಾಶಾಸ್ತ್ರಮಿತಿ ವ್ಯವಹ್ರಿಯತೇ । ಸಿದ್ಧಬ್ರಹ್ಮಪ್ರತಿಪಾದಕಶ್ಚಾಯಂ ಮೋಕ್ಷಹೇತುಸ್ಸಾಕ್ಷಾದಿತಿ । ಏತದುಕ್ತಜ್ಞಾನಮಾರ್ಗ ಏವ ‘ಜ್ಞಾನಯೋಗೇನ ಸಾಙ್ಖ್ಯಾನಾ’ಮಿತಿ ಗೀತಾಶಾಸ್ತ್ರೇ ಜ್ಞಾನಯೋಗ ಇತಿ ಪ್ರತಿಪಾದಿತಃ ।
ಅನಂತರ, ಜ್ಞಾನಕಾಂಡವನ್ನು ಪ್ರತಿಪಾದಿಸುವ ಉತ್ತರ (ಅನಂತರದ) ಭಾಗವು— ಯಾವುದರ ಮೀಮಾಂಸೆಯು / ವಿಚಾರವು / ವಿಮರ್ಶೆಯು ವ್ಯಾಸರಿಂದ ‘ಬಳಿಕ, ಆದ್ದರಿಂದ, ಬ್ರಹ್ಮವನ್ನು ತಿಳಿಯುವ ಇಚ್ಛೆ’ ಇತ್ಯಾದಿ ವೇದಾಂತಸೂತ್ರಗಳ ಮೂಲಕ ವಿರಚಿತವಾಯಿತೋ ಅದು— ಉತ್ತರಮೀಮಾಂಸಾಶಾಸ್ತ್ರವೆಂದು ವ್ಯವಹರಿಸಲ್ಪಡುತ್ತದೆ. ಈಗಾಗಲೇ ಸ್ವಯಂಸಿದ್ಧವಾದ ಬ್ರಹ್ಮವನ್ನು ಪ್ರತಿಪಾದಿಸುವ ಇದು ನೇರವಾಗಿ ಮೋಕ್ಷಕ್ಕೆ ಕಾರಣವಾಗಿರುವುದು. ಹೀಗೆ ಹೇಳಿದ ಜ್ಞಾನಮಾರ್ಗವೇ ‘ಜ್ಞಾನಯೋಗದಿಂದ ಸಾಂಖ್ಯರ’ ಎಂದು ಗೀತಾಶಾಸ್ತ್ರದಲ್ಲಿ ಜ್ಞಾನಯೋಗವೆಂದು ಪ್ರತಿಪಾದಿತವಾಗಿದೆ.
ಅಸ್ಯೈವೋತ್ತರಭಾಗಸ್ಯೋಪನಿಷದ ಇತಿ ಜನ್ಮಜರಾಮರಣಾದಿದುಃ ಖನಿಶಾತನಾದ್ಬ್ರಹ್ಮಪ್ರಾಪಕತ್ವಾಚ್ಚ ವ್ಯವಹಾರಃ, ತತ್ತದ್ವೇದಶಾಖಾನ್ತತ್ವಾಚ್ಚ ವೇದಾನ್ತಾ ಇತಿ ವ್ಯವಹಾರಃ ।
ಈ ಉತ್ತರಭಾಗಕ್ಕೇ ಉಪನಿಷತ್ತುಗಳು ಎಂಬುದಾಗಿ ವ್ಯವಹಾರವು— ಜನ್ಮ ವೃದ್ಧಾಪ್ಯ ಮರಣಾದಿ ದುಃಖನಿವಾರಣೆಯ ದೆಸೆಯಿಂದ ಹಾಗೂ ಬ್ರಹ್ಮವನ್ನು ಪ್ರಾಪ್ತಿಮಾಡಿಸುವುದರಿಂದಾಗಿ. ಆಯಾ ವೇದಶಾಖೆಯ ಕೊನೆಯಲ್ಲಿ / ಅಂತ್ಯದಲ್ಲಿ ಇರುವುದರಿಂದಲೂ ವೇದಾಂತಗಳೆಂದೂ ವ್ಯವಹಾರವಿದೆ.
ಆಸಾಂ ಚೋಪನಿಷದಾಂ ಪ್ರಧಾನತಾತ್ಪರ್ಯಂ ಬ್ರಹ್ಮಾತ್ಮೈಕ್ಯಪ್ರತಿಪಾದನ ಏವೇತಿ ಕೃತ್ವಾ ಅದ್ವಿತೀಯಂ ಬ್ರಹ್ಮೈವಾಸಾಂ ವಿಷಯಃ । ಸ ಚ ಮುಖತ ಏವಾಭಿಹಿತಃ- ‘ಏಕಮೇವಾದ್ವಿತೀಯಂ ಬ್ರಹ್ಮೇ’ತಿ । ಲಕ್ಷಣಯಾ ಚ ಪ್ರತ್ಯಯಾದಿ- ‘ತತ್ತ್ವಮಸಿ, ಅಯಮಾತ್ಮಾ ಬ್ರಹ್ಮ, ಅಹಂ ಬ್ರಹ್ಮಾಸ್ಮಿ, ಪ್ರಜ್ಞಾನಂ ಬ್ರಹ್ಮೇ’ತಿ । ಭಾಗತ್ಯಾಗಲಕ್ಷಣಯಾ ಹಿ ಮಹಾವಾಕ್ಯಾನಾಮೇತೇಷಾಮಖಣ್ಡಂ ಬ್ರಹ್ಮೈವಾರ್ಥಃ ।
ಈ ಉಪನಿಷತ್ತುಗಳ ಮುಖ್ಯ ತಾತ್ಪರ್ಯವು ಬ್ರಹ್ಮ-ಆತ್ಮಗಳ ಏಕತೆಯ ಪ್ರತಿಪಾದನೆಯೇ ಎಂಬುದರಿಂದಾಗಿ ಅದ್ವಿತೀಯವಾದ ಬ್ರಹ್ಮವೇ ಇವುಗಳ ವಿಷಯವಾಗಿದೆ. ಅದಾದರೋ ನೇರವಾಗಿ ಹೀಗೆ ಹೇಳಲ್ಪಟ್ಟಿದೆ— “ಬ್ರಹ್ಮವು ಒಂದೇ ಹಾಗೂ ತನಗೆರಡನೆಯದಿಲ್ಲದೇ ಇರುವುದು” ಎಂದು. ಹಾಗೆಯೇ ಲಕ್ಷಣಾತ್ಮಕವಾಗಿ “ಅದೇ ನೀನಾಗಿರುವಿ, ಈ ಆತ್ಮನೇ ಬ್ರಹ್ಮವು, ಬ್ರಹ್ಮವೇ ನಾನಾಗಿರುವೆನು, ಪ್ರಜ್ಞಾನವೇ ಬ್ರಹ್ಮ” ಇತ್ಯಾದಿ ಜ್ಞಾನರೂಪದಿಂದ. ಭಾಗತ್ಯಾಗಲಕ್ಷಣದಿಂದಲಾದರೋ (ಸಮಾನವಲ್ಲದ ದೇಹ, ಚಿತ್ತಾದಿ ನಾಮ ರೂಪಗಳೆಂಬ ಉಪಾಧಿ / ಗುರುತುಗಳ ಭಾಗವನ್ನು ತ್ಯಾಗಮಾಡಿದರೆ ಉಳಿಯುವ ಸರ್ವಾಂತರ್ಯಾಮಿ ತತ್ತ್ವವು ಒಂದೇ, ಸಮಾನ) ಈ ಮಹಾವಾಕ್ಯಗಳಿಗೆ ನಾನು ತುಂಡರಿಸಲಾಗದ ಬ್ರಹ್ಮವಾಗಿರುವೆನು ಎಂದೇ ಅರ್ಥ.
ಏತದುಪನಿಷದರ್ಥಪ್ರತಿಪಾದನಪರತ್ವಾದೇವ ಭಗವದ್ಗೀತಾನಾಮುಪನಿಷತ್ತ್ವವ್ಯವಹಾರಃ- 'ಭಗವದ್ಗೀತಾಸೂಪನಿಷ' ತ್ಸ್ವಿತಿ ।
ಈ ಉಪನಿಷತ್ತಿನ ಅರ್ಥವನ್ನು ಪ್ರತಿಪಾದಿಸುವುದರಿಂದಲೇ ಭಗವದ್ಗೀತೆಗಳಿಗೆ ಉಪನಿಷತ್ತೆಂಬ ವ್ಯವಹಾರವಿದೆ—’ಭಗವದ್ಗೀತೆಗಳೆಂಬ ಉಪನಿಷತ್ತುಗಳಲ್ಲಿ’ ಎಂಬುದಾಗಿ.
ತತ್ರ ಪ್ರಥಮಷಟ್ಕೇ 'ನ ಜಾಯತೇ ಮ್ರಿಯತೇ ವೇ 'ತ್ಯಾದಿಭಿಸ್ತ್ವಂಪದಾರ್ಥಜೀವಸ್ವರೂಪಂ ಶೋಧಿತಮ್ । ಮಧ್ಯಮಷಟ್ಕೇ 'ಅಹಂ ಕೃತ್ಸ್ನಸ್ಯ ಜಗತಃ ಪ್ರಭವಃ ಪ್ರಲಯಸ್ತಥೇ' ತ್ಯಾದಿಭಿಸ್ತತ್ಪದಾರ್ಥೇಶ್ವರಸ್ವರೂಪಂ ಶೋಧಿತಮ್ । ಚರಮಷಟ್ಕೇ ತು 'ಕ್ಷೇತ್ರಜ್ಞಂ ಚಾಪಿ ಮಾಂ ವಿದ್ಧಿ ಸರ್ವಕ್ಷೇತ್ರೇಷು ಭಾರ' ತೇತ್ಯಾದಿಭಿರಸಿಪದಾರ್ಥೋ ವಿವೃತಃ ।
ಅದರಲ್ಲಿ ಮೊದಲ ೬ ಅಧ್ಯಾಯಗಳಲ್ಲಿ ‘ಜನಿಸುವುದಿಲ್ಲ, ಮರಣವೂ ಹೊಂದುವುದಿಲ್ಲ’ ಇತ್ಯಾದಿಗಳಿಂದ ತತ್ ತ್ವಮ್ ಅಸಿ ಎಂಬ ಉಪನಿಷದ್ ಮಹಾವಾಕ್ಯದ ತ್ವಂ (ನೀನು) ಪದದ ಅರ್ಥವಾದ ಜೀವನ ಸ್ವರೂಪವು ಅನ್ವೇಷಿಸಲ್ಪಟ್ಟಿದೆ. ನಡುವಿನ ೬ ಅಧ್ಯಾಯಗಳಲ್ಲಿ “ನಾನು ಸಮಸ್ತ ಜಗತ್ತಿನ ಹುಟ್ಟು-ನಾಶಗಳಿಗೆ ಕಾರಣನಾಗಿರುವೆನು” ಇತ್ಯಾದಿಗಳಿಂದ ತತ್ (ಅದು, ಬ್ರಹ್ಮ) ಪದದ ಅರ್ಥವಾದ ಈಶ್ವರನ ಸ್ವರೂಪವು ಬೋಧಿಸಲ್ಪಟ್ಟಿರುವುದು. ಕೊನೆಯ ೬ ಅಧ್ಯಾಯಗಳಲ್ಲಾದರೋ “ಎಲ್ಲ ಕ್ಷೇತ್ರಗಳಲ್ಲಿರುವ ಕ್ಷೇತ್ರಜ್ಞನೇ ನಾನೆಂದು ತಿಳಿ” ಇತ್ಯಾದಿಗಳಿಂದ ಅಸಿ ಪದದ ಅರ್ಥವಾದ “ಆಗಿರುವಿ” ಎಂಬುದು ವಿವರಿಸಲ್ಪಟ್ಟಿರುವುದು.
ಫಲಂ ಚ 'ಬ್ರಹ್ಮವಿದ್ಬ್ರಹ್ಮೈವ ಭವ' ತೀತಿ ಬ್ರಹ್ಮಸಾಯುಜ್ಯಲಕ್ಷಣಂ ವೇದಾನ್ತೈರ್ಮುಖತ ಏವಾಭಿಹಿತಮ್ । ಗೀತಾಭಿಶ್ಚ — 'ಮಾಮುಪೇತ್ಯ ತು ಕೌನ್ತೇಯ ಪುನರ್ಜನ್ಮ ನ ವಿದ್ಯತೇ । ಮಾಮೇವೈಷ್ಯಸೀ' ತ್ಯಾದಿನಾ ।
ಹಾಗೂ ವೇದಾಂತ / ಜ್ಞಾನಕಾಂಡದ ಫಲವಾದರೋ “ಬ್ರಹ್ಮವನ್ನರಿತವನು ಬ್ರಹ್ಮವೇ ಆಗಿಬಿಡುತ್ತಾನೆ” ಎಂದು ಬ್ರಹ್ಮಸಾಯುಜ್ಯಮುಕ್ತಿಲಕ್ಷಣವು ವೇದಾಂತಗಳಿಂದ ಮುಖ್ಯವಾಗಿ / ಸ್ಪಷ್ಟವಾಗಿಯೇ ಹೇಳಿದೆ. ಗೀತೆಗಳಲ್ಲೂ ಹೀಗೆ ಹೇಳಿದೆ— “ನನ್ನನ್ನು ಹೊಂದಿ ಎಲೈ ಕೌಂತೇಯನೆ! ಪುನರ್ಜನ್ಮವಿಲ್ಲ. ನನ್ನನ್ನೇ ಹೊಂದುವಿ” ಇತ್ಯಾದಿಯಾಗಿ.
'ಶಾನ್ತೋ ದಾನ್ತ ಉಪರತಸ್ತಿತಿಕ್ಷುಸ್ಸಮಾಹಿತಶ್ಶ್ರದ್ಧಾವಿತ್ತೋ ಭೂತ್ವಾತ್ಮನ್ಯೇವಾತ್ಮಾನಂ ಪಶ್ಯೇ’ದಿತಿ ಶ್ರುತ್ಯಾ ಶಮಾದಿಸಮ್ಪನ್ನೋಽಧಿಕಾರೀ ದರ್ಶಿತಃ । ಗೀತಾಸ್ವಪಿ - 'ತಾನಿ ಸರ್ವಾಣಿ ಸಂಯಮ್ಯ ತಾಂಸ್ತಿತಿಕ್ಷಸ್ವ ಭಾರತೇ' ತ್ಯಾದಿನಾ ।
“ಶಾಂತನೂ (ಮನೋನಿಗ್ರಹಿಯೂ / ಶಮವುಳ್ಳವನೂ), ದಾಂತನೂ (ಇಂದ್ರಿಯನಿಗ್ರಹಿಯೂ / ದಮವುಳ್ಳವನೂ), ಉಪರತನೂ (ಉಪರತಿಯುಳ್ಳವನೂ / ತನ್ನಲ್ಲೇ ತಾನು ಆನಂದಿಯಾಗಿ), ತಿತಿಕ್ಷುವೂ (ಸಹನೆಯುಳ್ಳವನೂ), ಸಮಾಹಿತನೂ (ತನ್ನನ್ನು ತಾನು ನಿಗ್ರಹಿಸಿಕೊಂಡವನಾದ), ಶ್ರದ್ಧೆಯೇ ಸಂಪತ್ತಾದವನಾಗಿ, “ತನ್ನಲ್ಲೇ ಆತ್ಮನನ್ನು / ಆತ್ಮನಲ್ಲೇ ತನ್ನನ್ನು ಕಾಣಬೇಕು” ಎಂಬ ವೇದವಚನದಂತೆ ಶಮಾದಿಸಂಪನ್ನನಾದ ಅಧಿಕಾರಿ / ಯೋಗ್ಯತೆಯುಳ್ಳವನು ಎನ್ನಲಾಗಿದೆ. “ಅವೆಲ್ಲವುಗಳನ್ನೂ ನಿಯಂತ್ರಿಸಿ, ಅವುಗಳನ್ನು ಸಹಿಸಿಕೋ” ಇತ್ಯಾದಿಯಾಗಿ ಗೀತೆಗಳಲ್ಲಿ ಹೇಳಿದೆ.
ಕಿಂಚ—ಅತ್ರಾಧಿಕಾರಿಣಾ ಇಹಾಮುತ್ರಫಲಭೋಗವಿರಾಗಿಣಾ ಭವಿತವ್ಯಮಿತ್ಯೇತದುಪೋದ್ಘಾತಗ್ರನ್ಥಸನ್ದರ್ಭೇಣ ದರ್ಶಿತಂ 'ನ ಕಾಂಕ್ಷೇ ವಿಜಯಂ ಕೃಷ್ಣ ! ನಚ ರಾಜ್ಯಂ ಸುಖಾನಿ ಚೇ 'ತ್ಯಾದಿನಾ ।
ಹಾಗೆಯೇ— ಇಲ್ಲಿ (ಗೀತೆಯಲ್ಲಿ) ಯೋಗ್ಯನಾದವನು, ಇಹದಲ್ಲೂ ಪರದಲ್ಲೂ ಭೋಗಗಳಲ್ಲಿ ವಿರಕ್ತನಾಗಿರಬೇಕು ಎಂದು ಪೀಠಿಕಾಶ್ಲೋಕಗಳ ಸಂದರ್ಭದಲ್ಲಿ ತೋರಿಕೊಡಲಾಗಿದೆ— “ಹೇ ಕೃಷ್ಣನೆ! ವಿಜಯವನ್ನು ಬಯಸಲಾರೆ. ಹಾಗೆಯೇ, ರಾಜ್ಯ-ಸುಖಗಳನ್ನು ಬಯಸೆನು” ಇತ್ಯಾದಿಯಾಗಿ.
ಏವಮಧಿಕಾರಿಣಾ ' ತದ್ವಿಜ್ಞಾನಾಯ ಸ ಗುರುಮೇವಾಭಿಗಚ್ಛೇತ್ಸಮಿತ್ಪಾಣಿಶ್ಶ್ರೋತ್ರಿಯಂ ಬ್ರಹ್ಮನಿಷ್ಠ'ಮಿತಿ ಶ್ರುತ್ಯಾ ಗುರೂಪಸತ್ತಿಃ ಕಾರ್ಯೇತಿ ಬೋಧಿತಮ್ । ಅತ್ರಾಪಿ ಉಪೋದ್ಘಾತಗ್ರನ್ಥೇ 'ಶಿಷ್ಯಸ್ತೇಽಹಂ ಶಾಧಿ ಮಾಂ ತ್ವಾಂ ಪ್ರಪನ್ನ' ಮಿತಿ ।
ಹೀಗೆ ಅಧಿಕಾರವುಳ್ಳವನಿಂದ “ಅದನ್ನು ತಿಳಿಯಲು ಅವನು ಸಮಿತ್ತುಗಳನ್ನು ತೆಗೆದುಕೊಂಡು, ಶ್ರೋತ್ರಿಯನೂ ಬ್ರಹ್ಮನಿಷ್ಠನೂ ಆದ ಗುರುವನ್ನೇ ಆಶ್ರಯಿಸಬೇಕು” ಎಂಬ ಶ್ರುತಿವಚನದಂತೆ ಗುರುವನ್ನೇ ಆಶ್ರಯಿಸಬೇಕೆಂದು ಬೋಧಿಸಲ್ಪಟ್ಟಿದೆ. ಇಲ್ಲಿ ಗೀತೆಯಲ್ಲೂ ಪೀಠಿಕಾಶ್ಲೋಕಗಳಲ್ಲಿ “ನಾನು ನಿನ್ನ ಶಿಷ್ಯನಾಗಿರುವೆನು. ನಿನ್ನನ್ನು ಶರಣುಹೊಂದಿದ ನನ್ನನ್ನು ನೀನು ರಕ್ಷಿಸು” ಎಂದು.
ಏವಂ ಶಾಸ್ತ್ರಸ್ಯ ವಿಷಯಪ್ರಯೋಜನಾಧಿಕಾರಿಣೋ ನಿರೂಪಿತಾಃ । ಸಮ್ಬನ್ಧಸ್ತು ವಿಷಯಗ್ರನ್ಥಯೋಃ ಪ್ರತಿಪಾದ್ಯಪ್ರತಿಪಾದಕಭಾವರೂಪಃ । ಫಲಾಧಿಕಾರಿಣೋಃ ಪ್ರಾಪ್ಯಪ್ರಾಪ್ತೃಭಾವರೂಪಃ । ಫಲಗ್ರನ್ಥಯೋಃ ಪ್ರಾಪ್ಯಪ್ರಾಪಕಭಾವರೂಪಃ— ಉಪೇಯೋಪಾಯಭಾವರೂಪ ಇತ್ಯರ್ಥಃ । ವಿಷಯಾಧಿಕಾರಿಣೋರ್ಜ್ಞೇಯಜ್ಞಾತೃಭಾವರೂಪಃ, ಗ್ರನ್ಥಾಧಿಕಾರಿಣೋರಧ್ಯೇಯಾಧ್ಯೇತೃಭಾವರೂಪಃ, ವಿಷಯಪ್ರಯೋಜನಯೋರ್ಜನ್ಯಜನಕಭಾವರೂಪಃ—ಇತಿ ।
ಹೀಗೆ ಗೀತಾಶಾಸ್ತ್ರದ ವಿಷಯ, ಪ್ರಯೋಜನ, ಅಧಿಕಾರಿಗಳು ನಿರೂಪಿತವಾಗಿವೆ. ಸಂಬಂಧವಾದರೋ, ವಿಷಯ-ಗ್ರಂಥಗಳಿಗೆ ಪ್ರತಿಪಾದ್ಯವಾದ ಹಾಗೂ ಪ್ರತಿಪಾದಕವಾದ ಭಾವರೂಪವಾದುದು; ಫಲ-ಅಧಿಕಾರಿಗಳಿಗೆ ಪ್ರಾಪ್ಯವಾದ (ಹೊಂದಬೇಕಾದ) ಹಾಗೂ ಪ್ರಾಪ್ತೃವಾದ (ಹೊಂದುವವನಾದ) ಭಾವರೂಪವಾದುದು; ಫಲ-ಗ್ರಂಥಗಳ ಸಂಬಂಧವು ಪ್ರಾಪ್ಯ (ಹೊಂದಬೇಕಾದ) ಹಾಗೂ ಪ್ರಾಪಕ (ಹೊಂದಿಸಿಕೊಡುವ) ಭಾವರೂಪವಾದುದು— ಉಪೇಯ (ಪಡೆದುಕೊಳ್ಳಬೇಕಾದ) ಹಾಗೂ ಉಪಾಯ (ಪಡೆಯುವ ಸಾಧನವಾದ) ಭಾವರೂಪವಾದುದು ಎಂದರ್ಥ; ವಿಷಯ-ಅಧಿಕಾರಿಗಳ ಸಂಬಂಧವು ತಿಳಿಯಬೇಕಾದ ಜ್ಞೇಯವೂ ತಿಳಿಯುವವನಾದ ಜ್ಞಾತೃವೂ ಆಗಿರುವ ಭಾವರೂಪವು; ಗ್ರಂಥ-ಅಧಿಕಾರಿಗಳ ಸಂಬಂಧವಾದರೋ ಗೀತಾಶಾಸ್ತ್ರವು ಅಧ್ಯಯನಯೋಗ್ಯ (ಅಧ್ಯೇಯ) ಹಾಗೂ ಅಧಿಕಾರಿಯು ಅಧ್ಯಯನಮಾಡುವ ಕರ್ತೃ (ಅಧ್ಯೇತೃ) ಎಂಬುದಾಗಿ; ವಿಷಯ-ಪ್ರಯೋಜನಗಳ ಸಂಬಂಧವು ವಿಷಯವು ಪ್ರಯೋಜನವನ್ನುಂಟುಮಾಡಲು ಕಾರಣವಾಗಿ ಜನಕವೂ, ಪ್ರಯೋಜನವು ವಿಷಯದಿಂದುಂಟಾಗಿ ಜನ್ಯವೂ ಆಗಿರುವುದು —ಎಂಬುದಾಗಿ.
ಏವಮುಪನಿಷದ್ಭಿಸ್ಸಹ ಗೀತಾನಾಂ ಸಮಾನವಿಷಯಾದಿಮತ್ತ್ವಾದುಪನಿಷದಾಂ ಭಾಷ್ಯಂ ರಚಿತವತಾ ಶ್ರೀಶಙ್ಕರಾವತಾರೇಣ ಶ್ರೀಶಙ್ಕರಾಚಾರ್ಯೇಣ ಗೀತಾನಾಮಪಿ ಭಾಷ್ಯಂ ವಿರಚಿತಮ್ । ನಚ ವ್ಯರ್ಥಮಿದಮಿತಿ ಮನ್ತವ್ಯಂ, ಉಪನಿಷದಾಂ ಗಮ್ಭೀರಹೃದಯತ್ವೇನ ದುರ್ಬೋಧತ್ವಾತ್ತದರ್ಥಂ ನಿಶ್ಚಿತ್ಯ ಸಂಕ್ಷಿಪ್ಯ ಭಗವತಾ ಬಾದರಾಯಣೇನ ವಿಷ್ಣ್ವವತಾರೇಣ ಗೀತಾನಾಮುಕ್ತತ್ವಾತ್ತಥೈವ ತದ್ಭಾಷ್ಯಂ ರಚನೀಯಮೇವೇತಿ । 'ಶಿವಸ್ಯ ಹೃದಯಂ ವಿಷ್ಣುರ್ವಿಷ್ಣೋಶ್ಚ ಹೃದಯಂ ಶಿವಃ' ಇತಿ, 'ಶಙ್ಕರಶ್ಶಙ್ಕರಸ್ಸಾಕ್ಷಾದ್ವ್ಯಾಸೋ ನಾರಾಯಣೋ ಹರಿ 'ರಿತಿ ಚ ವಚನಾದ್ವಿಷ್ಣ್ವವತಾರವ್ಯಾಸಹೃದಯಪರಿಜ್ಞಾನಂ ಶಿವಾವತಾರಶಙ್ಕರೈಕವಿಷಯಮೇವೇತಿ ಕೃತ್ವಾ ಗೀತಾಭಿಪ್ರಾಯಶ್ಶಙ್ಕರಭಾಷ್ಯಾದೇವ ಜ್ಞೇಯಃ, ನತು ರಾಮಾನುಜಭಾಷ್ಯಾದಿಭಿಃ— ತೇಷಾಂ ಶ್ರೀ ಶಙ್ಕರಭಾಷ್ಯನಿನ್ದೈಕಪ್ರಧಾನೋದ್ದೇಶತ್ವಾತ್ – ಮೂಲಾನನುಗತಾರ್ಥತ್ವಾದ್ವೇದಾನ್ತವಿರುದ್ಧತ್ವೇನಾಪ್ರಮಾಣತ್ವಾಚ್ಚ ತದ್ಭಾಷ್ಯಾಣಾಮ್ ।
ಹೀಗೆ ಉಪನಿಷತ್ತುಗಳಂತೆಯೇ ಗೀತೆಗಳಿಗೂ ಸಮಾನವಾದ ವಿಷಯಾದಿಗಳಿರುವಿಕೆಯಿಂದ, ಉಪನಿಷತ್ತುಗಳ ಭಾಷ್ಯವನ್ನು ರಚಿಸಿರುವ ಸಾಕ್ಷಾತ್ ಶ್ರೀಶಿವಾವತಾರಿಯಾದ ಶ್ರೀಶಂಕರಾಚಾರ್ಯರಿಂದ ಗೀತೆಗಳಿಗೂ ಭಾಷ್ಯವು ವಿರಚಿತವಾಯಿತು. ಇದು ವ್ಯರ್ಥವೆಂದರಿಯಬಾರದು, ಯಾಕೆಂದರೆ, ಉಪನಿಷತ್ತುಗಳಿಗೆ ಆಳವಾದ ಅರ್ಥವಿರುವುದರಿಂದ ತಿಳಿಯಲು ಕಷ್ಟಕರವಾಗಿರುವುದರಿಂದ, ಅದರ ಅರ್ಥವನ್ನು ಹೀಗೆಂದು ನಿಶ್ಚಯಿಸಿ ಸಂಕ್ಷೇಪಿಸಿ, ಸಾಕ್ಷಾತ್ ವಿಷ್ಣುವಿನ ಅವತಾರಿಗಳಾದ ಭಗವಾನ್ ಬಾದರಾಯಣವ್ಯಾಸರಿಂದ (“ಬದರ್ಯಾಮ್ ಅಯನಂ ಯಸ್ಯ ಬಾದರಾಯಣ ಈರಿತಃ”— ಬದರಿಕಾಶ್ರಮವಾಸಿಗಳಾಗಿದ್ದರಿಂದ ಕೃಷ್ಣದ್ವೈಪಾಯನ ವ್ಯಾಸರಿಗೆ ಬಾದರಾಯಣರೆಂದು ಹೆಸರು) ಗೀತೆಗಳು ಪ್ರೋಕ್ತವಾದದ್ದರಿಂದ, ಅಂತೆಯೇ ಅದರ ಭಾಷ್ಯವು ರಚಿಸಲ್ಪಡಲು ಯೋಗ್ಯವೆಂಬುದಾಗಿ. “ಶಿವನ ಹೃದಯವೇ (ಮನಸ್ಸೇ, ತಾತ್ಪರ್ಯವೇ) ವಿಷ್ಣುವು, ಹಾಗೆಯೇ, ವಿಷ್ಣುವಿನ ಮನಸ್ಸೇ (ಹೃದಯವೇ, ಸಾರವೇ) ಶಿವನು, “ಶಂಕರಾಚಾರ್ಯರು ಸಾಕ್ಷಾತ್ ಭಗವಾನ್ ಪರಶಿವಸ್ವರೂಪರೂ, ವ್ಯಾಸರು ನಾರಾಯಣ(ಹರಿ)ಸ್ವರೂಪರೂ ಆಗಿರುವರು” ಎಂಬ ಮಾತಿನಂತೆ, ವಿಷ್ಣುವಿನ ಅವತಾರರಾದ ವ್ಯಾಸರ ಹೃದಯದ ರಹಸ್ಯವು ಶಿವಾವತಾರೀ ಶಂಕರಾಚಾರ್ಯರೋರ್ವರಿಗೇ ಅರ್ಥವಾಗುವಂತಹ ವಿಷಯವು ಎಂದು ನಿಶ್ಚಯಿಸಿ, ಗೀತೆಯ ಅಭಿಪ್ರಾಯವನ್ನು ಶಂಕರಭಾಷ್ಯದಿಂದಲೇ ತಿಳಿಯತಕ್ಕದ್ದೇ ಹೊರತು ರಾಮಾನುಜಭಾಷ್ಯಾದಿಗಳಿಂದಲ್ಲ— ಶಂಕರಭಾಷ್ಯದ ನಿಂದೆಯೇ ಅವರೆಲ್ಲರ ಪ್ರಧಾನ ಉದ್ದೇಶವಾಗಿರುವುದರಿಂದಾಗಿ— ಮೂಲವನ್ನು ಅನುಸರಿಸದ ಅರ್ಥವನ್ನು ಹೇಳಿರುವುದರಿಂದಲೂ, ಅವು ವೇದಾಂತಕ್ಕೆ ವಿರುದ್ಧವಾಗಿರುವುದರಿಂದ ಆ ಶಂಕರೇತರ ಭಾಷ್ಯಗಳಿಗೆ ಪ್ರಮಾಣತ್ವ (ಆಧಾರ) ಸಿದ್ಧಿಸದಿರುವುದರಿಂದ.
ತತ್ರ ಚ ಶಙ್ಕರಭಾಷ್ಯಪ್ರತಿಪಕ್ಷಭೂತಭಾಷ್ಯಮಧ್ಯೇ ರಾಮಾನುಜಭಾಷ್ಯಮೇವ ಪ್ರಧಾನಮಿತಿ ಪ್ರಧಾನಮಲ್ಲನಿಬರ್ಹಣನ್ಯಾಯೇನ ರಾಮಾನುಜಭಾಷ್ಯೇ ವೇದಾನ್ತದೇಶಿಕಕೃತತಾತ್ಪರ್ಯ ಚನ್ದ್ರಿಕಾಸಹಿತೇ ಶ್ರುತಿಯುಕ್ತ್ಯಾದಿಭಿರ್ವಿಮೃಷ್ಟೇ ಸತಿ ಶಙ್ಕರಭಾಷ್ಯಂ ನಿರವದ್ಯಮಪ್ರತಿಭಟಂ ಸ್ಥಿತಂ ಸ್ಯಾದಿತ್ಯೇತದರ್ಥಮಹಮಧುನಾ ಮನ್ದಮತಿರಪಿ ಶ್ರೀಹಯಗ್ರೀವದೇವಕೃಪಯಾ ಶ್ರೀಶಾಙ್ಕರಭಗವದ್ಗೀತಾಭಾಷ್ಯವ್ಯಾಖ್ಯಾನೇ ಪ್ರಯುಕ್ತಃ । ಕಿನ್ನಾಮ ದುಷ್ಕರಮಚಿನ್ತ್ಯವಿಚಿತ್ರಶಕ್ತೇರ್ಭಗವತಃ ಕೃಪಾಯಾಃ— ತೃಣಮಪಿ ಶ್ರೀರಾಮೇಣ ನಿಹಿತಶಕ್ತಿಕಂ ಬ್ರಹ್ಮಾಸ್ತ್ರಮಭವತ್ಕಿಲ ಕಾಕಾಸುರೇ।
ಅದರಲ್ಲಿಯೂ ಶಂಕರಭಾಷ್ಯಕ್ಕೆ ವಿರೋಧಿಯಾದ ಭಾಷ್ಯಗಳಲ್ಲಿ ರಾಮಾನುಜಭಾಷ್ಯವೇ ಪ್ರಧಾನವಾದ್ದರಿಂದ, ಪ್ರಧಾನಮಲ್ಲನಿಬರ್ಹಣನ್ಯಾಯದಿಂದ (ಮುಖ್ಯ ವಿರೋಧಿಯನ್ನು ಸದೆಬಡಿಯಬೇಕು) ವೇದಾಂತದೇಶಿಕಕೃತ ತಾತ್ಪರ್ಯಚಂದ್ರಿಕಾಸಹಿತವಾದ ಗೀತಾರಾಮಾನುಜಭಾಷ್ಯವು ಶ್ರುತಿ-ಯುಕ್ತಿ ಮುಂತಾದವುಗಳಿಂದ ವಿಮರ್ಶಿಸಲ್ಪಟ್ಟಿರುವಾಗಲೂ, ಗೀತಾಶಂಕರಭಾಷ್ಯವು ಅನಿಂದ್ಯವೂ ಪ್ರತಿಭಟನೆಯಿಲ್ಲದ್ದೂ ಆಗಿ ನಿಂತಿರುವುದು ಎಂಬುದಕ್ಕಾಗಿ, ನಾನೀಗ ಮಂದಮತಿಯಾದರೂ ಶ್ರೀಹಯಗ್ರೀವದೇವರ ಕೃಪೆಯಿಂದ, ಶ್ರೀಶಂಕರವಿರಚಿತ ಗೀತಾಭಾಷ್ಯದ ವ್ಯಾಖ್ಯಾನದಲ್ಲಿ ತೊಡಗಿರುತ್ತೇನೆ. ಶ್ರೀರಾಮಚಂದ್ರನ ಶಕ್ತಿಪೂರ್ಣವಾದ ಹುಲ್ಲುಕಡ್ಡಿಯೂ ಕಾಕಾಸುರನ ಮೇಲೆ ಬ್ರಹ್ಮಾಸ್ತ್ರವಾಯಿತಲ್ಲವೆ?— ಭಗವಂತನ ಕೃಪೆಗೆ ಅಚಿಂತ್ಯವೂ ವಿಚಿತ್ರವೂ ಆದ ಶಕ್ತಿಯಿರುವಾಗ ಯಾವುದು ತಾನೇ ದುಷ್ಕರವಾದುದು?
‘ಪದಚ್ಛೇದಃ ಪದಾರ್ಥೋಕ್ತಿರ್ವಿಗ್ರಹೋ ವಾಕ್ಯಯೋಜನಾ । ಆಕ್ಷೇಪಸ್ಯ ಸಮಾಧಾನಂ ವ್ಯಾಖ್ಯಾನಂ ಪಞ್ಚಲಕ್ಷಣಮ್’ ಇತಿ ಪಞ್ಚಲಕ್ಷಣಂ ವ್ಯಾಖ್ಯಾನಮ್ । ಇದಂ ಚ ಮಯಾ ಮೂಲಗ್ರನ್ಥಸ್ಯಾಪಿ ಶ್ರೀಶಙ್ಕರಾಚಾರ್ಯೈರಕೃತವ್ಯಾಖ್ಯಾನಸ್ಯ ಕ್ರಿಯತೇ । ತೈರ್ವ್ಯಾಖ್ಯಾತಶ್ಲೋಕಾನಾಂ ಚ ಪದಾನ್ವಯಃ ಪ್ರದರ್ಶ್ಯತೇ ।
“ಪದವಿಂಗಡಣೆ, ಪದದ ಅರ್ಥವನ್ನು ಹೇಳುವುದು, ಸಮಸ್ತಪದಗಳ ವಿಗ್ರಹವಾಕ್ಯ, ಪದಗಳ ಸಮನ್ವಯದಿಂದ ಅರ್ಥವತ್ತಾದ ವಾಕ್ಯಯೋಜನೆ, ಆಕ್ಷೇಪಕ್ಕೆ ಸಮಾಧಾನ / ಉತ್ತರ— ಹೀಗೆ ವ್ಯಾಖ್ಯಾನವೆಂದರೆ ೫ ಲಕ್ಷಣಗಳುಳ್ಳದ್ದು” . ಶ್ರೀಶಂಕರರು ಮಾಡದೇ ಬಿಟ್ಟ ಮೂಲಗೀತಾಶ್ಲೋಕಗಳ ವ್ಯಾಖ್ಯಾನವೂ ನನ್ನಿಂದ ಮಾಡಲ್ಪಟ್ಟಿವೆ. ಹಾಗೆಯೇ, ಅವರು ವ್ಯಾಖ್ಯಾನಿಸಿದ ಶ್ಲೋಕಗಳ ಪದಾನ್ವಯವೂ ತೋರಿಕೊಡಲ್ಪಡುತ್ತದೆ.
ಅತ್ರ ಚ 'ಅಶೋಚ್ಯಾ'ನಿತ್ಯಾರಭ್ಯ ಕಿಞ್ಚಿದೂನಸಪ್ತದಶಾಧ್ಯಾಯಾತ್ಮಕಂ 'ಸರ್ವಧರ್ಮಾ'ನಿತ್ಯನ್ತಮೇವ ಗೀತಾಶಾಸ್ತ್ರಮ್ । ತದೇವ ವ್ಯಾಕೃತಮಾಚಾರ್ಯೈಃ । ಅವಶಿಷ್ಟಂ ತೂಪೋದ್ಘಾತರೂಪಕಥಾಮಾತ್ರಂ ಸ್ಪಷ್ಟಾರ್ಥಂ ಚೇತಿ ನ ವ್ಯಾಕೃತಮ್ ।
ಇಲ್ಲಾದರೋ “ಅಶೋಚ್ಯಾನ್ ” ಎಂದು ತೊಡಗಿ, ಅಪೂರ್ಣವಾದ ೧೭ನೆಯ ಅಧ್ಯಾಯದಲ್ಲಿ “ಸರ್ವಧರ್ಮಾನ್ ” ಇಲ್ಲಿಯವರೆಗೇ ಗೀತಾಶಾಸ್ತ್ರವು. ಅದೇ ಆಚಾರ್ಯರಿಂದ ವಿವರಿಸಲ್ಪಟ್ಟಿದೆ. ಉಳಿದುದು ಪೀಠಿಕಾರೂಪವಾದ ಕಥೆ ಮಾತ್ರವಾಗಿರುವುದರಿಂದಲೂ, ಗೊಂದಲವಿಲ್ಲದೆ ಸ್ಪಷ್ಟವಾಗಿ ಅರ್ಥವಾಗುವಂತಿರುವುದರಿಂದಲೂ ವಿವರಿಸಲ್ಪಟ್ಟಿಲ್ಲ.
ನನು ಶಙ್ಕರಮತೇ ಗ್ರನ್ಥಾರಮ್ಭ ಏವ ನೋಪಪದ್ಯತೇ — ಗುರುಶಿಷ್ಯಾದಿದ್ವೈತಾಭಾವಾದಿತ್ಯಾಹ ವೇದಾನ್ತದೇಶಿಕಸ್ತತ್ರ ಕೋಪಪತ್ತಿರಿತಿ ಚೇದುಚ್ಯತೇ — ಪರಮಾರ್ಥದಶಾಯಾಂ ದ್ವೈತಾಭಾವೇಽಪಿ ವ್ಯವಹಾರದಶಾಯಾಂ ತತ್ಸತ್ತ್ವಾನ್ನ ಗ್ರನ್ಥಾರಮ್ಭಾನುಪಪತ್ತಿರಿತಿ । ಅಸ್ತಿ ಹಿ ದ್ವೈತಿನಾಮಪಿ ಸಮಾಧ್ಯಾದೌ ದ್ವೈತಾಭಾವಃ, ಅನ್ಯತ್ರ ದ್ವೈತಸತ್ತ್ವಮ್ । ಕಿಂ ಬಹುನಾ— ಸರ್ವೇಷಾಮಪಿ ಪ್ರಾಣಿನಾಂ ಸುಷುಪ್ತೌ ದ್ವೈತಾಭಾವಸ್ಸ್ವಪ್ನಜಾಗರಯೋಸ್ತು ದ್ವೈತಸತ್ತ್ವಂ ಚೇತಿ ಸರ್ವಜನವಿದಿತಮೇವ— 'ಯತ್ರ ಸರ್ವಮಾತ್ಮೈವಾಭೂತ್ತತ್ರ ಕೇನ ಕಿಂ ಪಶ್ಯೇ’ದಿತಿ ಶ್ರುತೇಃ । ಸುಷುಪ್ತಿಮುಕ್ತಿವಿಷಯತ್ವಂ 'ಸ್ವಾಪ್ಯಯಸಮ್ಪತ್ತ್ಯೋ' ರಿತಿ ಸೂತ್ರೇಣ ವ್ಯಾಸೇನೈವ ಸ್ಥಾಪಿತಮ್ । ನಚ ದ್ವೈತಸತ್ತ್ವೇ ವ್ಯವಹಾರಃ, ವ್ಯವಹಾರಸತ್ತ್ವೇ ದ್ವೈತಮಿತ್ಯನ್ಯೋಽನ್ಯಾಶ್ರಯ ಇತಿ ವಾಚ್ಯಂ, ಅನಾದಿತ್ವಾದುಭಯೋರ್ಬೀಜಾಂಕುರವತ್ । ನಾಪ್ಯಜ್ಞಜನಾಶ್ರಯೋ ವ್ಯವಹಾರಂ ಇತಿ ವಾಚ್ಯಂ, ಲೀಲಯಾ ಜಗಜ್ಜನ್ಮಾದಿಷು ವ್ಯವಹರತ ಈಶ್ವರಸ್ಯಾಪ್ಯಜ್ಞತ್ವಾಪತ್ತೇಃ । ತಸ್ಮಾದ್ದ್ವೈತಾಶ್ರಯ ಏವ ವ್ಯವಹಾರಃ, ವ್ಯವಹಾರಾಶ್ರಯಮೇವ ದ್ವೈತಂ— ಯಥಾ ಶಬ್ದಾಶ್ರಯೋಽರ್ಥಃ ಅರ್ಥಾಶ್ರಯಶ್ಶಬ್ದಶ್ಚ । ಉಭಯಮಪೀದಮದ್ವೈತೇ ಬ್ರಹ್ಮಣಿ ಮಾಯಯಾ ಕಲ್ಪಿತಮಿತಿ ನ ಬ್ರಹ್ಮಣೋ ದ್ವೈತಪ್ರಸಙ್ಗಃ ।
ಶಂಕರಮತದಲ್ಲಿ ಗ್ರಂಥಾರಂಭವೇ ಸರಿಹೊಂದುವುದಿಲ್ಲ— ಗುರು-ಶಿಷ್ಯಾದಿ ದ್ವೈತವಿಲ್ಲದಿರುವುದರಿಂದ— ಎಂದು ರಾಮಾನುಜಾನುಯಾಯಿ ವೇದಾಂತದೇಶಿಕರು ಹೇಳುತ್ತಾರೆ. ಅದಕ್ಕೇನುತ್ತರವೆಂದರೆ— ಪರಮಾರ್ಥದೃಷ್ಟಿಯಲ್ಲಿ ದ್ವೈತವಿರದಿದ್ದರೂ ವ್ಯವಹಾರದೃಷ್ಟಿಯಲ್ಲಿ ಅದಿರುವುದರಿಂದ ಗ್ರಂಥಾರಂಭಕ್ಕೇನೂ ಅಡ್ಡಿಯಿಲ್ಲ. ದ್ವೈತಿಗಳಿಗೂ ಸಮಾಧಿಯೇ ಮುಂತಾದವುಗಳಲ್ಲಿ ದ್ವೈತದ ಅಭಾವವಿರುವುದಷ್ಟೆ? ಬೇರೆಡೆಗಳಲ್ಲಿ ಮಾತ್ರ ದ್ವೈತವಿರುವುದು. ಹೆಚ್ಚೇನು ಹೇಳಲಿ? ಎಲ್ಲ ಪ್ರಾಣವಂತರ ಗಾಢನಿದ್ದೆಯಲ್ಲಿ ದ್ವೈತದ ಅಭಾವವೂ, ಕನಸು-ಎಚ್ಚರಗಳಲ್ಲಿ ದ್ವೈತವಿರುವುದೂ ಎಲ್ಲರಿಗೂ ತಿಳಿದಿರುವುದಲ್ಲವೆ? “ಎಲ್ಲಿ ಎಲ್ಲವೂ ಆತ್ಮವೇ ಆಗಿರುವುದೋ ಅಲ್ಲಿ ಯಾರು ಏನನ್ನು ನೋಡಬಹುದು?” ಎಂದಿದೆ ಶ್ರುತಿ / ವೇದ. ಸುಷುಪ್ತಿ / ಗಾಢನಿದ್ದೆಯಲ್ಲಿ ಎಲ್ಲದರಿಂದಲೂ ಬಿಡುಗಡೆಯಾಗಿರುವಿಕೆ (ಮುಕ್ತಿ) ಯ ಬಗ್ಗೆ “ಸ್ವಾಪ್ಯಯ-ಸಂಪತ್ತ್ಯೋಃ” (ತನ್ನಲ್ಲೇ ಲೀನವಾಗಿ ಬ್ರಹ್ಮಸಂಪನ್ನನಾಗಿರುತ್ತಾನೆ) ಎಂಬ ವೇದಾಂತಸೂತ್ರದ್ವಾರಾ ವ್ಯಾಸರೇ ಸಮರ್ಥಿಸಿರುವರು. ದ್ವೈತವಿದ್ದರೇ ವ್ಯವಹಾರವು, ವ್ಯವಹಾರವಿದ್ದರೆ ಮಾತ್ರ ದ್ವೈತವು ಎಂಬುದಾಗಿ ಅನ್ಯೋನ್ಯಾಶ್ರಯವನ್ನು ಹೇಳಬಾರದು; ಯಾಕೆಂದರೆ ಇವೆರಡಕ್ಕೂ ಬೀಜ-ಮೊಳಕೆಗಳಂತೆ ಅನಾದಿತ್ವವಿದೆ. ಅಜ್ಞಾನಿಗಳಿಗೆ ಮಾತ್ರ ವ್ಯವಹಾರವೆಂದೂ ಹೇಳಬಾರದು. ಯಾಕೆಂದರೆ, ಲೀಲೆಯಿಂದ ಜಗತ್ ಸೃಷ್ಟ್ಯಾದಿಗಳಲ್ಲಿ ವ್ಯವಹರಿಸುವ ಈಶ್ವರನಿಗೂ ಅಜ್ಞಾನವಿದೆಯೆಂದಂತಾಗುವುದು. ಆದ್ದರಿಂದ, ದ್ವೈತವನ್ನಾಶ್ರಯಿಸಿಯೇ ವ್ಯವಹಾರವೂ, ವ್ಯವಹಾರವನ್ನಾಶ್ರಯಿಸಿಯೇ ದ್ವೈತವೂ ಇರುವುದು— ಶಬ್ದವನ್ನಾಧರಿಸಿಯೇ ಅರ್ಥವೂ, ಅರ್ಥವನ್ನಾಧರಿಸಿಯೇ ಶಬ್ದವೂ ಇರುವಂತೆ. ಇವೆರಡೂ ಅದ್ವೈತವಾದ ಬ್ರಹ್ಮದಲ್ಲಿ ಮಾಯೆಯಿಂದ ಕಲ್ಪಿತವಾಗಿದೆಯೆಂಬುದರಿಂದ ಬ್ರಹ್ಮದಲ್ಲಿ ದ್ವೈತದ ಪ್ರಸಕ್ತಿಯೇ ಇರುವುದಿಲ್ಲ.
ವಸ್ತುತಸ್ತು ಪ್ರತಿಪಕ್ಷಶಿರಸ್ಯೇವಾಯಂ ದೋಷೋ ವಜ್ರಪ್ರಹಾರಃ ಪ್ರಪತತಿ— ತಥಾಹಿ— ಈಶ್ವರಃ ಪ್ರಲಯದಶಾಯಾಂ ಸೂಕ್ಷ್ಮಚಿದಚಿದ್ವಿಶಿಷ್ಟಃ, ಪ್ರಪಞ್ಚದಶಾಯಾಂ ತು ಸ್ಥೂಲಚಿದಚಿದ್ವಿಶಿಷ್ಟ ಇತಿ ವಿಶಿಷ್ಟಾದ್ವೈತಿನೋ ವದನ್ತಿ । ತತಶ್ಚ ಸರ್ವದಾಪಿ ಚಿದಚಿದ್ವಿಶಿಷ್ಟ ಏವೇಶ್ವರ ಇತಿ ಚಿದಚಿತೋರೀಶ್ವರಸಾಯುಜ್ಯಸ್ಯ ನಿತ್ಯಸಿದ್ಧತ್ವಾನ್ನಿಷ್ಫಲತ್ವೇನ ತಾವದನಾರಮ್ಭಣೀಯಂ ವಿಶಿಷ್ಟಾದ್ವೈತಮತೇ ವೇದಾನ್ತಶಾಸ್ತ್ರಮ್ | ಚಿತೋ ಜೀವಸ್ಯಾಚಿದ್ವಿಶಿಷ್ಟೇಶ್ವರಸಾಯುಜ್ಯಂ ಚಾರ್ಧಾಂಶೇನ ಸ್ಥಾವರತ್ವಂ ಜನಯತೀತಿ ಪುನರನರ್ಥಪ್ರದಶ್ಚ । ಈಶ್ವರಸ್ಯ ಚಿದಚಿತೋರಪೃಥಕ್ಸಿದ್ಧವಿಶೇಷಣತ್ವೇನ ಸ್ವಾಪೃಥಕ್ಸಿದ್ಧಾನ್ ಸ್ವಾನನ್ಯಾಂಶ್ಚೇತನಾನುದ್ದಿಶ್ಯೇಶ್ವರಸ್ಯೋಪದೇಶೋಽಪಿ ನ ಘಟತ ಇತಿ ಕೃಷ್ಣಸ್ಯಾರ್ಜುನಂ ಪ್ರತ್ಯುಪದೇಶಾನುಪಪತ್ತಿಶ್ಚ । ಅರ್ಜುನಶ್ಚಿತ್ - ಶಾಸ್ತ್ರಮಚಿತ್- ವಿಶಿಷ್ಟಸ್ತ್ವೀಶ್ವರ ಇತಿ ಸ್ಥಿತೇ ಅರ್ಜುನಶಾಸ್ತ್ರವಿಶಿಷ್ಟ ಈಶ್ವರೋಽರ್ಜುನಾಯೋಪದಿಶತಿ ಶಾಸ್ತ್ರಮಿತಿ ಪ್ರಾಪ್ತಮಿದಮಪಾರ್ಥಂ ಖಲು ವಾಕ್ಯಮರ್ಜುನಾದಿಭಿನ್ನಸ್ಯೈವ ತದುಪದೇಶಕ್ರಿಯಾನ್ವಯೌಚಿತ್ಯಾತ್ । ನಚ ಲಕ್ಷಣಯಾ ವಿಶೇಷಣಾಂಶತ್ಯಾಗಃ, ಅಪೃಥಕ್ಸಿದ್ಧಯೋರ್ವಿಶೇಷಣಯೋಸ್ತ್ಯಾಗಾಯೋಗಾತ್- ತ್ಯಾಗೇಸತಿ ವಿಶೇಷಣಸ್ವರೂಪಾಸಿದ್ಧೇಃ । ಅರ್ಜುನದೇಹರೂಪಾಚಿದ್ವಿಶಿಷ್ಟಸ್ಯ ಕೃಷ್ಣದೇಹರೂಪಾಚಿದ್ವಿಶಿಷ್ಟಸ್ಯ ಚೇಶ್ವರಸ್ಯೈಕತ್ವೇನ ಗುರುಶಿಷ್ಯಭೇದಾಯೋಗಾಚ್ಚ ಕೃಷ್ಣದೇಹ ಇವಾರ್ಜುನದೇಹೇಽಪೀಶ್ವರಸತ್ತ್ವಾನಙ್ಗೀಕಾರೇ ಈಶ್ವರಸ್ಯ ಸರ್ವವ್ಯಾಪ್ತಿಭಙ್ಗಪ್ರಸಙ್ಗಾತ್ । ನ ಚಾರ್ಜುನದೇಹವಿಶಿಷ್ಟಚಿತೇ ಕೃಷ್ಣದೇಹವಿಶಿಷ್ಟ ಈಶ್ವರ ಉಪದಿಶತೀತಿ ವಾಚ್ಯಂ, ಅರ್ಜನದೇಹ ಇವ ಕೃಷ್ಣದೇಹೇಽಪಿ ಚಿತಸ್ಸತ್ತ್ವಾದನ್ಯಥಾ ತದ್ದೇಹಾವಚ್ಛಿನ್ನೇಶ್ವರಸ್ಯ ಚಿದ್ವೈಶಿಷ್ಟ್ಯಾಭಾವೇನ ಚಿದಚಿದ್ವಿಶಿಷ್ಟೇಶ್ವರತ್ವಾಭಾವಾದರ್ಜುನದೇಹತಶ್ಚಿದ್ವಿಶಿಷ್ಟಸ್ಯ ಕೃಷ್ಣದೇಹತಶ್ಚಿದ್ವಿಶಿಷ್ಟಸ್ಯ ಚೈಕತ್ವಾತ್ । ಸ್ಫುಟೀಭವಿಷ್ಯತ್ಯಯಮಂಶ ಉತ್ತರತ್ರೇತೀಹೋಪರಮ್ಯತೇ ॥
ವಸ್ತುತಃ ಪ್ರತಿಪಕ್ಷದ ತಲೆಯ ಮೇಲೆಯೇ ಈ ದೋಷವು ವಜ್ರಪ್ರಹಾರವಾಗಿ ಬೀಳುತ್ತದೆ— ಹಾಗೆಯೇ— ಈಶ್ವರನು ಪ್ರಲಯಾವಸ್ಥೆಯಲ್ಲಿ ಸೂಕ್ಷ್ಮ-ಚಿತ್-ಅಚಿತ್-ವಿಶಿಷ್ಟನೂ, ಸೃಷ್ಟಿಕಾಲದಲ್ಲಿ ಸ್ಥೂಲ-ಚಿತ್-ಅಚಿತ್-ವಿಶಿಷ್ಟನೂ ಎಂದು ವಿಶಿಷ್ಟಾದ್ವೈತಿಗಳು (ರಾಮಾನುಜಮತ) ಹೇಳುತ್ತಾರೆ. ಆದ್ದರಿಂದ, ಯಾವಾಗಲೂ ಈಶ್ವರನು ಚಿದಚಿದ್-ವಿಶಿಷ್ಟನಾಗಿರುವನು ಎಂಬುದರಿಂದ, ಚಿತ್-ಅಚಿತ್ ಗಳಿಗೆ ಈಶ್ವರಸಾಯುಜ್ಯವು ನಿತ್ಯವೂ ಸಿದ್ಧವಾಗಿರಲು, ವಿಶಿಷ್ಟಾದ್ವೈತಮತದಲ್ಲಿ ವೇದಾಂತಶಾಸ್ತ್ರವು ನಿಷ್ಫಲವಾಗಿರುವುದರಿಂದ, ಅದರ ವ್ಯಾಖ್ಯಾನಾದಿಗಳನ್ನು ಆರಂಭಿಸಬೇಕಿಲ್ಲವಲ್ಲ? ಚಿತ್ಸ್ವರೂಪನಾದ ಜೀವನಿಗೆ ಅಚಿತ್-ವಿಶಿಷ್ಟನಾದ ಈಶ್ವರನ ಸಾಯುಜ್ಯವು ಅರ್ಧಾಂಶದಷ್ಟು ಸ್ಥಾವರತ್ವವನ್ನು ಕೊಡುತ್ತದೆಯಾಗಿ, ಪುನಃ ಅನರ್ಥಪ್ರದವಾಗಿದೆ. ಚಿದಚಿತ್ ಸ್ವರೂಪನಾದ ಈಶ್ವರನಿಗೆ ತನಗಿಂತ ಬೇರೆಯಲ್ಲದ ಸಿದ್ಧವಿಶೇಣತ್ವದಿಂದ, ತನಗಿಂತ ಭಿನ್ನರಲ್ಲದ, ಅನ್ಯರಲ್ಲದ ಚೇತನಜೀವರನ್ನುದ್ದೇಶಿಸಿ ಈಶ್ವರನ ಉಪದೇಶವೂ ಕೂಡ ಘಟಿಸುವುದಿಲ್ಲ ಎಂಬುದರಿಂದ, ಅರ್ಜುನನಿಗೆ ಕೃಷ್ಣನ ಉಪದೇಶವೂ ಸರಿಹೊಂದುವುದಿಲ್ಲ. ಅರ್ಜುನನು ಚಿತ್ (ಚೇತನ), ಶಾಸ್ತ್ರವು ಅಚಿತ್ (ಜಡ), ಈಶ್ವರನಾದರೋ ಚಿದಚಿತ್ ವಿಶಿಷ್ಟ ಎಂದಿರಲು, ಅರ್ಜುನ-ಶಾಸ್ತ್ರ (ಚಿತ್-ಅಚಿತ್) ವಿಶಿಷ್ಟನಾದ ಈಶ್ವರನು ಅರ್ಜುನನಿಗೆ ಗೀತಾಶಾಸ್ತ್ರವನ್ನುಪದೇಶಿಸುತ್ತಾನೆಂಬ ವಾಕ್ಯವು ಅಪಾರ್ಥಕರವಲ್ಲವೆ? ಅರ್ಜುನನೇ ಮೊದಲಾದ ತನಗಿಂತ ಬೇರೆಯವರು ಇದ್ದರೆ ತಾನೆ ಅಂಥವರಿಗೆ ಉಪದೇಶಿಸುವುದರಲ್ಲಿ ಔಚಿತ್ಯವಿರುವುದು? ಹಾಗೆಯೇ, ಈ ಮತದಲ್ಲಿ ಲಕ್ಷಣದಿಂದ ವಿಶೇಷಣಾಂಶದ ತ್ಯಾಗವಿಲ್ಲ, ಬೇರೆ ಬೇರೆಯಲ್ಲದವುಗಳ ವಿಶೇಷಣಗಳ ತ್ಯಾಗವಿಲ್ಲದಿರುವುದರಿಂದಾಗಿ. ವಿಶೇಷಣಗಳ ತ್ಯಾಗವಿದ್ದರೆ ವಿಶೇಷಣಸ್ವರೂಪವೂ ಸಿದ್ಧಿಸುವುದಿಲ್ಲ. ಅರ್ಜುನನ ದೇಹರೂಪವಾದ ಅಚಿತ್ / ಜಡವಿಶಿಷ್ಟಕ್ಕೂ, ಕೃಷ್ಣನ ದೇಹರೂಪವಾದ ಅಚಿತ್ / ಜಡವಿಶಿಷ್ಟಕ್ಕೂ, ಈಶ್ವರನಿಗೂ ಜೀವನಿಗೂ ಏಕತ್ವವು ಸಿದ್ಧಿಸಲು, ಗುರು-ಶಿಷ್ಯ ಭೇದವಿಲ್ಲದೆ, ಕೃಷ್ಣದೇಹದಂತೆ ಅರ್ಜುನದೇಹದಲ್ಲೂ ಈಶ್ವರನಿರುವಿಕೆಯನ್ನು ಅಂಗೀಕರಿಸದೆ, ಈಶ್ವರನಿಗೆ ಸರ್ವವ್ಯಾಪಕತೆಯ ಭಂಗವುಂಟಾಗುತ್ತದೆ. ಅರ್ಜುನದೇಹವಿಶಿಷ್ಟನಾದ ಚಿತ್ತಿಗೆ ಕೃಷ್ಣದೇಹವಿಶಿಷ್ಟನಾದ ಈಶ್ವರನು ಉಪದೇಶಿಸುತ್ತಾನೆಂದೂ ಹೇಳಬಾರದು. ಅರ್ಜುನದೇಹದಂತೆಯೇ ಕೃಷ್ಣದೇಹದಲ್ಲೂ ಚಿತ್ ಅಲ್ಲದೆ ಆ ದೇಹದಲ್ಲಿರುವ ಈಶ್ವರನ ಚಿದ್-ವೈಶಿಷ್ಟ್ಯದ ಅಭಾವದಿಂದಾಗಿ ಚಿದಚಿದ್ವಿಶಿಷ್ಟ ಈಶ್ವರತ್ವದ ಅಭಾವದಿಂದ, ಚಿದ್ವಿಶಿಷ್ಟವಾದ ಅರ್ಜುನದೇಹಕ್ಕೂ, ಕೃಷ್ಣದೇಹಕ್ಕೂ ಏಕತೆಯಿರುವುದರಿಂದ. ಈ ಅಂಶವು ಮುಂದೆ ಸ್ಪಷ್ಟೀಕರಿಸಲ್ಪಡುವುದೆಂಬುದರಿಂದ ಈಗ ವಿರಮಿಸುತ್ತೇನೆ.
(೨೫) ಶ್ರೀಶ್ರೀಸಚ್ಚಿದಾನಂದೇಂದ್ರಸರಸ್ವತೀಕೃತಃ ಗೀತಾಶಾಸ್ತ್ರಾರ್ಥವಿವೇಕಃ
ಪೀಠಿಕೆ
ಭಗವಂತನ ಗೀತೆಯೆಂದು ಪ್ರಖ್ಯಾತವಾದ ಭಗವದ್ಗೀತೆಯು ಸಾಹಿತ್ಯ ಕ್ಷೇತ್ರದಲ್ಲಿ ತಾನು ಪಡೆದಿರುವ ಜನಪ್ರಿಯತೆಯಿಂದಲೆ ಬಹಳವಾಗಿ ಬಾಧೆಗೆ ಒಳಗಾಗಿದೆ. ಪ್ರತಿವರ್ಷವೂ ಎನ್ನುವಂತೆ ಅದು ವಿವಿಧ ಭಾಷೆಗಳಿಗೆ ಅನುವಾದವಾಗುತ್ತಿರುವ ಮತ್ತು ಅದರಮೇಲೆ ರಚಿತವಾಗುತ್ತಿರುವ ಹೊಸಹೊಸ ವ್ಯಾಖ್ಯಾನಗಳ ಪ್ರಮಾಣಕ್ಕೆ ಅನುಸಾರವಾಗಿ, ಹಾಗೆಯೇ ವಿವಿಧರೀತಿಯ ವಿವರಣೆ ಮತ್ತು ಪ್ರತಿಪಾದನೆಗಳು ಉಗಮವಾಗುತ್ತಿರುವಾಗ, ನಿಜವಾದ ಗೀತೋಪದೇಶವನ್ನು ಗುರುತಿಸುವದು ಮತ್ತು ಆಸ್ವಾದಿಸುವ ನಮ್ಮ ಸಾಮರ್ಥ್ಯವು ದಿನೇದಿನೇ ಬಹಳವಾಗಿ ಕಡಿಮೆಯಾಗುತ್ತಾ ಬರುತ್ತಿದೆ. ಮಹಾಮಹಿರಾದ ಶಂಕರಭಗವತ್ಪಾದರು ಈ ವಿಶಿಷ್ಟಕೃತಿಯಮೇಲೆ ರಚಿಸಿರುವ ಭಾಷ್ಯವೇ ಅತ್ಯಂತ ಪುರಾತನವಾದುದು. ಈಗ ಅದು ವರ್ಧಿಸುತ್ತಿರುವ ಹೊಸಹೊಸ ಉಪವ್ಯಾಖ್ಯಾನಗಳ ಮತ್ತು ನೂತನವಾದ ಅಂತರಾರ್ಥನಿರೂಪಣೆಗಳ ಭಾರದಲ್ಲಿ ಕುಸಿದುಹೋಗುತ್ತಿದೆ.
ಈ ಗ್ರಂಥವನ್ನು ಬರೆಯುವದರಲ್ಲಿರುವ ನನ್ನ ಉದ್ದೇಶವು ಈ ವ್ಯತ್ಯಾಸಗಳನ್ನು ಮತ್ತು ವ್ಯಾಖ್ಯಾನಕಾರರ ಭಿನ್ನಾಭಿಪ್ರಾಯಗಳನ್ನು ಕುರಿತ ವಿಶ್ಲೇಷಣೆಯಾಗಿರುವದಿಲ್ಲ. ನಾನು ಕೇವಲ ಪ್ರಾಯೋಗಿಕವಾಗಿ ಒಂದು ಪ್ರಯತ್ನವನ್ನು ಮಾಡಿ, ಈ ಮಿಥ್ಯಾಭಾವಾನುವಾದಕರ ಸಹಾಯವಿಲ್ಲದೆ ತಮ್ಮನ್ನು ತಾವೇ ಸ್ವತಂತ್ರವಾಗಿ ವಿವರಿಸಲು ಸಾಧ್ಯವಿಲ್ಲವೆ ಎಂಬುದನ್ನು ಕಂಡುಕೊಳ್ಳುವ ಆಸಕ್ತಿಯಲ್ಲಿದ್ದೇನೆ. ಹಾಗೆಯೇ ಗೀತೆಯ ಉಪದೇಶದ ಒಂದು ವ್ಯವಸ್ಥಿತ ತಂತ್ರವನ್ನು ಸ್ವಯಂವಿವರಣಾತ್ಮಕವಾದ ಶಾಂಕರಭಾಷ್ಯದ ಆಧಾರದ ಮೇಲೆಯೇ ರೂಪಿಸಲು ಸಾಧ್ಯವಿಲ್ಲವೆ? ಎಂದು ಪ್ರಯತ್ನಿಸುತ್ತಿದ್ದೇನೆ. ಈ ಪ್ರಯೋಗದ ಪರಿಣಾಮವಾಗಿ ನಾನು ಈ ವಿಧಾನವು ಒಂದು ಸಂಭವನೀಯವಾದುದಷ್ಟೇ ಅಲ್ಲ, ಇದೊಂದೇ ಗೀತೆಯಬಗ್ಗೆ ಆಧ್ಯಾತ್ಮಿಕ ತತ್ತ್ವವನ್ನು ತಿಳಿಸುವ ಮತ್ತು ಜ್ಞಾನವನ್ನುಂಟುಮಾಡುವ ನಿರ್ಣಾಯಕ ವಿಧಾನವೆಂದು ಮನಗಂಡಿದ್ದೇನೆ. ನಾನು ಪೂರ್ಣವಾಗಿ ವಿಶ್ವಾಸವಿಟ್ಟಿರುವ ಪ್ರಕಾರ, ಈ ವಿಧಾನದಿಂದ ಮಾತ್ರ ಗೀತೆಯಲ್ಲಿಯರುವ ಅನೇಕ ತತ್ತ್ವಗಳನ್ನು ನಿರ್ದುಷ್ಟವಾಗಿ ಸಮನ್ವಯಮಾಡಿ, ಒಂದು ಪೂರ್ಣವಾದ ಮತ್ತು ಬುದ್ಧಿಗ್ರಾಹ್ಯವಾದ ಸಿದ್ಧಾಂತವನ್ನು ಕಂಡುಕೊಳ್ಳಬಹುದು.
ಇದು ಮುಮುಕ್ಷುಗಳಿಗೆ ತಮ್ಮ ಸ್ವರೂಪವನ್ನು ಕಂಡುಕೊಳ್ಳಲು ಒಂದು ಸಮಗ್ರವಾದ ಮಾರ್ಗದರ್ಶಿಯಾಗಬಲ್ಲದು. ಪ್ರಾಯಶಃ ಓದುಗರು ತಾವೇ ಸ್ವತಃ ಪರಿಶೀಲಿಸಿ ಮತ್ತು ನಿರ್ಣಯಿಸಿ, ನನ್ನ ಈ ವಿಧಾನವು ತಮ್ಮ ಹೃದಯಕ್ಕೆ ಒಪ್ಪಾಗುತ್ತದೆಯೋ ಅಥವಾ ಇಲ್ಲವೋ ಎಂಬುದನ್ನು ಕಂಡುಕೊಳ್ಳಬಹುದು.
ಈಗ ಉಪದೇಶಗಳ ವಿಷಯಕ್ಕೆ ಬರೋಣ. ಭಗವದ್ಗೀತೆಯು ಎಲ್ಲ ವೈದಿಕಬೋಧನೆಗಳ ಸಾರವತ್ತಾದ ಭಾಗವುಳ್ಳ ಸ್ಮೃತಿ (ಸಮಸ್ತವೇದಾರ್ಥಸಾರಸಂಗ್ರಹಭೂತಮ್) ಎಂದು ಶಂಕರರು ಹೇಳುತ್ತಾರೆ. ಅವರು ತಮ್ಮ ಬ್ರಹ್ಮಸೂತ್ರಭಾಷ್ಯದಲ್ಲಿಯೂ ಸಮರ್ಥಿಸಿಕೊಂಡಿದ್ದಾರೆ. ಬಾದರಾಯಣರು ಅದರಲ್ಲಿ ಸ್ಮೃತಿಪ್ರಮಾಣವನ್ನು ಸಾಧಾರಣವಾಗಿ ಸ್ವೀಕರಿಸಿರುವ ಕಡೆಗಳಲ್ಲೆಲ್ಲ (ಉ.ದಾ - ಸ್ಮೃತೇಶ್ಚ 1-2-6, ಸ್ಮರನ್ತಿ ಚ 4-1-10), ಶಂಕರರು ಭಾಷ್ಯದಲ್ಲಿ ಗೀತೆಯಿಂದಲೇ ಸಂಬಂಧಪಟ್ಟ ಶ್ಲೋಕಗಳನ್ನು ಉದಾಹರಿಸಿರುತ್ತಾರೆ. ಈ ದೃಷ್ಟಿಯು ಸಾಕ್ಷಾತ್ ಕೃಷ್ಣಭಗವಂತನಿಂದಲೇ ವೇದ ಮತ್ತು ವೇದಾಂತಸಂಪ್ರದಾಯಗಳನ್ನು ಸೂಚಿಸುವದರಮೂಲಕ ಗೀತೆಯಲ್ಲಿಯೇ ದೃಢೀಕರಿಸಲ್ಪಟ್ಟಿದೆ (ಇದೇ ಗ್ರಂಥ ಪು.46). ಈ ಅಂಶವು ಸತ್ತ್ವವನ್ನು ಅರಸುವವರಿಗೆ ಬಹಳ ಮಹತ್ತ್ವದ್ದಾಗಿರುತ್ತದೆ. ಏಕೆಂದರೆ ಶಂಕರರ ಪ್ರಕಾರ ಗೀತೆಯು ಉಳಿದ ದರ್ಶನಗಳಿಗಿಂತ ಭಿನ್ನವಾಗಿದೆ. ಉಪನಿಷತ್ತುಗಳಮೇಲೆ ಅವಲಂಬಿಸಿರುವದರಿಂದ, ಅವುಗಳಂತೆಯೇ ಸಮ್ಯಗ್‌ಜ್ಞಾನದ ಉಳಿದ ಮಾನದಂಡಗಳನ್ನಾಗಲಿ ಬೇರೆಯ ರೀತಿಯ ಗ್ರಹಿಕೆಯನ್ನಾಗಲಿ ಬಯಸುವದಿಲ್ಲ. ಅದು ಶಾಸ್ತ್ರಜ್ಞಾನ ಮತ್ತು ಸಾರ್ವತ್ರಿಕಾನುಭವಗಳನ್ನು ಮಾತ್ರ ಬಯಸುತ್ತದೆ (ಜ್ಞಾನಂ ವಿಜ್ಞಾನಸಹಿತಮ್, ಗೀ. 7-2, 9-1). ಆದ್ದರಿಂದ ನಾನು ನನ್ನ ಅಡಿಟಿಪ್ಪಣಿಯಲ್ಲಿ ಎಲ್ಲೆಲ್ಲಿ ಗೀತೆಯ ವಿಷಯಗಳನ್ನು ಸಮರ್ಥನೆಮಾಡಲು ಪ್ರಯಾಸಪಡದೆ ಶ್ರುತಿಯನ್ನು ಮಾತ್ರ ಪುನರುಚ್ಚರಿಸುತ್ತದೆಯೋ ಅಂತಹ ಶ್ರುತಿ, ಅಂದರೆ ಉಪನಿಷತ್ತಿನ ವಾಕ್ಯಗಳನ್ನು ಉದ್ಧರಿಸುತ್ತೇನೆ. ಈ ವಿಷಯವು ಶಂಕರರು ಸಾಂಪ್ರದಾಯಿಕವಾದ ವಿಧಾನವನ್ನು ಅನುಸರಿಸಿ, ಈ ಪವಿತ್ರವಾದ ಕೃತಿಯನ್ನು ಗೀತಾಶಾಸ್ತ್ರವೆಂದು ಕರೆದು, ಅದು ಶಾಸ್ತ್ರದ ಅಂದರೆ ವೇದದ ಮೇಲೆ ಮಾತ್ರ ಅವಲಂಬಿಸಿದೆಯೆಂದು ಹೇಳಿರುವದಕ್ಕೆ ಸಮರ್ಥನೆಯನ್ನು ಒದಗಿಸುತ್ತದೆ (ಪು. 1,5,48).
ಗೀತೆಯ ಪ್ರತಿಯೊಂದು ಅಧ್ಯಾಯದ ಕೊನೆಯಲ್ಲಿರುವ ಪುಷ್ಪಿಕಾವಾಕ್ಯವು ಗ್ರಂಥದ ನಿಜವಾದ ಭಾಗವಾಗಿರುವದಿಲ್ಲವೆಂದು ಸ್ವೀಕರಿಸಿರುವದಕ್ಕೆ ನಾನು ನನ್ನ ಕಾರಣವನ್ನು ಕೊಟ್ಟಿರುತ್ತೇನೆ (ಪು. 31). ಆದರೆ ಈ ಅಂತಿಮ ಭಾಗವು ಹೆಚ್ಚಿನ ಮುದ್ರಿತ ಪುಸ್ತಕಗಳಲ್ಲಿ ಕಂಡುಬರುತ್ತಿದ್ದು ಗೀತೆಯಲ್ಲಿನ ಮಾಹಿತಿಯ ಬಗ್ಗೆ ಮೌಲಿಕವಾದ ವಿವರಣೆಯನ್ನು ಕೊಡುತ್ತದೆ. ಅದರಲ್ಲಿ ಕೃತಿಯನ್ನು ಬ್ರಹ್ಮವಿದ್ಯೆಯೆಂದೂ (ಬ್ರಹ್ಮದ ಜ್ಞಾನ), ಯೋಗಶಾಸ್ತ್ರ (ಯೋಗವಿಜ್ಞಾನ)ವೆಂದೂ ಪರಿಗಣಿಸಿದೆ. ಆದಾಗ್ಯೂ ವೇದಾಂತದ ದ್ವೈತದರ್ಶನಗಳ ಉಚ್ಚವಿರೋಧದ ನಡುವೆಯೂ, ಭಗವದ್ಗೀತೆಯು ನಿಜವಾಗಿ ಪೂರ್ಣರೂಪದಲ್ಲಿ ಬ್ರಹ್ಮವಿದ್ಯೆಯೆಂಬ ಹೆಸರಿಗೆ ತಕ್ಕದಾಗಿದೆ. ಹೇಳಬೇಕೆಂದರೆ ಬ್ರಹ್ಮವೇ ಆತ್ಮವೆಂದೂ ಪ್ರತಿ ಜೀವಿಯ ಹೃದಯದಲ್ಲಿರುವದೆಂದು ನಿಖರವಾಗಿ ಘೋಷಿಸುವಾಗ ಗೀತೆಯು ಪೂರ್ಣವಾಗಿ ಉಪನಿಷತ್ತುಗಳನ್ನು ಅನುಸರಿಸುತ್ತದೆ (ಅಹಮಾತ್ಮಾ ಗುಡಾಕೇಶ ಸರ್ವಭೂತಾಶಯಸ್ಥಿತಃ ಗೀ. 10-20). ಇದಕ್ಕೆ ವಿಲೋಮವಾಗಿ ಎಲ್ಲ ಜೀವಿಗಳ ಪ್ರತ್ಯಗಾತ್ಮವು ನಿಜವಾಗಿ ಪರಮಾತ್ಮನೇ ಎನ್ನುತ್ತದೆ (ಕ್ಷೇತ್ರಜ್ಞಂ ಚಾಪಿ ಮಾಂ ವಿದ್ಧಿ, ಗೀ 13-2), ಕ್ಷೇತ್ರಜ್ಞನ ಕುರಿತು ಬರಹಗಾರನ ಅಭಿಪ್ರಾಯದ ಹೆಚ್ಚಿನ ತಿಳಿವಳಿಕೆಗಾಗಿ ಈ ಗ್ರಂಥದ 18ನೇ ಅಧ್ಯಾಯ(ಭಗವತ್ತತ್ತ್ವ ವಿವೇಕ)ವನ್ನು ಓದುಗರು ಪರಿಶೀಲಿಸಬಹುದು.
ಯೋಗಶಾಸ್ತ್ರ ಎಂಬ ಇನ್ನೊಂದು ವಿಶೇಷಣ ಪದಕ್ಕೆ ಬಂದರೆ ಯೋಗ ಎಂಬುವ ಪದದ ಸರಿಯಾದ ತಿಳಿವಳಿಕೆಯು, ಈ ಪವಿತ್ರಕೃತಿಯು ಯಾವದನ್ನು ಅತಿಮುಖ್ಯವಾದ ಉಪದೇಶವೆಂದೂ, ಅದು ಮನುಷ್ಯನನ್ನು ಸಂಸಾರಬಂಧನದಿಂದ ಬಿಡುಗಡೆಮಾಡುವ ಉಪಾಯವೆಂದೂ ಹೇಳಿದೆಯೊ, ಆ ಅಂಶದ ಮೇಲೆ ಅವಲಂಬಿಸಿರುತ್ತದೆ. ಶಂಕರಭಗವತ್ಪಾದರ ಪ್ರಕಾರ ಅಂತಿಮವಾಗಿ ಅನುಭವವೆಂಬ ಸ್ವಸ್ವರೂಪದಲ್ಲಿ ನೆಲೆನಿಲ್ಲುವದು, ಅದರ ಜೊತೆಯಲ್ಲಿ ತಾತ್ತ್ವಿಕ ಹಿನ್ನೆಲೆಯಲ್ಲಿ ಎಲ್ಲ ವ್ಯಾವಹಾರಿಕ ಚಟುವಟಿಕೆಗಳನ್ನು ತ್ಯಾಗಮಾಡುವದು ಯೋಗವೆಂದು ಕರೆಯಲ್ಪಡುತ್ತದೆ. ಅಪ್ರಧಾನವಾಗಿ ಯೋಗಗಳು ಎಂಬುದು ಜ್ಞಾನಯೋಗ, ಕರ್ಮಯೋಗ, ಧ್ಯಾನಯೋಗ ಮತ್ತು ಭಕ್ತಿಯೋಗ ಮುಂತಾದವು. ಹಾಗೆ ಕರೆಯಲ್ಪಡುವದಕ್ಕೆ ಕಾರಣವೇನೆಂದರೆ, ಅವು ನೇರವಾಗಿಯೊ ಅಥವಾ ಅಪ್ರತ್ಯಕ್ಷವಾಗಿಯೊ ಪರಿಪೂರ್ಣಯೋಗಕ್ಕೆ ದಾರಿಮಾಡಿ ಕೊಡುತ್ತವೆ (ಪು. 20, 24). ಮುಖ್ಯವಾಗಿ ಗೀತೆಯ ಪ್ರಕಾರ ಪ್ರತಿಯೊಂದು ಯೋಗವೂ ಆ ಶೀರ್ಷಿಕೆಗೆ ಯೋಗ್ಯತೆಯನ್ನು ಪಡೆಯಬೇಕಾದರೆ ಅದು ಯಾವದಾದರೂ ಒಂದು ಬಗೆಯಲ್ಲಿ ಭಗವಂತನಿಗೆ ಅಥವಾ ಆತ್ಮತತ್ತ್ವಕ್ಕೆ ಸಂಬಂಧಪಟ್ಟಿರಬೇಕು (ಪು. 132).
ಗೀತೆಯಲ್ಲಿ ಇನ್ನೊಂದು ಮುಖ್ಯವಾದ ಅಂಶವನ್ನು ನಾವು ವಿಶೇಷವಾಗಿ ಗಮನಿಸಬೇಕಾಗಿದೆ. ಯೋಗ ಮತ್ತು ಸಾಙ್ಖ್ಯ ಎಂಬ ಪದಗಳು ಅದೇ ಹೆಸರಿನ ದರ್ಶನಗಳ ಅರ್ಥದಲ್ಲಿ ಅವುಗಳಲ್ಲಿ ಬಳಕೆಯಾಗಿದ್ದು, ಗೀತೆಯಲ್ಲಿ ಆ ಪದಗಳು ಭಿನ್ನವಾದ ಅರ್ಥವನ್ನು ಪಡೆದಿದೆ. ಆದ್ದರಿಂದ ನಾನು ಈ ವಿಷಯದಲ್ಲಿ ಆಯಾ ಅಧ್ಯಾಯದ ಉಪಕ್ರಮದಲ್ಲಿಯೇ ಓದುಗರ ಗಮನವನ್ನು ಸೆಳೆದಿದ್ದೇನೆ. (ಅ-4,5). ಕೆಲವು ಆಲೋಚನಾಪರರು ಗೀತೆಯೆಂಬ ಈ ಧರ್ಮಗ್ರಂಥವು ಈ ಎಲ್ಲ ದರ್ಶನಗಳ ಮಿಶ್ರಣವೆಂದೂ, ಜೊತೆಗೆ ವೇದಾಂತದ ತುಣುಕನ್ನು ಹೊಂದಿದೆಯೆಂದೂ ಊಹಿಸಿರುತ್ತಾರೆ. ಓದುಗರು ಇಂಥವರ ಸಂಪರ್ಕದಿಂದ ದುರಾಗ್ರಹಪೀಡಿತವಾದ ತಮ್ಮ ಮನಸ್ಸನ್ನು ಸರಿಪಡಿಸಿಕೊಳ್ಳಬೇಕಾಗಿದೆ. ಜೊತೆಗೆ, ಗೀತೆಯ ಪ್ರಾರಂಭದ ಓದುಗರಿಗೆ ಒಂದು ವಿಷಯವನ್ನು ಮನವರಿಕೆ ಮಾಡಿಕೊಡಬೇಕಾಗಿದೆ. ಅದೇನೆಂದರೆ ಗೀತೆಯಲ್ಲಿ ಸಾಙ್ಖ್ಯ ಮತ್ತು ಯೋಗಗಳೆಂಬ ಪದಗಳು ಮತ್ತೆಮತ್ತೆ ಬಳಕೆಯಾಗಿದ್ದರೂ ಅದು ತನ್ನದೇ ಆದ ಸ್ವಂತ ವಿಧಾನವನ್ನು ಅಳವಡಿಸಿಕೊಂಡಿದೆ. ನಾನು ಪರಿಶಿಷ್ಟಭಾಗದಲ್ಲಿ ಗೀತೆಯ ತತ್ತ್ವವನ್ನು ಈ ಎರಡು ದರ್ಶನಗಳೊಡನೆ ಹೋಲಿಸಿ, ಅವುಗಳಿಗಿರುವ ಸಾಮ್ಯ ವೈಷಮ್ಯಗಳನ್ನು ಕೆಲವು ಮುಖ್ಯ ಮತ್ತು ವಿಶಿಷ್ಟ ತತ್ತ್ವ (ಸಿದ್ಧಾಂತ)ಗಳ ವಿಚಾರದಲ್ಲಿ ನಿವೇದಿಸಿರುತ್ತೇನೆ.
ಪ್ರಸಕ್ತ ಕೃತಿಯ ಮತ್ತೊಂದು ವಿಶೇಷಲಕ್ಷಣವನ್ನು ಹೇಳಬೇಕಾಗಿದೆ. ಇಲ್ಲಿಯ ಸಾಕಷ್ಟುಭಾಗವು ಅಲ್ಲಲ್ಲಿ ಚೆದುರಿದಂತೆ ಇರುವ ಅನೇಕ ಪ್ರಮುಖ ಪಾರಿಭಾಷಿಕಪದಗಳ ವಿವಿಧ ಅರ್ಥಸ್ವಾರಸ್ಯವನ್ನು ವಿಂಗಡಿಸುವದಕ್ಕಾಗಿ ವಿನಿಯೋಗಿಸಲ್ಪಟ್ಟಿದೆ. ಇವುಗಳ ಅರ್ಥವನ್ನು ಸ್ಪಷ್ಟವಾಗಿ ಗ್ರಹಿಸಿದಾಗ ಮಾತ್ರ ಗೀತೆಯಲ್ಲಿರುವ ಅನೇಕ ತತ್ತ್ವಗಳನ್ನು ಸಮನ್ವಯಮಾಡಲು ಸಾಧ್ಯ. ಅಂತ್ಯದಲ್ಲಿರುವ ಪರಿಪೂರ್ಣವೆನಿಸಬಹುದಾದ ಶಬ್ದಸೂಚಿಯು ಪ್ರಾರಂಭಿಕ ಓದುಗರ ಬುದ್ಧಿಯನ್ನು ಈ ರೀತಿಯ ಅನ್ವೇಷಣಾಮಾರ್ಗಕ್ಕೆ ಹೊಂದಿಸುವ ಸಲುವಾಗಿ ಸಿದ್ಧಪಡಿಸಲಾಗಿದೆ.
ಗೀತೆಯ ಈ ವಿನಯಪೂರ್ವಕವಾದ ವಿಶ್ಲೇಷಣೆಯು ಶಾಂಕರಭಾಷ್ಯದಲ್ಲಿನ ಉಪದೇಶಗಳಿಗೆ ಅನುಸಾರವಾಗಿದೆ. ಇದು ಓದುಗರ ಕುತೂಹಲವನ್ನು ವರ್ಧಿಸುವಂತೆಮಾಡಿ, ಈ ಪವಿತ್ರಗ್ರಂಥದ ಇನ್ನೂ ಹೆಚ್ಚಿನ ಶ್ರದ್ಧಾಯುಕ್ತವಾದ ಅಭ್ಯಾಸಕ್ಕೆ ಪ್ರೋತ್ಸಾಹಿಸುತ್ತದೆಂದು ನಾನು ಭರವಸೆಯಿಟ್ಟಿರುತ್ತೇನೆ. ಅದರಂತೆಯೇ ಆಚಾರ್ಯರ ಉಳಿದ ಉತ್ಕೃಷ್ಟಕೃತಿಗಳನ್ನು, ಅವರು ಗೀತೆಯ ಬಗ್ಗೆ ಪ್ರಸ್ತುತಪಡಿಸಿರುವ ವಿಶೇಷಮಾಹಿತಿಯ ಸಮೇತ ಓದುವ ಆಸ್ಥೆಯನ್ನು ವರ್ಧಿಸುತ್ತದೆಯೆಂದು ಭಾವಿಸುತ್ತೇನೆ. ಈ ವಿಧವಾದ ಸಂಶೋಧನ ಕೃತಿಯು ಭಗವಂತನಾದ ನಾರಾಯಣನ ಅನುಗ್ರಹದಿಂದ, ಈ ಕೃತಿಯನ್ನು ಓದಲು ಬಯಸುವ ಕೆಲವರ ಬುದ್ಧಿಯಲ್ಲಿಯಾದರೂ ಈಪ್ಸಿತವಾದ ಪರಿಣಾಮವನ್ನು ಬೀರಿದರೆ ನಾನು ಈ ಗ್ರಂಥವನ್ನು ರಚಿಸಲು ಪಟ್ಟ ಶ್ರಮವು ಸಾರ್ಥಕವಾಯಿತೆಂದು ಭಾವಿಸುತ್ತೇನೆ.
ಹೊಳೆನರಸೀಪುರ ಶ್ರೀಶ್ರೀಸಚ್ಚಿದಾನಂದೇಂದ್ರಸರಸ್ವತೀಸ್ವಾಮಿಗಳು
20-12-1965
ಪ್ರಾಸ್ತಾವಿಕ ವಿಜ್ಞಾಪನೆ
ಗ್ರಂಥವನ್ನು ರಚಿಸಲು ಕಾರಣ—
ಸಮಸ್ತ ವೇದಾಂತರಸಿಕರಿಗೆ ಇದು ಚೆನ್ನಾಗಿ ತಿಳಿದಿರುವ ವಿಷಯವು. ಯಾವುದೆಂದರೆ ವೇದಾರ್ಥಸಾರಸಂಗ್ರಹವಾಗಿರುವ ಗೀತಾಶಾಸ್ತ್ರವನ್ನು ಶ್ರೀಶಂಕರ ಭಗವತ್ಪಾದರವರು ಪದವಾಕ್ಯಪ್ರಮಾಣಾನುಸಾರವಾಗಿ ವ್ಯಾಖ್ಯಾನವನ್ನು ಮಾಡಿರುವುದು (ಇನ್ನೂ) ಜೀವಂತವಾಗಿಯೇ ಇದೆ. ಶ್ರೀಶಂಕರಾಚಾರ್ಯರ ಅನುಯಾಯಿಗಳಾದ ಅದ್ವೈತಿಗಳೂ, ಅದ್ವೈತಕ್ಕಿಂತ ಬೇರೆ ಸಿದ್ಧಾಂತವನ್ನವಲಂಬಿಸಿರುವ ಭಾಷ್ಯಕಾರರೂ ಅನೇಕವಿಧವಾಗಿ ವ್ಯಾಖ್ಯಾನವನ್ನು ಇದಕ್ಕೆ ಮಾಡಿರುತ್ತಾರೆ. ಈ ಕಾಡನ್ನು ಪ್ರವೇಶಿಸಿದವರಾದ ಮುಮುಕ್ಷುಗಳು ಶಾಸ್ತ್ರಸಿದ್ಧಾಂತಗಳ ವಿಷಯದಲ್ಲಿ ದಿಕ್ಕೆಟ್ಟವರಾಗಿರುತ್ತಾರೆ. ಪ್ರಸನ್ನ ಗಂಭೀರವಾದ ಭಗವತ್ಪಾದರ ಭಾಷ್ಯದ ತಾತ್ಪರ್ಯವನ್ನು ನಿರ್ಣಯ ಮಾಡುವುದರಲ್ಲಿ ಅಸಮರ್ಥರಾಗಿರುವವರಾಗಿ ಕಂಡುಬರುತ್ತಿದ್ದಾರೆ. ವೇದಾಂತವಿಚಾರಕ್ಕೆ ಜನ್ಮಭೂಮಿಯಾದ ನಮ್ಮ ಭಾರತದೇಶದಲ್ಲೂ ಈ ರೀತಿ ಆಗಿದೆ (ಎಂದರೆ ಇದೆಂತಹ ವಿಪರ್ಯಾಸ!).
ಗೀತಾಭಾಷ್ಯವನ್ನು ಪಾಠಮಾಡುವವರೂ ಕೂಡ ಈ ವ್ಯಾಖ್ಯಾನದ ಪ್ರಕಾರ ಈ ಭಾಷ್ಯಕ್ಕೆ ಹೀಗರ್ಥ, ಇನ್ನೊಂದು ವ್ಯಾಖ್ಯಾನದ ಪ್ರಕಾರ ಅದು ಅರ್ಥ ಎಂಬುದಾಗಿ ವಿಕಲ್ಪವನ್ನೇ ಹಠಹಿಡಿಯುತ್ತಾ (ಪಾಠವನ್ನ) ಮಾಡುವರು. ನಿಜವಾಗಿ ಅದ್ವೈತಾರ್ಥವು ಏಕರೂಪವಾಗಿದ್ದು ಶಿಷ್ಯರಲ್ಲಿರುವ ಅಧಿಕಾರಮಟ್ಟದ ವೈಚಿತ್ರ್ಯಕ್ಕನುಗುಣವಾಗಿ ಬೇರೆ ಬೇರೆ ಪ್ರಕಾರವಾಗಿ ವ್ಯಾಖ್ಯಾನವನ್ನು ಮಾಡುವುದು ದೋಷಯುಕ್ತವೇನಾಗುವುದಿಲ್ಲ. ಅದು ತಿಳಿಸಿಕೊಡುವುದಕ್ಕೆ ಉಪಾಯಮಾತ್ರವಾಗಿದೆ ಎಂಬುದಾಗಿ ಶ್ರೀಗೌಡಪಾದರಿಗೆ ಒಪ್ಪಿಗೆಯಾದ ಯುಕ್ತಿಯನ್ನೇನೋ ಅನುಸರಿಸಿದಂತಾಗುತ್ತದೆ. ಆದರೂ ಈ ವಿಷಯದಲ್ಲೂ ಶಿಷ್ಯರು ಮಾತ್ರ ವಿರುದ್ಧವಾಗಿ ಬೇರೆ ಬೇರೆ ತರಹವಾಗಿ ಭಾಷ್ಯಾರ್ಥವನ್ನು ಗ್ರಹಿಸುತ್ತಿದ್ದಾರೆ. ಹೀಗಿರುವಾಗ ಅದು ಒಂದೇ ಪ್ರಕಾರದ ಅರ್ಥದಲ್ಲಿ ನೆಲೆನಿಂತಿದೆ ಎಂದು ಹೇಗೆ ತಿಳಿದುಕೊಳ್ಳಲಿ? ಎಂಬ ಸಂದೇಹವು ಯಾವ ತತ್ತ್ವನಿರೂಪಕನಿಗೂ ಇಂದಿನವರೆಗೂ ಉದ್ವೇಗವನ್ನುಂಟುಮಾಡುತ್ತಿಲ್ಲ ಎಂಬುದೇ ಬಹಳ ಆಶ್ಚರ್ಯವಾದ ಸಂಗತಿಯು!
ಹೀಗೆ ಪರಸ್ಪರ ವಿರುದ್ಧವಾದ ವ್ಯಾಖ್ಯಾನವು ಕಂಡುಬರುತ್ತಿರುವುದರಿಂದ ಗೀತಾಶಾಸ್ತ್ರವನ್ನು ನಿರ್ಣಯಮಾಡುವುದು ಕಷ್ಟ ಎಂಬುದನ್ನು ತಿಳಿದವನಾದೆ. ಗಲಿಬಿಲಿಗೊಂಡಬುದ್ಧಿಯವರಾದ ಮೋಕ್ಷವನ್ನು ಬಯಸುವ ಜಿಜ್ಞಾಸು ಜನರಿಗೆ ಚೆನ್ನಾಗಿ ಅವಲೋಕನೆಮಾಡಿದ್ದಾದ ಭಗವತ್ಪಾದರ ಭಾಷ್ಯವೊಂದೇ ಮನಃಶಾಂತಿಗೆ ಸಾಕಾಗಿದೆ. ಭಾಷ್ಯವು ಸುನಿಶ್ಚಿತವಾದ ವಿಷಯವನ್ನು ತಿಳಿಸಿಕೊಡುವ ಮೂಲಕ ಪರಮಪುರುಷಾರ್ಥದ ರಾಜಮಾರ್ಗವನ್ನು ತೋರಿಸುವುದಕ್ಕೂ ಸಾಕಾಗಿದೆ. ಈ ರೀತಿ ದೃಢವಾಗಿ ನಂಬಿಕೊಂಡ ನಾನು ಈ ಗೀತಾಶಾಸ್ತ್ರಾರ್ಥವಿವೇಕ ಎಂಬ ಹೆಸರಿನ ಈ ಪ್ರಕರಣವನ್ನು ರಚಿಸಿರುತ್ತೇನೆ.
ಇಲ್ಲಿ ಶಾಸ್ತ್ರಾರ್ಥವನ್ನು ವಿಂಗಡಮಾಡಿದ ಪ್ರಕಾರ—
ಗೀತಾಶಾಸ್ತ್ರವನ್ನು ನಿರ್ಣಯಮಾಡುವುದಕ್ಕೆ ಮುಖ್ಯವಾದ ಅಡ್ಡಿಯು ಇದಾಗಿರುತ್ತದೆಯಲ್ಲವೆ? ಯಾವುದೆಂದರೆ ಈ ಶಾಸ್ತ್ರದಲ್ಲಿ ಬಳಸಿರುವ ಪಾರಿಭಾಷಿಕ ಪದಗಳಿಗೆ ನಿಶ್ಚಿತವಾಗಿ ಯಾರೂ ಇದೇ ಅರ್ಥ ಎಂದು ತಿಳಿದುಕೊಂಡಿಲ್ಲ. ಇದನ್ನು ತಿಳಿದ ನಾನು ಇಲ್ಲಿ ಮೊಟ್ಟಮೊದಲು ಸಾಂಖ್ಯ, ಯೋಗ, ಕರ್ಮ, ಧ್ಯಾನ, ಜ್ಞಾನ ಮುಂತಾದ ಪದಾರ್ಥಗಳಿಗೆ ವಿವೇಕವನ್ನು ಮಾಡಿರುತ್ತೇನೆ. ಅನಂತರ ಕರ್ಮಯೋಗ-ಧ್ಯಾನಯೋಗ-ಭಕ್ತಿಯೋಗ-ಜ್ಞಾನಯೋಗಗಳಿಗೆ ಪರಸ್ಪರ ಸಂಬಂಧವನ್ನು ಗೊತ್ತುಮಾಡಿರುತ್ತೇನೆ. ಹೇಗಾದರೂ ಸರಿ ಜಿಜ್ಞಾಸುಜನರ ಹೃದಯಕ್ಕೆ ಈ ಶಾಸ್ತ್ರಾರ್ಥ ವಿವೇಕವು ಏನೂ ಅಡ್ಡಿ ಇಲ್ಲದೇ ಪ್ರವೇಶಿಸಲಿ (ಎಂಬುದೇ ಉದ್ದೇಶ). ಇಷ್ಟಾದರೂ ಈ ಗೀತಾಶಾಸ್ತ್ರದಲ್ಲಿ ಸಾಂಖ್ಯ-ಯೋಗ ದರ್ಶನದವರೆಗೆ ಒಪ್ಪಿಗೆಯಾದ ಮತ್ತು ವೇದಾಂತನಿರ್ಧಾರಣೆ ಮಾಡುವುದಕ್ಕೆ ಕೆಲವು ಅನುಮೋದನೆ ಮಾಡಿದ್ದಾದ ವಿಷಯವೂ ಇದೆ. ಈ ಕಾರಣದಿಂದ ಮುಮುಕ್ಷುಗಳು ತಾವೇ ಶಾಸ್ತ್ರಾರ್ಥವನ್ನು ನಿರ್ಣಯಮಾಡುವುದಕ್ಕೆ ಅಸಮರ್ಥರಾಗಿರುತ್ತಾರೆ. ಕೆಲವರು ವ್ಯಾಮೋಹಗೊಂಡವರೂ ಆಗಿರುತ್ತಾರೆ. ಸಾಂಖ್ಯ-ಯೋಗಗಳಿಂದ ಕಲಬೆರಕೆ ಹೊಂದಿದ ಒಂದಾನೊಂದು ವೇದಾಂತ ವಿಶೇಷವು ಇಲ್ಲಿ ತಿಳಿಸಿಕೊಡಬೇಕೆಂದಿದೆ ಎಂತಲೂ ತಿಳಿದಿರುತ್ತಾರೆ! ಆ ಭ್ರಾಂತಿಯನ್ನು ಕಳೆಯುವುದರ ಮೂಲಕ ಎಲ್ಲಾ ವೇದಾಂತಕ್ಕೂ ಸಂಮತವಾದ, ಪರಿಶುದ್ಧವಾದ, ಸಿದ್ಧಾಂತವನ್ನು ಪ್ರಕೃತವಾದ ಶಾಸ್ತ್ರದಲ್ಲಿ ಹೇಗೆ ತೋರಿಸಿಕೊಟ್ಟಿದೆ ಎಂಬುದನ್ನು ಭಗವತ್ಪಾದರ ಭಾಷ್ಯವಾಕ್ಯವನ್ನಾಶ್ರಯಿಸುವುದರ ಮೂಲಕ ಇಲ್ಲಿನ ಪರಿಶಿಷ್ಟಭಾಗದಲ್ಲಿ ತೋರಿಸಿಕೊಟ್ಟಿರುತ್ತೇವೆ. ಹೀಗೆ ಈ ಅಲ್ಪ ಗ್ರಂಥವಾದ ಈ ಪ್ರಕರಣವನ್ನು ಚೆನ್ನಾಗಿ ವಿಚಾರಮಾಡುವುದರಿಂದ ಶ್ರೀಶಂಕರ ಭಗವತ್ಪಾದರು ತಮ್ಮ ಭಾಷ್ಯದಲ್ಲಿ ತೆಗೆದುಕೊಂಡದ್ದಾದ ವೇದಾಂತಾರ್ಥವನ್ನೇ ಗೀತಾಚಾರ್ಯನಾದ ಭಗವಂತನೂ ಅನುಗ್ರಹಿಸಿರುತ್ತಾನೆ ಎಂತಲೂ, ಅದನ್ನನುಸರಿಸಿದರೆ ಮಾತ್ರವೇ ಪುರುಷಾರ್ಥವುಂಟಾಗುತ್ತದೆ ಎಂಬುದನ್ನು ಓದುಗರು ನಿಃಸಂಶಯವಾಗಿ ತಿಳಿದಾರೆಂದೂ ನಾನು ದೃಢವಾಗಿ ನಂಬುತ್ತೇನೆ.
ಭಗವಂತನಾದ ನಾರಾಯಣನ ಅನುಗ್ರಹದಿಂದ ರಚನೆ ಮಾಡಿದ್ದಾದ ಈ ಗ್ರಂಥವು ಗೀತಾರ್ಥವನ್ನು ಪರಿಶೀಲನೆ ಮಾಡುವುದರಲ್ಲಿ ಕುಶಲರಾದ ಕೆಲವರು ಪಂಡಿತರಿಗಾದರೂ ಸರಿ, ಅವರಿಗೇನಾದರೂ ಒಪ್ಪಿಗೆಯಾದ ಪಕ್ಷದಲ್ಲಿ ಹಾಗೆಯೇ ವೇದಾಂತಜಿಜ್ಞಾಸುಗಳಿಗೆ ಶ್ರೀಶಂಕರಭಗವತ್ಪಾದರ ಭಾಷ್ಯವನ್ನು ಓದುವುದರಲ್ಲಿ ತೀವ್ರವಾದ ಕುತೂಹಲವನ್ನು ಉಂಟುಮಾಡಿದ್ದೇ ಆದರೆ, ಅದರಿಂದ ನಾನು ಈ ಗ್ರಂಥವನ್ನು ರಚನೆ ಮಾಡಿದ್ದಾದ ಆಯಾಸವನ್ನು ಧನ್ಯವಾದದ್ದೆಂದು ತಿಳಿಯುತ್ತೇನೆ.
ಈ ನನ್ನ ಅಲ್ಪಪ್ರಯತ್ನದಿಂದ ಶ್ರೀಭಗವನ್ನಾರಾಯಣನು (ಸುಪ್ರೀತನಾಗಿ) ಯಾವ ರೀತಿ ನಾನು ಹೀಗೆಯೇ ನಿರಂತರವಾಗಿ ವೇದಾಂತ ಚಿಂತನೆಯಲ್ಲಿಯೇ ಉಳಿದ ಕಾಲವನ್ನು ಕಳೆದೇನೋ ಆ ರೀತಿ (ನನ್ನನ್ನು) ಅನುಗ್ರಹಿಸಲಿ.
ವಿಶ್ವಾವಸು ಸಂವತ್ಸರ
ಮಾರ್ಗಶೀರ್ಷ ಕೃಷ್ಣ ತ್ರಯೋದಶೀ ಶ್ರೀಶ್ರೀಸಚ್ಚಿದಾನಂದೇಂದ್ರಸರಸ್ವತೀಸ್ವಾಮಿಗಳು
ಅನುವಾದಕರ ನುಡಿ
ಪರಮಪೂಜ್ಯ ಶ್ರೀಶ್ರೀಸಚ್ಚಿದಾನಂದೇದ್ರಸರಸ್ವತೀ ಸ್ವಾಮಿಗಳು ರಚಿಸಿರುವ ಗ್ರಂಥಗಳೆಂದರೆ ಅವು ಲೋಕೋತ್ತರವಾದವು. ಪ್ರತಿಯೊಂದು ಗ್ರಂಥದಲ್ಲೂ ಅಸಾಧಾರಣವಾದ ವಿಷಯಗಳು ಇದ್ದೇ ಇರುವವು. ಭಗವದ್ಗೀತೆಯನ್ನು ಕುರಿತೇ ಶ್ರೀಶ್ರೀಗಳವರು ಅನೇಕ ಗ್ರಂಥಗಳನ್ನು ರಚಿಸಿರುತ್ತಾರೆ. ಸಂಸ್ಕೃತದಲ್ಲಿ ಗೀತಾಶಾಸ್ತ್ರಾರ್ಥವಿವೇಕಃ ಮತ್ತು ಗೀತಾಶಾಸ್ತ್ರೋಪದೇಶಸೋಪಾನಪಂಕ್ತಿಃ ಎಂಬ ಎರಡು ಉದ್ಗ್ರಂಥಗಳನ್ನು ಬರೆದಿದ್ದಾರೆ. ಈ ಎರಡೂ ಗ್ರಂಥಗಳೂ ಗೀತೆಯಲ್ಲಿ ಅಡಗಿರುವ ಅತ್ಯಮೂಲ್ಯವಾದ ಸಾಧನ-ಸಿದ್ಧಾಂತಗಳ ಸೋಪಾನವನ್ನು ಬಹಳ ಹೃದಯಂಗಮವಾಗಿ ಪ್ರತಿಪಾದಿಸುತ್ತವೆ. ಇದೂ ಅಲ್ಲದೆ ಕೇವಲ ಗೀತೆಯನ್ನೂ, ಭಾಷ್ಯವನ್ನೂ ಓದಿದರೂ ನಮಗೆ ತಿಳಿದುಬರದ ಎಷ್ಟೋ ರಹಸ್ಯ ವಿಚಾರಗಳನ್ನು ಶ್ರೀಶ್ರೀಗಳವರು ಅದರಿಂದ ತೆಗೆದಿರುತ್ತಾರೆ. ಮನ್ಮನಾ ಭವ ಮದ್ಭಕ್ತಃ ಮದ್ಯಾಜೀ ಮಾಂ ನಮಸ್ಕುರು ಎಂಬ ಗೀತಾವಾಕ್ಯಕ್ಕೆ ನಮಗೆಲ್ಲಾ ಸಹಜವಾಗಿ ಅರ್ಥವಾಗುವುದೇನೆಂದರೆ, ನನ್ನಲ್ಲಿ ಮನಸ್ಸುಳ್ಳವನಾಗು, ನನ್ನ ಭಕ್ತನಾಗು, ನನಗಾಗಿ ಯಜ್ಞವನ್ನು ಮಾಡು, ನನ್ನನ್ನು ನಮಸ್ಕರಿಸು ಎಂದು ಅರ್ಥವನ್ನು ಮಾಡುತ್ತೇವೆ. ಆದರೆ ಶ್ರೀಶ್ರೀಗಳವರು ಅಕ್ಷರಾರ್ಥವನ್ನು ಹೀಗೆಯೇ ಹೇಳಿ, ಅನಂತರ ಇದರ ಒಳ ಅರ್ಥವು— ಮನ್ಮನಾ ಎಂಬುದು ಧ್ಯಾನಯೋಗವನ್ನೂ, ಮದ್ಭಕ್ತ ಎಂಬುದು ಭಕ್ತಿಯೋಗವನ್ನೂ, ಮದ್ಯಾಜೀ ಎಂಬುದು ಕರ್ಮಯೋಗವನ್ನೂ ಹೇಳುತ್ತದೆ ಎಂಬುದನ್ನು ಸವಿಸ್ತಾರವಾಗಿ ತಿಳಿಸಿರುತ್ತಾರೆ. ಹಾಗೆಯೇ ಧ್ಯಾನೇನಾತ್ಮನಿ ಪಶ್ಯನ್ತಿ ಕೇಚಿತ್ ಆತ್ಮಾನಮಾತ್ಮನಾ | ಅನ್ಯೇ ಸಾಂಖ್ಯೇನ ಯೋಗೇನ ಕರ್ಮಯೋಗೇನ ಚಾಪರೇ II ಎಂಬುದಕ್ಕೆ ಸಹಜವಾಗಿ ಎಲ್ಲರಿಗೂ ಅರ್ಥವಾಗುವುದೇನೆಂದರೆ ಕೆಲವರು ಧ್ಯಾನದಿಂದಲೂ, ಕೆಲವರು ಸಾಂಖ್ಯದಿಂದಲೂ, ಮತ್ತೆ ಕೆಲವರು ಕರ್ಮಯೋಗದಿಂದಲೂ ಆತ್ಮನನ್ನು ಕಂಡುಕೊಳ್ಳುವುದಕ್ಕೆ ಇಷ್ಟಪಡುತ್ತಾರೆ ಎಂದು ತಿಳಿಯುತ್ತಾರೆ. ಆದರೆ ಶ್ರೀ ಶ್ರೀಗಳವರು ಕರ್ಮಯೋಗದಿಂದಲಾಗಲೀ, ಧ್ಯಾನಯೋಗದಿಂದಾಗಲೀ ನೇರಾಗಿ ಆತ್ಮನನ್ನು ತಿಳಿಯುವುದಕ್ಕಾಗುವುದಿಲ್ಲ. ಅವು ವಿಕಲ್ಪಪಕ್ಷವಲ್ಲ. ಸಾಂಖ್ಯಯೋಗ ಒಂದರಿಂದಲೇ ಆತ್ಮನನ್ನು ತಿಳಿಯುವುದಕ್ಕಾಗುತ್ತದೆ. ಉಳಿದದ್ದೆಲ್ಲಾ ಸಾಂಖ್ಯಯೋಗಕ್ಕೆ ಸಾಧನ ಎಂದು ಅರ್ಥವಿವರಣೆಯನ್ನು ಕೊಟ್ಟಿರುತ್ತಾರೆ.
ಇನ್ನು, ಇತಿ ಶ್ರೀಮದ್ಭಗವದ್ಗೀತಾಸು ಉಪನಿಷತ್ಸು ಎಂಬ ಪುಷ್ಪಿಕಾವಾಕ್ಯದ ಬಗ್ಗೆ ಇದು ಆರ್ಷವಲ್ಲವೆಂತಲೂ, ಅರ್ವಾಚೀನವೆಂತಲೂ ಚರ್ಚೆಮಾಡಿ ತಿಳಿಸಿ ಕೊಟ್ಟಿದ್ದಾರೆ. ಶ್ರೀಶಂಕರಾಚಾರ್ಯರಿಗಿಂತ ಹಿಂದಿದ್ದ ವೃತ್ತಿಕಾರರ ಮತದ ವಿಮರ್ಶೆ, ಸಾಂಖ್ಯ, ಯೋಗ, ಕರ್ಮ, ಸಂನ್ಯಾಸ, ಜ್ಞಾನ, ಭಕ್ತಿಪದಗಳ ಅರ್ಥವನ್ನೂ ಅವುಗಳ ಸಂಬಂಧವನ್ನೂ ಇದುವರೆಗೆ ಯಾರೂ ಮಾಡದ ವಿಚಾರವನ್ನು ಸುದೀರ್ಘವಾಗಿ ಚರ್ಚೆಮಾಡಿ ಅವುಗಳ ಅರ್ಥವನ್ನೂ ಇದಮಿತ್ಥಂ ಎಂದು ತೀರ್ಮಾನಮಾಡಿ ತೋರಿಸಿಕೊಟ್ಟಿರುತ್ತಾರೆ. ಅವೈದಿಕಸಾಂಖ್ಯಯೋಗಕ್ಕಿಂತ ವೈದಿಕಸಾಂಖ್ಯಯೋಗದ ಹೆಚ್ಚುಗಾರಿಕೆಯನ್ನು ಬಲು ಹೃದಯಂಗಮವಾಗಿ ಪ್ರತಿಪಾದಿಸಿದ್ದಾರೆ.
ಕೊನೆಯಲ್ಲಿ ಸಾಂಖ್ಯದರ್ಶನೋಪಸಂಗ್ರಹ ಮತ್ತು ಯೋಗದರ್ಶನೋಪಸಂಗ್ರಹವೆಂದು ಎರಡು ಅಧ್ಯಾಯವನ್ನು ಮಾಡಿಕೊಂಡು ಅವರ ದರ್ಶನದ ಸ್ವರೂಪವನ್ನೂ ಮತ್ತು ಗೀತೆಯಲ್ಲಿ ಹೇಳಿರುವ ಸಾಂಖ್ಯಯೋಗದ ತತ್ತ್ವವನ್ನೂ ವಿಸ್ತಾರವಾಗಿ ಬಿಡಿಸಿ ಬಿಡಿಸಿ ತಿಳಿಸಿಕೊಟ್ಟಿರುತ್ತಾರೆ. ಒಟ್ಟು ಈ ಗ್ರಂಥದಲ್ಲಿ ಇಪ್ಪತ್ತೆರಡು ಅಧ್ಯಾಯಗಳಿದ್ದು, ಗೀತಾಧ್ಯಯನಮಾಡುವವರಿಗೆ ಅನುಕೂಲವಾಗುವಂತೆ ವಿಷಯ ವಿಭಾಗವನ್ನು ಮಾಡಿಕೊಂಡು ಬಹಳ ಸುಂದರವಾಗಿ ವಿಷಯ ಪ್ರತಿಪಾದನೆಯನ್ನು ಮಾಡಿ ತುಂಬಾ ದೊಡ್ಡ ಲೋಕೋಪಕಾರವನ್ನು ಮಾಡಿರುತ್ತಾರೆ.
ಈ ಗ್ರಂಥವನ್ನು ಅನುವಾದಮಾಡುವ ಭಾಗ್ಯ ನನ್ನ ಪಾಲಿಗೆ ಬಂದಿತಾದರೂ ಇದನ್ನು ವಿದ್ವಾಂಸರು ಸಂಪೂರ್ಣವಾಗಿ ಪರಿಶೀಲಿಸಿ, ಈ ನನ್ನ ಅನುವಾದದಲ್ಲಿರುವ ನ್ಯೂನಾತಿರೇಕವನ್ನು ತಿಳಿಸಿಕೊಡಬೇಕೆಂದು ಕಳಕಳಿಯಿಂದ ಪ್ರಾರ್ಥನೆ ಮಾಡಿಕೊಳ್ಳುತ್ತೇನೆ. ಯಾವುದೇ ಗ್ರಂಥವನ್ನು ಅನುವಾದ ಮಾಡುವುದೆಂದರೆ ಅದು ತುಂಬಾ ಜವಾಬ್ದಾರಿಯ ಕೆಲಸವು, ಕೆಲವೊಮ್ಮೆ ನನಗೆ ಅರ್ಥವೂ, ಭಾವವೂ ಸರಿಯಾಗಿ ಬರಲಿಲ್ಲವೋ ಎಂದೆನಿಸುತ್ತದೆ. ಶ್ರೀಶ್ರೀಗಳವರ ಗ್ರಂಥವಂತು ಅನುಭವಪೂರ್ಣವಾಗಿಯೂ ವಿದ್ವತ್ಪೂರ್ಣವಾಗಿಯೂ ಇರುತ್ತದೆ. ಇದಕ್ಕೆ ನಾನು ಎಲ್ಲಿ ಅಪಚಾರ ಮಾಡಿದ್ದೇನೋ ಎಂಬ ಭಯವೂ ಕಾಡುತ್ತದೆ. ಆದ್ದರಿಂದ ತಿಳಿದವರು ಮತ್ತೊಮ್ಮೆ ಪರಿಶೀಲಿಸಿ ತಿಳಿಸಬೇಕೆಂದು ವಿನಂತಿಸಿಕೊಳ್ಳುತ್ತೇನೆ.
ಈ ಗ್ರಂಥದ ಅನುವಾದದ ಅಕ್ಷರಜೋಡಣೆಯನ್ನು ಶ್ರೀಮಾನ್ ವೈದ್ಯ ಅವರು ಬಹಳ ಶ್ರದ್ಧೆಯಿಂದಲೂ ಆದರದಿಂದಲೂ ಸಿದ್ಧಪಡಿಸಿಕೊಟ್ಟಿದ್ದಾರೆ. ಅವರಿಗೆ ಶ್ರೀಮನ್ನಾರಾಯಣನು ಸಮಸ್ತಸನ್ಮಂಗಲವನ್ನುಂಟುಮಾಡಲೆಂದು ನಾನು ಹೃತ್ಪೂರ್ವಕವಾಗಿ ಆಶೀರ್ವದಿಸುತ್ತೇನೆ. ಅಂತೆಯೇ ಶ್ರೀಮಾನ್ ನಾಗರಾಜರವರು ಮತ್ತು ನನ್ನ ಶಿಷ್ಯ ಸುರೇಶ ಇವನೂ ಅನೇಕ ದಿನಗಳು ಬಂದು, ನಾನು ಮೂಲಗ್ರಂಥದ ಅನುವಾದವನ್ನು ಹೇಳುವಾಗ, ಅದನ್ನು ಕನ್ನಡದಲ್ಲಿ ಬರೆದುಕೊಟ್ಟಿದ್ದಾರೆ. ಅವರಿಗೂ ಸಹ ನಾನು ಅನಂತಾನಂತ ನಾರಾಯಣಸ್ಮರಣಪೂರ್ವಕ ಸಮಸ್ತ ಸನ್ಮಂಗಲವುಂಟಾಗಲೆಂದು ಹಾರೈಸುತ್ತೇನೆ.
ಶಾರ್ವರಿ ಸಂವತ್ಸರ ಶ್ರೀಶ್ರೀಅದ್ವಯಾನಂದೇಂದ್ರಸರಸ್ವತೀಸ್ವಾಮಿಗಳು
ಮಾರ್ಗಶೀರ್ಷ ಸಚ್ಚಿದಾನಂದ ಅದ್ವೈತಾಶ್ರಮ
ಶುದ್ಧ ಏಕಾದಶಿ ಬೆಂಗಳೂರು
ಶಾಸ್ತ್ರಾರ್ಥಃ ಸಂಕ್ಷೇಪತಃ
★ ಗೀತಾಶಾಸ್ತ್ರಮ್—
1. ಓಂ ನಮೋ ಭಗವತೇ ವಾಸುದೇವಾಯ | ಅಥ ಮುಮುಕ್ಷೂಣಾಮರ್ಥಾಯ ಗೀತಾಶಾಸ್ತ್ರಾರ್ಥವಿವೇಕಾಖ್ಯಂ ಪ್ರಕರಣಮಿದಂ ಶ್ರೀಶಂಕರಭಗವತ್ಪಾದೀಯಭಾಷ್ಯಾನುಸಾರಿ ಪ್ರಾರಭ್ಯತೇ | ತತ್ರ 'ಗೀತಾಃ' ಇತಿ ಭಗವತಾ ನಾರಾಯಣೇನ ಶ್ರೀಕೃಷ್ಣರೂಪೇಣಾವತೀರ್ಣೇನ ನರೋತ್ತಮಮ್ ಅರ್ಜುನಮ್ ಉದ್ದಿಶ್ಯೋಪದಿಷ್ಟಸ್ಯ ವೇದಾರ್ಥಸ್ಯ ಸಂಗ್ರಾಹಕಾಣಾಂ ಭಗವತಾ ವೇದವ್ಯಾಸೇನೋಪನಿಬದ್ಧಾನಾಂ ಶ್ಲೋಕಾನಾಂ ನಾಮಧೇಯಮ್ |
1. ಸಂಕ್ಷೇಪವಾಗಿ ಶಾಸ್ತ್ರಾರ್ಥ
★ ಗೀತಾಶಾಸ್ತ್ರ—
ಓಂ ಭಗವಂತನಾದ ವಾಸುದೇವನಿಗೆ ನಮಸ್ಕಾರವು. ಈಗ ಮುಮುಕ್ಷುಗಳ ಪ್ರಯೋಜನಕ್ಕಾಗಿ ಶ್ರೀಶಂಕರಭಗವತ್ಪಾದರ ಭಾಷ್ಯಕ್ಕೆ ಅನುಸಾರವಾಗಿ ಗೀತಾಶಾಸ್ತ್ರಾರ್ಥ ವಿವೇಕವೆಂಬ ಹೆಸರಿನ ಈ ಪ್ರಕರಣವನ್ನು ಆರಂಭಿಸಲಾಗುತ್ತದೆ. ಶ್ರೀಕೃಷ್ಣನಾಗಿ ಅವತಾರವನ್ನು ಮಾಡಿದ ಭಗವಂತನಾದ ನಾರಾಯಣನು ನರೋತ್ತಮನಾದ ಅರ್ಜುನನನ್ನುದ್ದೇಶಿಸಿ ಉಪದೇಶಮಾಡಿದ್ದಾದ ವೇದಾರ್ಥ(ವನ್ನೆಲ್ಲಾ) ಸಂಗ್ರಹಿಸಿದವರಾದ ಭಗವಂತರಾದ ವೇದವ್ಯಾಸರು ರಚನೆಮಾಡಿದ್ದಾದ ಶ್ಲೋಕಗಳಿಗೆ ಗೀತೆಗಳು ಎಂದು ಹೆಸರು.
ತಥಾಹ ಭಾಷ್ಯಕೃತ್-
(1) ''ತಂ ಧರ್ಮಂ ಭಗವತಾ ಯಥೋಪದಿಷ್ಟಂ ವೇದವ್ಯಾಸಃ ಸರ್ವಜ್ಞೋ ಭಗವಾನ್ ಗೀತಾಖ್ಯೆಃ ಸಪ್ತಭಿಃ ಶ್ಲೋಕಶತೈರುಪನಿಬಬನ್ಧ |'' ಭಾ. ಅವ. 2.
ಇತಿ। ತಥಾ ಚ ಗೀತಾಖ್ಯಶ್ಲೋಕಸಮುಚ್ಚಯರೂಪಮಿದಂ ಶಾಸ್ತ್ರಮಿತಿ 'ಗೀತಾಶಾಸ್ತ್ರಮ್' | ಗೀತಾಖ್ಯಂ ಶಾಸ್ತ್ರಮ್ ಇತ್ಯೇವ ವಾ; ಯದಪ್ಯಾಹ ಭಾಷ್ಯಕೃತ್ ಪಂಚದಶಾಧ್ಯಾಯಾನ್ತಿಮಶ್ಲೋಕವ್ಯಾಖ್ಯಾನಪ್ರಸಙ್ಗೇನ—
(2) 'ಯದ್ಯಪಿ ಗೀತಾಖ್ಯಂ ಸಮಸ್ತಂ 'ಶಾಸ್ತ್ರಮ್' ಉಚ್ಯತೇ, ತಥಾಪಿ ಅಯಮೇವಾಧ್ಯಾಯ ಇಹ 'ಶಾಸ್ತ್ರಮ್' ಇತ್ಯುಚ್ಯತೇ ಸ್ತುತ್ಯರ್ಥಮ್, ಪ್ರಕರಣಾತ್| ಸರ್ವೋ ಹಿ ಗೀತಾಶಾಸ್ತ್ರಾರ್ಥೋऽಸ್ಮಿನ್ ಅಧ್ಯಾಯೇ ಸಮಾಸೇನೋಕ್ತಃ |' ಭಾ. 15-20
ಇತಿ ||
(ಇದನ್ನು) ಭಾಷ್ಯಕಾರರೂ ಹೇಳಿರುತ್ತಾರೆ—
1) ಆ ಧರ್ಮವನ್ನು ಭಗವಂತನು ಉಪದೇಶಮಾಡಿದಂತೆಯೇ ಸರ್ವಜ್ಞರೂ ಭಗವದ್ರೂಪರೂ ಆದ ವೇದವ್ಯಾಸರು ಗೀತೆಗಳು ಎಂಬ ಹೆಸರಿನ ಏಳುನೂರು ಶ್ಲೋಕಗಳಿಂದ ಗ್ರಂಥರೂಪವಾಗಿ ಇಟ್ಟರು. (ಭಾ. ಅವ. 2)
ಎಂದು. ಹಾಗಾಗಿ ಗೀತೆ ಎಂಬ ಹೆಸರಿನ ಶ್ಲೋಕಗಳು ಸೇರಿರುವ ರೂಪವಾದ ಶಾಸ್ತ್ರವಾದ್ದರಿಂದ ಗೀತಾಶಾಸ್ತ್ರ ಎಂದು ಹೆಸರು. ಅಥವಾ ಗೀತೆ ಎಂಬ ಹೆಸರಿನ ಶಾಸ್ತ್ರವಾದ್ದರಿಂದಲೂ ಈ ಹೆಸರು ಬಂದಿದೆ ಎನ್ನಬಹುದು. ಹಾಗೆಯೇ ಭಾಷ್ಯಕಾರರು ಹದಿನೈದನೆಯ ಅಧ್ಯಾಯದ ಕೊನೆಯ ಶ್ಲೋಕವನ್ನು ವ್ಯಾಖ್ಯಾನಮಾಡುವಾಗ—
2) ಗೀತೆ ಎಂಬುದೆಲ್ಲವೂ ಸೇರಿ ಶಾಸ್ತ್ರವೆನಿಸಿರುವುದಾದರೂ ಇಲ್ಲಿ ಹೊಗಳುವುದಕ್ಕಾಗಿ ಈ ಅಧ್ಯಾಯವನ್ನೇ ಶಾಸ್ತ್ರವೆಂದು ಕರೆದಿರುತ್ತದೆ ಎಂಬುದು ಯುಕ್ತವು. ಇಲ್ಲಿ (ಅಧ್ಯಾಯಾರ್ಥವೇ) ಪ್ರಕೃತವಾಗಿರುತ್ತದೆ. ಗೀತಾಶಾಸ್ತ್ರವೆಲ್ಲವೂ ಈ ಅಧ್ಯಾಯದಲ್ಲಿ ಸಂಕ್ಷೇಪವಾಗಿ ಉಕ್ತವಾಗಿರುತ್ತದೆ. (15-20)
ಯದ್ಯಪಿ 'ಶಾಸ್ತ್ರಮ್' ಇತಿ ಪ್ರವೃತ್ತಿನಿವೃತ್ತ್ಯನ್ಯತರೋಪದೇಶಕೋ ವಾಕ್ಯಸಂದರ್ಭಃ – ಇತ್ಯಾಗ್ರಹಃ ಕೇಷಾಞ್ಚಿತ್ | ಯಥಾಹುಃ “ಪ್ರವೃತ್ತಿರ್ವಾ ನಿವೃತ್ತಿರ್ವಾ ನಿತ್ಯೇನ ಕೃತಕೇನ ವಾ | ಪುಂಸಾಂ ಯೇನೋಪದಿಶ್ಯೇತ ತಚ್ಛಾಸ್ತ್ರಮಭಿಧೀಯತೇ ||’’ (?) ಇತಿ | ತಥಾಪಿ ವಸ್ತುತತ್ತ್ವಬೋಧನಾದಪಿ ಪುರುಷಾಣಾಂ ಹಿತಪ್ರಾಪ್ತಿದರ್ಶನಾತ್ ಹಿತಶಾಸನಾದಪಿ ಶಾಸ್ತ್ರತ್ವಂ ಸೇತ್ಸ್ಯತ್ಯೇವ | ಇದಂ ಚ ಗೀತಾಶಾಸ್ತ್ರಂ ಪ್ರವೃತ್ತಿನಿವೃತ್ತಿಲಕ್ಷಣಂ ಧರ್ಮದ್ವಯಮ್, ಪರಮಾರ್ಥತತ್ತ್ವಂ ಚ - ಇತ್ಯುಭಯಮಪಿ ಶ್ರುತಿಬೋಧಿತಂ ಶಾಸ್ತೀತಿ ಶಾಸ್ತ್ರಶಬ್ದಾರ್ಹಮ್ ಇತ್ಯನವದ್ಯಮ್ | ಯದಾಹಾಚಾರ್ಯಃ—
(3) 'ಇಮಂ ದ್ವಿಪ್ರಕಾರಂ ಧರ್ಮಂ ನಿಃಶ್ರೇಯಸಪ್ರಯೋಜನಮ್, ಪರಮಾರ್ಥತತ್ತ್ವಂ ಚ ವಾಸುದೇವಾಖ್ಯಂ ಪರಂ ಬ್ರಹ್ಮ ಅಭಿಧೇಯಭೂತಂ ವಿಶೇಷತೋ ಅಭಿವ್ಯಞ್ಚಯದ್ ವಿಶಿಷ್ಟಪ್ರಯೋಜನಸಂಬನಾಭಿಧೇಯವತ್ ಗೀತಾಶಾಸ್ತ್ರಮ್ ||'' ಅವ. 6
ಇತಿ ||
ಹಾಗೆಯೇ ಶಾಸ್ತ್ರವೆಂದರೆ ಪ್ರವೃತ್ತಿಯನ್ನೋ ನಿವೃತ್ತಿಯನ್ನೂ ಯಾವುದನ್ನಾದರೂ ಹೇಳಬೇಕೆಂಬುದು ಕೆಲವರ ಆಗ್ರಹವಿರುವುದು ನಿಜ. (ಹಿಂದಿನವರು) ಹೇಳಿರುತ್ತಾರೆ— “ನಿತ್ಯವಾದ ವೇದದಿಂದಲಾಗಲೀ ಪೌರುಷೇಯವಾದ ಕೃತಿಯಿಂದಾಗಲಿ ಪುರುಷನಿಗೆ ಪ್ರವೃತ್ತಿಯನ್ನೋ ನಿವೃತ್ತಿಯನ್ನೂ ಯಾವುದರಿಂದ ಉಪದೇಶಿಸಲಾಗುತ್ತದೆಯೋ ಅದನ್ನು ಶಾಸ್ತ್ರವೆನ್ನುವರು” (?). ವಸ್ತುತತ್ತ್ವವನ್ನು ತಿಳಿಸುವುದರಿಂದಲೂ ಹಿತವಾಗುವುದು ಕಂಡುಬಂದಿರುವುದರಿಂದ ಹಿತವನ್ನು ಹೇಳಿರುವದರಿಂದಲೂ ಅದಕ್ಕೆ ಶಾಸ್ತ್ರತ್ವವು ಹೊಂದಿಯೇ ತೀರುತ್ತದೆ. ಈ ಗೀತಾಶಾಸ್ತ್ರವು ಪ್ರವೃತ್ತಿ-ನಿವೃತ್ತಿ ರೂಪವಾದ ಎರಡು ಧರ್ಮವನ್ನೂ ಮತ್ತು ಪರಮಾರ್ಥತತ್ವವನ್ನೂ ಶ್ರುತಿಯು ಹೇಳುವುದನ್ನೇ ಹೇಳುತ್ತದೆಯಾದ್ದರಿಂದ ಶಾಸ್ತ್ರಶಬ್ದಕ್ಕೆ ಅರ್ಹವಾಗಿದೆಯಾದ್ದರಿಂದ ದೋಷವಿಲ್ಲ. ಇದನ್ನು ಆಚಾರ್ಯರೇ ಹೇಳಿರುತ್ತಾರೆ—
3) ನಿಃಶ್ರೇಯಸವೆಂಬ ಪ್ರಯೋಜನವುಳ್ಳ ಈ ಎರಡು ಬಗೆಯ ಧರ್ಮವನ್ನೂ ಪರಬ್ರಹ್ಮವಾದ ವಾಸುದೇವನೆಂಬ ಹೆಸರಿನ ಪರಮಾರ್ಥವನ್ನೂ (ತನಗೆ) ವಿಷಯವೆಂದು ಗೀತಾಶಾಸ್ತ್ರವು ವಿಶೇಷವಾಗಿ ತಿಳಿಸಿಕೊಡುವುದರಿಂದ ಇದಕ್ಕೆ ಅಸಾಧಾರಣವಾದ ಪ್ರಯೋಜನವೂ ಸಂಬಂಧವೂ ವಿಷಯವೂ ಇದ್ದಂತಾಯಿತು. (ಭಾ.ಅವ. 6)
★ ಗೀತಾಶಾಸ್ತ್ರಮಿತ್ಯಭಿಧಾನಂ ನ ಭಾಷ್ಯಕಾರೋಪಜ್ಞಮ್—
2. ಅತ್ರತ್ಯಶ್ಲೋಕಾನಾಂ ಗೀತಾಖ್ಯತ್ವಮ್ ಆಚಾರ್ಯಾತ್ ಪೂರ್ವೇಷಾಮಪಿ ವೃತ್ತಿಕಾರಾಣಾಂ ಸಂಮತಮಾಸೀತ್, ತತ್ಪ್ರಸ್ಥಾನೇಽಪಿ 'ಗೀತಾಶಾಸ್ತ್ರಮ್' ಇತ್ಯಭಿಧಾನೇನ ಪ್ರಥಿತಮಾಸೀದಯಂ ಗ್ರನ್ಥಃ— ಇತಿ ಚ ಶಾಸ್ತ್ರಾವತರಣಿಕಾಭಾಷ್ಯಾದೇವಾವಗಮ್ಯತೇ | ತಥಾ ಹಿ ಭಾಷ್ಯೇ ತದ್-ಗ್ರನ್ಥಾನುವಾದಃ—
(1) “ಅತ್ರ ಕೇಚಿದಾಹುಃ— ಸರ್ವಕರ್ಮಸಂನ್ಯಾಸಪೂರ್ವಕಾತ್ ಆತಜ್ಞಾನನಿಷ್ಠಾಮಾತ್ರಾದೇವ ಕೇವಲಾತ್ ಕೈವಲ್ಯಂ ನ ಪ್ರಾಪ್ಯತ ಏವ; ಕಿಂ ತರ್ಹಿ, ಅಗ್ನಿಹೋತ್ರಾದಿಶ್ರೌತಸ್ಮಾರ್ತಕರ್ಮಸಹಿತಾತ್ ಜ್ಞಾನಾತ್ ಕೈವಲ್ಯಪ್ರಾಪ್ತಿರಿತಿ ಸರ್ವಾಸು ಗೀತಾಸು ನಿಶ್ಚಿತೋಽರ್ಥಃ— ಇತಿ ” ಭಾ. ಅವ. 6
(2) “ಯಥಾ ಚಾತ್ಮನಾ ಸಂಬನ್ಧಗ್ರನ್ಥೇ ಗೀತಾರ್ಥೋ ನಿರೂಪಿತಃ ತತ್-ಪ್ರತಿಕೂಲಂ ಚ ಇಹ ಪುನಃ ಪ್ರಶ್ನಪ್ರತಿವಚನಯೋರರ್ಥಂ ನಿರೂಪಯನ್ತಿ | ಕಥಮ್? ತತ್ರ ಸಂಬನ್ಧಗ್ರನ್ಥೇ ತಾವತ್ 'ಸರ್ವೇಷಾಮಾಶ್ರಮಿಣಾಂ ಜ್ಞಾನಕರ್ಮಣೋಃ ಸಮುಚ್ಚಯೋ ಗೀತಾಶಾಸ್ತ್ರೇ ನಿರೂಪಿತೋऽರ್ಥ: ಇತ್ಯುಕ್ತಮ್ ....” ಗೀ. 3, ಅವ - 143
ಇತಿ ಚ ||
★ ಗೀತಾಶಾಸ್ತ್ರ ಎಂಬ ಹೆಸರನ್ನು ಭಾಷ್ಯಕಾರರು ಹುಟ್ಟುಹಾಕಿದ್ದಲ್ಲ—
2.ಇಲ್ಲಿರುವ ಶ್ಲೋಕಗಳಿಗೆ ಗೀತೆ ಎಂಬ ಹೆಸರು ಆಚಾರ್ಯರಿಗಿಂತ ಹಿಂದಿನವರಾದ ವೃತ್ತಿಕಾರರಿಗೂ ಒಪ್ಪಿಗೆಯಾಗಿತ್ತು. ಅವರ ಪ್ರಸ್ಥಾನದಲ್ಲೂ ಗೀತಾಶಾಸ್ತ್ರ ಎಂಬ ಹೆಸರಿನಿಂದ ಈ ಗ್ರಂಥವು ಪ್ರಸಿದ್ಧವಾಗಿತ್ತು ಎಂಬುದು ಅವತರಣಿಕಾ ಭಾಷ್ಯಭಾಗದಿಂದ ಗೊತ್ತಾಗುತ್ತದೆ. ಹಾಗೆಯೇ ಅಲ್ಲವೆ ಅವರ ಗ್ರಂಥದ ಅನುವಾದವು ಭಾಷ್ಯದಲ್ಲಿದೆ!
1) ಈ ವಿಷಯದಲ್ಲಿ ಕೆಲವರು ಹೇಳುವುದೇನೆಂದರೆ ಎಲ್ಲಾ ಕರ್ಮಗಳನ್ನೂ ಮೊದಲು ಸಂನ್ಯಾಸಮಾಡಿ ಬರಿಯ ಆತ್ಮಜ್ಞಾನದಲ್ಲಿಯೇ ನಿಂತಮಾತ್ರದಿಂದ ಕೈವಲ್ಯವು ದೊರೆಯುವುದೇ ಇಲ್ಲ; ಮತ್ತೇನೆಂದರೆ ಅಗ್ನಿಹೋತ್ರವೇ ಮುಂತಾದ ಶ್ರೌತಸ್ಮಾರ್ತಕರ್ಮಗಳಿಂದೊಡಗೂಡಿದ ಜ್ಞಾನದಿಂದ ಕೈವಲ್ಯವು ದೊರಕುವದೆಂಬುದು ಗೀತೆಗಳಲ್ಲೆಲ್ಲಾ ನಿಶ್ಚಿತವಾದ ವಿಷಯವು. (ಭಾ.ಭಾ.ಅವ.6)
2) ಹೇಗೆ ತಾವು ಸಂಬಂಧಗ್ರಂಥದಲ್ಲಿ ಗೀತಾರ್ಥವೆಂದು ಗೊತ್ತುಪಡಿಸಿರುತ್ತಾರೋ ಅದಕ್ಕೆ ಪ್ರತಿಕೂಲವಾಗಿಯೇ ಇಲ್ಲಿ ಪ್ರಶೋತ್ತರಗಳಿಗೆ ಅರ್ಥವನ್ನು ಗೊತ್ತುಪಡಿಸಿದ್ದಾರೆ. ಅದು ಹೇಗೆಂದರೆ, ಮೊದಲನೆಯದಾಗಿ ಇವೆರಡು ಸ್ಥಳಗಳೊಳಗೆ ಸಂಬಂಧಗ್ರಂಥದಲ್ಲಿ ಎಲ್ಲಾ ಆಶ್ರಮಗಳವರು ಜ್ಞಾನಕರ್ಮಗಳನ್ನು ಸೇರಿಸಿಕೊಂಡೇ ಅನುಷ್ಠಾನಮಾಡಬೇಕೆಂಬುದು ಗೀತಾಶಾಸ್ತ್ರದಲ್ಲಿ ನಿಶ್ಚಿತವಾಗಿರುವ ವಿಷಯವು ಎಂದು ಹೇಳಿರುತ್ತದೆ. (ಭಾ.ಭಾ.143)
★ ಅಧ್ಯಾಯಪುಷ್ಪಿಕಾವಾಕ್ಯಂ ನ ಗ್ರನ್ಥಾನ್ತರ್ಭೂತಮ್—
3. ಏತೇನ ಪ್ರತ್ಯಧ್ಯಾಯಂ ಯತ್ ಸಮಾಪ್ತಿವಾಕ್ಯಮ್ ಇದಾನೀಂತನ ಮುದ್ರಿತಪುಸ್ತಕೇಷು ದರೀದೃಶ್ಯತೇ 'ಇತಿ ಶ್ರೀಮಹಾಭಾರತೇ ಶತಸಹಸ್ರ್ಯಾಂ ಸಂಹಿತಾಯಾಂ ವೈಯಾಸಿಕ್ಕಾಂ ಭೀಷ್ಮಪರ್ವಣಿ ಶ್ರೀಮದ್ಭಗವದ್ಗೀತಾಸೂಪನಿಷತ್ಸು ಬ್ರಹ್ಮವಿದ್ಯಾಯಾಂ ಯೋಗಶಾಸ್ತ್ರೇ, ಶ್ರೀಕೃಷ್ಣಾರ್ಜುನಸಂವಾದೇ ಸಾಂಖ್ಯಯೋಗೋ ನಾಮ ದ್ವಿತೀಯೋऽಧ್ಯಾಯಃ' ಇತ್ಯೇತಾದೃಶಮ್, ತದನಾರ್ಷಮ್ ಇತ್ಯವಗಚ್ಛಾಮಃ | ಭಗವತ್ಪಾದಾದಿಭಿರ್ಭಾಷ್ಯಕಾರೈರವ್ಯಾಖ್ಯಾತತ್ವಾತ್ | ಮೂಲೇ ಮಹಾಭಾರತೇ ಲಿಖಿತಕೋಶೇಷು ಏತಾದೃಶಪುಷ್ಪಿಕಾವಾಕ್ಯಸ್ಯಾದರ್ಶನಾತ್, ಅಧುನಾತನಪುಸ್ತಕೇಷು ವಿವಿಧಶಬ್ದಾನುಪೂರ್ವೀಯುಕ್ತಸ್ಯೈವ ವಾಕ್ಯಸ್ಯೋಪಲಬ್ಧೇಶ್ಚ | ಮಹಾಭಾರತೇ ತಾವತ್ ಅವಾನ್ತರಪರ್ವಚತುಷ್ಟಯಾತ್ಮಕಂ ಭೀಷ್ಮಪರ್ವ | ತತ್ರ ತ್ರಯೋದಶಮ್ ಅಧ್ಯಾಯಮಾರಭ್ಯ ಯಾವದ್‌ದ್ವಾಚತ್ವಾರಿಂಶಾಧ್ಯಾಯಸಮಾಪ್ತಿ 'ಭಗವದ್ಗೀತಾಪರ್ವ’ ಸಮಾಖ್ಯೋ ಪರ್ವವಿಭಾಗಃ; ಯತ್ರ ಚಾಧ್ಯಾಯಸಮಾಪ್ತಿವಾಕ್ಯಮಿತ್ಥಂರೂಪಮ್ ''ಇತಿ ಶ್ರೀಮಹಾಭಾರತೇ ಭೀಷ್ಮಪರ್ವಣಿ ಶ್ರೀಮದ್ಭಗವದ್ಗೀತಾಪರ್ವಣಿ ಭೀಷ್ಮಮೃತ್ಯುಶ್ರವಣೇ ತ್ರಯೋದಶೋSಧ್ಯಾಯಃ'' ಇತಿ ||
★ ಅಧ್ಯಾಯಗಳ ಪುಷ್ಪಿಕಾವಾಕ್ಯವು ಗ್ರಂಥದೊಳಗೆ ಸೇರಿದ್ದಲ್ಲ—
3. ಇಷ್ಟು ಹೇಳಿದ್ದರಿಂದ ಪ್ರತಿಯೊಂದು ಅಧ್ಯಾಯದಲ್ಲೂ ಸಮಾಪ್ತಿವಾಕ್ಯವು ಈಗಿನ ಮುದ್ರಿತ ಪುಸ್ತಕಗಳಲ್ಲಿ (ಏನು) ಕಂಡುಬರುತ್ತದೆ - 'ಈರೀತಿ ವ್ಯಾಸರು ಬರೆದದ್ದಾದ ನೂರುಸಾವಿರಶ್ಲೋಕಗಳ ಸಂಹಿತೆಯಿಂದ ಕೂಡಿರುವ ಮಹಾಭಾರತದಲ್ಲಿ ಭೀಷ್ಮಪರ್ವದಲ್ಲಿರುವ ಶ್ರೀಮದ್ಭಗವದ್ಗೀತಾ ಎಂಬ ಉಪನಿಷತ್ತುಗಳೂ ಬ್ರಹ್ಮವಿದ್ಯೆಯೂ ಯೋಗಶಾಸ್ತ್ರವೂ ಆಗಿರುವ ಶ್ರೀಕೃಷ್ಣಾರ್ಜುನಸಂವಾದದಲ್ಲಿ ಸಾಂಖ್ಯಯೋಗವೆಂಬ ಎರಡನೆಯ ಅಧ್ಯಾಯವು ಮುಗಿಯಿತು', ಎಂಬೀರೀತಿಯಾದದ್ದು, ಅದು ಆರ್ಷವಲ್ಲ (ಋಷಿಗಳು ಬರೆದದ್ದಲ್ಲ) ವೆಂಬುದಾಗಿ ನಾವು ತಿಳಿಯುತ್ತೇವೆ. ಏಕೆಂದರೆ, ಭಗವತ್ಪಾದರೇ ಮುಂತಾದ ಭಾಷ್ಯಕಾರರು ಅದಕ್ಕೆ ವ್ಯಾಖ್ಯಾನವನ್ನು ಮಾಡಿರುವುದಿಲ್ಲ. ಮೂಲ ಮಹಾಭಾರತದ ಲಿಖಿತಕೋಶಗಳಲ್ಲಿ ಈ ತರಹದ್ದಾದ ಪುಷ್ಪಿಕಾವಾಕ್ಯವು ಕಂಡುಬರುವುದಿಲ್ಲ. ಈಗಿನ ಪುಸ್ತಕಗಳಲ್ಲೂ ಬೇರೆಬೇರೆ ಶಬ್ದಗಳ ಆನುಪೂರ್ವಿಯಿಂದ (ಕ್ರಮದಿಂದ) ಕೂಡಿದ ವಾಕ್ಯವು ಕಂಡುಬರುತ್ತಲೂ ಇದೆ. ಮೊಟ್ಟಮೊದಲನೆಯದಾಗಿ ಮಹಾಭಾರತದಲ್ಲಿ ಭೀಷ್ಮಪರ್ವವು ನಾಲ್ಕು ಅವಾಂತರಪರ್ವಗಳಿಂದ ಕೂಡಿದೆ. ಅಲ್ಲಿ ಹದಿಮೂರನೆಯ ಅಧ್ಯಾಯದಿಂದ ಆರಂಭಗೊಂಡು ನಲವತ್ತೆರಡನೆಯ ಅಧ್ಯಾಯ ಮುಗಿಯುವವರೆಗೂ ಭಗವದ್ಗೀತಾಪರ್ವವೆಂಬ ಹೆಸರಿನ ಪರ್ವವಿಭಾಗವಿರುತ್ತದೆ. ಅವುಗಳಲ್ಲಿ ಅಧ್ಯಾಯಸಮಾಪ್ತಿವಾಕ್ಯವು ಈ ರೀತಿಯಾಗಿ— ‘ಇಂತು ಮಹಾಭಾರತದ ಭೀಷ್ಮಪರ್ವದಲ್ಲಿ ಶ್ರೀ ಮದ್ಭಗವದ್ಗೀತಾಪರ್ವದಲ್ಲಿ ಭೀಷ್ಮನ ಮೃತ್ಯುಶ್ರವಣವೆಂಬ ಹದಿಮೂರನೇ ಅಧ್ಯಾಯವು ' —ಎಂದು ಇದೆ.
ಇತಶ್ಚೈವಮ್ | ಯತ್ಕಾರಣಂ ಮುದ್ರಿತಕೋಶೇಷು ಅಧ್ಯಾಯಪ್ರತಿಪಾದ್ಯಯೋಗಸ್ಯ ನಾಮೋಲ್ಲೇಖೋ ನೈಕವಿಧೋ ದೃಶ್ಯತೇ | ತದ್ಯಥಾ ಚತುರ್ಥಾಧ್ಯಾಯಸ್ಥಿತೋ ಯೋಗಃ 'ಕರ್ಮಯೋಗಃ, ಜ್ಞಾನಯೋಗಃ, ಜ್ಞಾನವಿಭಾಗಯೋಗಃ, ಕರ್ಮಸಂನ್ಯಾಸಯೋಗಃ, ಕರ್ಮಬ್ರಹ್ಮಾರ್ಪಣಯೋಗಃ, ಜ್ಞಾನಕರ್ಮಸಂನ್ಯಾಸಯೋಗಃ' — ಇತ್ಯೇವಂ ವಿವಿಧನಾಮಭಾಗ್ ದೃಷ್ಟೋ ಭಿನ್ನಭಿನ್ನೇಷು ಕೋಶೇಷು | 'ಆತ್ಮಕಯೋಗೋ ನಾಮ' ಇತ್ಯುಲ್ಲಿಖಿತಾಭಿಧಾನಸ್ಯೈವ ಯೋಗಸ್ಯ ನಿಯಮೇನ ತತ್ತದಧ್ಯಾಯೇಷು ಪ್ರತಿಪಾದನಸ್ಯಾಭಾವಾಚ್ಚ | ತದ್ಯಥಾ—ದ್ವಿತೀಯಾಧ್ಯಾಯನ್ತೇ ಏವ ತಾವತ್ 'ಸಾಙ್ಖ್ಯಯೋಗೋ ನಾಮ' ಇತಿ ಪುಷ್ಪಿಕಾಯಾಂ ಸಾಙ್ಖ್ಯಯೋಗಮಾತ್ರಸ್ಯಾಭಿಧಾನೋಲ್ಲೇಖಃ, ಅಧ್ಯಾಯಶರೀರೇ ತು 'ಸಾಙ್ಖ್ಯಬುದ್ಧಿಃ’, 'ಯೋಗಬುದ್ಧಿಃ' - ಇತಿ ಚ ಬುದ್ಧಿದ್ವಯಮಪ್ಯಾಶ್ರಿತ್ಯ ವಿಷಯಪ್ರತಿಪಾದನಮ್ ಇತಿ ವಿಸಂವಾದಃ 1 ಏವಮಗ್ರೇಽಪಿ | ತಸ್ಮಾತ್, ಪುಷ್ಪಿಕಾವಾಕ್ಯಮೇತತ್ ಪ್ರಕ್ಷಿಪ್ತಮಿತಿ ನಿಶ್ಚೀಯತೇ ||
ಈ ಕಾರಣದಿಂದಲೂ ಇದು ಹೀಗೆಯೇ. ಹೇಗೆಂದರೆ, ಮುದ್ರಿತ ಗ್ರಂಥಗಳಲ್ಲಿ ಅಧ್ಯಾಯದಲ್ಲಿ ತಿಳಿಸಿಕೊಟ್ಟ ಯೋಗದ ಹೆಸರಿನ ಉಲ್ಲೇಖವು ಏಕಪ್ರಕಾರವಾಗಿ ಕಂಡುಬರುತ್ತಿಲ್ಲ. ಅದು ಹೇಗೆಂದರೆ ನಾಲ್ಕನೆಯ ಅಧ್ಯಾಯದಲ್ಲಿರುವ ಯೋಗವು ಬೇರೆಬೇರೆ ಗ್ರಂಥಗಳಲ್ಲಿ- 'ಕರ್ಮಯೋಗ, ಜ್ಞಾನಯೋಗ, ಜ್ಞಾನವಿಭಾಗಯೋಗ, ಕರ್ಮಸಂನ್ಯಾಸಯೋಗ, ಕರ್ಮಬ್ರಹ್ಮಾತ್ಮಯೋಗ, ಜ್ಞಾನಕರ್ಮಸಂನ್ಯಾಸಯೋಗ’ ಎಂದು ಈ ಪ್ರಕಾರವಾಗಿ ಬೇರೆಬೇರೆ ಪುಸ್ತಕಗಳಲ್ಲಿ ಬೇರೆಬೇರೆ ತರಹವಾಗಿ ಕಂಡುಬಂದಿದೆ. (ಇದಲ್ಲದೆ) 'ಇಂಥಾ ಯೋಗ'ವೆಂಬುದಾಗಿ ಉಲ್ಲೇಖಿಸಿದ್ದಾದ ಹೆಸರಿನ ಯೋಗವು ಏಕಮಾತ್ರವಾಗಿ ಆಯಾ ಅಧ್ಯಾಯಗಳಲ್ಲಿ ತಿಳಿಸಿಕೊಡಲ್ಪಟ್ಟಿರುವುದಿಲ್ಲ. ಅದು ಹೇಗೆಂದರೆ ಎರಡನೆಯ ಅಧ್ಯಾಯದ ಕೊನೆಯಲ್ಲಿಯೇ ಮೊಟ್ಟಮೊದಲನೆಯದಾಗಿ ಹೇಳಬೇಕೆಂದರೆ ‘ಸಾಂಖ್ಯಯೋಗ' ಎಂಬ ಹೆಸರಿನ ಪುಷ್ಪಿಕೆಯಲ್ಲಿ ಸಾಂಖ್ಯಯೋಗ ಮಾತ್ರದ ಉಲ್ಲೇಖವಿದೆ. ಆ ಅಧ್ಯಾಯದ ಒಳಗಾದರೋ 'ಸಾಂಖ್ಯ ಬುದ್ಧಿ' 'ಯೋಗಬುದ್ಧಿ' ಎಂಬುದಾಗಿ ಎರಡು ಬುದ್ಧಿಯನ್ನಾಶ್ರಯಿಸಿಕೊಂಡು ವಿಷಯವನ್ನು ಪ್ರತಿಪಾದನೆ ಮಾಡಿದೆ ಎಂಬುದು ಇದಕ್ಕೆ ವಿರುದ್ಧವು. ಇದೇ ರೀತಿ ಮುಂದೂ ತಿಳಿಯಬೇಕು. ಆದ್ದರಿಂದ ಈ ಪುಷ್ಪಿಕಾವಾಕ್ಯವು ಪ್ರಕ್ಷಿಪ್ತವಾದದ್ದು ಎಂದು ತೀರ್ಮಾನವಾಗುತ್ತದೆ.
★ ಅನುಬನ್ಧಚತುಷ್ಟಯವತ್ತ್ವಾದ್ ವ್ಯಾಖ್ಯೇಯತ್ವಂ ಶಾಸ್ತ್ರಸ್ಯ—
4. ಶಾಸ್ತ್ರೇಽಸ್ಮಿನ್ ಪ್ರವೃತ್ತಿಧರ್ಮಃ, ನಿವೃತ್ತಿಧರ್ಮಶ್ಚ— ಇತಿ ದ್ವಿವಿಧೋऽಪಿ ವೈದಿಕೋ ಧರ್ಮಃ ಪ್ರತಿಪಾದಿತ ಇತಿ ಭಾಷ್ಯಕಾರಮತಮ್ | ತಥಾ ಹಿ ಭಾಷ್ಯಮ್—
(1) ಸಪ್ರಯೋಜನಾಭಾವೇsಪಿ ಭೂತಾನುಜಿಫೃಕ್ಷಯಾ ವೈದಿಕಂ ಧರ್ಮದ್ವಯಮ್ ಅರ್ಜುನಾಯ ಶೋಕಮೋಹಮಹೋದಧೌ ನಿಮಗ್ನಾಯ ಉಪದಿದೇಶ | (ಭಾ. ಅವ. ಪಾ.1.)
ಇತಿ |
ಯದ್ಯಪಿ ಪ್ರವೃತ್ತಿನಿವೃತ್ತ್ಯನ್ಯತರನಾಮ್ನಾ ಧರ್ಮಯೋರನಯೋರ್ನೋಲ್ಲೇಖೋ ದೃಶ್ಯತೇ ಗೀತಾಸು, ತಥಾಪಿ ವರ್ಣಾನಾಶ್ರಮಾಂಶ್ಚೋದ್ದಿಶ್ಯ ವಿಹಿತಂ ಕರ್ಮ ಪ್ರವೃತ್ತಿಧರ್ಮಪರಾಭಿಧಾನೇನ ಪ್ರಸಿದ್ಧಂ ಕಥಂ ಕಾರ್ಯಂ ಮುಮುಕ್ಷುಭಿರಿತ್ಯೇತ್ ಸ್ಪಷ್ಟಮ್ ಅತ್ರ ಪ್ರತಿಪಾದ್ಯತೇ | ಏವಂ ನಿವೃತ್ತಿಧರ್ಮಾಪರಾಭಿಧಾನಶ್ಚ ಜ್ಞಾನನಿಷ್ಠಾಲಕ್ಷಣಃ ಪ್ರತಿಪಾದಿತೋಽತ್ರೇತಿ ಸುಪ್ರಸಿದ್ಧಮೇತತ್ | ತಥಾ ಪ್ರವೃತ್ತಿಲಕ್ಷಣಸ್ಯ ಧರ್ಮಸ್ಯ ದೇವಾದಿಪ್ರಾಪ್ತಿಹೇತುತ್ವಮನೂದ್ಯ ಮುಮುಕ್ಷುಭಿಃ ಅನುಷ್ಠಿಯಮಾನಃ ಸ ಕಥಂ ಜ್ಞಾನೋತ್ಪತ್ತಿಹೇತುತ್ವಂ ಪ್ರತಿಪದ್ಯತ ಇತ್ಯೇತದಪಿ ಪ್ರದರ್ಶಿತಮೇವಾತ್ರ ದೃಶ್ಯತೇ | ತದೇವ ಧರ್ಮದ್ವಯಸ್ವರೂಪಮ್, ಪ್ರವೃತ್ತಿಧರ್ಮಸ್ಯ ನಿವೃತ್ತಿಧರ್ಮಂ ಪ್ರತ್ಯುಪಾಯತ್ವಂ ಚ ಪ್ರತಿಪಾದ್ಯತೇಽಸ್ಮಿನ್ ಶಾಸ್ತ್ರೇ |
★ ಅನುಬಂಧಚತುಷ್ಟಯವುಳ್ಳದ್ದಾದ್ದರಿಂದ ಶಾಸ್ತ್ರವು ವ್ಯಾಖ್ಯಾನಮಾಡತಕ್ಕದ್ದು—
4. ಈ ಶಾಸ್ತ್ರದಲ್ಲಿ ಪ್ರವೃತ್ತಿಧರ್ಮ ಮತ್ತು ನಿವೃತ್ತಿಧರ್ಮ ಎಂಬುದಾಗಿ ಎರಡುಪ್ರಕಾರವಾದ ವೈದಿಕಧರ್ಮವು ತಿಳಿಸಿಕೊಡಲ್ಪಟ್ಟಿದೆ ಎಂಬುದು ಭಾಷ್ಯಕಾರರ ಮತವು. ಹಾಗೆಯೇ ಭಾಷ್ಯವಿದೆಯಲ್ಲವೆ—
1) ತನಗೆ ಯಾವ ಪ್ರಯೋಜನವೂ ಇಲ್ಲದಿದ್ದರೂ ಪ್ರಾಣಿಗಳಿಗೆ ಅನುಗ್ರಹ ಮಾಡಬೇಕೆಂಬ ಇಚ್ಛೆಯಿಂದ, ಶೋಕಮೋಹಗಳೆಂಬ ಮಹಾಸಮುದ್ರದಲ್ಲಿ ಮುಳುಗಿರುವ ಅರ್ಜುನನಿಗೆ ವೈದಿಕಧರ್ಮಗಳೆರಡನ್ನೂ ಉಪದೇಶಮಾಡಿದನು. (ಭಾ.ಭಾ. ಅವ.2)
ಪ್ರವೃತ್ತಿಯೆಂದಾಗಲಿ ನಿವೃತ್ತಿಯೆಂದಾಗಲಿ ಯಾವ ಒಂದು ಹೆಸರಿನಿಂದಲೂ ಈ ಧರ್ಮಗಳ ಉಲ್ಲೇಖವು ಗೀತೆಯಲ್ಲಿ ಕಂಡು ಬರುವುದಿಲ್ಲವಾದರೂ ವರ್ಣಗಳನ್ನೂ ಆಶ್ರಮಗಳನ್ನೂ ಉದ್ದೇಶಿಸಿ ವಿಹಿತವಾದ ಕರ್ಮವು ಪ್ರವೃತ್ತಿಧರ್ಮವೆಂಬ ಇನ್ನೊಂದು ಹೆಸರಿನಿಂದ ಪ್ರಸಿದ್ಧವಾಗಿದ್ದೂ, ಮುಮುಕ್ಷುಗಳಾದವರು ಹೇಗೆ ಅದನ್ನು ಮಾಡಬೇಕು ಎಂಬುದು ಇಲ್ಲಿ ಸ್ಪಷ್ಟವಾಗಿ ತಿಳಿಸಲ್ಪಟ್ಟಿದೆ. ಇದೇ ರೀತಿ ನಿವೃತ್ತಿಧರ್ಮ ಎಂಬ ಇನ್ನೊಂದು ಹೆಸರಿರುವ ಜ್ಞಾನನಿಷ್ಠಾರೂಪವಾದ ಧರ್ಮವು ಇಲ್ಲಿ ಪ್ರತಿಪಾದಿತವಾಗಿದೆ ಎಂಬುದು ಸುಪ್ರಸಿದ್ಧವು. ಹಾಗೆಯೇ ಪ್ರವೃತ್ತಿಲಕ್ಷಣವಾದ ಧರ್ಮವು ದೇವಾದಿಸ್ಥಾನಪ್ರಾಪ್ತಿಗೆ ಹೇತುವಾಗಿದೆ ಎಂಬುದಾಗಿ ಅನುವಾದಮಾಡಿಕೊಂಡು ಮುಮುಕ್ಷುಗಳು ಅನುಷ್ಠಾನಮಾಡಿದ ಆ ಧರ್ಮವು ಹೇಗೆ ಜ್ಞಾನೋತ್ಪತ್ತಿಗೆ ಕಾರಣವಾಗಿದೆ ಎಂಬುದನ್ನು ಕೂಡ ಇಲ್ಲಿ ತೋರಿಸಿಕೊಟ್ಟೇ ಇರುತ್ತದೆ. ಈ ರೀತಿಯಾಗಿ ಎರಡು ಧರ್ಮಸ್ವರೂಪವನ್ನೂ, ಪ್ರವೃತ್ತಿಧರ್ಮವೂ ನಿವೃತ್ತಿಧರ್ಮಕ್ಕೆ ಉಪಾಯವಾಗಿದೆ ಎಂಬುದನ್ನೂ ಈ ಶಾಸ್ತ್ರದಲ್ಲಿ ತಿಳಿಸಿಕೊಡಲಾಗಿದೆ.
ತದೇತತ್ ಸರ್ವಮ್—
(2) 'ಸ ಭಗವಾನ್ ಸೃಷ್ಟ್ವೇದಂ ಜಗತ್…’
ಇತ್ಯಾದಿನಾ
(3) 'ಜ್ಞಾನೋತ್ಪತ್ತಿಹೇತುತ್ವೇನ ಚ ನಿಃಶ್ರೇಯಸಹೇತುತ್ವಮಪಿ ಪ್ರತಿಪದ್ಯತೇ’
(ಅವ. ಪಾ. 2)
ಇತ್ಯೇತದನ್ತೇನ ಪ್ರದರ್ಶ್ಯ ಗೀತಾಶಾಸ್ತ್ರಸ್ಯಾನುಬನ್ಧಚತುಷ್ಟಯವತ್ತ್ವಂ ಪ್ರತಿಜಾನೀತೇ ಸ್ಮ
ಭಗವಾನಾಚಾರ್ಯಃ—
(4) ಇಮಂ ದ್ವಿಪ್ರಕಾರಕಂ ಧರ್ಮಂ ನಿಃಶ್ರೇಯಸಪ್ರಯೋಜನಮ್,
ಪರಮಾರ್ಥತತ್ತ್ವಂ ಚ ವಾಸುದೇವಾಖ್ಯಂ ಪರಂ ಬ್ರಹ್ಮ ಅಭಿಧೇಯಭೂತಮ್ ವಿಶೇಷತೋsಭಿವ್ಯಂಜಯದ್ ವಿಶಿಷ್ಟಪ್ರಯೋಜನಸಂಬನ್ಧಾಭಿಧೇಯವದ್ ಗೀತಾಶಾಸ್ತ್ರಮಿತಿ II (ಅವ.ಪಾ.2)
ಹಾಗಾಗಿಯೇ ಇವೆಲ್ಲವನ್ನೂ,
(2) ಆ ಭಗವಂತನು ಜಗತ್ತನ್ನು ಸೃಷ್ಟಿಮಾಡಿ…
ಎಂದು ಆರಂಭ ಮಾಡಿಕೊಂಡು,
(3) ಜ್ಞಾನೋತ್ಪತ್ತಿಗೆ ಕಾರಣವಾಗುವುದರ ಮೂಲಕ ಮೋಕ್ಷಕ್ಕೂ ಕಾರಣವಾಗುತ್ತದೆ. (ಭಾ.ಭಾ.ಅವ.1)
ಎಂಬವರೆಗಿನ ಶ್ಲೋಕಗಳಿಂದ ತೋರಿಸಿ, ಗೀತಾಶಾಸ್ತ್ರಕ್ಕೆ ಅನುಬಂಧಚತುಷ್ಟಯವಿದೆ ಎಂಬುದನ್ನು ಆಚಾರ್ಯರು ತಿಳಿಸಿರುತ್ತಾರೆ.
(4) ನಿಃಶ್ರೇಯಸವೆಂಬ ಪ್ರಯೋಜನವುಳ್ಳ ಈ ಎರಡುಬಗೆಯ ಧರ್ಮಗಳನ್ನೂ, ಪರಬ್ರಹ್ಮವಾದ ವಾಸುದೇವನೆಂಬ ಹೆಸರಿನ ಪರಮಾರ್ಥವನ್ನೂ, ತನಗೆ ವಿಷಯವೆಂದು ಗೀತಾಶಾಸ್ತ್ರವು ವಿಶೇಷವಾಗಿ ತಿಳಿಸಿಕೊಡುವುದರಿಂದ ಇದಕ್ಕೆ ಅಸಾಧಾರಣವಾದ ಪ್ರಯೋಜನವೂ, ಸಂಬಂಧವೂ, ವಿಷಯವೂ ಇದ್ದಂತಾಯಿತು. (ಭಾ.ಭಾ. ಅ.6)
ಟಿಪ್ಪಣಿ—
‘ಪ್ರವೃತ್ತಿಂ ಚ ನಿವೃತ್ತಿಂ ಚ' ಇತಿ ಷೋಡಶಾಧ್ಯಾಯಸ್ಥಶ್ಲೋಕೇ ವಿಹಿತಾನುಷ್ಠಾನನಿಷಿದ್ಧತ್ಯಾಗವಿಷಯೌ ಪ್ರವೃತ್ತಿನಿವೃತ್ತಿಶಬ್ದೌ | ಅಷ್ಟಾದಶಾಧ್ಯಾಯೇ ತು ಏತೌ ಕರ್ಮಮಾರ್ಗ-ಸಂನ್ಯಾಸಮಾರ್ಗವಾಚಕೌ ಯದ್ಯಪಿ, ತಥಾಪಿ ವೈದಿಕಂ ಧರ್ಮದ್ವಯಂ ಪ್ರವೃತ್ತಿನಿವೃತ್ತಿಧರ್ಮನಾಮ್ನಾ ನ ಪ್ರಾಧಾನ್ಯೇನ ಕ್ವಚಿದಪಿ ಗೀತಾಶಾಸ್ತ್ರೇ ಸಮುಲ್ಲಿಖಿತಮ್ ಇತಿ ನಿರಪವಾದಮೇತತ್ ||
‘ಪ್ರವೃತ್ತಿಂ ಚ ನಿವೃತ್ತಿಂ ಚ’ ಎಂಬುದಾಗಿರುವ ಹದಿನಾರನೇ ಅಧ್ಯಾಯದಲ್ಲಿರುವ ಶ್ಲೋಕದಲ್ಲಿ ವಿಹಿತ-ನಿಷಿದ್ಧಕರ್ಮವಿಷಯವಾಗಿ ಪ್ರವೃತ್ತಿ-ನಿವೃತ್ತಿಶಬ್ದವು ಬಂದಿದೆ. ಹದಿನೆಂಟನೇ ಅಧ್ಯಾಯದಲ್ಲಾದರೋ ಇದೇ ಪ್ರವೃತ್ತಿ-ನಿವೃತ್ತಿಗಳೂ, ಕರ್ಮಮಾರ್ಗ-ಸಂನ್ಯಾಸಮಾರ್ಗಗಳನ್ನು ಹೇಳುವದಾದರೂ, ವೈದಿಕವಾದ ಧರ್ಮದ್ವಯವು ಪ್ರವೃತ್ತಿ-ನಿವೃತ್ತಿಧರ್ಮ ಎಂಬ ಹೆಸರಿನಿಂದ ಪ್ರಧಾನವಾಗಿ ಎಲ್ಲೂ ಗೀತಾಶಾಸ್ತ್ರದಲ್ಲಿ ಉಲ್ಲಿಖಿತವಾಗಿಲ್ಲ ಎಂದಾದ್ದರಿಂದ ಇದು ಏನೂ ದೋಷವಿಲ್ಲದ್ದಾಗಿದೆ.
ಅತ್ರ ಚ ಸಂಬನ್ದಭಾಷ್ಯೇ,
(1) 'ತಸ್ಯಾಸ್ಯ ಗೀತಾಶಾಸ್ತ್ರಸ್ಯ ಸಂಕ್ಷೇಪತಃ ಪ್ರಯೋಜನಂ ಪರಂ ನಿಃಶ್ರೇಯಸಂ ಸಹೇತುಕಸ್ಯ ಸಂಸಾರಸ್ಯ ಅತ್ಯನ್ತೋಪರಮಲಕ್ಷಣಮ್ I'
ಇತಿ ಶಾಸ್ತ್ರಸ್ಯ ಪ್ರಯೋಜನಮ್;
(2) ತಚ್ಚ ಸರ್ವಕರ್ಮಸಂನ್ಯಾಸಪೂರ್ವಕಾತ್ ಆತ್ಮಜ್ಞಾನನಿಷ್ಠಾರೂಪಾತ್ ಧರ್ಮಾತ್ ಭವತಿ | — ಪಾ. 2
ಇತಿ ತತ್ಸಾಧನಂ ಚ ನಿರ್ದಿಷ್ಟಮ್ | ಯಥೋಕ್ತಪ್ರಯೋಜನವತ್ಸಾಧನಾಭಿವ್ಯಞ್ಜಕತ್ವೇನ ಯಥೋಕ್ತವಾಸುದೇವಾಖ್ಯಾಭಿಧೇಯಸಂಬದ್ಧಂ ಶಾಸ್ತ್ರಂ ಪಾರಮ್ಪರ್ಯೇಣ ವಿಶಿಷ್ಟಪ್ರಯೋಜನಸಮ್ಪನ್ಧಾಭಿಧೇಯವದ್ ಭವತೀತಿ ಯಥೋದಾಹೃತಸ್ಯ 'ಇಮಂ ದ್ವಿಪ್ರಕಾರಕಂ ಧರ್ಮಮ್' ಇತ್ಯಾದಿವಾಕ್ಯಸ್ಯಾಭಿಪ್ರಾಯಃ ||
ಇಲ್ಲಿ ಸಂಬಂಧಭಾಷ್ಯದಲ್ಲಿ ,
1. ಸ್ವಲ್ಪದರಲ್ಲಿಯೇ ಹೇಳಬೇಕಾದರೆ ಆ ಈ ಗೀತಾಶಾಸ್ತ್ರಕ್ಕೆ ಹೆಚ್ಚಿನ ನಿಃಶ್ರೇಯಸವೇ ಪ್ರಯೋಜನವು. ನಿಃಶ್ರೇಯಸವೆಂದರೆ ಕಾರಣಸಹಿತವಾಗಿ ಸಂಸಾರವು ಅತ್ಯಂತವಾಗಿ ಇಲ್ಲವಾಗಿ ಬಿಡುವುದು. (ಭಾ.ಭಾ.ಅವ. 4)
ಎಂಬುದಾಗಿ ಶಾಸ್ತ್ರದ ಪ್ರಯೋಜನವನ್ನು ಹೇಳಿ,
2. ಇದು ಸರ್ವಕರ್ಮಗಳನ್ನೂ ಸಂನ್ಯಾಸಮಾಡಿ ಆತ್ಮಜ್ಞಾನದಲ್ಲಿಯೇ ನಿಂತುಬಿಡುವುದೆಂಬ ಧರ್ಮದಿಂದ ಆಗುವುದು. (ಭಾ.ಭಾ.ಅವ. 4)
ಎಂಬುದಾಗಿ ಅದಕ್ಕೆ ಸಾಧನವನ್ನು ತಿಳಿಸಿರುತ್ತದೆ. ಮೇಲೆ ಹೇಳಿದ ಪ್ರಯೋಜನಕ್ಕೆ ಸಾಧನವಾಗಿರುವ ಜ್ಞಾನವನ್ನು ತೋರಿಸುವ ಮೂಲಕ ಶಾಸ್ತ್ರದಲ್ಲಿ ಹೇಳಿದ ವಾಸುದೇವ ಎಂಬ ಹೆಸರಿನ ವಿಷಯಕ್ಕೆ ಸಂಬಂಧಪಟ್ಟ ಗೀತಾಶಾಸ್ತ್ರವು ಪರಂಪರೆಯಿಂದ ಅಸಾಧಾರಣವಾದ ಪ್ರಯೋಜನ ಸಂಬಂಧ ವಿಷಯವುಳ್ಳದ್ದಾಗಿರುತ್ತದೆ ಎಂದು, ಮೇಲೆ ಹೇಳಿದ 'ಈ ಎರಡುಬಗೆಯ ಧರ್ಮಗಳನ್ನು' ಎಂಬುದಾಗಿರುವ ವಾಕ್ಯದ ಅಭಿಪ್ರಾಯವು.
ಅಧಿಕಾರೀ ಚ ಯಥೋಕ್ತಪ್ರಯೋಜನಾಕಾಂಕ್ಷೀ ಮುಮುಕ್ಷುರಿತ್ಯರ್ಥಾತ್ ಸಿದ್ಧಮ್ ಇತಿ ಕೃತ್ವಾ ನೋಲ್ಲಿಖ್ಯ ದರ್ಶಿತಃ ||
ಅಧಿಕಾರಿಯಾದರೋ ಮೇಲೆ ಹೇಳಿದ ಪ್ರಯೋಜನವನ್ನು ಬಯಸುವ ಮುಮುಕ್ಷುವು ಎಂಬುದು ಅರ್ಥಬಲದಿಂದ ಸಿದ್ಧವಾಗುತ್ತದೆ, ಎಂದಿಟ್ಟುಕೊಂಡು ಅದನ್ನು ಎತ್ತಿತೋರಿಸಿಲ್ಲ.
ತತ್ರಾಭಿಧೇಯಂ ವಾಸುದೇವಾಖ್ಯಂ1 ಪರಂ ಬ್ರಹ್ಮ | ತದರ್ಪಣಬುದ್ಧ್ಯಾ ಅನುಷ್ಠಿತಃ ಪ್ರವೃತ್ತಿಧರ್ಮಃ ಸತ್ತ್ವಶುದ್ಧ್ಯಾದಿದ್ವಾರೇಣ ಪರಮ್ಪರಯಾ ತಥೋಕ್ತಪ್ರಯೋಜನಂ ಪ್ರತಿ ಸಾಧನತ್ವಂ ಪ್ರತಿಪದ್ಯತೇ; ನಿವೃತ್ತಿಧರ್ಮಸ್ಯ ಜ್ಞಾನನಿಷ್ಠಾಲಕ್ಷಣಃ ಸಾಕ್ಷಾದೇವ ತತ್ಸಾಧನಮ್ |
ಅಲ್ಲಿ ವಿಷಯವಾದದ್ದು ವಾಸುದೇವ ಎಂಬ ಹೆಸರಿನ ಪರಬ್ರಹ್ಮವು. ಅವನಿಗೆ ಅರ್ಪಣೆಮಾಡುವುದು ಎಂಬ ಬುದ್ಧಿಯಿಂದ ಅನುಷ್ಠಾನ ಮಾಡಿದ್ದಾದ ಪ್ರವೃತ್ತಿಧರ್ಮವು ಅಂತಃಕರಣಶುದ್ಧಿಯಾಗುವುದೇ ಮುಂತಾದವುಗಳ ಮೂಲಕ ಪರಂಪರೆಯಿಂದ ಮೇಲೆ ಹೇಳಿದ ಪ್ರಯೋಜನಕ್ಕೆ ಸಾಧನವಾಗುತ್ತದೆ. ಜ್ಞಾನನಿಷ್ಠಾರೂಪವಾದ ನಿವೃತ್ತಿಧರ್ಮವಾದರೋ ನೇರಾಗಿ ಮೋಕ್ಷಕ್ಕೆ ಸಾಧನವು.
——————————
1. ಯದ್ಯಪಿ ನಾರಾಯಣಾಖ್ಯತ್ವೇನಾಪಿ ತತ್ರ ತತ್ರ ಭಾಷ್ಯೇ (9-22, 14-26, 15-17, 17-6, 18-61) ವ್ಯಪದಿಷ್ಟಮ್ ಏತದೇವ ಬ್ರಹ್ಮ, ತಥಾಪಿ ವಾಸುದೇವನಾಮ್ನೈವ ಗೀತಾಸು ಪ್ರಸಿದ್ಧಮ್ | ತತ್ರ ನಾರಾಯಣಶಬ್ದಃ ಕುತೋ ನ ಪ್ರಯುಕ್ತ ಇತ್ಯತ್ರ ಗ್ರನ್ಥಪುರಾತತ್ತ್ವವಿದ ಏವ ಪ್ರಮಾಣಮ್ ||
ನಾರಾಯಣ ಎಂಬ ಹೆಸರಿನದಾಗಿ ಅಲ್ಲಲ್ಲಿ (ಶಾಂಕರ)ಭಾಷ್ಯದಲ್ಲಿ (9-22, 14-26, 15-17, 17-6, 18-61) ಈ ಪರಬ್ರಹ್ಮವನ್ನೇ ತಿಳಿಸಿದ್ದರೂ ಗೀತೆಯಲ್ಲಿ ವಾಸುದೇವ ಎಂಬ ಹೆಸರಿನಿಂದಲೇ ಪ್ರಸಿದ್ಧವಾಗಿದೆ. ಆ ಗೀತಾ ಮೂಲದಲ್ಲಿ ನಾರಾಯಣ ಶಬ್ದಪ್ರಯೋಗ ಏತಕ್ಕೆ ಮಾಡಿಲ್ಲ ಎಂಬ ವಿಷಯದಲ್ಲಿ ಗ್ರಂಥದ ಪುರಾತತ್ತ್ವ ಬಲ್ಲವರೇ ಹೇಳಬೇಕು.
( ಬಹುಶಃ ಗೀತೋಪದೇಶ / ಗೀತಾರಚನೆಯ ಕಾಲಕ್ಕೆ ನಾರಾಯಣಪದದ ಪ್ರಾಚುರ್ಯ ಅಥವಾ ಬಳಕೆ ಕಡಿಮೆ ಹಾಗೂ ವಸುದೇವಸುತನಾಗಿ ವಾಸುದೇವ ಕೃಷ್ಣನ ಅವತಾರವಾದ್ದರಿಂದ ಅದೇ ಹೆಚ್ಚು ಬಳಕೆಯಲ್ಲಿದ್ದಿರಬೇಕು. ಅಥವಾ ಗೀತೋಪದೇಶಕರ್ತೃ ಕೃಷ್ಣ ಹಾಗೂ ಗೀತಾಲೇಖಕ ವ್ಯಾಸರಿಗೂ ವಾಸುದೇವಪದವೇ ಹೆಚ್ಚು ಸಕಾಲಿಕವೆಂದೂ, ಸಾಂದರ್ಭಿಕವೆಂದೂ, ಸರ್ವಜನಮಾನ್ಯವೆಂದೂ ತೋರಿರಬೇಕು. ಇನ್ನು ನಾರಾಯಣನೆಂಬುದು ವೈಕುಂಠವಾಸಿ ಮೋಕ್ಷಧಾಮೇಶ್ವರನಿಗೆ ಸಂಬಂಧಿಸಿರುವುದರಿಂದ ಜನಸಾಮಾನ್ಯರ ಪ್ರತ್ಯಕ್ಷಾನುಭವಕ್ಕೆ ಅಗಮ್ಯವಾಗಿದ್ದುದೂ, ವಾಸುದೇವನೆಂಬುದು ತತ್ಕಾಲೀನ ಜನರಿಗೆ ಮಥುರೆಯಲ್ಲಿದ್ದ ವಸುದೇವನ ಸುತನೇ ಎಂಬುದನ್ನು ಪ್ರತ್ಯಕ್ಷಾನುಭವದಿಂದ ತೋರಿಕೊಟ್ಟು ಕೃಷ್ಣಭಕ್ತಿಯನ್ನು ಜಾಗೃತಗೊಳಿಸಲು ಸಶಕ್ತವಾಗಿತ್ತೆಂದೂ ತಿಳಿಯಬಹುದು. ಇನ್ನು, ನಾರಾಯಣನೆಂಬುದು ಕೇವಲ ಮೂಲವಾಚಕವೂ, ವಾಸುದೇವನೆಂಬುದು ವಸುದೇವಸುತನೆಂಬ ಅವತಾರವಾಚಕವೂ, ಆ ಅವತಾರವೂ ಮೂಲಕ್ಕೆ ಸಮವೆಂದು ತೋರಿಕೊಡುವುದಕ್ಕೂ, ಮೂಲವೇ ವಾಸುದೇವರೂಪಿನಿಂದ ಬಂದಿರುವುದರ ದ್ಯೋತಕವೂ ಆಗಿರುವುದೆಂದೂ— “ಕೃಷ್ಣಸ್ತು ಭಗವಾನ್ ಸ್ವಯಮ್”, “ವಾಸುದೇವಃ ಸರ್ವಮಿತಿ”, “ವಾಸನಾದ್ವಾಸುದೇವಸ್ಯ ವಾಸಿತಂ ಭುವನತ್ರಯಮ್ | ಸರ್ವಭೂತನಿವಾಸೋऽಸಿ ವಾಸುದೇವ ನಮೋऽಸ್ತುತೇ ||” ಮುಂತಾದ ಪ್ರಮಾಣಗಳಿಂದಲೂ ತಿಳಿಯಬಹುದು. )
ತತ್ರ ಸಾಧನಮ್ ಅಭಿಧೇಯಭೂತವಾಸುದೇವಸಂಬದ್ಧಮ್ ಇತ್ಯತಃ ಸಾಧನಾಭಿವ್ಯಞ್ಜಕತ್ವೇನ ಗೀತಾಶಾಸ್ತ್ರಮಪಿ ಪರಮ್ಪರಯಾ ವಿಶಿಷ್ಟಪ್ರಯೋಜನಾದಿಮದ್ ಭವತಿ | ಏವಂ ಚ ಪರಮಪುರುಷಾರ್ಥಫಲಕೋ ಗೀತಾಶಾಸ್ತ್ರಾರ್ಥೋ ವಿಜ್ಞಾತಃ — ಇತಿ ತಸ್ಯ ವ್ಯಾಖ್ಯೇಯತ್ವಂ ಸಿದ್ಧಮಿತ್ಯಾಹುರಾಚಾರ್ಯಾಃ —
ಅಲ್ಲಿ (ಗೀತೆಯಲ್ಲಿ) ಸಾಧನವು ವಿಷಯವಾದ ವಾಸುದೇವನಿಗೆ ಸಂಬಂಧಪಟ್ಟದ್ದು ಎಂದಾದ್ದರಿಂದ (ಅಂತಹ) ಸಾಧನವನ್ನು ತೋರಿಸುವದರ ಮೂಲಕ ಗೀತಾಶಾಸ್ತ್ರವು ಕೂಡ ಪರಂಪರೆಯಿಂದ ಅಸಾಧಾರಣವಾದ ಪ್ರಯೋಜನವೇ ಮುಂತಾದ್ದುಳ್ಳದ್ದಾಗಿರುತ್ತದೆ. ಈ ರೀತಿಯಾಗಿ ಗೀತಾಶಾಸ್ತ್ರವು ಹೆಚ್ಚಿನ (ಮೋಕ್ಷ) ಪುರುಷಾರ್ಥಫಲವುಳ್ಳದ್ದು ಎಂದು ತಿಳಿದದ್ದಾದ್ದರಿಂದ ಅದು ವ್ಯಾಖ್ಯಾನಮಾಡತಕ್ಕದೆಂದು ಸಿದ್ಧವಾಯಿತೆಂದು ಆಚಾರ್ಯರು ಹೇಳುತ್ತಾರೆ.
(5) ಯತಸ್ತದರ್ಥೇ ವಿಜ್ಞಾತೇ ಸಮಸ್ತಪುರುಷಾರ್ಥಸಿದ್ಧಿಃ, ಅತಸ್ತದ್ವಿವರಣೇ ಯತ್ನಃ ಕ್ರಿಯತೇ ಮಯಾ || ಅವ.ಭಾ.2.
ಇತಿ | ಅತ್ರ ಪರಮಪುರುಷಾರ್ಥ ಏವ ಪ್ರವೃತ್ತಿಧರ್ಮಫಲಸ್ಯಾಪ್ಯನ್ತರ್ಭಾವ ಇತಿ ಕೃತ್ವಾ 'ಸಮಸ್ತ'ಪುರುಷಾರ್ಥಸಿದ್ಧಿರಿತಿ ವಚನಮ್ | ಏತಚ್ಚ ಸ್ಪಷ್ಟೀಕರಿಷ್ಯತೇ 'ಯಾವನಾರ್ಥ ಉದಪಾನೇ' (2-46) ಇತ್ಯಸ್ಯ ಭಾಷ್ಯೇ ಇತ್ಯಾಸ್ತಾಂ ತಾವತ್ ||
5) ಇದರ ಅರ್ಥವನ್ನು ಅರಿತುಕೊಂಡರೆ ಸಮಸ್ತ ಪುರುಷಾರ್ಥವು ಸಿದ್ಧಿಯಾಗುವುದರಿಂದ ಇದನ್ನು ವಿವರಿಸುವುದಕ್ಕೆ ನಾನು ಯತ್ನವನ್ನು ಮಾಡುವೆನು. (ಅವ. ಭಾ. 6)
ಎಂಬುದಾಗಿ. ಇಲ್ಲಿ ಪರಮಪುರುಷಾರ್ಥದಲ್ಲಿಯೇ ಪ್ರವೃತ್ತಿಧರ್ಮದ ಫಲವು ಅಂತರ್ಗತವಾಗಿದೆ ಎಂದುಮಾಡಿಕೊಂಡು ಸಮಸ್ತಪುರುಷಾರ್ಥಸಿದ್ಧಿ ಎಂದು ಹೇಳಿರುತ್ತದೆ. ಇದನ್ನು “ಯಾವಾನರ್ಥ ಉದಪಾನೇ' (2-46) ಎಂಬುದರ ಭಾಷ್ಯದಲ್ಲಿ ಸ್ಪಷ್ಟಪಡಿಸಲಾಗುತ್ತದೆ ಎಂದಾದ್ದರಿಂದ ಇಲ್ಲಿಗೆ ನಿಲ್ಲಿಸೋಣ.
|| ಇತಿ ಶ್ರೀಮತ್ಪರಮಹಂಸಪರಿವ್ರಾಜಕಾಚಾರ್ಯವರೇಣ್ಯ-ಶ್ರೀಪೂಜ್ಯಪಾದ-ಶ್ರೀಮಚ್ಛಙ್ಕರಭಗವಚ್ಚರಣಸ್ಮರಣಪರಿಚಯಾವಾಪ್ತವೇದಾನ್ತಪ್ರವೇಶೇನ ಶ್ರೀಬೋಧಾನನ್ದೇನ್ದ್ರಸರಸ್ವತೀಶಿಷ್ಯೇಣ ಸಚ್ಚಿದಾನನೇನ್ದ್ರಸರಸ್ವತ್ಯಾಖ್ಯೇನ ಭಿಕ್ಷುಣಾ ಪ್ರಣೀತೇ ಗೀತಾಶಾಸ್ತ್ರಾರ್ಥವಿವೇಕೇ ಶಾಸ್ತ್ರಾರ್ಥಸಂಕ್ಷೇಪೋ ನಾಮ ಪ್ರಥಮೋऽಧ್ಯಾಯಃ ||
ಈ ರೀತಿಯಾಗಿ ಶ್ರೀಮತ್ ಪರಮಹಂಸ ಪರಿವ್ರಾಜಕಾಚಾರ್ಯರಲ್ಲಿ ಶ್ರೇಷ್ಠರಾದ ಶ್ರೀಪೂಜ್ಯಪಾದ ಶ್ರೀಮತ್ ಶಂಕರಭಗವಾನರ ಚರಣಸ್ಮರಣೆಯ ಪರಿಚಯದ ದೆಸೆಯಿಂದ ವೇದಾಂತಪ್ರವೇಶವನ್ನು ಹೊಂದಿದ, ಶ್ರೀಬೋಧಾನಂದೇಂದ್ರಸರಸ್ವತೀಶಿಷ್ಯರಾದ ಸಚ್ಚಿದಾನಂದೇಂದ್ರಸರಸ್ವತೀ ಎಂಬ ಹೆಸರಿನ ಸಂನ್ಯಾಸಿಯಿಂದ ರಚನೆಮಾಡಿದ್ದಾದ ಗೀತಾಶಾಸ್ತ್ರಾರ್ಥವಿವೇಕದಲ್ಲಿ ಶಾಸ್ತ್ರಾರ್ಥಸಂಕ್ಷೇಪ ಎಂಬ ಹೆಸರಿನ ಮೊದಲನೆಯ ಅಧ್ಯಾಯವು ಮುಗಿಯಿತು.
2. ವೃತ್ತಿಕಾರಮತಸಮಾಲೋಚನಮ್
★ವೃತ್ತಿಕಾರಪರಾಮರ್ಶೇ ಆಶಯಃ—
5. ತತ್ರ ಪೂರ್ವಾಚಾರ್ಯಕೃತಭಾಷ್ಯಾತ್ ಸ್ವಕೃತೇರ್ವಿಶೇಷಂ ದರ್ಶಯಿತುಂ ವಚನಂ ಭಾಷ್ಯಕಾರಸ್ಯ—
(1) ತದಿದಂ ಗೀತಾಶಾಸ್ತ್ರಂ ಸಮಸ್ತವೇದಾರ್ಥಸಾರಸಂಗ್ರಹಭೂತಂ ದುರ್ವಿಜ್ಞೇಯಾರ್ಥಮ್ | ತದರ್ಥಾವಿಷ್ಕರಣಾಯ ಅನೇಕೈರ್ವಿವೃತ-ಪದ-ಪದಾರ್ಥ-(ವಾಕ್ಯ?-)ವಾಕ್ಯಾರ್ಥ-ನ್ಯಾಯಮಪಿ ಅತ್ಯನ್ತವಿರುದ್ಧಾನೇಕಾರ್ಥತ್ವೇನ ಲೌಕಿಕೈರ್ಗೃಹ್ಯಮಾಣಮುಪಲಭ್ಯ ಅಹಂ ವಿವೇಕತೋऽರ್ಥನಿರ್ಧಾರಣಾರ್ಥಂ ಸಂಕ್ಷೇಪತೋ ವಿವರಣಂ ಕರಿಷ್ಯಾಮಿ || ಅವ. ಭಾ.
ಇತಿ |
2. ವೃತ್ತಿಕಾರರ ಮತದ ಸಮಾಲೋಚನೆ
★ವೃತ್ತಿಕಾರರನ್ನು ಪರಾಮರ್ಶೆಮಾಡುವ ಉದ್ದೇಶವು—
5. ಅಲ್ಲಿ ಹಿಂದಿನ ಆಚಾರ್ಯರು ಮಾಡಿದ ಭಾಷ್ಯಕ್ಕಿಂತ ತಮ್ಮ ಭಾಷ್ಯದ ವಿಶೇಷವನ್ನು ತೋರಿಸುವುದಕ್ಕಾಗಿ ಭಾಷ್ಯಕಾರರ ಮಾತು ಈ ರೀತಿ ಇದೆ—
1. ಅಂಥ ಈ ಗೀತಾಶಾಸ್ತ್ರವು ಸಮಸ್ತವೇದಾರ್ಥಸಾರಸಂಗ್ರಹವಾಗಿರುತ್ತದೆ. ಇದರ ಅರ್ಥವನ್ನು ತಿಳಿಯುವುದು ಕಷ್ಟವಾಗಿರುತ್ತದೆ. ಇದರ ಅರ್ಥವನ್ನು ಹೊರಪಡಿಸುವುದಕ್ಕಾಗಿ ಅನೇಕರು ಪದ-ಪದಾರ್ಥ, ವಾಕ್ಯ-ವಾಕ್ಯಾರ್ಥ ಮತ್ತು ವಾಕ್ಯಾರ್ಥವನ್ನು ನಿಶ್ಚಯಿಸುವುದಕ್ಕೆ ಬೇಕಾದ ಯುಕ್ತಿ— ಇವುಗಳನ್ನು ವಿವರವಾಗಿ ತಿಳಿಸಿರುತ್ತಾರಾದರೂ ಲೋಕದ ಜನರು ಅತ್ಯಂತವಿರುದ್ಧವಾದ ಅನೇಕಾರ್ಥಗಳನ್ನು ಇದರ ಅರ್ಥವೆಂದು ತಿಳಿಯುತ್ತಿರುವುದನ್ನು ಕಂಡು ನಾನು ಇದರ ಅರ್ಥವನ್ನು ವಿಂಗಡಿಸಿ ಗೊತ್ತು ಮಾಡುವುದಕ್ಕಾಗಿ ಇದಕ್ಕೆ ಸಂಕ್ಷೇಪವಾಗಿ ವಿವರಣೆಯನ್ನು ಮಾಡುವೆನು. (ಅವ. ಭಾ.)
ಎಂಬುದಾಗಿ.
ಸಮಸ್ತವೇದಾರ್ಥಸಾರೋ ಭಗವಾನ್ ವಾಸುದೇವಃ | ತತ್ಪ್ರಾಪ್ತಿಸಾಧನಭೂತಂ ಧರ್ಮದ್ವಯಂ ಚ | ಸ ಚ ಸಾರಃ, ಇಹ ಸಂಗ್ರಹೀತ ಇತ್ಯತಃ ಸಾಭಿಪ್ರಾಯಂ ವಿಶೇಷಣಮ್ | ಏವಮ್ 'ಅನೇಕೈರ್ವಿವೃತಪದಪದಾರ್ಥ(ವಾಕ್ಯ)ವಾಕ್ಯಾರ್ಥನ್ಯಾಯಮಪಿ' - ಇತ್ಯಪಿ ವಿಶೇಷಣಂ ಯುಕ್ತಿವಾಕ್ಯೇ ವೃತ್ತಿಕಾರಸಮಾದೃತೇ ನ ಸರ್ವತ್ರ ನಿರ್ದೂಷಣೇ, ಕಿಂ ತರ್ಹಿ ಯುಕ್ತ್ಯಾಭಾಸವಾಕ್ಯಾಭಾಸಾವಪಿ ತೈಃ ಪ್ರತ್ಯುಪಸ್ಥಾಪಿತೌ ಇತಿ ಸೂಚನಾರ್ಥಮ್ | ಯಥಾ ಚೇದಂ ತಥಾ ಭಾಷ್ಯೇ ಏವ ತತ್ರ ತತ್ರ ವೃತ್ತಿಕಾರಮತಸಮಾಲೋಚನೇನ ಪ್ರದರ್ಶಿತಮಿತಿ ತತ ಏವಾಧಿಗನ್ತವ್ಯಮ್ | 'ಅತ್ಯನ್ತವಿರುದ್ಧಾನೇಕಾರ್ಥತ್ವೇನ ಲೌಕಿಕೈರ್ಗೃಹ್ಯಮಾಣಮುಪಲಭ್ಯ' ಇತ್ಯಪಿ ವಚನಮ್ ಏತಸ್ಯೈವ ವಿವರಣಾರ್ಥಮ್ | ಯತೋ ಧೀಮನ್ತೋಽಪಿ ಲೌಕಿಕಾ ಅತ್ಯನ್ತವಿರುದ್ದಾರ್ಥತ್ವೇನ ಶಾಸ್ತ್ರಾರ್ಥಂ ಗೃಹ್ಣನ್ತೋ ದರೀದೃಶ್ಯನ್ತೇ, ಅತೋ ವ್ಯಾಖ್ಯಾತೄಣಾಮೇವ ಬುದ್ಧ್ಯಪರಾಧಾತ್ ಸಂಜಾತಾ ತೇಷಾಮ್ ಇವ ಪ್ರತಿಪತ್ತಿರಿತಿ ನಿಶ್ಚೀಯತೇ - ಇತಿ ಭಾವಃ ||
ಸಮಸ್ತ ವೇದಾರ್ಥಸಾರವು ಭಗವಂತನಾದ ವಾಸುದೇವನು. ಮತ್ತು ಅವನ (ತಸ್ಯ ಪ್ರಾಪ್ತೇಃ— ತತ್ಪ್ರಾಪ್ತೇಃ, ಷಷ್ಠೀತತ್ಪುರುಷಸಮಾಸ) ಪ್ರಾಪ್ತಿಗೆ ಸಾಧನವಾಗಿರುವ ಎರಡು ಧರ್ಮಗಳು. ಅದೇ ಸಾರವು ಇಲ್ಲಿ ಸಂಗ್ರಹೀತವಾಗಿದೆ ಎಂದಾದ್ದರಿಂದ ಈ ವಿಶೇಷಣವು ಸಾರ್ಥಕವಾಗಿದೆ. ಇದೇ ರೀತಿ 'ಅನೇಕೈಃ ವಿವೃತಪದ-ಪದಾರ್ಥ-ವಾಕ್ಯ-ವಾಕ್ಯಾರ್ಥ-ನ್ಯಾಯಮಪಿ'— ಎಂಬ ವಿಶೇಷಣವು, ಯುಕ್ತಿವಾಕ್ಯದಲ್ಲಿ ವೃತ್ತಿಕಾರರು ಸ್ವೀಕರಿಸಿರುವುದು ಏನಿದೆ ಅದು ಎಲ್ಲಾ ಕಡೆಯಲ್ಲಿಯೂ ನಿರ್ದುಷ್ಟವಾಗಿದೆ ಎಂಬ ಅಭಿಪ್ರಾಯವೇನಿಲ್ಲ. ಮತ್ತೇನೆಂದರೆ, ಯುಕ್ತ್ಯಾಭಾಸ, ವಾಕ್ಯಾಭಾಸವನ್ನೂ ಅವರು ಮುಂದೊಡ್ಡಿರುತ್ತಾರೆ ಎಂಬುದನ್ನು ಸೂಚಿಸುವುದಕ್ಕಾಗಿ. ಇದು ಹೇಗೆ ಎಂಬುದನ್ನು ಭಾಷ್ಯದಲ್ಲಿಯೇ ಅಲ್ಲಲ್ಲಿ ವೃತ್ತಿಕಾರರ ಮತವನ್ನು ಸಮಾಲೋಚನೆ ಮಾಡುವುದರ ಮೂಲಕ ತೋರಿಸಿದೆಯಾದ್ದರಿಂದ ಅಲ್ಲಿಂದಲೇ ಅದನ್ನು ತಿಳಿಯಬೇಕು. 'ಅತ್ಯಂತವಿರುದ್ಧಾನೇಕಾರ್ಥತ್ವೇನ ಲೌಕಿಕೈಃ ಗೃಹ್ಯಮಾಣಮ್ ಉಪಲಭ್ಯ' ಎಂಬ ಮಾತೂ ಇದರ ವಿವರಣೆಗಾಗಿಯೇ ಬಂದಿದೆ. ಏಕೆಂದರೆ ಧೀಮಂತರಾದ ಲೌಕಿಕರೂ ಕೂಡ ಅತ್ಯಂತ ವಿರುದ್ಧವಾಗಿ ಶಾಸ್ತ್ರಾರ್ಥವನ್ನು ತಿಳಿಯುತ್ತಿರುವುದು ಕಂಡುಬರುತ್ತಿದೆ. ಆದ್ದರಿಂದ, ವ್ಯಾಖ್ಯಾನ ಮಾಡುವವರ ತಿಳಿವಳಿಕೆಯ ಅಪರಾಧದಿಂದ (ತಪ್ಪಾದ ತಿಳಿವಳಿಕೆಯಿಂದ) ಅವರಲ್ಲಿ ವಿರುದ್ಧವಾದ ತಿಳಿವಳಿಕೆ ಉಂಟಾಗಿರುತ್ತದೆ ಎಂದು ನಿಶ್ಚಯವಾಗುತ್ತದೆ ಎಂದು ಭಾವ.
ಯದ್ಯಪಿ ಭಾಷ್ಯಕಾರಮತಮೇವ ಸಂಗೃಹ್ಯ ಪ್ರದರ್ಶಯಿತುಂ ಪ್ರಕೃತೋ ಯತ್ನೋऽಸ್ಮಾಕಮ್, ತಥಾ ಚ ವೃತ್ತಿಕಾರಮತಸಮಾಲೋಚನಂ ನಾತ್ರ ಸಂಗತಮಿವ, ತಥಾಪಿ ಯಥೈವ ವೃತ್ತಿಕಾರಾದೃತಃ ಕರ್ಮಜ್ಞಾನಸಮುಚ್ಚಯವಾದೋ ನ ಗೀತಾಶಾಸ್ತ್ರಾರ್ಥಃ, ತಥೈವ ವೇದಾನ್ತಪ್ರಕ್ರಿಯಾಸಂಪ್ರದಾಯವಿರುದ್ಧೋSಪೀತ್ಯತಃ ಕರ್ಮಜ್ಞಾನಭಕ್ತ್ಯಾದಿಪದಾರ್ಥವಿವೇಚನಪೂರ್ವಕಂ ಪೂರ್ವಾಪರಾಧ್ಯಾಯೋಪದೇಶಸಂಗತ್ಯಾದಿನಿರೂಪಣೇನ ಸರ್ವಸ್ಯಾಪಿ ಶಾಸ್ತ್ರಸ್ಯೈಕವಾಕ್ಯತಾಸಂಪಾದನಂ ಭಾಷ್ಯಕಾರೀಯವಿವರಣರೀತ್ಯೈವ ಶಕ್ಯಮ್ — ಇತಿ ಪ್ರದರ್ಶಯಿತುಮಪ್ಯತ್ರ ಯತ್ನಃ ಕರಿಷ್ಯತ ಇತಿ ವಿಜ್ಞಾಪಯಿತುಮಯಂ ವೃತ್ತಿಕಾರಪರಾಮರ್ಶ ಇತಿ ಕ್ಷನ್ತವ್ಯಮಿದಂ ಧಾರ್ಷ್ಟ್ಯಂ ವಿಜ್ಞೈಃ ||
ನಮ್ಮ ಈ ಪ್ರಕೃತವಾದ ಪ್ರಯತ್ನವು ಭಾಷ್ಯಕಾರರ ಮತವನ್ನೇ ಸಂಗ್ರಹಿಸಿ ತೋರಿಸುವುದಕ್ಕೆ ಹೊರಟಿದ್ದರೂ, ಹಾಗೆಯೇ ವೃತ್ತಿಕಾರರ ಮತದ ಸಮಾಲೋಚನೆಮಾಡುವುದು ಇಲ್ಲಿ ಸರಿಯಲ್ಲವೆಂದಾದರೂ, ಹೇಗೆ ವೃತ್ತಿಕಾರರು ಸ್ವೀಕರಿಸಿದ ಕರ್ಮಜ್ಞಾನಸಮುಚ್ಚಯವಾದವು ಗೀತಾಶಾಸ್ತ್ರಾರ್ಥವಲ್ಲವೋ ಹಾಗೆಯೇ ಅದು ವೇದಾಂತಪ್ರಕ್ರಿಯಾಸಂಪ್ರದಾಯಕ್ಕೆ ವಿರುದ್ಧವೂ ಆಗಿದೆ. ಆದ್ದರಿಂದ ಕರ್ಮ, ಜ್ಞಾನ, ಭಕ್ತಿ — ಮುಂತಾದ ಪದಾರ್ಥವನ್ನು ವಿಂಗಡನೆ ಮಾಡುವ ಮೂಲಕ ಹಿಂದುಮುಂದಿನ ಅಧ್ಯಾಯೋಪದೇಶದ ಸಂಗತಿಯೇ ಮುಂತಾದವನ್ನು ಗೊತ್ತುಪಡಿಸುವುದರಿಂದ ಸಂಪೂರ್ಣ ಗೀತಾಶಾಸ್ತ್ರಕ್ಕೆ ಏಕವಾಕ್ಯತಾಸಂಪಾದನೆಯನ್ನು ಭಾಷ್ಯಕಾರರ ವಿವರಣೆಯ ರೀತಿಯಿಂದಲೇ ಮಾಡಲು ಸಾಧ್ಯವಿದೆ ಎಂಬುದನ್ನು ತೋರಿಸುವುದಕ್ಕೂ ಈ ಪ್ರಯತ್ನವನ್ನು ಮಾಡಲಾಗುತ್ತದೆ ಎಂದು ತಿಳಿಸುವುದಕ್ಕಾಗಿ ಈ ವೃತ್ತಿಕಾರರ ಪರಾಮರ್ಶೆಯು ಎಂದಾದ್ದರಿಂದ ತಿಳಿದವರು ಈ ನನ್ನ ದಿಟ್ಟತನವನ್ನು ಕ್ಷಮಿಸಬೇಕು.
★ವೃತ್ತಿಕಾರಸಂಸ್ತವಃ—
6. ಯಥೋದಾಹೃತಭಾಷ್ಯವಾಕ್ಯೇ 'ಅನೇಕೈರ್ವಿವೃತಪದಪದಾರ್ಥವಾಕ್ಯಾರ್ಥನ್ಯಾಯಮಪಿ' ಇತಿ ಬಹುವಚನಗ್ರಹಣಾತ್ ಬಹವೋSತ್ರ ವೃತ್ತಿಕಾರಾ ಗೀತಾಶಾಸ್ತ್ರಾರ್ಥಾವಿಷ್ಕರಣೇ ಪ್ರಯತಿತವನ್ತ ಇತಿ ಗಮ್ಯತೇ | ತೇನ ಗೀತಾಭಾಷ್ಯೇ ಪರಾಮೃಷ್ಟಾಃ ವೃತ್ತಿಕಾರಾಃ ಭಿನ್ನಭಿನ್ನಾ ಏವ ಸ್ಯುರಿತ್ಯುನ್ನೀಯತೇ | ತತ್ರ ಸಂಬನ್ಧಗ್ರನ್ಥೇ ಏವ ತಾವತ್ ಜ್ಞಾನಕರ್ಮಸಮುಚ್ಚಯವಾದೀ, ಸರ್ವಕರ್ಮಸನ್ಯಾಸಪೂರ್ವಕಾತ್ಮಜ್ಞಾನನಿಷ್ಠಾಮಾತ್ರಾತ್ ಕೈವಲ್ಯಪ್ರಾಪ್ತಿರಿತಿ ಸಾಂಪ್ರದಾಯಿಕಮತವಿರೋಧೀ, ಕಶ್ಚನ ವೃತ್ತಿಕಾರಃ ಪರಾಮೃಷ್ಟಃ | ಕೋsಸೌ — ಇತಿ ತು ನ ವಿಜ್ಞಾಯತೇ | ದ್ವೈತಾದ್ವೈತಾದಿಸಿದ್ಧಾನ್ತಿವಿಶೇಷಾಪ್ರಕಟನಾತ್ | ಸಮುದಾಹೃತತದೀಯವಾಕ್ಯೇ ತೃತೀಯಾಧ್ಯಾಯಭಾಷ್ಯೇ ಪರಾಮೃಷ್ಟೋಽಪ್ಯೇಷ ಏವ ಇತಿ ತೂಹ್ಯತೇ | 'ಸಂಬನ್ಧಗ್ರನ್ಥೇ ತಾವತ್ ಸರ್ವೇಷಾಮ್ ಆಶ್ರಮಿಣಾಂ ಜ್ಞಾನಕರ್ಮಣೋಃ ಸಮುಚ್ಚಯೋ ಗೀತಾಶಾಸ್ತ್ರೇ ನಿರೂಪಿತೋऽರ್ಥ ಇತ್ಯುಕ್ತಮ್' (ಭಾ. ಭಾ. 143) ಇತ್ಯನುವಾದದರ್ಶನಾತ್ |
★ವೃತ್ತಿಕಾರರ ಪ್ರಶಂಸೆ—
6. ಮೇಲೆ ಉದಾಹರಿಸಿದ ಭಾಷ್ಯವಾಕ್ಯದಲ್ಲಿ ‘ಅನೇಕರು ವಿವರಿಸಿದ್ದಾದ ಪದ-ಪದಾರ್ಥ, ವಾಕ್ಯ-ವಾಕ್ಯಾರ್ಥ ಮತ್ತು ನ್ಯಾಯವು ಇದ್ದರೂ’ ಎಂಬುದಾಗಿ ಬಹುವಚನವನ್ನು ಸ್ವೀಕರಿಸಿರುವುದರಿಂದ ಇಲ್ಲಿ ಅನೇಕ ವೃತ್ತಿಕಾರರು ಗೀತಾಶಾಸ್ತ್ರಾರ್ಥವನ್ನು ತೋರಿಸುವುದರಲ್ಲಿ ಪ್ರಯತ್ನಪಟ್ಟಿರುತ್ತಾರೆ — ಎಂದು ಗೊತ್ತಾಗುತ್ತದೆ. ಅದರಿಂದ ಗೀತಾಭಾಷ್ಯದಲ್ಲಿ ಪರಾಮರ್ಶಿಸಲ್ಪಟ್ಟ ವೃತ್ತಿಕಾರರು ಬೇರೆಬೇರೆಯವರೇ ಆಗಿರಬೇಕೆಂದು ಊಹಿಸಬೇಕಾಗುತ್ತದೆ. ಅಲ್ಲಿ ಮೊಟ್ಟಮೊದಲು ಸಂಬಂಧಗ್ರಂಥದಲ್ಲಿ ಜ್ಞಾನಕರ್ಮಸಮುಚ್ಚಯವಾದಿಯು ಸರ್ಮಕರ್ಮಸಂನ್ಯಾಸವನ್ನು ಮುಂದುಮಾಡಿಕೊಂಡ, ಆತ್ಮಜ್ಞಾನದಲ್ಲಿ ನೆಲೆನಿಲ್ಲುವಷ್ಟರಿಂದಲೇ ಮೋಕ್ಷಪ್ರಾಪ್ತಿಯಾಗುತ್ತದೆ ಎಂಬ ಸಾಂಪ್ರದಾಯಿಕಮತಕ್ಕೆ ವಿರೋಧಿಯಾದ ಒಬ್ಬಾನೊಬ್ಬ ವೃತ್ತಿಕಾರನು ಪರಾಮರ್ಶಿತನಾದ್ದಾನೆ. ಇವನು ಯಾರೆಂಬುದು ಮಾತ್ರ ಗೊತ್ತಾಗಿಲ್ಲ. ಏಕೆಂದರೆ ದೈತ-ಅದ್ವೈತಾದಿ ಸಿದ್ಧಾಂತವಿಶೇಷವನ್ನು ಪ್ರಕಟಗೊಳಿಸಿರುವುದಿಲ್ಲ. ಮೂರನೇ ಅಧ್ಯಾಯದ ಭಾಷ್ಯದಲ್ಲಿ ಉದಾಹರಿಸಿ ಅವರ ವಾಕ್ಯವನ್ನು ಪರಾಮರ್ಶಿಸಿದ ವೃತ್ತಿಕಾರನು ಈತನೇ ಎಂದು ಊಹೆ ಮಾಡಬೇಕಾಗುತ್ತದೆ. ಏಕೆಂದರೆ ಮೊಟ್ಟಮೊದಲನೆಯದಾಗಿ ಸಂಬಂಧಗ್ರಂಥದಲ್ಲಿ ಎಲ್ಲಾ ಆಶ್ರಮಿಗಳಿಗೂ ಜ್ಞಾನಕರ್ಮಗಳ ಸಮುಚ್ಚಯವು, ಗೀತಾಶಾಸ್ತ್ರದಲ್ಲಿ ನಿರೂಪಣೆ ಮಾಡಿದ್ದಾದ ಅರ್ಥವು— ಎಂದೇ ಹೇಳಿದೆ (ಭಾ.ಭಾ.143) ಎಂಬುದಾಗಿ ಅನುವಾದಮಾಡಿರುವುದು ಕಂಡುಬರುತ್ತದೆ.
ಪಷ್ಟಾಧ್ಯಾಯೇ ಭಾಷ್ಯಾವತರಣಿಕಾಯಾಮನೂದಿತೋಽಪಿ ವಾದಃ, ಏತಸ್ಯೈವ ಸ್ಯಾತ್ | 'ಅನುಷ್ಠೇಯಮೇವ ವಿಹಿತಂ ಕರ್ಮ ಯಾವಜ್ಜೀವಮ್' (ಭಾ. ಭಾ. 377) ಇತಿ ಶಾಸ್ತ್ರಸಂಬನ್ಧತೃತೀಯಾಧ್ಯಾಯಸಂಬನ್ಧಗ್ರನ್ಥಯೋರಿವ ತತ್ರಾಪಿ ನಿತ್ಯಕರ್ಮಣಾಂ ಯಾವಜ್ಜೀವಂ ಕರ್ತವ್ಯತ್ವೋಕ್ತೇಃ | ಚತುರ್ಥೇ (ಭಾ. ಪಾ. 68) ನಿತ್ಯಕರ್ಮಣೋಽಕರ್ಮತ್ವವಾದಿ, ತ್ರಯೋದಶೇ 'ಅನಾದಿಮತ್ಪರಂ ಬ್ರಹ್ಮ' ಇತ್ಯಸ್ಯ 'ಅನಾದಿಮತ್ಪರಮ್' ಇತಿ ಪದಚ್ಛೇತ್ತಾ ಚ ಕಿಮೇಷ ಏಕ ಏವ (ಗೀ.13-12, ಭಾ. ಭಾ. 791), ಉತಾನ್ಯ ಇತ್ಯತ್ರ ಗಮಕಂ ನ ಕಿಞ್ಚಿಲ್ಲಕ್ಷ್ಯತೇ | ತತ್ರೈವ ದ್ವಿತೀಯಶ್ಲೋಕಭಾಷ್ಯಾನೂದಿತಃ 'ಸಂಸಾರೋಪರಮಶ್ಚ ಮಮ ಕರ್ತವ್ಯಃ, ಕ್ಷೇತ್ರಕ್ಷೇತ್ರಜ್ಞವಿಜ್ಞಾನೇನ, ಧ್ಯಾನೇನ ಚೈಶ್ವರಂ ಸಾಕ್ಷಾತ್ಕೃತ್ವಾ ತತ್ಸ್ವರೂಪಾವಸ್ಥಾನೇನ' (13-2, ಭಾ. ಭಾ. 769) ಇತಿ ಪಕ್ಷಾವಲಮ್ಪೀ ತು ಕಿಂ ಸಮುಚ್ಚಯವಾದಿವೃತ್ತಿಕಾರಾದ್ ಭಿನ್ನಃ, ಆಹೋಸ್ವಿನ್ನಿತ್ಯೇತದಪಿ ವಿಚಾರಣೀಯಮೇವ ||
ಆರನೇ ಅಧ್ಯಾಯದ ಭಾಷ್ಯಾವತರಣಿಕೆಯಲ್ಲಿ ಅನುವಾದ ಮಾಡಿದ್ದಾದ ವಾದವು ಈತನದೇ ಆಗಿರಬೇಕು. 'ಶಾಸ್ತ್ರವಿಹಿತಕರ್ಮವನ್ನು ಬದುಕಿರುವವರೆಗೂ ಅನುಷ್ಠಾನಮಾಡತಕ್ಕದ್ದು' (ಭಾ.ಭಾ.377) ಎಂಬುದಾಗಿ ಶಾಸ್ತ್ರಸಂಬಂಧ ಮತ್ತು ಮೂರನೇ ಅಧ್ಯಾಯದ ಸಂಬಂಧಗ್ರಂಥಗಳಂತೆಯೇ ಎಲ್ಲಾ ನಿತ್ಯಕರ್ಮಗಳನ್ನೂ ಬದುಕಿರುವವರೆಗೂ ಮಾಡಬೇಕೆಂದು ಹೇಳಿರುತ್ತದೆ. ನಾಲ್ಕನೇ ಅಧ್ಯಾಯದಲ್ಲಿ (ಭಾ.ಭಾ.68) ನಿತ್ಯಕರ್ಮಗಳನ್ನು ಅಕರ್ಮ ಎಂಬುದಾಗಿ ವಾದಮಾಡುವಾತನು, ಹದಿಮೂರನೇ ಅಧ್ಯಾಯದಲ್ಲಿ 'ಅನಾದಿಮತ್ ಪರಂಬ್ರಹ್ಮ' ಎಂಬುದಕ್ಕೆ 'ಅನಾದಿ ಮತ್ಪರಮ್' ಎಂಬುದಾಗಿ ಪದಚ್ಛೇದ ಮಾಡಿರುವಾತನು ಈತನೆಯೋ (ಭಾ.ಭಾ.791) ಅಥವಾ ಬೇರೆಯವನೋ ಎಂಬುದರ ಬಗ್ಗೆ ಆಧಾರವೇನೂ ಸಿಗುವುದಿಲ್ಲ, ಅಲ್ಲಿಯೇ ಎರಡನೆಯ ಶ್ಲೋಕದ ಭಾಷ್ಯದಲ್ಲಿ ಪರಾಮರ್ಶೆ ಮಾಡಿದವನಾದ 'ಸಂಸಾರವನ್ನು ಅಡಗಿಸಿಕೊಳ್ಳುವುದು ನನ್ನ ಕರ್ತವ್ಯ, ಅದನ್ನು ಕ್ಷೇತ್ರ ಕ್ಷೇತ್ರಜ್ಞವಿಜ್ಞಾನದಿಂದಲೂ ಮತ್ತು ಧ್ಯಾನದಿಂದಲೂ ಈಶ್ವರನನ್ನು ಸಾಕ್ಷಾತ್ಕರಿಸಿಕೊಂಡು ಅದರ ಸ್ವರೂಪದಲ್ಲಿ ನೆಲೆನಿಲ್ಲುವುದರ ಮೂಲಕ ಮಾಡಿಕೊಳ್ಳಬೇಕು' (ಭಾ.ಭಾ.769) ಎಂಬುದಾಗಿ ಪಕ್ಷವನ್ನು ಅವಲಂಬಿಸಿಕೊಂಡವನು ಸಮುಚ್ಚಯವಾದಿಯಾದ ವೃತ್ತಿಕಾರನಿಗಿಂತ ಭಿನ್ನನೋ ಅಥವಾ ಅಲ್ಲವೋ ಎಂಬುದು ಕೂಡ ವಿಚಾರಿಸತಕ್ಕದ್ದೆ ಆಗಿದೆ.
ಕೇಚಿತ್ತು ಸಂಪ್ರತಿತನಾಃ, ವೃತ್ತಿಕಾರೋ ಗೀತಾವ್ಯಾಖ್ಯಾತಾ ವಿಶಿಷ್ಟಾದ್ವೈತಸಂಪ್ರದಾಯಾನುಸಾರೀತಿ ಕಲ್ಪಯನ್ತಿ | ತತ್ರ ನ ಕಿಞ್ಚಿತ್ ಪ್ರಮಾಣಂ ಪಶ್ಯಾಮಃ | ಪ್ರತ್ಯುತ ಜೀವಬ್ರಹ್ಮೈಕತ್ವವಾದಿನ ಏವ ಸರ್ವೇ ಆಚಾರ್ಯಾತ್ ಪೂರ್ವತನಾ ಔಪನಿಷದಾಃ – ಇತ್ಯತ್ರ ಗಮಕಂ ವಾಕ್ಯಮಪ್ಯಸ್ತಿ ಬೃಹದಾರಣ್ಯಕಭಾಷ್ಯೇ —
ಈಗಿನವರಾದ ಕೆಲವರು, ಗೀತಾವ್ಯಾಖ್ಯಾನಕಾರನಾದ ವೃತ್ತಿಕಾರನು ವಿಶಿಷ್ಟಾದ್ವೈತಾನುಸಾರಿಯಾದವನು ಎಂಬುದಾಗಿ ಕಲ್ಪಿಸುತ್ತಾರೆ. ಅದಕ್ಕೆ ನಾವು ಯಾವ ಪ್ರಮಾಣ(ಆಧಾರ)ವನ್ನೂ ಕಾಣೆವು. (ಅಷ್ಟೇ ಅಲ್ಲದೇ) ಅದಕ್ಕೆ ವಿರುದ್ಧವಾಗಿ ಆಚಾರ್ಯರಿಗಿಂತ ಹಿಂದಿನವರಾದ ಎಲ್ಲಾ ಉಪನಿಷತ್ತನ್ನು ಹಿಡಿದು ಹೇಳುವವರೆಲ್ಲರೂ ಜೀವಬ್ರಹ್ಮರ ಏಕತ್ವವಾದಿಗಳೇ ಆಗಿದ್ದರು ಎಂಬುವುದರ ಬಗ್ಗೆ ಬೃಹದಾರಣ್ಯಕಭಾಷ್ಯದಲ್ಲಿ —
(1) ಸರ್ವೋಪನಿಷತ್ಸು ಹಿ ವಿಜ್ಞಾನಾತ್ಮನಃ ಪರಮಾತ್ಮನಾ ಏಕತ್ವಪ್ರತ್ಯಯೋ ವಿಧೀಯತ ಇತ್ಯವಿಪ್ರತಿಪತ್ತಿಃ ಸರ್ವೇಷಾಮ್ ಉಪನಿಷದ್ವಾದಿನಾಮ್ || ಬೃ. ಭಾ. 2-1-20
ಇತಿ |
1) ಎಲ್ಲಾ ಉಪನಿಷತ್ತುಗಳಲ್ಲೂ ಜೀವರುಗಳಿಗೆ ಪರಮಾತ್ಮನೊಡನೆ ಏಕತ್ವಪ್ರತ್ಯಯವು ವಿಧಿಸಲಾಗಿದೆ ಎಂಬುವುದರ ಬಗ್ಗೆ ಎಲ್ಲಾ ಉಪನಿಷದ್ವಾದಿಗಳಿಗೂ ಸಮಾನ ಅಭಿಪ್ರಾಯವಿರುತ್ತದೆ, (ಬೃ.ಭಾ.2-1-20)
ಎಂದು ಪ್ರಮಾಣವಾಕ್ಯವು ಕೂಡ ಇರುತ್ತದೆ.
ಭಾಷ್ಯೇ ವಾರ್ತಿಕೇ ಚ ತತ್ರ ತತ್ರ ಜೀವಬ್ರಹ್ಮೈಕ್ಯವಾದಿನ ಏವ ವೃತ್ತಿಕಾರಾಃ ಖಣ್ಡನಾರ್ಥಂ ಪರಾಮೃಷ್ಟಾಃ | ಉದಾಹೃತಶ್ಚಾಧಸ್ತಾತ್, ಮುಕ್ತಸ್ಯ ಈಶ್ವರಸ್ವರೂಪಾವಸ್ಥಾನವಾದೀ .ಕಶ್ಚನ ವೃತ್ತಿಕಾರಃ | ಪರಾಮೃಷ್ಟಃ ಸೋಽಪಿ ಬೃಹದಾರಣ್ಯಕಭಾಷ್ಯೇ | ನ ತು ಸಂಪ್ರತಿತನಭಾಷ್ಯಕಾರಾಣಾಂ ಮಧ್ವರಾಮಾನುಜಾದೀನಾಂ ದ್ವೈತಿವೇದಾನ್ತಿನಾಮನ್ಯತಮಸ್ಯಾಪಿ ಮತಂ ಕ್ವಚಿದಪಿ ಪರಾಮೃಷ್ಟಮುಪಲಭ್ಯತೇ ಭಾಷ್ಯಕಾರೇಣ | ಅತಸ್ತದಾನೀಂ ವಿಶಿಷ್ಟಾದ್ವೈತವಾದಸ್ಯೈವಾಸ್ತಿತ್ವೇ ತಾವತ್ ಪ್ರಮಾಣಂ ನ ದೃಶ್ಯತ ಇತಿ ನ ಸಾಧ್ವಿದಂ ಕಲ್ಪನಂ ವಿಶಿಷ್ಟಾದ್ವೈತವೃತ್ತಿಕಾರೋ ಗೀತಾಭಾಷ್ಯೇ ಪರಾಮೃಷ್ಟಂ ಇತ್ಯಲಮತಿಪ್ರಪಞ್ಚೇನ ದುರೂಹನಿಷ್ಪ್ರಯೋಜನಚಿನ್ತಾಯಾಃ ||
ಭಾಷ್ಯದಲ್ಲೂ ಮತ್ತು ವಾರ್ತಿಕದಲ್ಲೂ ಅಲ್ಲಲ್ಲಿ ಜೀವಬ್ರಹ್ಮರ ಐಕ್ಯವನ್ನು ಹೇಳುವವರಾದ ವೃತ್ತಿಕಾರರನ್ನೇ ಖಂಡನೆಗಾಗಿ ಪರಾಮರ್ಶಿಸಿರುತ್ತದೆ. ಹಿಂದೆ ಇದಕ್ಕೆ ವಚನವನ್ನು ಉದಾಹರಿಸಿಯೂ ಇದೆ. ಆತನು ಮುಕ್ತನಾದವನು ಈಶ್ವರಸ್ವರೂಪದಲ್ಲಿ ನೆಲೆನಿಲ್ಲುವನು ಎಂದು ಹೇಳುವ - ಒಬ್ಬಾನೊಬ್ಬ ವೃತ್ತಿಕಾರನು, ಆತನು ಬೃಹದಾರಣ್ಯಕಭಾಷ್ಯದಲ್ಲೂ ಪರಾಮೃಷ್ಟನಾಗಿದ್ದಾನೆ. ಆದರೆ ಈಗಿನ ಭಾಷ್ಯಕಾರರಾದ ಮಧ್ವರಾಮಾನುಜರೇ ಮುಂತಾದ ದೈತವೇದಾಂತಿಗಳಲ್ಲಿ ಯಾವೊಬ್ಬನ ಮತವೂ ಎಲ್ಲೂ ಭಾಷ್ಯಕಾರರು ಪರಾಮರ್ಶೆ ಮಾಡಿರುವುದು ಕಂಡುಬಂದಿರುವುದಿಲ್ಲ. ಆದ್ದರಿಂದ ಆಗ ವಿಶಿಷ್ಟಾದ್ವೈತವಾದವೇ ಇತ್ತು ಎಂಬುದಕ್ಕೆ ಯಾವ ಪ್ರಮಾಣವೂ ಇಲ್ಲವಾದ್ದರಿಂದ ಗೀತಾಭಾಷ್ಯದಲ್ಲಿ ವಿಶಿಷ್ಟಾದ್ವೈತವೃತ್ತಿಕಾರರ ಪರಾಮರ್ಶೆ ಇದೆ ಎಂಬ ಈ ಕಲ್ಪನೆಯು ಸರಿಯಲ್ಲ ಎಂದಾದ್ದರಿಂದ ಊಹಿಸುವುದಕ್ಕೆ ಅಸಾಧ್ಯವಾದ ನಿಷ್ಟ್ರಯೋಜಕವಾದ ವಿಚಾರವನ್ನು ಬೆಳೆಸುವುದನ್ನು ನಿಲ್ಲಿಸೋಣ.
|| ಇತಿ ಶ್ರೀಮತ್ಸಮಹಂಸಪರಿವ್ರಾಜಕಾಚಾರ್ಯವರೇಣ್ಯ-ಶ್ರೀಪೂಜ್ಯಪಾದ-ಶ್ರೀಮಚ್ಛಙ್ಕರಭಗವಚ್ಚರಣಸ್ಮರಣಪರಿಚಯಾವಾಪ್ತವೇದಾನ್ತ-ಪ್ರವೇಶೇನ ಶ್ರೀಬೋಧಾನನೇನ್ದೇನ್ದ್ರಸರಸ್ವತೀಶಿಷ್ಯೇಣ ಸಚ್ಚಿದಾನನ್ದೇನ್ದ್ರಸರಸ್ವತ್ಯಾಖ್ಯೇನ ಭಿಕ್ಷುಣಾ ಪ್ರಣೀತೇ ಗೀತಾಶಾಸ್ತ್ರಾರ್ಥವಿವೇಕೇ ವೃತ್ತಿಕಾರಮತಸಮಾಲೋಚನಂ ನಾಮ ದ್ವಿತೀಯೋऽಧ್ಯಾಯಃ ||
ಈ ರೀತಿಯಾಗಿ ಶ್ರೀಮತ್ ಪರಮಹಂಸ ಪರಿವ್ರಾಜಕಾಚಾರ್ಯರಲ್ಲಿ ಶ್ರೇಷ್ಠರಾದ ಶ್ರೀಪೂಜ್ಯಪಾದ ಶ್ರೀಮದ್ ಶಂಕರಭಗವಂತರ ಚರಣದ ಸ್ಮರಣೆಯನ್ನು ಮಾಡಿಕೊಂಡದ್ದರಿಂದ ಪರಿಚಯವಾದ ವೇದಾಂತ ಪ್ರವೇಶವನ್ನು ಹೊಂದಿದ ಶ್ರೀಬೋಧಾನಂದೇಂದ್ರಸರಸ್ವತೀಶಿಷ್ಯರಾದ ಸಚ್ಚಿದಾನಂದೇಂದ್ರ ಸರಸ್ವತೀ ಎಂಬ ಹೆಸರಿನ ಸಂನ್ಯಾಸಿಯಿಂದ ರಚನೆ ಮಾಡಿದ್ದಾದ ಗೀತಾಶಾಸ್ತ್ರಾರ್ಥವಿವೇಕದಲ್ಲಿ ವೃತ್ತಿಕಾರರ ಮತದ ಸಮಾಲೋಚನೆಯೆಂಬ ಹೆಸರಿನ ಎರಡನೆ ಅಧ್ಯಾಯ ಮುಗಿಯಿತು.
Comments
Post a Comment