Posts

Showing posts from 2026

೧೨. ಶ್ರೀಮದ್-ಭಗವದ್ಗೀತಾ-ಪೀಠಿಕಾ ೯

(೩೧) ಭಗವದ್ಗೀತಾಸಾರವಿಚಾರ—ಹೊಸಕೆರೆ ಚಿದಂಬರಯ್ಯ …ಕ್ರಿ.ಶ. 1911 ರಲ್ಲಿ ವಿದ್ಯಾಭೂಷಣ, ವೇದಾಂತವಾಚಸ್ಪತಿ, Ph.D., F.R.S.A,M.R.A.,S. ಇತ್ಯಾದಿ ಬಿರುದಾಂಕಿತರಾದ ಕುರ್ತುಕೋಟಿಯ ಶ್ರೀಮಹಾಭಾಗವತರು ಧಾರವಾಡದ ಮಹಾಸಭೆಯಲ್ಲಿ ಕೊಟ್ಟ ಭಗವದ್ಗೀತಾಸಾರವಿಚಾರ ವ್ಯಾಖ್ಯಾನಮಾಲೆಯನ್ನು ಈಗ ಪುಸ್ತಕರೂಪದಲ್ಲಿ…ತರುವುದಕ್ಕೆ ನನಗೆ ಬಹು ಸಂತೋಷವಾಗುತ್ತದೆ….ಶ್ರೀಕೃಷ್ಣನ ನಿಜವಾದ ತಾತ್ಪರ್ಯವನ್ನು ಹಿಡಿಯುವುದು ಬರೀ ಮೇಧಾಶಕ್ತಿಗೆ ಸಾಧ್ಯವಲ್ಲ….ಪ್ರಜ್ಞಾಶಾಲಿಯಾಗಿ ಸಾಧನಚತುಷ್ಟಯ ಸಂಪನ್ನನಾಗಿ ಗುರುವಿಗೆ ಶರಣೆಂದವನಿಗೆ ಮಾತ್ರ ಗೀತೆಯ ಯಥಾರ್ಥವು ಸ್ಫೂರ್ತಿಯಾದೀತು.  ಪಾತ್ರೆಯಲ್ಲಿ ತುಂಬಿಟ್ಟ ಹಾಲು, ಆಗತಾನೆ ಹಸುವಿನ ಕೆಚ್ಚಲಿನಿಂದ ಹೊರಟ ಹಾಲಿನಷ್ಟು ಗುಣಕಾರಿಯಲ್ಲವೆಂಬುದು ಹೇಗೋ ಹಾಗೆ, ಇದು ಅವರ ಸಾಕ್ಷಾನ್ಮುಖದಿಂದ ತನಗೆ ತಾನೇ ಸ್ಫೂರ್ತಿಯಾಗಿ ಏಕಪ್ರಕಾರವಾಗಿ ಪ್ರವಹಿಸುತ್ತಿದ್ದ ವಾಣಿಯಷ್ಟು ಉದ್ಬೋಧಕಾರಿಯಾಗಲಾರದು…ಅವರಿಂದ ಅಗತ್ಯವಾದ ತಿದ್ದುಪಾಟುಗಳನ್ನು ಮಾಡಿಸಿರುವೆನು. ಗೀತಾರ್ಥದಲ್ಲಿ ತೋರಬಹುದಾದ ಎಷ್ಟೋ ಸಂಶಯದ ಗಂಟುಗಳನ್ನು ಬಿಚ್ಚಿ, ಶ್ರುತಿಸ್ಮೃತಿ ಮೊದಲಾದವುಗಳ ಪ್ರಮಾಣವಾಕ್ಯಗಳನ್ನೂ, ಲೌಕಿಕವಾದ ಯುಕ್ತಿಗಳನ್ನೂ ಸಮಂಜಸವಾದ ಉದಾಹರಣೆಗಳನ್ನೂ ಸೂರೆಮಾಡುವ ಈ ವ್ಯಾಖ್ಯಾನಗಳನ್ನು ಕನ್ನಡಿಗರೆಲ್ಲರೂ ಅಗತ್ಯವಾಗಿ ಓದಬೇಕಾಗಿರುವುದು.  ಬ್ರಹ್ಮನಿಷ್ಠಾಯ ವಿದ್ಮಹೇ ಸಂಯಮೀಂದ್ರಾಯ ಧೀಮಹಿ |  ತನ್ನಃ ಸಚ್ಚಿದಾನಂದಃ ಪ್ರಚೋದಯಾತ್ || ★...

೧೧. ಶ್ರೀಮದ್-ಭಗವದ್ಗೀತಾ-ಪೀಠಿಕಾ ೮

(೩೦) ಧನಪತಿಸೂರಿಕೃತಾ ಭಾಷ್ಯೋತ್ಕರ್ಷದೀಪಿಕಾ ಸಪ್ತದ್ವೀಪಾ ಧರೇಯಂ ಸಗಿರಿವನಜಲಾ, ಲೋಕಪಾಲಾಃ ಸಲೋಕಾಃ, ಬ್ರಹ್ಮಾಂಡೇ ಸನ್ತಿ ಯಸ್ಮಿನ್ ಸಲಿಲಹುತಭುಗಾದ್ಯಾವೃತೇ, ತತ್ಪ್ರಧಾನಾತ್ | ಯಸ್ಮಾದವ್ಯಕ್ತಸಂಜ್ಞಾದ್ಭವತಿ ಗುಣಮಯಾದ್ ವೇದವೇದ್ಯಃ ಪರೋ ಯಃ, ತಸ್ಮಾನ್ನಾರಾಯಣಂ ತಂ ಸುವಿಮಲಸಭಯಂ ಶಂಕರಂ ನೌಮಿ ಸತ್ಯಮ್ || ೧ || (“ಮ್ರಭ್ನೈರ್ಯಾನಾಂ ತ್ರಯೇಣ ತ್ರಿಮುನಿಯತಿಯುತಾ ಸ್ರಗ್ಧರಾ ಕೀರ್ತಿತೇಯಮ್ ”) (ತತ್) ಆ ಪರವಸ್ತುವು,  (ಪ್ರಧಾನಾತ್) ತನ್ನದಾದ ಪ್ರಧಾನವೆನಿಸಿದ ಮೂಲಪ್ರಕೃತಿಯಿಂದಾಗಿ / ಮಹತ್ತತ್ತ್ವದ ದೆಸೆಯಿಂದಾದ, (ಯಸ್ಮಿನ್ ಸಲಿಲ-ಹುತಭುಗಾದ್ಯಾವೃತೇ ಬ್ರಹ್ಮಾಣ್ಡೇ) ಯಾವ ಜಲ, ಅಗ್ನಿ ಮುಂತಾದ ಪಂಚಮಹಾಭೂತಗಳಿಂದ (ಪೃಥ್ವಿ-ಅಪ್-ತೇಜ-ವಾಯು-ಆಕಾಶ) ಆವೃತವಾದ ಬ್ರಹ್ಮಾಂಡವಿದೆಯೋ ಅದರಲ್ಲಿ, (ಸಗಿರಿವನಜಲಾ) ಪರ್ವತ-ಕಾಡು-ನದಿ-ತೊರೆಗಳಿಂದ ಕೂಡಿದ, (ಸಪ್ತದ್ವೀಪಾ) ಜಂಬೂ, ಪ್ಲಕ್ಷ, ಶಾಲ್ಮಲೀ, ಕುಶ, ಕ್ರೌಂಚ, ಶಾಕ, ಪುಷ್ಕರವೆಂಬ ಏಳು ದ್ವೀಪಗಳ (ಇಯಂ ಧರಾ) ಈ ವಸುಂಧರೆಯೂ, (ಸಲೋಕಾಃ) ಅತಲ ವಿತಲ ಸುತಲ ತಲಾತಲ ರಸಾತಲ ಮಹಾತಲ ಪಾತಲವೆಂಬ ೭ ಅಧೋಲೋಕಗಳ ಸಹಿತರೂ, ಭೂಃ ಭುವಃ ಸುವಃ ಮಹಃ ಜನಃ ತಪಃ ಸತ್ಯಮ್ ಎಂಬ ೭ ಊರ್ಧ್ವಲೋಕಗಳ ಸಮೇತರೂ ಆದ, (ಲೋಕಪಾಲಾಃ) ಪೂರ್ವಕ್ಕೆ ಇಂದ್ರ ಆಗ್ನೇಯಕ್ಕೆ ಅಗ್ನಿ ದಕ್ಷಿಣಕ್ಕೆ ಯಮ ನೈರ್ಋತ್ಯಕ್ಕೆ ನಿರುತಿ ಪಶ್ಚಿಮಕ್ಕೆ ವರುಣ ವಾಯವ್ಯಕ್ಕೆ ವಾಯು ಉತ್ತರಕ್ಕೆ ಕುಬೇರ ಈಶಾನ್ಯಕ್ಕೆ ಈಶಾನ ಅಧೋದಿಕ್ಕಿಗೆ ಅನಂತ ಊರ್ಧ್ವದಿ...

೧೦. ಶ್ರೀಮದ್-ಭಗವದ್ಗೀತಾ-ಪೀಠಿಕಾ ೭

೧೦. ಶ್ರೀಮದ್-ಭಗವದ್ಗೀತಾ-ಪೀಠಿಕಾ ೮ (೨೬) ನೀಲಕಂಠೀಯ ಭಾರತಭಾವ(ಪ್ರ)ದೀಪಾಂತರ್ಗತಾ (ಗೀತಾ)ಚತುರ್ಧರೀವ್ಯಾಖ್ಯಾ ಓಂ ನಮೋ ಬ್ರಹ್ಮಾದಿಭ್ಯೋ ಬ್ರಹ್ಮವಿದ್ಯಾಸಂಪ್ರದಾಯಕರ್ತೃಭ್ಯೋ ವಂಶಋಷಿಭ್ಯೋ ನಮೋ ಗುರುಭ್ಯಃ || (ಬ್ರಹ್ಮಾದಿಭ್ಯಃ) ಪರಬ್ರಹ್ಮಕ್ಕೂ, ಸೃಷ್ಟಿಕರ್ತ ಚತುರ್ಮುಖ ಬ್ರಹ್ಮನೇ ಮೊದಲಾದವರಿಗೂ, (ಬ್ರಹ್ಮವಿದ್ಯಾಸಂಪ್ರದಾಯಕರ್ತೃಭ್ಯಃ) ಬ್ರಹ್ಮವಿದ್ಯಾಸಂಪ್ರದಾಯಕರ್ತೃಗಳಿಗೂ, (ವಂಶಋಷಿಭ್ಯಃ) ಆ ಪರಂಪರೆಯ ವಂಶಗಳಲ್ಲಿ ಬಂದ ಋಷಿಗಳಿಗೂ (ನಮಃ) ನಮಸ್ಕಾರ. (ಗುರುಭ್ಯಃ) ಗುರುಗಳಿಗೂ, (ನಮಃ) ನಮಸ್ಕಾರ.  ಪ್ರಣಮ್ಯ ಭಗವತ್ಪಾದಾನ್ ಶ್ರೀಧರಾದೀಂಶ್ಚ ಸದ್ಗುರೂನ್ | ಸಂಪ್ರದಾಯಾನುಸಾರೇಣ ಗೀತಾವ್ಯಾಖ್ಯಾಂ ಸಮಾರಭೇ || ೧ || (ಭಗವತ್ಪಾದಾನ್) ಭಗವತ್ಪಾದರಾದ ಆಚಾರ್ಯ ಶಂಕರರನ್ನೂ, (ಸದ್ಗುರೂನ್ ಶ್ರೀಧರಾದೀನ್) ಸದ್ಗುರುಗಳಾದ ಶ್ರೀಧರಸ್ವಾಮಿಗಳೇ ಮುಂತಾದವರನ್ನೂ, (ಪ್ರಣಮ್ಯ) ಪ್ರಣಾಮಮಾಡಿ, (ಸಂಪ್ರದಾಯಾನುಸಾರೇಣ) ಗುರುಸಂಪ್ರದಾಯಾನುಸಾರಿಯಾದ (ಸ್ವೇಚ್ಛಾನುಸಾರಿಯಲ್ಲದ), (ಗೀತಾವ್ಯಾಖ್ಯಾಂ) ಗೀತಾವ್ಯಾಖ್ಯಾನವನ್ನು, (ಸಮಾರಭೇ) ಚೆನ್ನಾಗಿ ಆರಂಭಿಸುತ್ತೇನೆ. ಟಿಪ್ಪನೀ— ಪ್ರ + ನತ್ವಾ = ಪ್ರಣಮ್ಯ; ಪ್ರ ಉಪಸರ್ಗಪೂರ್ವಕ ಕ್ತ್ವಾಂತ ಕೃದಂತ; ಉಪಸರ್ಗ ಸೇರಿದಾಗ ಕ್ತ್ವಾಂತ ಕೃದಂತವು ಲ್ಯಬಂತವಾಗುತ್ತದೆ. ಉದಾ— ಲಿಖಿತ್ವಾ-(ಬರೆದು)ವಿಲಿಖ್ಯ(ವಿಶೇಷವಾಗಿ ಬರೆದು), ಗತ್ವಾ(ಹೋಗಿ)-ಆಗತ್ಯ(ಬಂದು), ನಿರ್ಗತ್ಯ(ನಿರ್ಗಮಿಸಿ, ತೆರಳಿ), ಪಠಿತ್ವಾ(ಓದಿ)-ಸಂಪಠ್ಯ...