ಅಧ್ಯಾತ್ಮ ಚಿಂತನ
ಅಧ್ಯಾತ್ಮ ಚಿಂತನ
[4/9 8:37 ಪೂರ್ವಾಹ್ನ] Shyamaprasad Mudraje: *ತಮಸೋಮ ಜ್ಯೋತಿರ್ಗಮಯ*
ಹಗಲಿನ ಬೆಲೆ ತಿಳಿಯುವುದು.....
ರಾತ್ರಿ ಇರುವುದರಿಂದಲೇ...
ಆದರೂ... ರಾತ್ರಿಯನು ಹಗಲು ಮಾಡ ಹೊರಡುವುದು ಮನುಜ ಗುಣ.......
ಅಜ್ಞಾನವೆಂಬ ರಾತ್ರಿ ಕತ್ತಲು....
ನರ ನರರ ನಡುವೆ ದ್ವೇಷಾಸುಯೆ ಬಿತ್ಸಿದೆ....
ಬೇದ ಭಾವ ಹೊತ್ಸಿದೆ...
ಪ್ರಾಣಿ ವಧೆ ಹಬ್ಸಿದೆ.....
ಜ್ಞಾನವೆಂಬ ಹಗಲ ಬೆಳಕು...... ಎಲ್ಲರೊಳಿರುವ ನನ್ನದೇ
ಚೈತನ್ಯವ ತೋರ್ಸಿದೆ!!!..
ನನ್ನ ಬಗ್ಗೆ ನನಗೇನು ದ್ವೇಷಾಸೂಯೆ?!!.....ಬೇದ ಭಾವ ?!!!.....
ನನ್ನ ನಾ ಕೊಲ್ಲಬಲ್ಲೆನೇ?!!!...
ಸರ್ವರಲಿ ಹಬ್ಬಲಿ ಜ್ಞಾನವೆಂಬ ಹಗಲ ಬೆಳಕು....
*ನಾನೊಬ್ಬನೇ* ... ಜಗದ್ವಾಪಿ ಎಂಬ ಅಹಂಕಾರ ರಹಿತ *ಅಹಂ ಬ್ರಹ್ಮಾಸ್ಮಿ* ತತ್ವ....
ಶ್ಯಾಮ ಪ್ರಸಾದ ಮುದ್ರಜೆ
[4/9 12:35 ಅಪರಾಹ್ನ] krishnamoorthydr77: 👌🏻🙏🏻💐☺
ಈ ದೇಹ ನಾನಲ್ಲ...
ಆದರೆ ದೇಹಕ್ಕಾಧಾರವಾದ ಮೂಲವಸ್ತು ಚೈತನ್ಯಜ್ಯೋತಿ ಸತ್ ಚಿತ್ ಆನಂದ ಸ್ವರೂಪಿ ನಾನು...
ಅದೇ ಈ ಜಗಕ್ಕೆಲ್ಲವೂ ಆಧಾರ...
ಅದರ ತೋರಿಕೆಯೇ ಈ ವೈವಿಧ್ಯಮಯ ಜಗತ್...
ಇದು ತಾತ್ಕಾಲಿಕ..ನಶ್ವರ...ಸದಾ ಪರಿವರ್ತನಶೀಲ...ಅಸ್ಥಿರ...
ಆದರೆ ಇದರ ಮೂಲ ಸತ್ತ್ವವೂ, ನನ್ನ / ನಮ್ಮೆಲ್ಲರ ಮೂಲಸತ್ತ್ವವೂ ಆದ ಪರಬ್ರಹ್ಮ / ಬ್ರಹ್ಮ / ಆತ್ಮವು ಶಾಶ್ವತ..ಸುಸ್ಥಿರ...ಅವಿನಾಶಿ...ನಿರ್ವಿಕಾರಿ...ಅಚ್ಯುತ...
ಈ ಜ್ಞಾನವೇ ಬೆಳಕು...ಅದಲ್ಲದಿರೆ ತಮಸ್ಸು...
ಈ ಜ್ಞಾನಜ್ಯೋತಿಯಿಂದಲೇ ನಾವು ಜೀವನ್ಮುಕ್ತರೆಂಬ ಅರಿವು ನಮಗಾದರೆ ಅದೇ ಭವಬಂಧಮುಕ್ತಿ...
ಮುಕ್ತಿಯೆಂದರೆ ಬೇರೇನಲ್ಲ...ನಮ್ಮ ದೇಹಾತೀತ ನಿಜಸ್ವರೂಪ...
[5/9 8:40 ಪೂರ್ವಾಹ್ನ] Shyamaprasad Mudraje: *ಸಾಧನೆಯ ಅಳತೆ*
ಸಾಧನೆಯ ಮಟ್ಟದ ಅಳತೆಗೆ ನೈತಿಕತೆಯೊಂದೇ ಮಾರ್ಗಸೂಚಿ.....
ಸಾಧಕನು ನೈತಿಕತೆಯೆಂಬ ಮೊದಲೆರಡು ಮೆಟ್ಟಿಲುಗಳಿಂದ ಬಿದ್ದರೆ ಹೆಚ್ಚಿನ ನೋವುಗಳಿಲ್ಲ...
ನೈತಿಕತೆಯೆಂಬ ಉತ್ತುಂಗ ಮೆಟ್ಟಲುಗಳಿಂದ ಬಿದ್ದರೆ....
ತಡೆಯಲಾಗದ ನೋವು....
ಆದ್ದರಿಂದ ಉತ್ತಿಷ್ಠತಾ ಜಾಗ್ರತಾ....
ಸಾಧನೆಯೇ ಜೀವನದ ದಾರಿ.....
ನನ್ನ ನಿಜ ಸ್ವರೂಪ ತಿಳಿಯಲು....
ಹಾಗೂ ಹುಟ್ಟಿನ ಸಾರ್ಥೈಕ್ಯ ಹೊಂದಲು....
ಬೇರೆ ದಾರಿ ಇಲ್ಲ.....
ಶ್ಯಾಮ ಪ್ರಸಾದ ಮುದ್ರಜೆ.
[6/9 4:19 ಅಪರಾಹ್ನ] Shyamaprasad Mudraje: *ಋಣಾತ್ಮಕ - ಧನಾತ್ಮಕ*
ಋಣಾತ್ಮಕವಾದ ಕೆಲಸ ಚಿಂತೆಗಳೆಲ್ಲಾ ......
ನಮ್ಮೊಳಗಿನ *'ನಾನೇ'* ಆಗಿರುವ ಆರು ರಾಕ್ಷಸರ ಕೆಲಸ....
ಅದನ್ನೇ ಷಡ್ ವೈರಿಗಳೆಂದು ಬಗೆದು....
ಅವುಗಳಿಂದ ವಿಮುಕನಾಗಿ......
ನಿಜ ಸಾಕ್ಷರನಾದೋಡೆ...
ಆ ದೈವತ್ವದ ಧನಾತ್ಮಕತೆಯ ದೈವ *ನಾನೇ* ಆಗಿ .......
ನಾಲ್ಕು ಪುರುಷಾರ್ಥ ಸಾಧನಾ ಪಥದಲ್ಲಿ...
ಲೋಕ ಚಿಂತನೆಯೊಂದಿಗೆ ಗತಿಸಬಹುದು....
ಮೇಲ್ ಸ್ತರದ ಸಹಜಾನಂದ ಹೊಂದಬಹುದು....
ಇದೇ ಸಾಧಕರ ಪಥ...
ಬೇರೆ ದಾರಿ ಇಲ್ಲ....
ಆಧಾರ: ಭಗವದ್ಗೀತೆ- ರಾಕ್ಷಸ ,ಗಂದರ್ವ,ಕಿನ್ನರ, ದೇವ ದೇವತೆಗಳೂ *ನಾನೇ* - ಶ್ರೀ ಕೃಷ್ಣ
ಶ್ಯಾಮ ಪ್ರಸಾದ ಮುದ್ರಜೆ
[6/9 5:15 ಅಪರಾಹ್ನ] krishnamoorthydr77: _ಸರ್ವಂ ಖಲ್ವಿದಂ ಬ್ರಹ್ಮ_
ಇದೆಲ್ಲವೂ ಬ್ರಹ್ಮವೇ...
ನಾನೂ ನೀನೂ ಅವನೂ ಅದೂ ಎಲ್ಲವೂ...
_ಯದ್ಯದ್ ವಿಭೂತಿಮತ್ ಸರ್ವಂ ಶ್ರೀಮದೂರ್ಜಿತಮೇವ ವಾ |_
_ತತ್ತದೇವಾವಗಚ್ಛ ತ್ವಂ ಮಮ ತೇಜೋऽಂಶಸಂಭವಮ್ ||_
ಗೀತಾಚಾರ್ಯನ ಅಮೃತವಾಣಿ
ನಮ್ಮನ್ನೊಯ್ಯುತ್ತಿದೆ ಅಮೃತತ್ವದರಿವಿನೆಡೆಗೆ...
ನೆಲ ಜಲ ಗಿರಿ ವನ ಎಲೆ ಬೆಲೆ ತೊಲೆ ಹೊಲೆ ಗಿಡ ಮರ ಬಳ್ಳಿ ಬೆಂಗಾಡು ಮಲೆನಾಡು ಪ್ರಾಣಿ ಪಶು ಪಕ್ಷಿ ಕ್ರಿಮಿ ಕೀಟ ಪತಂಗ ಮಾತಂಗ ಕುರಂಗ ಅನಂಗ ಅಂಗ .....ಅನಂತ...
ಎಲ್ಲವೂ ಬ್ರಹ್ಮವೇ...ನಾನೂ ಅದೇ...
ದೇವ ಕಿನ್ನರ ಕಿಂಪುರುಷ ಸಿದ್ಧ ಸಾಧ್ಯ ಯಕ್ಷ ರಾಕ್ಷಸ ನಾಗ ಉರಗ ವಾನರ ನರ...
ಜರಾಯುಜ ಅಂಡಜ ಸ್ವೇದಜ ಉದ್ಭಿಜ್ಜ...
ಆಕಾಶ ವಾಯು ಅಗ್ನಿ ಜಲ ಪೃಥಿವೀ...
ಆತ್ಮಾ ಅಹಂ ಚಿತ್ತ ಬುದ್ಧಿ ಮನಸ್ಸು...
ಇಂದ್ರಿಯ ದೇಹ....
ಎಲ್ಲ ಜೀವ ಎಲ್ಲ ಜಡ...ಎಲ್ಲವೂ ಬ್ರಹ್ಮವೇ...
ಇದೇ ಪರಮಾನಂದದ ಚರಮಸ್ಥಿತಿ
ಇದೇ ಭೂಮಾನಂದದ ಸಾರ್ವಭೌಮತೆ...
ಇದೇ ಆತ್ಮಾನಂದದ ಅಂತಿಮಾವಸ್ಥೆ...
ಇದೇ ಶಾಶ್ವತವಾದ ಬ್ರಹ್ಮಾನಂದ...ತುರೀಯ...ಜಾಗ್ರತ್ ಸ್ವಪ್ನ ಸುಷುಪ್ತಿಗಳಾಚೆಗಿನದು... ಅವೆಲ್ಲದರಲ್ಲೂ ಸರ್ವಸಾಕ್ಷಿಯಾಗಿರುವುದು...
ಅದೇ ನಾವು...ಅದೇ ಜಗತ್ತು...ಅದೇ ಬ್ರಹ್ಮ...
🙏🏻🙏🏻🙏🏻☺💐💓
[7/9 6:27 ಪೂರ್ವಾಹ್ನ] Shyamaprasad Mudraje: Wonderful...
Physics and Upanishad are going in one line...
*ಬಿಗ್ ಭಾಂಗ್ ಮಹಾಸ್ಪೋಟ - ಓಂಕಾರ*
ಪ್ರಕೃತಿಯಲ್ಲೂ... ಸ್ಥಳ - ಕಾಲಾತೀತವಾದ ಸ್ಥಿತಿ ಇದೆ......
ಇಲ್ಲವಾದರೆ.... ಕೆಲವೇ ಅಣು ಕ್ಷಣಗಳಲ್ಲೇ.... 'ಮಹಾ ಸ್ಪೋಟ'ದಿಂದ
ಉದಯಿಸಿದ ಈ ವಿಶ್ವದ ವಿಚಾರವೂ ಸುಳ್ಳಾಗಿಪುದು.....
ಹಾಗೇನೇ... ಪ್ರತಿಯೊಬ್ಬನ ಆಂತರ್ಯದಲ್ಲಿ ದೈವೀ ಕೃಪೆಯಿಂದ ವಿಚಾರ ಸ್ಪೋಟಗೊಂಡರೆ....
ಕೇವಲ ಕೆಲ ಅಣು ಕ್ಷಣಗಳಲ್ಲೇ... ದಿವ್ಯಾಂತರ್ಯ ದೃಷ್ಟಿಯಿಂದ.....
ವಿಶ್ವ ರೂಪ ದರ್ಶನದ ಮಹಾಸ್ಪೋಟವಾಗಬಹುದು....
ಆದರೆ ... ಅದರ ಕೀಲಿ ಕೈ ಇರುವುದು ಆ ಮಹಾ ಪುರುಷನಲ್ಲೇ...
ಅವನ ಕೃಪೆ ಒಂದೇ ದಾರಿ....
ಬೇರೆ ದಾರಿ ಇಲ್ಲ....
ಶ್ಯಾಮ ಪ್ರಸಾದ ಮುದ್ರಜೆ
[7/9 8:07 ಪೂರ್ವಾಹ್ನ] krishnamoorthydr77: 👏🏻👌🏻👍🏻🙏🏻💐☺
ಆತ್ಮತತ್ತ್ವದ ಮಹಾಸ್ಫೋಟದಿಂದ ಲೋಕಸೃಷ್ಟಿ...
ಆತ್ಮವಿಚಾರದ ಮಹಾಸ್ಫೋಟದಿಂದ ಆತ್ಮದೃಷ್ಟಿ...ಮೋಕ್ಷಜ್ಞಾನ...ಜೀವನ್ಮುಕ್ತತೆ...
ಗಾಡ್ ಪಾರ್ಟಿಕ್ ಲ್ ನ ಬಿಗ್ ಬ್ಯಾಂಗಿನಿಂದ ವಿಶ್ವಸೃಷ್ಟಿ...
ವ್ಯಷ್ಟಿದೃಷ್ಟಿಗೂ ಮೀರಿದ ಸಮಷ್ಟಿಬ್ರಹ್ಮಾತ್ಮದೃಷ್ಟಿಯಿಂದ ಲೋಕಶಾಂತಿಸೃಷ್ಟಿ...
*ಋಷಿಜ್ಞಾನದೊಡನೆ ವಿಜ್ಞಾನ ಕಲೆ ಮೇಳವಿಸೆ ಜಸವು ಜನಜೀವನಕೆ ಮಂಕುತಿಮ್ಮ*
(—ಡಿವಿಜಿಯವರ ಕಗ್ಗದರ್ಶನ)
_೧. ಪ್ರಜ್ಞಾನವೇ / ಆತ್ಮಜ್ಞಾನವೇ ಬ್ರಹ್ಮ_
_೨. ಬ್ರಹ್ಮವೇ ನಾನಾಗಿರುವೆ._
_೩. ಅದು / ಬ್ರಹ್ಮವೇ ನೀನಾಗಿರುವೆ._
_೪. ಈ ಆತ್ಮನೇ ಬ್ರಹ್ಮವು...ಇದೆಲ್ಲವೂ ಬ್ರಹ್ಮವೇ..._
(—ಉಪನಿಷತ್ತಿನ ಮಹಾವಾಕ್ಯಗಳ ಸಾರ)
🙏🏻🙏🏻🙏🏻☺💐
[7/9 4:03 ಅಪರಾಹ್ನ] krishnamoorthydr77: *ಹಿರಣ್ಮಯೇನ ಪಾತ್ರೇಣ*
*ಸತ್ಯಸ್ಯಾಪಿಹಿತಂ ಮುಖಮ್ |*
*ತತ್ ತ್ವಂ ಪೂಷನ್ ಅಪಾವೃಣು*
*ಸತ್ಯಧರ್ಮಾಯ ದೃಷ್ಟಯೇ ||*
_(—ಈಶಾವಾಸ್ಯೋಪನಿಷತ್)_
_ಹೊಂಬಣ್ಣದ ಮುಚ್ಚಳದಿಂ_
_ಸತ್ಯವು ಮುಚ್ಚಲ್ಪಟ್ಟಿದೆ |_
_ಅದ ನೀ ಪೂಷನೆ! ತೆರೆದಿಡು_
_ಸತ್ಯ-ಧರ್ಮದ ದೃಷ್ಟಿ ನಮಗೆ ಬರಲೆಂದು ||_
_ಧರ್ಮ ಮಾರ್ಗದಿ ಪಡೆದ ಅರ್ಥ-ಕಾಮಗಳಿಂದ_
_ಮೃತ್ಯುವಂ ಗೆಲ್ವಮೃತಮೋಕ್ಷವಂ ತೋರೋ |_
_ನೀನೆ ದೇವರ ದೇವ_
_ಆತ್ಮಾ ಪರಂಜ್ಯೋತಿ_
_ಅಂತರಾತ್ಮನು ನೀನೆ_
_ಬಹಿರಾತ್ಮನೂ ನೀನೆ_
_ಆತ್ಮಾನುಭೂತಿಯನು_
_ಬ್ರಹ್ಮಾತ್ಮಭಾವವನು_
_ತೋರಯ್ಯ ದೇವ!_
_ಸಕಲರನ್ನೂ ಕಾವ!_
_ಹೇ ಮಹಾನುಭಾವ!_
_ನಿನ್ನೊಲುಮೆಯೆಮಗಿರಲಿ_
_ನಿನ್ನಿರವ ತಿಳಿವಿರಲಿ_
_ನಿನ್ನಾನುಭವವಿರಲಿ_
_ದಯೆಯಿಟ್ಟು ಕಾಯೋ!_
🙏🏻🙏🏻🙏🏻💐☺
[8/9 6:17 ಪೂರ್ವಾಹ್ನ] Shyamaprasad Mudraje: *ಶರಣಾಗತಿ.... ಅಮೃತತ್ವ*
ಯಂತ್ರ ನಿರ್ಮಾತೃ ಯಂತ್ರ ನಿರ್ಮಿಪುವಾಗ....
ಆ ಯಂತ್ರ ಅತೀ ಹೆಚ್ಚು ಕಾರ್ಯಕ್ಷಮತೆಯಿಂದಿರಬೇಕೆಂದು.....
ಯಂತ್ರ ಸಂಭಂದೀ ಯಮ ನಿಯಮ ( does and don'ts) ಘೋಷಿಸುವನು...
ಹಾಗೇನೇ....ಜಗದ ನಿರ್ಮಾತೃ.....
ಈ ನಮ್ಮ ದೇಹವೆಂಬ ಯಂತ್ರ ನಿರ್ಮಿಪುವಾಗ.,...
ಈ ದೇಹ ಅತೀ ಹೆಚ್ಚು ಕಾರ್ಯ ಕ್ಷಮತೆಯಿಂದಿರಬೇಕಾದರೆ......
ನಿರ್ಮಾತೃವಿನಲ್ಲಿ ಶರಣಾಗತ ಭಾವ ಹೊಂದಿರಲೇಬೇಕೆಂದು ಘೋಷಿಸಿಹನು....
ತಪ್ಪಿದರೆ.... ಅಹಂ ರಾಕ್ಷಸ ಈ ದೇಹ ಜೀವವ ನಾಶಗೊಳಿಸುವನು...
ನಮ್ಮೊಳಗಿನ ದೇವ ರಾಕ್ಷಸರ ಸಹಾಯದಿಂದ....
ಸದ್ವಿಚಾರವೆಂಬ ಅಮೃತೋದ್ಬವವಾದುದನು....
ನಮ್ಮೊಳಗಿನ ದೈವಕ್ಕೆ ಮಾತ್ರ ಕೊಡತಕ್ಕದ್ದು....
ಅದು ತಾರತಮ್ಯವಲ್ಲ...
ಅಲ್ಪಂಗೆ ಐಶ್ವರ್ಯ ಅಹಂ ಪೋಷಣೆಗೆ ದಾರಿ.....
ಅಪಾತ್ರರಿಗೆ ಪಾತ್ರತ್ವವಿಲ್ಲ.....
ಇದೇ ನಮ್ಮ ದೇಹಜೀವೋನ್ನತಿಗೆ ದಾರಿ....
ಬೇರೆ ದಾರಿ ಇಲ್ಲ....
ಆಧಾರ: ಪತಂಜಲಿ ಯೋಗ ಸೂತ್ರ- *ಈಶ್ವರಪ್ರಣಿಧಾನಾ ಧ್ವ* ಹಾಗೂ ಸರ್ವ ಧರ್ಮಾನ್ ಪರಿತ್ಯಜ್ಯ....
ಶ್ಯಾಮ ಪ್ರಸಾದ ಮುದ್ರಜೆ
[8/9 7:33 ಪೂರ್ವಾಹ್ನ] krishnamoorthydr77: 👍🏻👏🏻👌🏻🙏🏻☺💐
ಇದನ್ನೇ ರಾಮಾನುಜಾಚಾರ್ಯರು *ಪ್ರಪತ್ತಿ* ಯೆಂದು ಕರೆದು ತಮ್ಮದು ಪ್ರಪತ್ತಿಮಾರ್ಗವೆಂದಿದ್ದಾರೆ.
*ಸರ್ವಧರ್ಮಾನ್ ಪರಿತ್ಯಜ್ಯ ಮಾಮೇಕಂ ಶರಣಂ ವ್ರಜ |*
*ಅಹಂ ತ್ವಾ ಸರ್ವಪಾಪೇಭ್ಯೋ ಮೋಕ್ಷಯಿಷ್ಯಾಮಿ ಮಾ ಶುಚಃ ||*
_(ಭಗವದ್ಗೀತಾ)_
ಸರ್ವಕಾರಣಕಾರಣವಾದ
ಸರ್ವಮೂಲಕ್ಕೂ ಮೂಲವಾದ
ಸರ್ವಸೃಷ್ಟಿಗೂ ಬೀಜವಾದ / ಉಪಾದಾನವಾದ
ಸಕಲಲೋಕಕ್ಕೂ ನಿಮಿತ್ತವೂ ಆದ
ಸರ್ವಾಂತರ್ಯಾಮಿಯಾದ
ಸರ್ವಜ್ಞನೂ ಸರ್ವಶಕ್ತನೂ ಸರ್ವನಿಯಾಮಕನೂ ಸರ್ವಾಂತರನೂ ಸರ್ವಬಾಹ್ಯನೂ
ಅಣುರೇಣುತೃಣಕಾಷ್ಠಕಣಕಣಗಳ ಸಾರಸತ್ತ್ವವಾದ
ಸಕಲ ಅಸ್ತಿತ್ವಕ್ಕೂ ಮೂಲಾಧಾರನಾದ
ಆ ಪರಬ್ರಹ್ಮ ಪರಮಾತ್ಮ ಶ್ರೀಮನ್ನಾದಿನಾರಾಯಣ ಪರಮೇಶ್ವರ ಸದಾಶಿವ ಆದಿಮಾಯಾ ಆದಿಶಕ್ತಿ ತತ್ತ್ವಕ್ಕೆ ಶರಣಾದರೆ ಮಾತ್ರ ನಮಗೆ ಆ ಪರಮರಹಸ್ಯದರಿವು...
ಅದರ ಕೃಪೆ...ಅವಳ ದಯೆ...ಅವನ ಅನುಗ್ರಹ....
ಅದಿಲ್ಲದೆ ಚಿರಶಾಂತಿಯಿಲ್ಲ..ಬದುಕು ಶಾಂತಿಧಾಮವಾಗದು...
ಭಕ್ತಿಮಾತೆಯ ಉದರವೇ ಜ್ಞಾನ ವೈರಾಗ್ಯ ಸುತರಿಗೆ ಮೊದಲ ಸೋಪಾನಾಧಾರ...
ಇವು ಮೂರೂ ಒಂದನ್ನೊಂದು ಬಿಟ್ಟಗಲಲಾರವು...
ಭಕ್ತಿಯಿಲ್ಲದ ಜ್ಞಾನವು ಅಹಂಪೋಷಕ, ವೈರಾಗ್ಯವು ಶುಷ್ಕ...
ಜ್ಞಾನವಿಲ್ಲದ ಭಕ್ತಿ ಮೂಢನಂಬಿಕೆ..ವೈರಾಗ್ಯ ವ್ಯರ್ಥ...
ವೈರಾಗ್ಯವಿಲ್ಲದ ಭಕ್ತಿ ಕೇವಲ ಭುಕ್ತಿಗಾಗಿ...ಪರಿಶುದ್ಧ ನಿಷ್ಕಾಮಭಕ್ತಿಯಲ್ಲ...ಅಂತಹ ವೈರಾಗ್ಯರಹಿತ ಜ್ಞಾನವೂ ಹಾನಿಕರ...ಅಪರಿಪೂರ್ಣ...ಕೈವಲ್ಯದರ್ಶಕವಲ್ಲ..
ಹರೇ ರಾಮ...
ಹರೇ ಕೃಷ್ಣ...
_ನಾಮಜಪವು ಸಾಧನೆಗೆ ಒಂದು ಮುಖ್ಯ ಸಾಧನ..._
*ಓಂ ನಮೋ ನಾರಾಯಣಾಯ*
🙏🏻🙏🏻🙏🏻☺💐
[9/9 7:15 ಪೂರ್ವಾಹ್ನ] Shyamaprasad Mudraje: *ನಿಜ ಶರಣಾಗತ ಧೀರ..*
ತನ್ನ ಸಾಮರ್ಥ್ಯಕ್ಕನುಕೂಲವಾಗುವ ಕಾರ್ಯಂಗಳಲಿ....
ಲೋಕ ವ್ಯವಹಾರಂಗಳಲಿ....
ತನ್ನ ತಾ ಮರೆಯುತ ಧ್ಯಾನದ ತೆರದಿ ತೊಡಗಿಸಿಗೊಂಡಿರ್ದು...
ಎಲ್ಲವೂ ಭಗವದಿಚ್ಚೆಯೆಂದರಿತು......
ಯುದ್ದೋನ್ಮಾದದಂದಲಿ
ನಿಮಿತ್ತ ಮಾತ್ರನೆಂಬರಿವಿನಿಂ ತೊಡಗಿಸಿಕೊಂಡಿರ್ದು...
ಕರ್ಮ ಫಲ ಯಾವುದೇ ಆದರೂ....
ಅದು ಈಶ್ವರ ಪ್ರಸಾದವೆಂದರಿತು... ಮುನ್ನುಗ್ಗುವ ಧೀರನೇ.....
ನಿಜ ಶರಣಾಗತ ಧೀರ...
ಶ್ಯಾಮ ಪ್ರಸಾದ ಮುದ್ರಜೆ.
[9/9 7:38 ಪೂರ್ವಾಹ್ನ] krishnamoorthydr77: 🙏🏻🙏🏻🙏🏻💐☺
ತನ್ನ ಅಂತರಾತ್ಮನೇ ಆದ ಪರಮಾತ್ಮನಿಗೇ ಸದಾ ಶರಣಾಗಿ, ಆತ್ಮತೃಪ್ತಿ-ಆತ್ಮಸಾಕ್ಷಿಗನುಗುಣವಾಗಿಯೇ ಸದಾ ನಡೆದುಕೊಳ್ಳುವವನು ನಿಜಾರ್ಥದಲ್ಲಿ ಲೋಕವನ್ನೇ ಆಳುವನು!!!
ಯಾಕೆಂದರೆ, ಸದಾ ಆತ್ಮಚಿಂತಕನಾಗಿರುವವನು, ಆತ್ಮನಿಷ್ಠನಾಗಿರುವವನು, ಆತ್ಮವನ್ನು ತನ್ನ ನಿಜಸ್ವರೂಪವೆಂದು ತಿಳಿಯುತ್ತಿರುವವನು, ದೇಹ, ಇಂದ್ರಿಯಸಮೂಹಾದಿಗಳ ಮೇಲೆ ತನ್ನ ಆಧಿಪತ್ಯವನ್ನು ಹೊಂದುತ್ತಾನಾದ್ದರಿಂದ, ಆತ್ಮನಿಗ್ರಹಿ-ಆತ್ಮಸಂಯಮಿ ಎನಿಸುತ್ತಾನೆ.
ತಾನು ಆತ್ಮನೆಂದರಿತವನಿಗೆ ಆತ್ಮಭಕ್ತಿಯೂ, ಆತ್ಮಜ್ಞಾನವೂ, ಅನಾತ್ಮವೈರಾಗ್ಯವೂ, ಆತ್ಮನ ಕುರಿತಾದ ವಿಶೇಷವಾದ ರಾಗವೂ ಉಂಟಾಗುವುದು.
ಈ ಮೂಲಕ ಆತನು ಯಾವುದೇ ಭೌತಿಕ ಆಸೆ ಆಮಿಷಗಳಿಗೆ ಬಲಿಯಾಗನು, ದಾಸನಾಗನು..ಆದ್ದರಿಂದ ಭೌತಿಕ ಜಗದ ಈಶನಾಗುವನು!!!
ಅವನು ತಪ್ಪುದಾರಿ ಹಿಡಿಯದ್ದರಿಂದ ಯಾರಿಗೂ ಯಾವುದಕ್ಕೂ ಅಂಜದೆ, ಧೀರನೂ ಆಗುವನು...
ಹೀಗೆ ಆತ್ಮ-ಪರಮಾತ್ಮ ಶರಣಾಗತನು ನಿಜಾರ್ಥದಲ್ಲಿ ಬೇರಾರಿಗೂ ಶರಣಾಗದೆ, ಲೋಕಾಧಿವೀರನೆನಿಸುವನು...ಎಲ್ಲರಿಗೂ ಶರಣ್ಯ (ಶರಣುಹೊಂದಲು ಯೋಗ್ಯ) ನೆನಿಸುವನು!!!
🙏🏻🙏🏻🙏🏻☺💐
*...ಸಂಸಾರ ಸಾರ...*
ದೇಹ ಪ್ರಾಣ ಮನೋ ಬುದ್ದಿ ಅಹಂ ಚಿತ್ತಗಳ ಸಾರಭೂತ ಸಮೂಹಗಳ ಸಮ್ಯಕ್ ಅಸ್ತಿತ್ವವೇ ಸಂಸಾರ ಕ್ಷೀರ ಸಾಗರ....
ಈ ಸಮೂಹಗಳ ಆಯಾಯ ಆಯಾಮಗಳಿಗನುಕೂಲವಾಗುವ ಆಹಾರ ಒದಗಿಸದೇ.....
ವಿಷಯಾಸಕ್ತಿಯಲೇ ಕಳೆದು ಹೋದರೆ ಸಂಸಾರ ವಿಷ ವೃಕ್ಷ.....
ದೇವನದು ದೇವನಿಗೆ... ಭೂತದ್ದು ಭೂತಕ್ಕೆ ಎಂಬ ಚಿಂತನೆಯಿದ್ದು.....
ದೇಹವನ್ನಮಯವದಕೆ ಸಾತ್ವಿಕಾಹಾರ.....
ಜೀವ ಪ್ರಾಣಮಯವದಕೆ ಪ್ರಾಣಾಯಾಮ...
ಮನಸ್ಸು ಭಾವಮಯವದಕೆ ಭಕ್ತಿಯುಕ್ತ ಧ್ವೈತ ಭಾವ.....
ಬುದ್ದಿ ವಿಶೇಷ ಜ್ಞಾನಮಯವದಕೆ ಧ್ವೈತಾಧ್ವೈತ ನಿತ್ಯಾನಿತ್ಯ ವಿವೇಕ ವಿಚಾರ...
ಅಹಂಗೆ ಅಖಂಡವಧ್ವೈತದಾಸರೆಇಂ ನಿಜನಾನಾರೆಂಬುದನರಿತು ತನ್ನ ತಾ ಕಳೆದುಕೊಂಬಾಸೆ.... ಅದರಿಂ.. ಅಹಂ ನಾಶ...
ಚಿತ್ತದಲಾಗಲೇ ಹೊಳೆಯುಪುದು.... ಎಲ್ಲಾ ಧೈವೀ ಲೀಲಾವಿನೋದವೆಂಬ ನಿಶ್ಚಿಲ ತತ್ವ...ಅದರಿಂ.. ಕರ್ಮಫಲ ಲೇಪವಿಲ್ಲದ ನಿರ್ಮಲ ಚಿತ್ತ...
ಆಗಲೇ ಅಲ್ಲೇ... ಆತ್ಮನಿಗೆ ಬೇಕಾದ ರಸ- ರಸೋ ವೈ ಸಹಃ...
ನಾನೇ ಜೀವ ಮತ್ತು ಜೀವ ರಸ ಎಂಬ ಉನ್ನತಾನಂದ ಸ್ಥಿತಿ...
ಇದೇ ಸಂಸಾರ ಕ್ಷೀರ ಸಾಗರ....
ಅಲ್ಲೇ ಧೈವೀ ದರ್ಶನ....
ಜಾಗ್ರತೆ : ಕ್ಷೀರಕ್ಕೆ ಒಂದು ಹನಿ ಹುಳಿ ಹಿಂಡಿದರೂ ಅದು ಕ್ಷೀರವಾಗುಳಿಯದು
ಶ್ಯಾಮ ಪ್ರಸಾದ ಮುದ್ರಜೆ.
🙏🏻🙏🏻🙏🏻☺💐👍🏻
ಸಂಸಾರ ಸಾಗರವೇ ಕ್ಷೀರಸಾಗರ...
ಹೃದಯಾಕಾಶವೇ ಹೃದಯಸಮುದ್ರ...
ಅದೇ ಕ್ಷೀರಸಾಗರ...
ಸ್ಥೂಲದೇಹ— ಅನ್ನಮಯಕೋಶ..
ಸೂಕ್ಷ್ಮದೇಹ—ಪ್ರಾಣಮಯ, ಮನೋಮಯ, ವಿಜ್ಞಾನ(ಬುದ್ಧಿ)ಮಯಕೋಶಗಳು
ಕಾರಣದೇಹ— ಆನಂದಮಯಕೋಶ, ಅಹಂಕಾರವೃತ್ತಿ... ಪೂರ್ವ-ಪುಣ್ಯಪಾಪ-ಕರ್ಮವಾಸನಾಮಯ..ಚಿತ್ತ...ಹಿಂದಿನ ಸಂಸ್ಕಾರ...
ಅನ್ನಮಯದೇಹಕ್ಕೆ ಸಾತ್ತ್ವಿಕಾನ್ನಾಹಾರವಿರಲಿ....ಸತ್ತ್ವಶುದ್ಧಿಗಾಗಿ...ದೇಹ-ಮನಃಶುದ್ಧಿಗಾಗಿ...ಬಹಿರಂಗಶುದ್ಧಿಗಾಗಿ...
ಪ್ರಾಣಮಯದೇಹಕ್ಕೆ ಪ್ರಾಣಾಯಾಮ ಮೂಲಕ ಪ್ರಾಣಕ್ಕೊಂದು ಆಯಾಮ, ಉಸಿರಿನ ಗತಿಗೊಂದು ಹತೋಟಿ ಇರಲಿ...ದೀರ್ಘಾಯುಷ್ಯಕ್ಕಾಗಿ...ಅಂತರಂಗಶುದ್ಧಿಗಾಗಿ...
ಮನೋಮಯದೇಹಕ್ಕಾಗಿ ಭಾವಶುದ್ಧಿಯಿರಲಿ...ದೈವಭಕ್ತಿಯಿರಲಿ...ದ್ವೈತಭಕ್ತಿಯಿರಲಿ...
ಬುದ್ಧಿಮಯದೇಹಕ್ಕಾಗಿ ಸದ್ವಿಚಾರಮಂಥನವಿರಲಿ...ಸತ್ ಅಸತ್, ನಿತ್ಯ ಅನಿತ್ಯ, ಸತ್ಯ ಮಿಥ್ಯಾ, ಆತ್ಮ ಅನಾತ್ಮ ವಿವೇಚನೆಯಿರಲಿ...ಮೆದುಳಿಗೆ ಉತ್ತಮ ಆರೋಗ್ಯಕರ ಮೇವಿರಲಿ...
ಅಹಂತೆ ಮಮತೆ, ನಾನು ನನ್ನದು ಎಂಬ ಭಾವಕ್ಕೆ ಸಾತ್ತ್ವಿಕ ಪೋಷಣೆಯಿರಲಿ...ಸ್ವಾಭಿಮಾನವಿರಲಿ...ದುರಭಿಮಾನ ದುರಹಂಕಾರಗಳು ಬೇಡ...ಪ್ರಪತ್ತಿ, ಶರಣಾಗತಿಯಿರಲಿ ಪರತತ್ತ್ವಕ್ಕೆ...ವಿಶಿಷ್ಟಾದ್ವೈತ...
ಕೊನೆಗೆ....ಈ ಸಮಸ್ತ ಭವಸಾಗರವನ್ನು ದಾಟಿ ಹೃದಯಸಮುದ್ರವಾದ ಕ್ಷೀರಸಾಗರದೆಡೆಗೆ ಬಹಿರ್ಮುಖತೆಯಿಂದ ಅಂತರ್ಮುಖರಾಗೋಣ...
ಕೊನೆಗೆ ಸರ್ವಸಾಕ್ಷೀ ಶುದ್ಧಾದ್ವೈತ ಆತ್ಮಭಾವವನ್ನು ತಾಳಿ, ಅಂತರ್ಬಹಿರಂಗಗಳಲ್ಲಿ ಎರಡರಲ್ಲೂ ಬ್ರಹ್ಮಾತ್ಮಭಾವ ಬರಲಿ...
*_ಸರ್ವಂ ಖಲು ಇದಂ ಬ್ರಹ್ಮ_*
_ಇದೆಲ್ಲವೂ ಬ್ರಹ್ಮವಷ್ಟೆ?_
ಸಂಸಾರವೆಂಬ ಕ್ಷೀರಸಾಗರಕ್ಕೆ ಒಂದು ಹನಿಯೂ ಹುಳಿಹಿಂಡಬಾರದು..ಆದರೆ ಅಗತ್ಯವಿದ್ದರೆ ತುಸು ನೀರು ಸೇರಿಸಿ ಸರಿದೂಗಿಸಬಹುದು!!! ಅಲ್ಲವೆ?
🙏🏻🙏🏻🙏🏻💐☺
[12/9 7:43 ಪೂರ್ವಾಹ್ನ] Shyamaprasad Mudraje: *ಧರ್ಮಾಧರ್ಮ ವಿವೇಕ* ಸತ್ದರ್ಮ ನೈತಿಕತೆಯ ಪರಿಧಿಯೊಳ್.... ಈಶಾವಾಸ್ಯಮಿದಗ್ಂ ಸರ್ವಂ... ಹಾಗೂ ಸರ್ವಂ ಬ್ರಹ್ಮಮಯಂ... ಎಂಬ ಪರಿಜ್ಞಾನದೊಳ್... ಅನುಭವಿಪ ಹೆಣ್ಣು ಹೊನ್ನು ಮಣ್ಣುಗಳ ಋಣ ಕಾಮಗಳೆಲ್ಲ.... ಧೈವೀ ಲೀಲೆಯೆಂದು ಹಿತಮಿತವಾಗಿ..... ತೊಡಗಿಕೊಂಬುದು ಸತ್ಕಾಮ ಹಾಗೂ ಧೈವೀ ಪಥ..... ಅಧರ್ಮದಿಂ... ಅತಿಕಾಮಿಯಾಗಿ.... ಪರ ಸ್ತ್ರೀ ಸಿರಿ ಗಿರಿ ಮಧ ಮದಿರೆಗಳಲಿ ತೊಡಗಿಸಿಕೊಂಬ ಲೋಕ ಕಂಟಕ ಪಥವೇ ರಾಕ್ಷಸ ಪಥ.... ಬುದ್ದಿ ಮನಕೆ ನಿರಂತರ ಗುರುವಾಗಿ.... ಮನವು ಬುದ್ದಿಯ ದಾಸನಾಗಿರೆ..... ಜೀವನವೇ ಜಾತ್ರೆ... ಶ್ಯಾಮ ಪ್ರಸಾದ ಮುದ್ರಜೆ [12/9 4:40 ಅಪರಾಹ್ನ] Dr. Krishna Moorthy D.: 👍🏻👌🏻🙏🏻☺💐 *ಧರ್ಮಾವಿರುದ್ಧಃ ಕಾಮೋಸ್ಮಿ* (ಗೀತಾಚಾರ್ಯೋಪದೇಶ) ಭಗವಂತನು ಧರ್ಮಕ್ಕೆ ಅವಿರೋಧವಾದ, ಧರ್ಮಸಮ್ಮತವಾದ, ನ್ಯಾಯಬದ್ಧವಾದ ಕಾಮನೆಗಳ ರೂಪವಾಗಿದ್ದಾನೆಯೇ ಹೊರತು ಅಧರ್ಮ ಅನ್ಯಾಯದ ಕಾಮಗಳನ್ನು ಬೆಂಬಲಿಸಲಾರನು... ಧರ್ಮವು ದೈವೀಸಂಪದವು.. ಅಧರ್ಮವು ಆಸುರೀಸಂಪದವು... ಧರ್ಮಬದ್ಧ ಅರ್ಥ-ಕಾಮಗಳೇ ಮೋಕ್ಷಗಾಮಿಗಳು... ದಯವೇ ಧರ್ಮದ ಮೂಲವಯ್ಯ... _ಧಾರಣಾದ್ ಧರ್ಮಮ್ ಇತ್ಯಾಹುಃ_ _ಧರ್ಮೋ ಧಾರಯತೇ ಪ್ರಜಾಃ_ ಲೋಕವೆಲ್ಲವ ಧರಿಸಿ ಆಧಾರವಾಗಿಹುದೇ ಧರ್ಮವು... ಲೋಕಮಾರಕವೇ ಆಸುರೀ..ಅಧರ್ಮ... ಲೋಕಹಿತದ ಕಾಯಕ ಲೋಕಕಭಯದಾಯಕ ವ್ಯಕ್ತಿ ವ್ಯಕ್ತಿಯಾಗಲಿಂದು ನೈಜಲೋಕಸೇವಕ ಧರ್ಮ ಸತ್ಯ ಸೇವಕ... _ಸೇವಾ ಹಿ ಪರಮೋ ಧರ್ಮಃ_ _ಧರ್ಮಸ್ಯ ಸೂಕ್ಷ್ಮಂ ನಿಹಿತಂ ಗುಹಾಯಾಮ್_ ಆತ್ಮಸಾಕ್ಷಿಗನುಗುಣವಾದ ಕರ್ಮವೇ ಧರ್ಮ... _ತನ್ನಂತೆ ಪರರ ಬಗೆದಡೆ ಕೈಲಾಸ ಬಿನ್ನಾಣವಕ್ಕು ಸರ್ವಜ್ಞ_ *ನಿಂದಂತು ನೀತಿನಿಪುಣಾಃ ಯದಿ ವಾ ಸ್ತುವಂತು* *ಲಕ್ಷ್ಮೀಃ ಸಮಾವಿಶತು ಗಚ್ಛತು ವಾ ಯಥೇಷ್ಟಮ್ |* *ಅದ್ಯೈವ ವಾ ಮರಣಮಸ್ತು ಯುಗಾಂತರೇ ವಾ* *ನ್ಯಾಯ್ಯಾತ್ ಪಥಃ ಪ್ರವಿಚಲಂತಿ ಪದಂ ನ ಧೀರಾಃ ||* _ನೀತಿಕೋವಿದರು ನಿಂದಿಸಲಿ ಪೊಗಳಲಿ_ _ಸಿರಿಯು ಬಂದರೆ ಬರಲಿ ಬಿಟ್ಟಗಲಿದರು ಇರಲಿ |_ _ಇಂದೇ ಸಾಯಲಿ ಇಲ್ಲ ಎಂದಾದರೂ ಸಾಯಲಿ_ _ಭೂಮಿ ಬಿರಿಯಲಿ ಗಗನ ಬೀಳಲಿ_ _ಏನಾದರಾಗಲಿ ನ್ಯಾಯಮಾರ್ಗವ ಬಿಡದ ಮನುಜರೇ ನಿಜಧೀರರು..._ 🙏🏻🙏🏻🙏🏻☺💐
ಯೋಗಾರೂಢ ಸಾಧನೆ
ದೇಹ ಪ್ರಾಣ ಮನೋಬುದ್ದಿ ಅಹಂ ಚಿತ್ತಾತ್ಮಂಗಳ ಸಮೂಹ...
ಜೊತೆಜೊತೆಯಾಗಿ ಉತ್ಸಾಹದಿಂ ದೇವಪೂಜೆಯ ತೆರದಿ...
ತೊಡಗಿಸಿಕೊಂಡಾಸನವ ಮಾಳ್ಪುದಾದರೆ....
ಅದೇ ಯೋಗಾರೂಢ ಸಾಧನೆ.....
ಇಲ್ಲದಿರದು ಬರೇ ವ್ಯಾಯಾಮ...
ಆಸನಂಗಳ ಸಹಾಯದಿಂ ದೇಹವ ಹಿತಮಿತವಾಗಿ ದಂಡಿಸಿರೆ......
ಆಗಲೇ ಸ್ರವಿಸುವುದು ಎಂಡೋರ್ಫಿನ್ ರಸಧಾತು......
ದೇಹಕೆ ನೀಡ್ವದದು ನೋವು ನಿವಾರಕ ಸಂತೃಪ್ತ ಭಾವ....
ದೇಹದಲಿ ಎಲ್ಲೆಲ್ಲಿ ಯಾವ್ಯಾವ ರೀತಿಯ ಒತ್ತಡ ವಿಶ್ರಾಂತಿಗಳು ಹೇಗೇಗೆ.... ಆಗುತಿದೆಯೆಂಬುದರ ಗಮನಿಸುತ.....
ಉಚ್ವಾಸದಲಿ ದೇಹದ ಕಣಕಣಗಳಿಗೊದಗುವ ಪ್ರಾಣ ಚೈತನ್ಯವ.... ಧೈವೀ ಚೈತನ್ಯವೆಂದೇ ಬಗೆದು.....
ನಿಶ್ವಾಸದಲಿ... ದೇಹದೊಳಗಿರ್ಪ ಕಲ್ಮಶ ರಾಕ್ಷಸೀ ಶಕ್ತಿಗಳೆಲ್ಲ ಹೊರದೂಡಲ್ಪಟ್ಟಿತೆಂದೇಭಾವಿಸುತ...
ಮನವ ತೊಡಗಿಸಿಕೊಂಡಾಂನಂದಿಸುತ ಮಾಳ್ಪುದಾದರೆ..
ಆಗಲೇ ಸ್ರವಿಸುವುದು ಸರೋಟಿನ್ ರಸಧಾತು..
ಮನಕೆ.. ನೀಡ್ವದದು ಸಂತೋಷ ಸಂತೃಪ್ತ ಭಾವಂಗಳ...
ಬುದ್ದಿಯಲಿ ಸಪ್ತ ಚಕ್ರಂಗಳಲಿ...
ನಿತ್ಯಾನಿತ್ಯ ವಿಚಾರಂಗಳ ಚಿಂತಿಸುತ....
ಕೊಂಡಾಡುತ ಮುಂದಡಿಯಿಡುವುದಾದರೆ.....
ಆಗಲೇ ಸ್ರವಿಸುವುದು ಡೊಪಮಿನ್ ರಸಧಾತು....
ಜೀವಕೆ.. ನೀಡ್ವದದು ಅಭಯಾನಂದ ಸಂತೃಪ್ತ ಭಾವಂಗಳ.....
ಆಳ ಚಿಂತನೆ ನಮ್ಮ ಅನಂತ ಸಮಾಪತ್ತಿಗೊಯ್ವದಾಗಲೇ......
ಎಲ್ಲವೂ ಆ ಅನಂತವೇ ಆಗಿದೆಯೆಂಬ ನಿಶ್ಚಲತೆಯೊದಗಿಪುದು.....
ಆಗಲೇ ಅಹಂ ನಾಶ... ಅದರಿಂ... ಚಿತ್ತಶುದ್ದಿಗೊಂಬುದು....
ಆಗಲೇ ಸ್ರವಿಸುವುದು ಓಕ್ಸಿಟೋಸಿನ್ ರಸಧಾತು...
ಜೀವಕೆ.. ನೀಡ್ವದದು ಪೂರ್ಣತೆಯ ಸಂತೃಪ್ತ ಭಾವಂಗಳ....
ಇದನೆಲ್ಲ ಗಮನಿಸುವುದು ನನ್ನದೇ ಆತ್ಮ... ಸಾಕ್ಷಿಯಾಗಿ... ಹಾಗೂ ಎಲ್ಲ ರಸಧಾತುಗಳು ಸಮತ್ವದಿಂ ಸ್ರವಿಸುವಂತೆ ಮಳ್ಪುದು ಫಲಧಾತನಾಗಿ...
ಈ ರೀತಿ ಜೊತೆಸೇರಿ ಆನಂದದಿಂ ಮಾಳ್ಪ ಸಾಧನೆಯಲೇ ಸಿದ್ದಿಪುದು... ಸಮತ್ವಂ ಯೋಗಮುಚ್ಯತೇ..... ಎಂಬ ಯೋಗಾರೂಢ ಸ್ಥಿತಿ....
ಇಲ್ಲದಿರದು ಬರೀ ವ್ಯಾಯಾಮ ಹಾಗೂ ಅದಕೆ ತಕ್ಕ ಫಲ..
ಫಲಧಾತ ನನ್ನದೇ ಸಾಕ್ಷಿ.. ನನ್ನೊಳಗೇ !!! ಇಲ್ಲೇ !!!..
ಇತರ ಲೋಕ ಕಾರ್ಯಂಗಳಲೂ ತೊಡಗಿಕೊಂಬ ಪರಿ ಇದೇ....
ಬೇರೆ ದಾರಿ ಇಲ್ಲ...
ಶ್ಯಾಮ ಪ್ರಸಾದ ಮುದ್ರಜೆ
*ಮಾರ್ನುಡಿ*
*_ಯೋಗಾರೂಢತ್ವ ಪ್ರಾಪ್ತಿಯ ಪಥ_*
ನಮ್ಮ ಈ ದೇಹ…
ಸ್ಥೂಲಶರೀರ / ತೋರುವ ಹೊರಮೈ ಹಾಗೂ ಕಣ್ಣು ಮುಂತಾದ ಬಹಿರಿಂದ್ರಿಯಗೋಲಕಗಳು ಹಾಗೂ ಕೈ ಕಾಲು ಮುಂತಾದ ಕರ್ಮೇಂದ್ರಿಯಾಂಗಗಳು / ಅನ್ನಮಯಕೋಶದ ಆವರಣ...
ನಮ್ಮ ಪ್ರಾಣ ...ಪಂಚಪ್ರಾಣಗಳು— ಪ್ರಾಣ / ಮುಖ್ಯಪ್ರಾಣ, ಅಪಾನ, ವ್ಯಾನ, ಉದಾನ ಹಾಗೂ ಸಮಾನ...ಪಂಚ ಉಪಪ್ರಾಣಗಳು— ನಾಗ, ಕೂರ್ಮ, ಕೃಕರ, ದೇವದತ್ತ ಹಾಗೂ ಧನಂಜಯ...ಇದು ಪ್ರಾಣಮಯಕೋಶದ ಆವರಣ..
*ಹೃದಿ ಪ್ರಾಣೋ ಗುದೇऽಪಾನಃ ಸಮಾನೋ ನಾಭಿಮಂಡಲೇ ( / ನಾಭಿಸಂಸ್ಥಿತಃ) |*
*ಉದಾನಃ ಕಂಠದೇಶಸ್ತು ವ್ಯಾನಃ ಸರ್ವಶರೀರಗಃ ||*
_ಹೃದಯದಲಿ ಪ್ರಾಣ ಗುದದಲ್ಲ್ಯದೇ ಅಪಾನ_
_ನಾಭಿಮಂಡಲದಲ್ಲಿ ತಾ ಸಮಾನ |_
_ಕೊರಳಲ್ಲಿ ತಾನುದಾನವಿಡಿಯ ಕಾಯದಿ ವ್ಯಾನ_
_ಇಂತಿಪ್ಪನಾ ಮುಖ್ಯಪ್ರಾಣ ಪಂಚಪ್ರಾಣ |_
_ಇವನಿರುತಿರೆ ಹರಣ ಇಲ್ಲದಿರೆ ಮರಣ_
_ಇವನ ಕರುಣಾಮೃತವೆ ಈ ಗೂಢದನಾವರಣ ||_
ನಮ್ಮ ಮನಸ್...ಮನೋಮಯಕೋಶದ ಆವರಣ..
ನಮ್ಮ ಬುದ್ಧಿ ಹಾಗೂ ಅಹಂ (ಚಿದಾಭಾಸ=ಚಿತ್ ಆಭಾಸ, ಚಿತ್ತಿನ, ಸತ್ತಿನ, ಆನಂದನ ಸಚ್ಚಿದಾನಂದಘನ ಆತ್ಮ ಪರಬ್ರಹ್ಮನ ಹೊಳೆಯುವಿಕೆ, ಪ್ರತಿಫಲನ)...ವಿಜ್ಞಾನಮಯಕೋಶದ ಆವರಣ..
ಸೂಕ್ಷ್ಮಶರೀರವೆಂದರೆ ಅಂತಃ-ಕರಣ-ಚತುಷ್ಟಯ (ಮನಸ್, ಚಿತ್ತ, ಬುದ್ಧಿ, ಅಹಂ) ಹಾಗೂ ದಶೇಂದ್ರಿಯಶಕ್ತಿಗಳು (ಕಣ್ಣು ಕಿವಿ ಮೂಗು ನಾಲಗೆ ಚರ್ಮವೆಂಬೀ ೫ ಜ್ಞಾನೇಂದ್ರಿಯಗಳು, ವಾಕ್ ಪಾಣಿ ಪಾದ ಪಾಯು ಉಪಸ್ಥವೆಂಬೀ ೫ ಕರ್ಮೇಂದ್ರಿಯಗಳು)...
ನಮ್ಮ ಚಿತ್ತವೇ ಕಾರಣಶರೀರ / ಅವಿದ್ಯೆ / ಜನ್ಮಕಾರಣ / ಪೂರ್ವಕರ್ಮಫಲಗಳ ಸಂಸ್ಕಾರಮೂಟೆ / ಆನಂದಮಯಕೋಶ...
ನಮ್ಮ ಆತ್ಮ...ಸರ್ವಮೂಲಚೈತನ್ಯ..ಚಿತ್...ಸತ್..ಆನಂದ...ಚೈತನ್ಯ / ಪ್ರಜ್ಞಾ / ಜ್ಞಾನ...ಅಸ್ತಿತ್ವ...ಪರಮಾನಂದ...ಅರಿವು...ಇರವು...ನಲಿವು...ಅಖಂಡ...ಅಚ್ಛೇದ್ಯ...ಅಜ ಅಜರ ಅಮರ ಅಮೃತ…
ದೇಹದಿಂ ಚಿತ್ತದನಕ ದೇಹೇಂದ್ರಿಯಾದಿಸಂಘಾತ ಸಮೂಹ…
ಇದು ಕಾಯೇನ ವಾಚಾ ಮನಸಾ ತ್ರಿಕರಣಪೂರ್ವಕವಾಗಿ ಭಗವತ್ಪೂಜೆಯೊಲು ಭಾವ ಭಕುತಿಗಳಿಂದ ಅಚಲ ಶ್ರದ್ಧೆ ಅವಿರತ ಅಭ್ಯಾಸಗಳಿಂದ ತನ್ನ ತಾ ಪರಿಪೂರ್ಣ ತೊಡಗಿಸಿಕೊಂಡು ಆಚರಿಪುದೇ ನಿಜಯೋಗವಪ್ಪುದೈ…
ಇದೇ ಗೀತಾಚಾರ್ಯನ ಮನದಿಂಗಿತ…
*ಆರುರುಕ್ಷೋರ್ಮುನೇರ್ಯೋಗಂ ಕರ್ಮ ಕಾರಣಮುಚ್ಯತೇ |*
*ಯೋಗಾರೂಢಸ್ಯ ತಸ್ಯೈವ ಶಮಃ ಕಾರಣಮುಚ್ಯತೇ ||*
_ಯೋಗತರುವೇರುವಡೆ ಸತ್ಕರ್ಮ ಕಾರಣವು_
_ಸತ್ಕರ್ಮಗಳಿಂದ ಚಿತ್ತಶುದ್ಧಿ |_
_ಶುದ್ಧಚಿತ್ತದಿ ಪ್ರತಿಫಲಿಸುವುದು ಚೆನ್ನಾಗಿ_
_ಆತ್ಮಜ್ಯೋತಿಯು ಸ್ವಚ್ಛಕನ್ನಡಿಯಲೆಂತೊ ||_
_ಆತನಿಗೆ ಶುದ್ಧಮನ ನಿಗ್ರಹವು ಕಾರಣವು_
_ಶಾಂತನುದ್ವಿಗ್ನಮನ ಬೇಗ ಹೊಂದುವುದು ಯೋಗ |_
_ಇಂದ್ರಿಯದ ಕಾರ್ಯಕ್ಕೆ ಮನವು ಚಲಿಸಲೆ ಬೇಕು_
_ಮನದ ನಿಗ್ರಹ ಶಮವು ಕರಣ ಬಲಹೀನ ||_
*ಯೋಗಃ ಚಿತ್ತವೃತ್ತಿನಿರೋಧಃ ||*
(ಪಾತಂಜಲ ಯೋಗಸೂತ್ರ)
ಚಿತ್ತವೃತ್ತಿಯ ನಿರೋಧವೇ ಯೋಗ
ಮನಸ್ಸಂಕಲ್ಪವಿಕಲ್ಪಗಳೇ ಚಿತ್ತದ ವೃತ್ತಿಗಳು
ಪೂರ್ವಸಂಸ್ಕಾರವೇ ಇವಕ್ಕೆ ಕಾರಣ
ಸತ್ಯಮಿಥ್ಯವಿವೇಚನೆಯೇ ಇದಕ್ಕೆ ಪರಿಹಾರ
*ಸಮತ್ವಂ ಯೋಗ ಉಚ್ಯತೇ ||*
(ಭಗವದ್ಗೀತಾ)
_ಅಸಮದಲಿ ಸಮತೆಯನು ವಿಷಮದಲಿ ಮೈತ್ರಿಯನು_
_ಅಸಮಂಜಸದಿ ಸಮನ್ವಯ ಸೂತ್ರ ನಯವ |_
_ವೆಸನಮಯ ಸಂಸಾರದಲಿ ವಿನೋದವ ಕಾಣ್ಬ_
_ರಸಿಕತೆಯೆ ಯೋಗವೆಲೊ ಮಂಕುತಿಮ್ಮ ||_
*ಯೋಗಃ ಕರ್ಮಸು ಕೌಶಲಮ್ ||*
(ಭಗವದ್ಗೀತಾ)
_ಕಾಯಕದಿ ಕುಶಲತೆಯು ಮಾಯಕಕೆ ಅರ್ಪಣೆಯು_
_ಸಾಯದಾತ್ಮನೆ ತಾನೆ ಎಲ್ಲಕಾರಣವು |_
_ಕಾಯಕದ ಕರ್ತ ತಾನಲ್ಲ ಭೋಕ್ತನುಮಲ್ಲ_
_ಕಾಯದಿರುತಲಿ ಫಲಕೆ ಯೋಗಿಯಾಗು ||_
ಯಮವು ನಿಯಮಾಸನವು ಪ್ರಾಣದಾಯಾಮವೂ
ಕರಣಪ್ರತ್ಯಾಹಾರವೇಕಧಾರಣವು |
ವಸ್ತುತನ್ಮಯತೆಯ ಧ್ಯಾನವು ಸಮಾಧಿಯೂ
ಪಾತಂಜಲಷ್ಟಾಂಗಯೋಗವನ್ನಿಪುದು ||
ದೇಹಕರಣಾದಿಗಳ ಪೂರ್ಣಸಂಯೋಗವಿರದಿರೆ
ಯೋಗವೇ ಅಲ್ಲವದು ಬರಿಯ ವ್ಯಾಯಾಮ |
ಇಂತು ಗೈದಾಸನವು ಹಿತಮಿತದಿಯತಿಯಿರದೆ
ಕಾಯಕ್ಲೇಶಗಳಿರದೆ ಕ್ರಮಕ್ರಮದಿಂದ ||
ಸ್ರವಿಸುವುದೆಂಡೋರ್ಫಿನ್ ನೋವ ಮರೆಮಾಚುವುದು
ಭಾವ ಧನಾತ್ಮಕತೆಯದು ಜನಿಪುದೀ ತೆರದಿ |
ಇದು ಸಹಜ ಪ್ರಕೃತಿಯದು ಮಾರ್ಫಿನ್ನಿನಂತಲ್ಲ
ಕೃತಕ ಡ್ರಗ್ ನಂತಲ್ಲ ಚಟವಿರದು ಇದಕೆ ||
ಉಸಿರೆಳೆಯೊ ಅನುಭವಿಸೊ ಕಣಕಣದಿ ದೈವದಾ
ಚೈತನ್ಯವೊಳಗೊಂಬೆನೆಂಬ ಪರಿಯಿಂದ |
ಉಸಿರುಬಿಡು ದೇಹದಾ ಸಕಲ ಕಲ್ಮಶರಾಶಿ
ಆಸುರೀಭಾವಗಳ ಹೊರದೆಗೆದು ತೊರೆಯೊ ||
ಮನಮುಟ್ಟಿ ಯೊಗವನು ಮಾಡಲಾ ಸೆರೊಟೊನಿನ್
ಸ್ರವಿಸಿ ಖಿನ್ನತೆ ಕಳೆದು ಸಂತೋಷವ ||
ಬುದ್ಧಿಯಿಂ ಯೋಗಚಕ್ರಗಳಲ್ಲಿ ಸದಸತ್ತು
ಚಿಂತಿಸುತ ಕೀರ್ತಿಸುತ ಮುನ್ನಡೆಯಲು |
ಡೋಪಮಿನ್ ಸ್ರವಿಸುವುದು ಕಾರ್ಯೋನ್ಮುಖೀಕರಿಸಿ
ಚಾಲನನಿಯಂತ್ರಣವ ಪ್ರೇರಣೆಯನೂ |
ಭಾವೋನ್ನತಿಯ ತಾನು ಉತ್ತೇಜನವ ತಾನು
ಬೆನ್ನುತಟ್ಟುವ ತೆರದಿ ಮೇಲ್ಮಟ್ಟದಿ ||
ಹಾಲ್ಗರೆದು ಮಾತೆಯೊಳು ಭೋರ್ಗರೆದ ಲೈಂಗಿಕದ
ಸಂತೃಪ್ತತೆಯ ಅಭಯ ಕೆಳಮಟ್ಟದಿ ||
ಆಳವಾಳಕೆ ನಮ್ಮ ಚಿಂತನೆಯ ಕರೆದೊಯ್ದು
ಅನಂತತೆಯ ಪ್ರಾಪ್ತಿಯ ಗುರಿಯ ಕಡೆಗೆ |
ಸತ್ಸಂಗ ನಿಸ್ಸಂಗ ನಿರ್ಮೋಹ ನಿಶ್ಚಲತೆ
ನೀರವದ ಹಾರ್ದಾಕಾಶನೆಲೆಯು ||
ಇದೇ ಅಹಂ ನಾಶ ಇದೇ ಅವಿದ್ಯೆ ನಾಶ
ಇದೇ ಚಿತ್ತದ ಸರ್ವಸಂಸ್ಕಾರನಾಶ |
ಇಂತು ಚಿತ್ತದ ಶುದ್ಧಿಯಿಂ ಆಕ್ಸಿಟೋಸಿನ್
ವಿಶ್ವಮಾನವತೆ ಮಾತೃತ್ವದೊಡಲ ||
ವಿಶ್ರಾಂತಭಾವ ವಿಶ್ವಾಸ ಮನಸಿನ ದೃಢತೆ
ಒತ್ತಡದ ಶಮನ ಸರ್ವರೊಳಾತ್ಮಭಾವ |
ಮಮತೆ ವಾತ್ಸಲ್ಯ ಪ್ರೀತಿಯ ಉದ್ದೀಪನೆಯ
ಪರಿಪೂರ್ಣಭಾವ ಸಂತೃಪ್ತತೆಗಳು ||
ಎಲ್ಲ ಮೇಲಿನ ಘಟನೆಗಳ ಸಾಕ್ಷಿಯಾತ್ಮವದು
ಸರ್ವರಸಧಾತುಸಮಶೀಲತೆಯ ಮೂಲ |
ಫಲದಾತ ಫಲಧಾತ ಫಲರೂಪ ಫಲಿತವದು
ಪ್ರತಿಫಲಿಸಲದೆ ಜೀವ ಚಿದ್ವಿಲಾಸ ||
ಅಂತಃಕರಣಂಗಳೆ ಕನ್ನಡಿಯದಾತ್ಮನಿಗೆ
ಹೊಳೆದು ಪ್ರತಿಫಲಿಸಿ ತಾ ದೇಹಭಾವವನು |
ಇಂತು ಸಂಯುಕ್ತದಿಂ ಯೋಗ ಸಂಯೋಗದಿಂ
ವಿಷಯವಿಯೋಗದಿಂ ನಿರ್ವಿಷಯ ಸುಖವು ||
ಇದೆ ದಾರಿಯಿದೇ ದಾರಿಯಂತರ್ಬಹಿಶ್ಚೇಷ್ಟೆಯೆಲ್ಲದಕ್ಕೂ |
ವ್ಯಾವಹಾರಿಕ ಪಾರಮಾರ್ಥಿಕ ಸಕಲಕ್ಕೂ ಮೂಲವಿದು |
"ನಾನು ಕೇವಲ ಸಾಕ್ಷಿಯೆಲ್ಲದಕ್ಕೂ"
*ನ ಅನ್ಯಃ ಪಂಥಾ ವಿದ್ಯತೇ ಅಯನಾಯ*
_ಬಿಡುಗಡೆಗೆ ಬೇರೆಯ ದಾರಿಯಿರದು_
ಡಾ. ಕೃಷ್ಣಮೂರ್ತಿ ಶಾಸ್ತ್ರೀ, ದಂಬೆ-ಪುಣಚ
*ಏನಿದಚ್ಚರಿ*
ಪುರುಷ ಪ್ರಕೃತಿಯ ಮಿಲನದಾನಂದದಲಿ...
ದ್ವೈತವಂತು ಅದ್ವೈತವೆಂತು......
ಪುರುಷನೇ ಪ್ರಕೃತಿ.... ಪ್ರಕೃತಿಯೇ ಪುರುಷ.....
ಆ ಮಹಾಪುರುಷ ಮಿಲನದ ಅನುಭವದ ಹಪಹಪಿ ಪ್ರಕೃತಿ ಸಹಜ.....
ಅಲ್ಲದೊಡದೇ ವಿಕೃತಿ....
ಎಲ್ಲ ಸ್ಥಳ ಕಾಲಗಳಲ್ಲೂ ಆ ಪುರುಷನ ಕೈವಾಡವ ಕಂಡು....
ಅಚ್ಚರಿಗೊಂಬ ಮನ ನನ್ನದಾದೊಡೆ....
ನಾನದರೊಂದಿಗೇ.. ಮಿಲನವಾದಂತೆ....
ಮನಪ್ರಶಮನಕ್ಕಿರುವ ಸುಲಭ ಯೋಗ ಮಾರ್ಗ ಇದೊಂದೇ....
ಬೇರೆ ದಾರಿ ಇಲ್ಲ......
ಆಧಾರ : ೧) ಯೋಗಃ ಮನಪ್ರಶಮನೋಪಾಯಃ
೨) ಸುಲಭನೋ ಹರಿ
ಶ್ಯಾಮ ಪ್ರಸಾದ ಮುದ್ರಜೆ
*ಸೃಷ್ಟಿಯ ಅಚ್ಚರಿ*
ಪುರುಷ ಆತ್ಮ ಸ್ತ್ರೀ ಪ್ರಕೃತಿ
ಪುರುಷ ಬ್ರಹ್ಮ ಸ್ತ್ರೀ ಮಾಯೆ
ಪುರುಷ ಜಡ ಸ್ತ್ರೀ ಶಕ್ತಿ
ಪುರುಷ ಅಚಲ ಸ್ತ್ರೀ ಚಂಚಲ
ಪುರುಷ ದೇಹ ಸ್ತ್ರೀ ಚೈತನ್ಯ
ಪುರುಷ ರಕ್ಷಾಕವಚ ಸ್ತ್ರೀ ಅಂತರ್ಜ್ಯೋತಿ
ಪುರುಷ ಕಾರ್ಯ ಸ್ತ್ರೀ ಕಾರಣ
ಪುರುಷ ಸಾಧಕ ಸ್ತ್ರೀ ಪ್ರೇರಕ
ಪುರುಷ ರಾಜ ಸ್ತ್ರೀ ಮಂತ್ರಿ
ಪುರುಷ ಅವ್ಯಕ್ತ ಪ್ರಕೃತಿ ವ್ಯಕ್ತ
ಪುರುಷ ಕಾರಣತತ್ತ್ವ ಪ್ರಕೃತಿ ಕಾರ್ಯತತ್ತ್ವ
ಪುರುಷನೇ ಪ್ರಕೃತಿಯಾಗಿ ತೋರ್ಪ
ಪ್ರಕೃತಿಯೇ ಅವ್ಯಕ್ತಪುರುಷನ ವ್ಯಕ್ತರೂಪ
ಹಾಗಾಗಿ ಪ್ರಕೃತಿಯೂ ಮೂಲದಲ್ಲಿ ತಾತ್ತ್ವಿಕವಾಗಿ ಪುರುಷನೇ!
ಒಂದು ಅಸ್ತಿತ್ವ ಮತ್ತೊಂದು ತೋರಿಕೆ
ಒಂದು ಮೂಲಸ್ವರೂಪ ಮತ್ತೊಂದು ಬೆಡಗು, ಬಿನ್ನಾಣ, ಮಾಯೆ
ಒಂದು ಶಾಶ್ವತ ಮತ್ತೊಂದು ಪರಿವರ್ತನಶೀಲ
ಒಂದು ತೋರದ ರಹಸ್ಯ ಮತ್ತೊಂದು ತೋರಿದರೂ ರಹಸ್ಯ
ಎಲ್ಲವೂ ತನ್ನದಾಗಬೇಕೆಂಬ ಭಾವವೇ ವಿಶ್ವಾತ್ಮಭಾವದ ಬೀಜ
ಲೌಕಿಕದ ಪ್ರಾಪ್ತಿಗಳು ಇದನೀಡೇರಿಸಲಾರವು
ಆದರಿದನರಿಯುವುದು ಕೇವಲ ಬೆರಳೆಣಿಕೆ ಮಂದಿ ಮಾತ್ರ…
ಪಾರಮಾರ್ಥಿಕ ಸರ್ವಾತ್ಮತ್ವವೇ ಇದಕ್ಕೆ ಸೂಕ್ತ ಪರಿಹಾರ
ಆದರೂ ಲೋಕವೀ ಪ್ರಕೃತಿಸಹಜದ ನಿಜವ
ಅರಿಯದಿರುವುದು ನಿಜಕು ವಿಚಿತ್ರವಾದರು ಸತ್ಯ!!!
ಇಂಥ ಅದ್ವಯ ಪರಮಪುರುಷನೇ ಸರ್ವಾಂತರ್ಯಾಮಿಯೇ ಪ್ರಕೃತಿಯೊಳಗಿಹನೇ
ತೋರುವ ಈ ಬಹುತೆರದ ವೈವಿಧ್ಯ ಆಶ್ಚರ್ಯವಲ್ತೆ!!!
*ಆಶ್ಚರ್ಯವತ್ ಪಶ್ಯತಿ ಕಶ್ಚಿದೇನಮ್*
*ಆಶ್ಚರ್ಯವದ್ ವದತಿ ತಥೈವ ಚ ಅನ್ಯಃ |*
*ಆಶ್ಚರ್ಯವತ್ ಚ ಏನಮ್ ಅನ್ಯಃ ಶ್ರುಣೋತಿ*
*ಶ್ರುತ್ವಾ ಅಪಿ ಏನಂ ವೇದ ನ ಚ ಏವ ಕಶ್ಚಿತ್ ||*
_*(ಭಗವದ್ಗೀತಾ)_*
_ಯಾವಾನೊಬ್ಬನು ಈ ಪುರುಷನನ್ನು ಆಶ್ಚರ್ಯವೆಂಬಂತೆ ನೋಡುತ್ತಾನೆ...ಮತ್ತೊಬ್ಬ ಆಶ್ಚರ್ಯವೆನ್ನುತ್ತಾನೆ..ಇನ್ನೊಬ್ಬ ಆಶ್ಚರ್ಯದಿಂದ ಕೇಳುತ್ತಾನೆ...ಆದರೂ ಇವರಾರೂ ಕೂಡ ಈತನನ್ನು ಯಥಾರ್ಥವಾಗಿ ಅರಿಯುವುದಿಲ್ಲ..._
*ಆದರೆ ಈ ಅಚ್ಚರಿಯ ಕುರಿತಾದ ನಿರಂತರ ಚಿಂತನೆಗೆ ನಮ್ಮ ಮನವು ಅಂತರ್ಮುಖವಾಗಿ ತೊಡಗಿದರೆ ಅದೇ ತಾನಾಗಿ ತಪಸ್ಸಿದ್ಧಿಯಂತೆ ಆ ಪರತತ್ತ್ವದಚ್ಚರಿಯ ತೋರುವುದು.*
*_ಯೋಗೋ ಮನಃಪ್ರಶಮನೋಪಾಯಃ_*
(ಯೋಗವಾಸಿಷ್ಠ)
_ಯೋಗವೇ ಮನವ ಅಂತರ್ಮುಖಗೊಳಿಸುವ, ಪ್ರ-ಶಮನಗೊಳಿಸುವ, ಶಾಂತಗೊಳಿಸುವ, ನಿಯಂತ್ರಿಸುವ ಪರಮೈಕಸಾಧನವು ನೋಡಾ… (ಅದ್ವೈತ)_
_ಸದಾ ಮನದಲಿ ಭಗವನ್ನಾಮವ ಸ್ಮರಿಸುತಲೆ ಭವಸಾಗರವ ದಾಟು ಎಲೆ ಜೀವ (ದ್ವೈತ)_
_ಸರ್ವಧರ್ಮಗಳ ಬಿಟ್ಟು ನನ್ನನ್ನೇ ಶರಣಾಗೆಂದಿಹನು ಶ್ರೀಕೃಷ್ಣ (ವಿಶಿಷ್ಟಾದ್ವೈತ)_
ಡಾ. ಕೃಷ್ಣಮೂರ್ತಿ ಶಾಸ್ತ್ರೀ, ದಂಬೆ-ಪುಣಚ...
✅🙏🙏
ದೇಹ ಜೀವಗಳೆಲ್ಲ ಪ್ರಕೃತಿ
ಇವುಗಳ ಅಧಿಷ್ಟಾನ ಪುರುಷ.
ದೇಹ ಜೀವಗಳ ಅಧಿನಾಯಕನೇ ಸಾಕ್ಷಿಯಾಗಿರತಕ್ಕ ಪುರುಷ ಆತ್ಮ ....
ಕಾಲಾತೀತನಾಗಿಹ ಆತ್ಮ ಏಕನಾಗಿಯೇ ಇದ್ದ. ಏಕಾಂಗಿತನ ಏಕಾಗಿ?!... ಅನೇಕನಾಗುವುದು ಆ ಮೇಲೆ ಪುನಃ ಏಕನಾಗುವುದು... ಹೀಗೇ ಲೀಲಾವಿನೋದದಲ್ಲಿರುವ.... ಲಾಭವೂ ಇಲ್ಲ ನಷ್ಟವೂ ಇಲ್ಲ.... ಹೀಗೆ ಸಮಯ ಕಳೆಯೋಣ. ಮತ್ತಿನ್ನೇನು. ಎಂದು ಆಲೋಚಿಸಿದ. ಸಮಯ ಕಳೆಯಲು ಮಕ್ಕಳು ಸಮುದ್ರ ತಟದಲ್ಲಿ ಮರುಳಿನ ಮನೆ ಮಾಡುವ ರೀತಿಯಲ್ಲೇ... ಆತ್ಮ ಈ ಸೃಷ್ಟಿ ಮಾಡಿದ. ಸೃಷ್ಟಿಸಲು ಬೇಕಾದ ವಸ್ತುಗಳ ಎಲ್ಲಿಂದ ತರುವುದು!! ಅವನೇ(ಳೇ) ಎಲ್ಲೆಲ್ಲಾ ಓತಪ್ರೋತವಾಗಿ.ಅವನಿಲ್ಲದ ಜಾಗವೇ ಇಲ್ಲ. ಹಾಗಾಗಿ ಅವನು ಅವನ ಒಂದಂಶವನ್ನೇ ಉಪಯೋಗಿಸಿ ಈ ಮರುಳ ಲೋಕವ ಸೃಷ್ಟಿಸುವನು. ಅದಕ್ಕೆ ಚಲನ ಶಕ್ತಿ ಬೇಕೆಂದು ಅದಕ್ಕೆ ಚೈತನ್ಯವ ತುಂಬಿದ. ಎಲ್ಲಾ ಶಕ್ತಿಯೂ ಅವನದೇ ಅದ್ದರಿಂದ ಅವನ ಶಕ್ತಿಯ ಒಂದು ಭಾಗವನ್ನೇ ಸೃಷ್ಟಿಗೆ ತುಂಬಿಸಿದ. ಹಾಗಾಗಿ *(ಪ್ರಕೃತಿ)* ಸೃಷ್ಟಿ, *(ಪುರುಷ)* ಸೃಷ್ಟಿಯ ಕರ್ತ, ಪಾಲಕ, ನಾಶಕ ಎಲ್ಲವೂ ಅವನೊಬ್ಬನೇ...
ಅವನಿಲ್ಲದಿರುವುದಾವುದೂ ಇರದು ಈ ಲೋಕದಲಿ ....( ಈಶಾವಸ್ಯಮಿದಗ್ಂ ಸರ್ವಂ.. ಯತ್ಕಿಂಚ ಜಗತ್ಯಾಂ ಜಗತ್)
ಈಗ ಪ್ರಕೃತಿಗೆ - 'ನಾನೇ ಪುರುಷ'- ಎಂಬ ಜ್ಞಾನ ಯಾವುದೇ ಸಾಧನೆಗಳಿಲ್ಲದೇ ಗೊತ್ತಾದರೆ ಪುರುಷನ ಲೀಲಾ ವಿನೋದ ನಡೆಯುವುದಿಲ್ಲ. ಎಲ್ಲರೂ ಸುಮ್ಮನಾಗುವರು. ಆದ್ದರಿಂದ ಪುರುಷ ಪ್ರಕೃತಿಗೆ ಮಾಯಾ ಕವಚ ತೊಡಿಸಿದ.ಈಗ ಪ್ರಕೃತಿ ನಾನೇನೂ ಅಲ್ಲ... ನಾನೇನೋ ಕಳಕೊಂಡೆ ನಾನೇನೋ ಮಹತ್ತರವಾದದ್ದನ್ನ ಸಾಧಿಸಲಿಕ್ಕಿದೆ ಎಂದು ಸಂತೃಪ್ತಿ ಕಳಕೊಂಡು ಒದ್ದಾಟ ಗುದ್ದಾಟಗಳಲೇ ಕಳೆದು ಹೋಗುತ್ತಾನೆ(ಳೆ). ಮೊದಮೊದಲು ಲೌಕಿಕದ ಸುಖವೇ ಪರಮಸುಖವೆಂದು ಹೆಣ್ಣು ಹೊನ್ನು ಮಣ್ಣುಗಳಲೇ ಕಳೆದು ಹೋಗುವನು. ಹೊಟ್ಟೆ ತುಂಬಿದ ನಂತರದ ಊಟ ವಾಕರಿಕೆ,ವಾಂತಿಗೆ ದಾರಿ ಹೇಗೋ ಹಾಗೆ..
ಕೊನೆಗೆ ಆಯಾಸಗೊಂಡು- ಇದಲ್ಲ.. ಇದಲ್ಲ (ನೇತಿ ನೇತಿ) ಜೀವನ. ಜೀವನದ ಗುರಿ ಏನು ಎಂಬುದರ ಚಿಂತಿಸಳೆಳಸುವನು.
ಆಗ ಆ ಪರಬ್ರಹ್ಮವೇ ಗುರುವಾಗಿ ಬಂದು... ನೀನೇ ನಾನೆಂಬ ಜ್ಞಾನ ದಾರೆ ಎರೆದು ಮುನ್ನಡೆಸುವುದು...ಪರಂಧಾಮಗೈವದು. ಆಗ ಪ್ರಕೃತಿಯೇ ಪುರುಷ.... ಪುರುಷನೇ ಪ್ರಕೃತಿ... ಎಂಬ ನಿಶ್ಚಲ ತತ್ವ...
ನಿಶ್ಚಲ ತತ್ವೇ ಜೀವನ್ ಮುಕ್ತಿಃ...
ಶ್ಯಾಮ ಪ್ರಸಾದ ಮುದ್ರಜೆ.
*ಅನುಭಾವ*
ಜೀವ ಜಗತ್ತು ಈಶ್ವರರಲ್ಲಿ ಭೇದವಿಲ್ಲ...
ಸರ್ವಂ ಬ್ರಹ್ಮಮಯಂ
ಎಂದಾದರೆ......
ಸಾಧನೆಯಿಂದ ಸಾಧ್ಯಗೊಳಿಸಲಿರುವ ತತ್ವ ಯಾವುದಯ್ಯಾ?!!.
ಸತ್ಯವೇನೆಂದರಿತರೂ...
ಅನುಭವಿಪಲರಿಯೆ....
ಆದ್ದರಿಂದ.. ಸಾಧನಾ ಮಾರ್ಗ...
ಕೊನೆಗೆ ಅನುಭವ ಸತ್ಯ...
ಆಗಲೇ ನಿಜ ಸ್ಥತಿಯ ಪ್ರಜ್ಞೆ...
ಬುದ್ದಿಯ ಸಮಾಧಿತ್ವ...
ಅದೇ ಅನುಭಾವ....
ಶಬರಿಯ ತೆರದಿ ತಾಳ್ಮೆಯ ಕಾಯುವಿಕೆಯೊಂದೇ ದಾರಿ......
ಸರ್ವತ್ರ ರಾಮನೇ ಎಂಬಾನುಭವ ಸತ್ಯ ಹೊಂದಲು... ಅನುಭಾವಿಯಾಗಲು....
ಬೇರೆ ದಾರಿ ಇಲ್ಲ....
ಶ್ಯಾಮ ಪ್ರಸಾದ ಮುದ್ರಜೆ.
*ಅನುಭವ / ಅನುಭೂತಿ —ಅನುಭಾವ*
_"ಅನುಭವಃ ಸ್ಮೃತಿ-ಭಿನ್ನ-ಜ್ಞಾನಮ್"_
ಹಿಂದಿನ ನೆನಪಿಗಿಂತ ಬೇರೆಯ ಹೊಸ ತಿಳುವಳಿಕೆಯೇ *ಅನುಭವ / ಅನುಭೂತಿ.*
_"ಅನುಭವೋ ಧಾರಾವಾಹಿ-ಜ್ಞಾನಮ್ "_
ಯಾವುದೇ ವಸ್ತು-ವಿಚಾರವಾಗಿ ಧಾರಾಕಾರವಾಗಿ ಎಡೆಬಿಡದೆ ನಿರ್-ಅಂತರವಾಗಿ ಸಂತತವಾಗಿ ಪ್ರವಹಿಸುವ ಜ್ಞಾನವೇ *ಅನುಭವ / ಅನುಭೂತಿ.*
ಅನುಭವಕ್ಕಿನ್ನೊಂದು ಹೆಸರೇ *ಉಪಲಂಭ.*
_"ಉಪ ಸಮೀಪೇ ಲಂಭಃ ಲಾಭಃ ಪ್ರಾಪ್ತಿಃ ಇತಿ ಉಪಲಂಭಃ"_
ಬಯಸಿದ್ದನ್ನು ಹತ್ತಿರದಿಂದ ಪಡೆದುಕೊಳ್ಳುವುದು, ಸಮೀಪಜ್ಞಾನ, ನಿರ್ದಿಷ್ಟ ಅರಿವು, ಕರಾರುವಕ್ಕಾದ ತಿಳಿವು, "first hand knowledge"— ಉಪಲಂಭ.
ಅನುಭೂತಿಯಲ್ಲಿ ೪ ವಿಧ— ಪ್ರತ್ಯಕ್ಷ , ಅನುಮಿತಿ, ಉಪಮಿತಿ ಹಾಗೂ ಶಾಬ್ದಬೋಧ.
ಪ್ರತ್ಯಕ್ಷವೆಂದರೆ ಇಂದ್ರಿಯಗಳಿಂದ ಗ್ರಹಿಸಲ್ಪಡುವಂಥದ್ದು.
ಅನುಮಿತಿಯೆಂದರೆ ವ್ಯಾಪ್ತಿಜ್ಞಾನ.
ಉಪಮಿತಿಯೆಂದರೆ ಸಾದೃಶ್ಯಜ್ಞಾನ / ಉಪಮೆ / ತುಲನಾತ್ಮಕ ಅರಿವು.
ಶಾಬ್ದಬೋಧವೆಂದರೆ ಪದದ ಅರ್ಥಜ್ಞಾನದಿಂದಾದ ತಿಳಿವು.
*ಅನುಭಾವ* ವೆಂದರೆ _"ಅನುಭಾವಯತಿ ಬೋಧಯತಿ ಅನೇನ ಇತಿ"_— ಅರಿವನ್ನನುಸರಿಸಿ ಅದರಲ್ಲೇ ನಿಷ್ಠನಾಗಿರುವುದು..ಅಂತಹ ಪ್ರಭಾವ, ಪ್ರಕೃಷ್ಟವೂ ಉತ್ಕೃಷ್ಠವೂ ಆದ ಭಾವ..ಸಜ್ಜನರ ನಿಶ್ಚಯಾತ್ಮಕ ಅಚಲ ಧರ್ಮಬುದ್ಧಿ..
ಜೀವ ಜಗತ್ ಈಶ್ವರ— ಎಲ್ಲವೂ ಒಂದೇ ಆದರೆ,
ಎಲ್ಲವೂ ಬ್ರಹ್ಮವೇ ಆದರೆ,
ಸಾಧಿಸಬೇಕಾದ ಸಾಧ್ಯ ಯಾವುದು?
ಸಾಧಿಸುವ ಕರ್ತೃ ಸಾಧಕ ಯಾರು?
ಸಾಧನಮಾರ್ಗವಾವುದು?
ಸಾಧಿಸಬೇಕಾದದ್ದಾದರೂ ಏನುಳಿದಿದೆ?
*ಜಾನಾಮಿ ಧರ್ಮಂ ನ ಚ ಮೇ ಪ್ರವೃತ್ತಿಃ*
*ಜಾನಾಮ್ಯಧರ್ಮಂ ನ ಚ ಮೇ ನಿವೃತ್ತಿಃ*
_(ಮಹಾಭಾರತದಲ್ಲಿ ದುರ್ಯೋಧನನ ಮಾತು)_
ಧರ್ಮವೇನೆಂಬುದ ಅರಿತಿರುವೆ ನಾನು
ಆದರೂ ಮಾಡಲಾರೆ...
ಅಧರ್ಮವೆಂಬುದೇನೆಂದು ತಿಳಿದಿಹೆನು ತಾನು
ಆದರೂ ಬಿಡಲಾರೆನು…
ಜ್ಞಾನವಿರ್ದೊಡೆ ಸಾಕೆ
ಅನುಭವವು ಬೇಕೆ?
ಜ್ಞಾನವನು ಅನುಭವಕೆ ತರಲಿಹುದು ಸಾಧನೆಯು..
ಸತ್ಯದರಿವಿನ ಅನುಭವವೆ ಚರಮಾಂಕ…
ಬರಿದೆ ಸತ್ಯದರಿವಿಗಿಂತ ಅನುಭೂತಸತ್ಯವೆ ಮೇಲು…
ಅನುಭವವೆ ಅನವರತ ಸುಸ್ಥಿರವೆ ಆಗಿರಲು
ಅನುಭಾವಿಯಪ್ಪನೈ ಹುಲುಮಾನವ!!!
ಕರಣಗಳು ಮನದೊಳಗೆ
ಮನವು ತಾ ಮತಿಯೊಳಗೆ
ಮತಿ ತಾ ಚೈತನ್ಯದೊಳಗೆ
ಸಂಲಗ್ನವಾಗಿರಲು ಅದುವೇ ಸಮಾಧಿ
ತದ್ ಬುದ್ಧಿ ಸ್ಥಿರತೆಯ ಸಮಾಧಿಯೇ ಅನುಭಾವ
ಶ್ರವಣ, ಮನನ, ಧ್ಯಾನ
ಅನುದಿನವು ಸಾಧನವು
ಸರ್ವತ್ರ ಸಚ್ಚಿದಾನಂದಾನುಭೂತಿಯ
ಸರ್ವದಾ ಸುಸ್ಥಿತಿಯು ಆಗುವನಕವು ಕಾಯೋ
ರಾಮಗಾಗಿ ಕಾದ ಶಬರಿಯೊಲು ಜೀವ!!!
*_ಕಾಯುವಿಕೆಗಿಂತನ್ಯ ತಪವು ಇಲ್ಲ*_
*ಸ್ವಲ್ಪಮಪ್ಯಸ್ಯ ಧರ್ಮಸ್ಯ ತ್ರಾಯತೇ ಮಹತೋ ಭಯಾತ್*
_ಧರ್ಮವನು ಅಲ್ಪವಾದರೂ ಚರಿಸಿದರೆ ದೊಡ್ಡ ಸಂಕಟದಿಂದ ನಾವು ಪಾರು_
(ಗೀತಾಚಾರ್ಯ)
*ನ ಹಿ ಕಲ್ಯಾಣಕೃತ್ ಕಶ್ಚಿತ್ ದುರ್ಗತಿಂ ತಾತ ಗಚ್ಛತಿ*
(ಗೀತೋಪದೇಶ)
_ಒಳ್ಳೆಯದನ್ನು ಮಾಡುವವನಾವನೂ ದುರ್ಗತಿಯನ್ನು ಹೊಂದಲಾರನು._
_ಡಾ || ಕೃಷ್ಣಮೂರ್ತಿ ಶಾಸ್ತ್ರೀ, ದಂಬೆ-ಪುಣಚ._
*ಪೂರ್ಣಮಿದಂ*
ಮಹಾಪುರುಷನ ಯಾ ಬ್ರಹ್ಮನ ಇಚ್ಛಾಶಕ್ತಿಯಿಂದ....
ಅಣು ಕ್ಷಣದಲೇ ಮಹಾ ಸ್ಪೋಟದಿಂದ......
ಇಡೀ ಬ್ರಹ್ಮನ ಅಂಡ ಎಂದರೆ ಬ್ರಹ್ಮಾಂಡ ಪ್ರಕೃತಿ ಸೃಷ್ಟಿಯಾಯಿತು....
ಬ್ರಹ್ಮಾಂಡ ಪ್ರಕೃತಿ ಆ ಮಹಾ ಪುರುಷನದೇ ವಿರಾಟ್ಸಗುಣ ರೂಪ...
ಈಗ ಸಾಧಕನ ಸಾಧನೆಯಿಂದ, ಆ ಮಹಾ ಪುರುಷನ ಕೃಪೆಯಿಂದ....
ದಿವ್ಯ ದೃಷ್ಟಿಯಿಂದ, ಮನೋಸ್ಪೋಟದಿಂದ ಅಣು ಕ್ಷಣದಲೇ ಸಾಧಕ ಮಹಾಪುರುಷನೇ ಆಗಬಹುದು.....
ಆಗಲೇ ಪುರುಷ ಪ್ರಕೃತಿಯ ವೃತ್ತ ಪರಿಪೂರ್ಣ.....
ಆಗಲೇ ಪೂರ್ಣಮಿದಂ ಎಂಬ ಭಾವಾತೀತ ಭಾವ......
ಅದ ಹೊಂದಲು ಸಾಧನೆ ಮತ್ತು ತಾಳ್ಮೆಯೊಂದೇ ದಾರಿ....
ಬೇರೆ ದಾರಿ ಇಲ್ಲ....
ಶ್ಯಾಮ ಪ್ರಸಾದ ಮುದ್ರಜೆ
*ಜೀವೋ ಬ್ರಹ್ಮ ಏವ ನ ಅಪರಃ*
_ಜೀವನು ಬ್ರಹ್ಮನೇ ಹೊರತು ಬೇರೆಯವನಲ್ಲ_
ಮಹಾಪುರುಷ ಪರಮಪುರುಷ ಪುರುಷೋತ್ತಮ
ಪರಬ್ರಹ್ಮ ಪರಮಾತ್ಮಾ ಭಗವಂತ
ಆ ಪರಾತ್ಪರತತ್ತ್ವದಿಂದಲೇ ಮಹಾಸ್ಫೋಟದ ಮೂಲಕ ಅಣುವಿನಿಂದ ಮಹತ್ತಿನ ಸೃಷ್ಟಿ
*ಮಮ ಯೋನಿಃ ಮಹದ್ ಬ್ರಹ್ಮ ತಸ್ಮಿನ್ ಗರ್ಭಂ ದಧಾಮಿ ಅಹಮ್*
_{ಗೀತೋಪದೇಶ}_
_"ನನ್ನ ಮೂಲವು ಮಹತ್ತಾದ ಬ್ರಹ್ಮವು...ಅದರಲ್ಲೇ ಗರ್ಭವನ್ನಿಡುವೆ ನಾನು" ಎಂದ ಶ್ರೀಕೃಷ್ಣ… ಅರ್ಥಾತ್ ಪುರುಷನೇ ಪ್ರಕೃತಿ / ಯೋನಿ...ಪ್ರಕೃತಿಯೇ ಪುರುಷ...ಪುರುಷನಿಂದ ಪ್ರಕೃತಿ...ಪ್ರಕೃತಿಯಿಂದ ಪುರುಷ...ಪರಸ್ಪರ ಒದನ್ನೊಂದಗಲದ ಅನಪಾಯ ಅನ್ಯೋನ್ಯ ಅ-ವಿನಾ-ಭಾವ..._
ಪ್ರಣವ ನಾದಬ್ರಹ್ಮದಿಂದ ಸಪ್ತಸ್ವರಾದಿ ಸಕಲ ಸೃಷ್ಟಿ
ಕಂಪನದಿಂದ ಲೌಕಿಕಶಬ್ದದ ಉತ್ಪತ್ತಿ
ಆದರೆ *ಪ್ರ* ಕೃಷ್ಟವೂ ಚಿರ *ನವ* ವೂ ಆಗಿ *ಪ್ರಣವ* ವೆನಿಸಿದ ಓಂಕಾರವು ಅನಾಹತನಾದ..ಯಾವುದೇ ಆಹತ / ಕಂಪನ ವಿಲ್ಲದೆ ಉಂಟಾಗುವಂಥದ್ದು!!! ಅಲೌಕಿಕ ಸರ್ವಮೂಲ ನಾದ!!!
ಸಮಸ್ತ ಸೃಷ್ಟಿಯು ಪ್ರಣವಕ್ಕೆ ಸಮಶ್ರುತಿಯಾದರೆ, ಸತ್ತ್ವ ರಜ ತಮಗಳೆಂಬ ತ್ರಿಗುಣಗಳ ಸಮಷ್ಟಿಪ್ರಮಾಣವು ಪರಸ್ಪರ ಸಮನಾದರೆ, ಸೃಷ್ಟಿಯೆಲ್ಲವೂ ಪ್ರಣವೈಕ್ಯವಾಗಿ ತಲ್ಲೀನಹೊಂದಿ ಬ್ರಹ್ಮಾಂಡ ಪ್ರ ಲಯವಾಗುವುದು…
ಅರ್ಥಾತ್ ಚಿತ್ತವಿಕಲ್ಪಗಳಡಗಿ ಸಂಪೂರ್ಣ ಲಯವಾದರೆ ಸಮಾಧಿಸ್ಥಿತಿ...ಪಿಂಡಾಡದ ಆಧ್ಯಾತ್ಮಿಕ ಲಯ...ಇದು ಹಲವಾರು ದಿನ ಸ್ಥಿರವಾದರೆ ಸ್ಥೂಲ ಪಿಂಡಾಂಡ / ದೇಹವೂ ಲಯಹೊಂದುವುದು…
ಹೀಗೆ ನಿರ್ಗುಣದಿಂದ ಸಗುಣ ಸೃಷ್ಟಿ
ಸಗುಣದಿಂದ ನಿರ್ಗುಣಸೃಷ್ಟಿ (ಲಯ)...
ಹೀಗೆ ಸೃಷ್ಟಿ ಲಯಗೈವ ಮಹಾಪುರುಷನ ರಹಸ್ಯವ ಗುರು-ಶಾಸ್ತ್ರಕೃಪೆಯಿಂದನುಭವಿಸಿದರೆ *ಬ್ರಹ್ಮವಿದ್ ಬ್ರಹ್ಮೈವ ಭವತಿ* _ಅಂತಹ ಬ್ರಹ್ಮವಿದನು ಬ್ರಹ್ಮವೇ ತಾನಾಗುವನು...ಮಹಾಪುರುಷನೇ ತಾನಾಗುವನು...ಪೂರ್ಣನೇ ತಾನೆಂದರಿಯುವನು...ಜೀವದ ಜೀವಭಾವ ಹೋಗಿ ಬ್ರಹ್ಮಭಾವ ಬರುವುದು...ಲೌಕಿಕಭಾವಗಳಿಂದ ಅತೀತವಾದ ಭಾವವಿದು...ಭಾವಾತೀತವಿದು..._
*ಪೂರ್ಣಮ್ ಅದಃ ಪೂರ್ಣಮ್ ಇದಂ ಪೂರ್ಣಾತ್ ಪೂರ್ಣಮ್ ಉದಚ್ಯತೇ |*
*ಪೂರ್ಣಸ್ಯ ಪೂರ್ಣಮ್ ಆದಾಯ ಪೂರ್ಣಮ್ ಏವ ಅವಶಿಷ್ಯತೇ ||*
_(ಈಶಾವಾಸ್ಯೋಪನಿಷತ್ತಿನ ಶಾಂತಿಮಂತ್ರ)_
_ಇದೂ (ಜೀವ, ಜಗತ್ತೂ) ಪೂರ್ಣ...ಅದೂ (ಪರಮಾತ್ಮನೂ) ಪೂರ್ಣ...ಆ ಪೂರ್ಣದಿಂದಲೇ ಈ ಪೂರ್ಣದುದಯ..._
_ಪೂರ್ಣದಿಂದ ಪೂರ್ಣವನ್ನು ಕಳೆದರೂ ಪೂರ್ಣವೇ ಉಳಿಯುವುದು...ಏಕೆಂದರೆ ಪೂರ್ಣವು ಅನಂತ...ಹಾಗಾಗಿ ಜೀವ, ಜಗತ್, ಈಶ್ವರರೆಲ್ಲರೂ ಅನಾದಿ..ಅನಂತ..._
*_ಇಂಥ ಪೂರ್ಣತ್ವವು ಸಾಧನೆ ಹಾಗೂ ತಾಳ್ಮೆಗಳಿಂದ ಮಾತ್ರ…ಬಿಂದು ಸಿಂಧುವಾಗಲು ಅರೆಕ್ಷಣ ಸಾಕು..ಹೇಗೆ ಸಿಂಧು ಬಿಂದುಗಳಾಯಿತೋ ಹಾಗೆಯೇ...ತಂದೆ ತಾಯಿಯ ಗುಣ ಶಕ್ತಿಗಳು ಮಕ್ಕಳಿಗಿರಬಹುದಾದರೆ ಬ್ರಹ್ಮದ ಗುಣ ಶಕ್ತಿಗಳು ಜೀವನೆನಿಸಿಕೊಂಡವನಿಗೂ ಇರಬೇಕಲ್ಲವೆ?*_
*_ಹರೇ ರಾಮ*_
_ಡಾ. ಕೃಷ್ಣಮೂರ್ತಿ ಶಾಸ್ತ್ರೀ, ದಂಬೆ-ಪುಣಚ_
[4/10 8:28 ಪೂರ್ವಾಹ್ನ] Shyamaprasad Mudraje: *ಜ್ಞಾನೋತ್ಕರ್ಷ...* ಭುವಿಯಲಿರುವ ಯಾವುದೇ ವಸ್ತು.... ಭುವಿಯಿಂದ ದೂರ ಚಿಮ್ಮಲ್ಪಡಬೇಕಾದರೆ.... ಬೇಕದಕ್ಕೆ.. ಭುವಿಯ ಗುರುತ್ವಾಕರ್ಷಣ ಶಕ್ತಿಯ ಮೀರಿದ ವೇಗೋತ್ಕರ್ಷ. ಹಾಗೇನೇ.. ಭುವಿಯ ಭವ ಬಂದನದಿಂದ ಬಿಡುಗಡೆಗೊಳ್ಳಬೇಕಾದರೆ........ ಬೇಕದಕ್ಕೆ ಭುವಿಯ ಅಜ್ಞಾನಾಕರ್ಷಣ ಶಕ್ತಿ ಮೀರಿದ ಜ್ಞಾನೋತ್ಕರ್ಷ...... ಶ್ಯಾಮ ಪ್ರಸಾದ ಮುದ್ರಜೆ
[4/10 9:17 ಪೂರ್ವಾಹ್ನ] Dr. Krishna Moorthy D.: 👍🏻👌🏻👏🏻🙏🏻☺💐 ದಿವಿಯಿಂದ ಭುವಿಗಿಳಿಯಲು ಸುಲಭ ಆದರೆ ಭುವಿಯಿಂದ ದಿವಿಗೇರಲು ಕಠಿನ ಮೇಲಿಂದ ಕೆಳಕ್ಕೆ ಜೀವಸಹಜ ಪ್ರಕೃತಿ ಸಹಜ ಧರ್ಮ...ಪ್ರಾಕೃತ... ಕೆಳಗಿಂದ ಮೇಲಕ್ಕೇರಲು ವಿಶೇಷ ಪ್ರಯತ್ನ ಬೇಕೇ ಬೇಕು...ನೀರನ್ನು ಹಗ್ಗದ ಮೂಲಕ ಮೇಲಕ್ಕೆತ್ತಿದಂತೆ ಪುರುಷಪ್ರಯತ್ನ...ಪಂಪಿನಿಂದೆತ್ತಿದಂತೆ ವೇಗೋತ್ಕರ್ಷಕ ಮಂತ್ರ ಯಂತ್ರಗಳ ಸಹಾಯ...ಸೂರ್ಯನು ನೀರನ್ನು ಆಕಾಶಕ್ಕೆತ್ತಿ ಮೋಡವಾಗಿಸಿದಂತೆ ಜ್ಞಾನಸೂರ್ಯ ಗುರುವಿನ ಸಹಾಯ ಭುವಿಯ ಮಾಯಾಮೋಹದಿಂದ ಸುಲಲಿತವಾಗಿ ಅವ್ಯಕ್ತವಾಗಿ ಶಿಷ್ಯನನ್ನು ಮೇಲಕ್ಕೆತ್ತಬಲ್ಲದು. *ತೇನ ವಿನಾ ತೃಣಮಪಿ ನ ಚಲತಿ* _ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ_ _*ಉದ್ಧರೇತ್ ಆತ್ಮನಾ ಆತ್ಮಾನಮ್*_ _ಗುರುವಿನೊಳ ತಾ ಸೇರಿ ಶಿಷ್ಯ ತಾ ವಿಶ್ವಾತ್ಮನಾಗುವನು...ಎಲ್ಲವೂ ತಾನೇ ಆಗುವನು...ಇದಕೆ ಸಂಶಯ ಬೇಡ..._ 🙏🏻🙏🏻🙏🏻☺💐
*ಶರಣಾಗತಿ*
ಕಣ್ಣಿಗೆ ಕಾಣುವ ಗುರುಹಿರಿಯರಿಂಗೆ ಕಾಣದ ದೈವಕ್ಕೆ........... ಶರಣಾಗತಿಯ ಬಾವವನೊಮ್ಮೆ ನೀ ಹೊಂದಿ ನೋಡು.........
ಈ ಭಾವವೇ ನಮ್ಮ ಜೀವನದಭಾವಂಗಳ ದಾಟಿಸಿ ಒಯ್ಯುವುದದು...
ಮನವೋನ್ನತ ಸ್ತರಕೆ ಸತ್ ಚಿತ್ ಆನಂದದಡಿದಾವರೆಗೆ...
ಆದರೆ... ಶರಣಾಗತಿ ಸಹಜವಾಗಿರ್ಪುದದೇ ನಿರ್ಣಾಯಕವು........
ನಿಜ ಶರಣಾಗತ ಭಾವವೇ ಮನವ ನಿರಾಳವಾಗಿಪುದು.......
ಈ ಸ್ಥಿತಿಯಲೇ ಈಸಿ ನೀ ಈ ಜಗವ ಗೆಲ್ಲಬಲ್ಲೆ..........
ಜ್ಞಾನಕ್ಕೆ, ಜ್ಞಾನಿಗಳಿಗೆ ಶರಣಾಗತನಾಗುವುದೆಂದರೆ...........
ಅದು ದಾಸ ಭಾವವಾದರೂ ಗುಲಾಮಗಿರಿಯಲ್ಲ......
ಜ್ಞಾನ,ಜ್ಞಾನಿಗಳೆಲ್ಲವನೂ ಎಲ್ಲರನೂ ಸಮತ್ವದಿಂ ಭಾವಿಪರು.......
ಅಂತಹವರಡಿದಾವರೆಗಳಿಗೆರಗುತ ಮಾಳ್ಪ ಕರ್ಮಂಗಳೆಮ್ಮ...... ಜ್ಞಾನಿಯ ಮಟ್ಟಕ್ಕೆರಲನುಕೂಲಿಪ ಯೋಗ........
ಅದೇ.... ಭಕ್ತಿ ಯೋಗ
ನಡಿಯೊಂದಿದ್ದರೆ ಸಾಕೇ?!!....
ನುಡಿದಂತೆ ನಡೆಯಿದ್ದರದೇ ಪರಂಧಾಮ- ಶ್ಯಾಮ
*_ಕೃಷ್ಣಂ ಶರಣಂ ಗಚ್ಛಾಮಿ*_
*ಹೇ ಲೋಕಾಃ ಶ್ರುಣುತ ಪ್ರಸೂತಿಮರಣ-*
*-ವ್ಯಾಧೇಶ್ಚಿಕಿತ್ಸಾಮಿಮಾಂ*
*ಯೋಗಜ್ಞಾಸ್ಸಮುದಾಹರನ್ತಿ ಮುನಯೋ*
*ಯಾಂ ಯಾಜ್ಞವಲ್ಕ್ಯಾದಯಃ |*
*ಅನ್ತರ್ಜ್ಯೋತಿರಮೇಯಮೇಕಮಮೃತಂ*
*ಕೃಷ್ಣಾಖ್ಯಮಾಪೀಯತಾಂ*
*ತತ್ಪೀತಂ ಪರಮೌಷಧಂ ವಿತನುತೇ*
*ನಿರ್ವಾಣಮಾತ್ಯನ್ತಿಕಮ್ || ೧೭ ||*
(“ಸೂರ್ಯಾಶ್ವೈರ್ಮಸಜಸ್ತಥಾ ಸಗುರವಃ ಶಾರ್ದೂಲವಿಕ್ರೀಡಿತಮ್”— ಅತಿಧೃತಿನಾಮಚ್ಛಂದಸಿ ಏಕೋನವಿಂಶತ್ಯಕ್ಷರಾವೃತ್ತ್ಯಾಂ ಶಾರ್ದೂಲವಿಕ್ರೀಡಿತವೃತ್ತಮ್)
_ಹೇ ಲೋಕದ ಜನರೇ! ಜನನ-ಮರಣವೆಂಬ ಮಹಾವ್ಯಾಧಿಗೆ ಯೋಗಮರ್ಮವನ್ನರಿತ ಯಾಜ್ಞವಲ್ಕ್ಯಾದಿ ಮುನಿಗಳು ಯಾವ ಈ ಚಿಕಿತ್ಸೆಯನ್ನು ಉದಾಹರಿಸುತ್ತಾರೋ ಅದನ್ನು ಕೇಳಿರಿ— ಎಂದಿಗೂ ಮೃತಿಯಿರದೆ ಅಮೃತತ್ತ್ವವೆನಿಸಿದ, ಏಕಮೇವಾದ್ವಿತೀಯವಾದ, ಮಾಪನಕ್ಕೆ ಸಿಗದೆ / ಅಳತೆಗಳವಡದೆ ಅಮೇಯವೆನ್ನಿಸಿದ, ಸಕಲರ ಅಂತರಂಗದಲ್ಲಿ ಬೆಳಕಿನ ಸ್ವರೂಪವಾಗಿದ್ದು ದಾರಿದೋರುವುದರಿಂದ ಅಂತರ್ಜ್ಯೋತಿಯೆನಿಸಿದ, ಕೃಷ್ಣನೆಂಬ ಅಮೃತವನ್ನು ಪಾನಮಾಡಬೇಕು. ಅದು ಕುಡಿಯಲ್ಪಟ್ಟರೆ ಜನ್ಮ-ಜರಾ-ಮರಣಗಳಿಗೆ ಪರಮೌಷಧವಾಗಿ ಫಲಕಾರಿಯಾಗುವುದು. ಇದರ ಫಲವೇ ಆತ್ಯಂತಿಕ / ಅಂತಿಮ / ಶಾಶ್ವತ ವಾದ ನಿರ್ವಾಣ / ಮೋಕ್ಷ / ಅಪವರ್ಗ / ಮುಕ್ತಿ / (ಜೀವಾತ್ಮಪರಮಾತ್ಮ)ಸಂಗಮ / ವಿಶ್ರಾಂತಿ / ಗತಿ / ನಿಶ್ಚಲತೆ / ಅ-ಚ್ಯುತತ್ವ / ವಿಷ್ಣು— ವನ್ನು ಪ್ರಾಪ್ತಿಮಾಡುವುದಾಗಿದೆ._
ಹೀಗಾಗಿ ಆತ್ಮೋದ್ಧಾರಕ್ಕಾಗಿ ಶುದ್ಧಭಕ್ತಿ ಹಾಗೂ ಭಗವಚ್ಛರಣಾಗತಿಗಳು ಜ್ಞಾನ, ವೈರಾಗ್ಯಗಳಷ್ಟೇ ಮಹತ್ತ್ವದ್ದಾಗಿವೆ. ಇದಕ್ಕಿಂತ ಬೇರೆ ದಾರಿ ಇಲ್ಲ.
_"ನಾಮಸ್ಮರಣಾದನ್ಯೋಪಾಯಂ ನ ಹಿ ಪಶ್ಯಾಮೋ ಭವತರಣೇ "_
_ಹರೇರ್ನಾಮೈವ ನಾಮೈವ ಹರೇರ್ನಾಮೈವ ಕೇವಲಮ್ |_
_ಕಲೌ ನಾಸ್ತ್ಯೇವ ನಾಸ್ತ್ಯೇವ ನಾಸ್ತ್ಯೇವ ಗತಿರನ್ಯಥಾ ||_
_ವಿಪದ್ ವಿಸ್ಮರಣಂ ವಿಷ್ಣೋಃ ಸಂಪತ್ ನಾರಾಯಣಸ್ಮೃತಿಃ_
_ಶ್ರವಣಂ ಕೀರ್ತನಂ ವಿಷ್ಣೋಃ ಸ್ಮರಣಂ ಪಾದಸೇವನಮ್ |_
_ಅರ್ಚನಂ ವನ್ದನಂ ದಾಸ್ಯಂ ಸಖ್ಯಮಾತ್ಮನಿವೇದನಮ್ ||_
ಇದೇ ನವವಿಧ ಭಕ್ತಿ. ಭಕ್ತಿರಸಾಮೃತಪಾನಮಾಡಿ ಕೃಷ್ಣರಸಾನಂದವನ್ನು ಹೊಂದೋಣ. ಆಗದೆ?!— ಕೃಷ್ಣ!!
[12/10 7:13 ಪೂರ್ವಾಹ್ನ] Shyamaprasad Mudraje: ಬಲರಾಮ ಬಲ್ಲ ಶ್ರೀ ಕೃಷ್ಣ ಬಲ್ಲವರ ಬಲ್ಲನೆಂದು..... ಆದರೂ ಈ ಭುವಿಗಿಳಿದಿಲ್ಲೇ ಇರುವಾಗ.......... ಈ ಜಗದ ನಾಟಕದ ನಿಯಮ ಮೀರಬಾರದೆಂತೆಂದೇ... ಬಲರಾಮ ಕೃಷ್ಣಂಗೆ ಮನದಾಂತರ್ಯದಲಿ ನಮಸ್ಕರಿಸಿದರೂ..... ಲೋಕದೃಷ್ಟಿಯಲಿ ಆಶೀರ್ವಾದ ಮಾಳ್ಪನು ಶ್ರೀ ಕೃಷ್ಣಂಗೆ ಇದ ತಿಳಿದದನಾಚರಿಸುತ ಹಿರಿ ಕಿರಿಯರೆಲ್ಲರೊಳಗಿಪ್ಪ ಆ ಧೈವಕೆರಗುತಿದ್ದರೂ ಲೋಕನಿಯಮದಂತಾಚರಿಪುದೇ ಧರ್ಮ- ಶ್ಯಾಮ [12/10 7:33 ಪೂರ್ವಾಹ್ನ] Dr. Krishna Moorthy D.: 👌🏻👍🏻👏🏻🙏🏻💐☺ *ವ್ಯವಹಾರ—ಪರಮಾರ್ಥ* ಅಣ್ಣ ತಮ್ಮ ವ್ಯಾವಹಾರಿಕ ಸತ್ಯ ಅಂತರಾತ್ಮ ಸಮಾನವೆಂಬುದು ಪಾರಮಾರ್ಥಿಕ ಸತ್ಯ ಕಳ್ಳ ಪೋಲೀಸ್ ವಿರುದ್ಧವೆಂಬುದು ವ್ಯವಹಾರ ಅಂತರಾತ್ಮ ಒಂದೇ ಎಂಬುದು ಪರಮಾರ್ಥ ಹಾಗಾಗಿ ವ್ಯವಹಾರವೂ ಬೇಕು ಪರಮಾರ್ಥವೂ ಬೇಕು ಭೇದಜ್ಞಾನವೂ ಬೇಕು ಅಭೇದಜ್ಞಾನವೂ ಬೇಕು ತಾರತಮ್ಯವೂ ಬೇಕು ಏಕತೆಯೂ ಬೇಕು ದ್ವೈತವೂ ಬೇಕು ಅದ್ವೈತವೂ ಬೇಕು ಸಂಸಾರವೂ ಬೇಕು ವೈರಾಗ್ಯವೂ ಬೇಕು! ನೀರೂ ಬೇಕು, ನೀರಿಗಂಟದಂತಿರಬೇಕು... ಚಿಗುರೂ ಬೇಕು ಬೇರೂ ಬೇಕು...ಅಲ್ಲವೆ? *ದ್ವನ್ದ್ವೋ ಸಾಮಸಿಕಸ್ಯ ಚ* (—ಗೀತಾಚಾರ್ಯ) _ಸಮಾಸಗಳಲ್ಲಿ ಉಭಯಪದಾರ್ಥಪ್ರಧಾನವಾದ ದ್ವಂದ್ವಸಮಾಸವೇ ಭಗವಂತ._ ಒಂದನ್ನು ಬಿಟ್ಟು ಇನ್ನೊಂದಿಲ್ಲ.. ತಾಯ ಬಿಟ್ಟು ಕಂದನಿಲ್ಲ ಕಂದನ ತೊರೆದರೆ ತಾಯಿಯಲ್ಲ... ಹಾಗಾಗಿ, *ನ ದೈವಚರಿತಂ ಚರೇತ್* ದೇವತೆಗಳ ಆಚರಣೆಯನ್ನೆಲ್ಲ ಮನುಷ್ಯರಿಗೆ ಅನ್ವಯಿಸಬಾರದು. ಆದರೆ, ನಮ್ಮ ಹಿರಿಯರ ಪೂರ್ವಜರ ಉಪದೇಶಗಳನ್ನು ಮಾತ್ರ ಆಚರಿಸಬೇಕು. *ಯಾನಿ ಅನವದ್ಯಾನಿ ತಾನಿ ಸೇವಿತವ್ಯಾನಿ, ನೋ ಇತರಾಣಿ* (ತೈತ್ತಿರೀಯೋಪನಿಷತ್) _ಯಾವುದು ಅನಿಂದ್ಯವೋ ಅದನ್ನು ಮಾತ್ರ ಆಚರಿಸತಕ್ಕದ್ದೇ ಹೊರತು ನಿಂದ್ಯವನ್ನಲ್ಲ._ ಹಾಗಾಗಿಯೇ ಇರುವುದು ಲೋಕನಿಯಮ. ಅದನ್ನು ಮೀರದಂತೆ, ಕರ್ತವ್ಯಭ್ರಷ್ಟನಾಗದಂತೆ, ಅಧ್ಯಾತ್ಮದಲ್ಲೂ ಪರಮಾರ್ಥದಲ್ಲೂ ಇರು. ಹಾಗಾದರೆ ಬಲರಾಮನು ಕೃಷ್ಣನಿಗೇಕೆ ಆಶೀರ್ವದಿಸಿದ? ಕೃಷ್ಣನೇಕೆ ಬಲರಾಮನಿಗೆ ನಮಸ್ಕರಿಸಿದ? ರಾಮನೇಕೆ ಸೀತಾಪರಿತ್ಯಾಗ, ಅಗ್ನಿಪರೀಕ್ಷೆಗಳನ್ನು ಮಾಡಿದ? ಎಂಬುದರ ಮರ್ಮವೇ ಇದು!!!! _ಲೋಕಮರ್ಯಾದೆ!!! ಲೋಕಸೀಮೆ!!!_ ಲೋಕಧರ್ಮವನ್ನಾಚರಿಸುತ್ತಾ, ಅದನ್ನು ಶರೀರಧರ್ಮವೆಂದರಿತು ಲೋಕಾತೀತವಾದ ಆತ್ಮಸ್ವರೂಪ ತಾವೆಂದರಿತು, ಲೋಕಾತೀತರಾಗೋಣ!!! 🙏🏻🙏🏻🙏🏻☺💐
ಅಜ್ಞಾನಾಂಧಕಾರದಲಿ ತೇಲುತ ಕ್ಲಿಷ್ಟಕರ ಆಸನಂಗಳ ಮಾಡಿ.......
ಜನ ಮನ್ನಣೆಗಳಿಸುತ
ಅಹಂಕಾರದಲಿ ಬೀಗುತಿರ್ದರೂ........
ಮುಖದಲಿ ಸೌಜನ್ಯ ತೋರ್ಪಡಿಸುತ....... ನಾಟಕದಂದದಲಿ
ಜನಮಾನಸಂಗಳ ಸೂರೆಗೊಂಡಂದದಿ......ಜನರರಿಯದಂತೇ ಹಣ ದೋಚುವ ನೀಚಗುರುಗಳೇ........
ಯೋಗಾಸನ ಸರ್ಕಸ್ ಅಲ್ಲ ಅದು ಆಂತರ್ಯದ ಪಯಣ..
ಸಪ್ತ ಚಕ್ರಂಗಳಲಿರ್ಪ ಚೈತನ್ಯಸಾಗರಂಗಳ ಗಮನಿಸುತ........... ಆ ಚೈತನ್ಯಂಗಳಿಗಡಿಗಡಿಗೆ ಶರಣಾಗತನಾಗುತ ವಿಧ ವಿಧ ಭಂಗಿಗಳನಾಚರಿಸುತ...
ಪ್ರಾಣವಾಯುವಿನ ಗತಿಯ ಗಮನಿಸುತ..... ಆ ದೈವವಾಂತರ್ಯದಲೇ ಇದೆಯೆಂಬ ಶ್ರದ್ಧೆಯಿಂದಾಚರಿಸುತ .... ಉತ್ಸಾಹದಿಂ ಮಾಳ್ಪುದಾದರದೇ ಯೋಗಾಸನವು.........ಇಲ್ಲದರದು ಬರೀ ಸರ್ಕಸ್.................
ಇದ ತಿಳಿಯಿರಿ ತಿಳಿಸಿರಿ
ತಿಳಿದಾಚರಿಸಿರಿ... ಇತರರದರಂತೇ ಮಾಡಲುತ್ಸಾಹವ ತುಂಬಿ ನಿಜಗುರುಗಳಾಗಿ ಜನಮಾನಸಕೆ..........
ಹೊಡೆದೊಗೆಯಿರಿ ಅಜ್ಞಾನಾಂಧಕಾರವ ... ಕಾಣಲಿ ಎಲ್ಲರೂ ಪರಸ್ಪರರಲಿಪ್ಪ ಆ ದೈವಾಮೃತವ..... ಹೊಂದಲೆಲ್ಲರೂ ಮೃತತ್ವವ ದಾಟಿ ಅಮೃತತ್ವವ - _*ಶ್ಯಾಮ*_
*ವಿ.ಸೂ* :
ಮೇಲಿನ ತೆಗಳಿಕೆಯ ವಾಕ್ಯಗಳು ಯಾವುದೇ ಗುರುಗಳನ್ನು ಉದ್ದೇಶಿಸಿ ಅಲ್ಲ. ನನ್ನ ಮನಸ್ಸೇ ನನ್ನ ಮಿತ್ರ ( ನಿಜ ಗುರು- ಆತ್ಮಸಾಕ್ಷಿಯಂತಿರುವುದಾದರೆ) ನನ್ನ ಮನಸ್ಸೇ ನನ್ನ ಶತ್ರು ( ನೀಚ ಗುರು- ಸತ್ಯ ತಿಳಿದರೂ ಆ ದಾರಿಯಲ್ಲಿ ಹೋಗಲಿಚ್ಛಿಸದ ಮನ) - ಗೀತಾಚಾರ್ಯನ ಉಕ್ತಿಯಂತೆ.
ಜನಂಗಳ ಮನಸ್ಸಿನ ಗೆದ್ದು, ಭಾರೀ ಪ್ರೀತಿ ತೋರಿಸಿ ತನಗೆ ಬೇಕಾದಂತೆ ಹಣ ದೋಚುವ ನೀಚ ಬುದ್ಧಿಯ ನನ್ನದೇ ಮರ್ಕಟ ಮನಸ್ಸು ವ್ಯವಹಾರದಲ್ಲಿ ಹೀಗೆ ನಡೆಯುತ್ತದೆ. ಅದು ತಪ್ಪೆಂದು ಪುನಃ ಪುನಃ ನನ್ನ ಮನಸ್ಸಿಗೆ ನಾನೇ ಎಚ್ಚರಿಸಿಕೊಳ್ಳಬೇಕಿದೆ. ನನ್ನ ಕೆಳ ಮಟ್ಟದ ಚಿಂತನೆಯ ಮನವೇ ನೀಚ ಗುರು.ಅದು ವ್ಯವಹಾರದಲ್ಲೇ ಇರುವಂತಾದ್ದು.
ನನ್ನ ಮನಸ್ಸೇ ನನ್ನ ನೀಚ ಗುರುವಾಗಿದ್ದು, ನಿಜವನರಿತಂತೇ ಯೋಗಾಭ್ಯಾಸ ಮಾಡಲು ಬಿಡದ ಮರ್ಕಟವಾಗಿ ( ಅದೇ ನೀಚ ಗುರು) ಲೋಕ ಚಿಂತೆಗಳೂ ವ್ಯವಹಾರ ಲಾಭ ನಷ್ಟ ಚಿಂತೆಗಳ ಮಹಾಪೂರ ಸೇರಿ ನನ್ನೊಳಗೇ ಕಲ್ಮಶಗಳನ್ನುಂಟು ಮಾಡುತ್ತದೆ. ಯೋಗಾಭ್ಯಾಸ ಎಷ್ಟೋ ಬಾರಿ ಯಾಂತ್ರಿಕವಾಗುವುದನ್ನು ಗಮನಿಸಿದ್ದೇನೆ.
ನನ್ನ ಸಾಕ್ಷೀ ಭಾವ ಯೋಗಾಭ್ಯಾಸದ ಪ್ರತೀ ಭಂಗಿಯ ಗಮನಿಸಿ ಅದರೊಂದಿಗೆ ಸಪ್ತ ಚಕ್ರಗಳ, ಪ್ರಾಣದ ಚಲನೆ ಗಮನಿಸುತ ಯೋಗಾಭ್ಯಾಸ ಮಾಡುವಾಗ ಏನೋ ನಿರಾಳತೆ ಉಂಟಾಗುತ್ತದೆ. ಈ ರೀತಿ ಸಾಕ್ಷೀ ಭಾವದೊಂದಿಗೆ ಯೋಗ ಮಾಡುವುದೆಂದರೆ ಸಾಕ್ಷಿಯೊಂದಿಗೇ ( ಅದೇ ನಿಜ ಗುರು) ಯೋಗ ಮಾಡಿದಂತೆ. ಅದು ಅಮೃತತ್ವದ ಅನುಭೂತಿಯ ಮಟ್ಟ ಎಂದೇ ತಿಳಿಯತಕ್ಕದ್ದು. *"ಪ್ರಾಣಾಯಾಮಂ ಪ್ರತ್ಯಾಹಾರಂ ನಿತ್ಯಾನಿತ್ಯ ವಿವೇಕ ವಿಚಾರಂ …"* ಎಂಬಲ್ಲಿ _ಭಜಗೋವಿಂದಮ್_ ನಲ್ಲಿ ಶ್ರೀ ಶಂಕರಾಚಾರ್ಯರು- ಪ್ರಾಣಾಯಾಮಾದಿಗಳಲ್ಲಿ ಬ್ರಹ್ಮ ಚಿಂತನೆ ಮಾಡಬೇಕೆಂದೇ ನಿರ್ದೇಶಿಸಿದ್ದಾರೆ. ಹಾಗಾದರೆ ಮಾತ್ರ ಅದು ಸಾಧನಾ ಪಥ.
*ಶ್ಯಾಮ ಪ್ರಸಾದ ಮುದ್ರಜೆ* 🙏🙏
*ನುಡಿ ನೇರ ನಡೆ ನೇರ ನಡತೆ ಗಂಭೀರ*
ಇದು ನಮ್ಮ ಅಂತರಂಗಕ್ಕೇ ನಾವೇ ಆದೇಶಿಸುವ, ಉಪದೇಶಿಸುವ ವಾಕ್ಯಗಳು.
ಹೇ ಮನವೆ!
ನೀ ಮರುಳಾಗದಿರು.
ಹುಚ್ಚೇಳದಿರು.
ಲಂಗುಲಗಾಮಿಲ್ಲದೆ ತಿರುಗಾಡದಿರು.
ಬುದ್ಧಿಯ ಹತೋಟಿ ಮೀರದಿರು.
ಇಂದ್ರಿಯಗಳಿಗೆ ದಾಸನಾಗದಿರು.
ಇಂದ್ರಿಯಗಳೊಡೆಯನಾಗು.
ಬುದ್ಧಿಯ ದಾಸನಾಗು.
ಹೇ ಮನವೆ!!
ಧನಪಿಶಾಚಿಯಾಗದಿರು.
ಹಣಕ್ಕಾಗಿ ಬದುಕದಿರು.
ಬದುಕಿಗೆ ತಕ್ಕಷ್ಟೇ ಹಣಮಾಡು.
ಬೂಟಾಟಿಕೆ ಬಿಡು.
ನಡೆ ನುಡಿ ನೇರವಿರಲಿ.
ಸತ್ಯ, ಸರಳವಾಗಿ ಜೀವಿಸು.
ಮದವನ್ನು ಬಿಡು, ಹದವಾಗಿರು, ಮುದವನ್ನು ಪಡೆ.
ಆಡಂಬರ ಬೇಡ, ಪ್ರಾಮಾಣಿಕತೆ ಇರಲಿ.
_ತನ್ನಂತೆ ಪರರ ಬಗೆದಡೆ ಕೈಲಾಸ…_
ಯೋಗವು ವೇಗವಾಗಿ ಮಾಡತಕ್ಕದ್ದಲ್ಲ.
ಯೋಗದಿಂದ ನೀರೋಗ ನಿರ್+ರೋಗ=ನೀರೋಗ)ವೆಂಬುದು ಕೇವಲ ಯೋಗದ ಉಪ-ಉತ್ಪನ್ನ!!
ಯೋಗದಿಂದ ಯೋಗಾನಂದ, ಆತ್ಮಾನಂದ, ಬ್ರಹ್ಮಾನಂದ, ಪರಮಾನಂದ, ಕೊನೆಯಿರದ ಶಾಶ್ವತಾನಂದ...ಇದೇ ಯೋಗದ ಪ್ರಧಾನೋದ್ದೇಶ!!!
ಜೀವ-ಆತ್ಮರ, ಜೀವಾತ್ಮ-ಪರಮಾತ್ಮರ, ಜೀವ-ದೇವರ, ದಾಸ-ಈಶರ ನರ-ನಾರಾಯಣರ ಐಕ್ಯವೇ ಯೋಗ, ಸಂಯೋಗವೇ ಯೋಗ!!!
ಯೋಗವೇ ನಮ್ಮ ಸುಯೋಗ!!!
ಯೋಗವೆಂದರೆ ಬರಿ ಆಸನವಲ್ಲ, ಸರ್ಕಸ್ಸಲ್ಲ, ಪ್ರದರ್ಶನವಲ್ಲ, ಸ್ಪರ್ಧೆಯಲ್ಲ...!!!
ಯೋಗವು ಚೆನ್ನಾಗಿ ಸಾಗಬೇಕು ಸಾಷ್ಟಾಂಗವಾಗಿ!!!
ಯಮ, ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಹಾರ, ಧಾರಣ, ಧ್ಯಾನ, ಸಮಾಧಿಗಳಾಗಿ...
ಅಧ್ಯಾತ್ಮಯೋಗವಾಗಿ...
ವೇದಾಂತಯೋಗವಾಗಿ...
ಕರ್ಮ-ಭಕ್ತಿ-ಜ್ಞಾನಯೋಗವಾಗಿ...
ಕುಂಡಲಿನೀ ನಾಗವೇರುವಂತಾಗಿ...
ಸುಷುಮ್ನೆಯು ಸಹಸ್ರಾರಕ್ಕೇರಿ...
ಐಕ್ಯಾನಂದ!!!
ಇದಕ್ಕಾಗಿ ಮಾಡಿದ ಕಿರುಯತ್ನವೂ ಆಗದು ವ್ಯರ್ಥ...ಮುಂದಿನ ಜನುಮಕೂ ಮುಂದುವರೆಯುವುದು...
ಹಾಗೆ ಚಿಂತನ-ಯೋಗವನ್ನು ಮಾಡೋಣವೇ?
ಯೋಗದೊಂದಿಗೆ ಬ್ರಹ್ಮಾನುಚಿಂತನವನ್ನೂ ಮಾಡೋಣವೆ?
🙏🏻🙏🏻🙏🏻☺💐
*ಬೇತಾಳ ಗುರುವಿಂದ ಅಪರೋಕ್ಷ ಜ್ಞಾನ* ಜಾತ್ರೆ ಗದ್ದೆಯಲಿ ದೇವನೆದುರಿನಲಿ ನಡೆಯುತಿರುವುದೆರಡು ಬೇತಾಳಂಗಳು......... ಒಂದೊಂದರೊಳಗೊಬ್ಬೊಬ್ಬ ಪಾತ್ರಿಗಳು........ ಅದರಿಂದ ಬೇತಾಳಂಗಳಿಗೆ ನಡೆವ ಬಲ ಅಯ್ಯಾ...... ಇಲ್ಲದಿರವು ನಿಸ್ತೇಜ ಬೆದರು ಬೊಂಬೆಗಳೇ ಅಯ್ಯಾ..... ಜಗದಲಿರ್ಪ ಜೀವಿಗಳೆಲ್ಲಾ ನಡೆದಾಡುವರು........ ಅವರುಗಳೆಲ್ಲರೂಳಗೆ ಜೀವವಿರ್ಪುದರಿಂದ ಅಯ್ಯಾ..... ಬೇತಾಳನಿಗಾದರೋ, ಅದು ನಡೆಯಲು..... ಒಂದೊಂದರೊಳಗೊಬ್ಬೊಬ್ಬ ಬೇಕೇ ಬೇಕು ಅಯ್ಯಾ..... ಆದರೆ ಜಗದಲಿರ್ಪ ಜೀವಿಗಳೆಲ್ಲಾ ನಡೆದಾಡಲು...... ಎಲ್ಲರೊಳಗಿರ್ಪ ಜೀವ -ಏಕಂ ಸತ್ ಆಗಿರ್ಪ (ಜೀವೋ ದೇವ)ಸದಾಶಿವನೊಬ್ಬನೇ ಅಯ್ಯಾ..... ಬೇತಾಳನಿಗಾದರೋ.... ಒಂದೊಂದರೊಳಗೊಬ್ಬೊಬ್ಬ ಬೇಕು.... ಆದರೆ, ಜೀವ ಜಗತ್ತಿನ ನೂರಾರರೊಳಗಿದ್ದು ಎಲ್ಲವ ನಡೆಸುವವನೊಬ್ಬನೇ ಅಯ್ಯಾ..... ಆ ವಿಚಿತ್ರಕೆ ನಮಿಸಿ ಕೃತಾರ್ಥನಾಗೋ ಅಯ್ಯಾ- ಶ್ಯಾಮ .... 💐🥰👏🙏💐 *ಜಾತ್ರೆಯ ಬೇತಾಳದ ಸಂಕೇತವೇನು?* _ಜಾತ್ರೋತ್ಸವಗಳಲ್ಲಿ, ಮೆರವಣಿಗೆಗಳಲ್ಲಿ ಬೇತಾಳ, ತೊಗಲು ಬೊಂಬೆಗಳು ಸಾಮಾನ್ಯವಾಗಿರುವುದು ನಮ್ಮ ಸಂಪ್ರದಾಯ. ಆದರೆ, ಅದರ ಹಿಂದಿನ ರಹಸ್ಯವೇನೆಂಬುದನ್ನಿಲ್ಲಿ ಅನಾವರಣಗೊಳಿಸಲಾಗಿದೆ. ಅವಧೂತನಿಗೆ ಲೋಕವೆಲ್ಲಾ ಗುರುವೇ. ಎಲ್ಲದರಿಂದಲೂ ಆ ಋಷಿಯು ತನ್ನ ಅಂತರ್ದೃಷ್ಟಿಯಿಂದ, ದಿವ್ಯದೃಷ್ಚಿಯಿಂದ ಹೊಸ ದರ್ಶನವನ್ನು ಪಡೆಯಬಲ್ಲ._ _ತೊಗಲು ಬೊಂಬೆಯ ಒಳಗೊಬ್ಬ ಜೀವಂತ ಮನುಷ್ಯನಿರುತ್ತಾನಲ್ಲವೆ? ಅಂತೆಯೇ ಸಕಲ ಸೃಷ್ಟಿಯೊಳಗೊಂದು ಪರತತ್ತ್ವವಿದೆ. ಅವನೇ ಪರಮಾತ್ಮಾ. ಹೇಗೆ ವ್ಯಕ್ತಿಯಿರದೆ ಬೊಂಬೆ ಚಲಿಸದೋ ಅಂತೆಯೇ *ತೇನ ವಿನಾ ತೃಣಮಪಿ ನ ಚಲತಿ*— ಪರಮಾತ್ಮನಿಲ್ಲದೆ ಹುಲ್ಲುಕಡ್ಡಿಯೂ ಚಲಿಸದು. ಸರ್ವಾಂತರ್ಯಾಮಿಯಾಗಿ ಎಲ್ಲರೊಳಗಿರುವ ಶುದ್ಧ ಅಸ್ತಿತ್ವ / ಸತ್ / ಇರುವಿಕೆ ಎಂಬುದೇ ಪರಮಸತ್ಯ, ಸಕಲಕ್ಕೂ ಆಧಾರ. *ಯತೋ ವಾ ಇಮಾನಿ ಭೂತಾನಿ ಜಾಯನ್ತೇ | ಯೇನ ಜಾತಾನಿ ಜೀವನ್ತಿ | ಯತ್ ಪ್ರಯನ್ತ್ಯಭಿಸಂವಿಶನ್ತಿ | ತದ್ ಬ್ರಹ್ಮ*— ಯಾವುದರಿಂದಲೇ ಇವೆಲ್ಲವೂ ಜನಿಸಿ, ಇದ್ದು, ಲಯವಾದಂತೆ ಭಾಸವಾಗುತ್ತಿರುವುದೋ ಅದೇ ಪರಬ್ರಹ್ಮವಸ್ತು ಎಂದಿದೆ ತೈತ್ತಿರೀಯೋಪನಿಷತ್. ಅದರ ಒಂದು ಸಂಕೇತವೇ ಈ ಬೇತಾಳ (ತದ್ಭವ) / ವೇತಾಲ (ಸಂಸ್ಕೃತ). ಅದರೊಳಗೆ ಜನವಿರುವಂತೆ ನಮ್ಮೊಳಗೆ ಪರಮಾತ್ಮನಿರುವನು. ಅಣು ರೇಣು ತೃಣ ಕಾಷ್ಠ ಸರ್ವರಂತರ್ಯಾಮಿ ಪರಮಾತ್ಮ ತಾನಿಹನು...ದೇಹಭಾವವ ಕಳೆದು, ಲೋಕಮಿಥ್ಯವ ತಿಳಿದು, ಸತ್ಯ ಬ್ರಹ್ಮವನರಿತು, ಬ್ರಹ್ಮಭಾವದಿ ನಿಂತು, ಧನ್ಯತೆಯ ಪಡೆ ಮನುಜ, ಶಾಂತಿಯನು ಹೊಂದು..._ *ಬ್ರಹ್ಮಸತ್ಯಂ ಜಗನ್ಮಿಥ್ಯಾ ಜೀವೋ ಬ್ರಹ್ಮೈವ ನಾಪರಃ* _ಬ್ರಹ್ಮವೊಂದೇ ಪರಮಸತ್ಯ. ಜಗತ್ತು ಆ ಬ್ರಹ್ಮದ ಮೇಲಿನ ಕೇವಲ ಹುಸಿ ತೋರಿಕೆ ಮಾತ್ರ. ಈ ಜೀವರಂತೆ ತೋರುವವರೆಲ್ಲ ಪರಮಾರ್ಥದೃಷ್ಟಿಯಿಂದ ಆ ಏಕಮೇವಾದ್ವಿತೀಯ ಪರತತ್ತ್ವವಾದ ಪರಬ್ರಹ್ಮವೇ ಆಗಿರುವರು._ *ನೇಹ ನಾನಾಸ್ತಿ ಕಿಂಚನ* _ಇಲ್ಲಿ ಪರಮಾರ್ಥವಾಗಿ ನಾನಾತ್ವ, ವೈವಿಧ್ಯ, ಬಹುತ್ವವಿಲ್ಲ. ಎಲ್ಲವೂ ಬ್ರಹ್ಮಸ್ವರೂಪವೇ ಆಗಿರುವುದು._ *ಸರ್ವಂ ಖಲ್ವಿದಂ ಬ್ರಹ್ಮ.* 🙏🙏🙏💐🥰 *ಲೋಕಾಃ ಸಮಸ್ತಾಃ ಸುಖಿನೋ ಭವನ್ತು* *
Comments
Post a Comment