Posts

Showing posts from May, 2020

೨.2. ಬ್ರಹ್ಮವಿದ್ಯೆ

೧ https://anchor.fm/dr-krishna-moorthy-dambe/episodes/2-eeoocm ೨ https://anchor.fm/dr-krishna-moorthy-dambe/episodes/2-eepuok ೩ https://anchor.fm/dr-krishna-moorthy-dambe/episodes/2-eer7lc ೪ https://anchor.fm/dr-krishna-moorthy-dambe/episodes/2-eeslp1 ೫ https://anchor.fm/dr-krishna-moorthy-dambe/episodes/2-eeu38j

೨.1. "ವೇದಾಂತವಿಚಾರವೂ ಆಧುನಿಕ ಜನಜೀವನವೂ"— ಕುರಿತು ಪ್ರವಚನ (ಶ್ರೀಶ್ರೀಸಚ್ಚಿದಾನಂದೇಂದ್ರಸರಸ್ವತೀಸ್ವಾಮೀಜಿಗಳ ಕೃತಿ)

೧ https://archive.org/details/1-_20200526_202005 ೨ https://anchor.fm/dr-krishna-moorthy-dambe/episodes/1-eel0p4 ೩ https://archive.org/details/1-_20200528 ೪ https://anchor.fm/dr-krishna-moorthy-dambe/episodes/1-eenab4

ಯೋಗವಾಸಿಷ್ಠಮ್ ೧

ಯೋಗವಾಸಿಷ್ಠಮ್ ೧ (ವಾಲ್ಮೀಕೀಯಮ್) (ಪರಮಹಂಸ-ಶ್ರೀಮದ್-ಆನಂದಬೋಧೇಂದ್ರಸರಸ್ವತೀ-ಪ್ರಣೀತ-ವಾಸಿಷ್ಠ-ಮಹಾರಾಮಾಯಣ-ತಾತ್ಪರ್ಯ-ಪ್ರಕಾಶಾಖ್ಯ-ವ್ಯಾಖ್ಯಾಯಾಃ-ದಂಬೆ-ಕೃಷ್ಣಮೂರ್ತಿಶಾಸ್ತ್ರಿ-ಕೃತೇನ ಕರ್ಣಾಟಕಭಾಷಾನುವಾದೇನ ಸಹಿತಮ್) ೧. ವೈರಾಗ್ಯಪ್ರಕರಣಮ್ ೧) ಸೂತ್ರಪಾತನಕೋ ನಾಮ ಪ್ರಥಮಃ ಸರ್ಗಃ ಯತಃ ಸರ್ವಾಣಿ ಭೂತಾನಿ ಪ್ರತಿಭಾನ್ತಿ ಸ್ಥಿತಾನಿ ಚ | ಯತ್ರೈವೋಪಶಮಂ ಯಾನ್ತಿ ತಸ್ಮೈ ಸತ್ಯಾತ್ಮನೇ ನಮಃ ||೧|| ಯಾವುದರಿಂದ ಸಕಲಚರಾಚರಗಳು ಪ್ರಕಾಶಿಸುವುವೋ / ಉಂಟಾಗುವುವೋ / ಪ್ರಕಾಶಕ್ಕೆ ಬರುವುವೋ, ಇರುವುವೋ / ಸ್ಥಿತವಾಗಿವೆಯೋ, ಹಾಗೂ ಯಾವುದರಲ್ಲೇ ಉಪಶಮನಹೊಂದುವುವೋ / ಲಯವಾಗುವುವೋ, ಅಂತಹ ಸತ್ಯಾತ್ಮಕ್ಕೆ / ನಿಜವಾದ ಆತ್ಮಕ್ಕೆ / ಅವ್ಯಕ್ತವಾದರೂ ನಿಜವಾಗಿಯೂ ಇರುವ ನಮ್ಮ ಅಂತರಾತ್ಮಕ್ಕೆ / ಅಂತರ್ಯಾಮಿಯಾದ (ಲಿಂಗಾತೀತ, ಗುಣಾತೀತ, ಕಾಲಾತೀತ, ನಾಮ-ರೂಪಾತೀತ) ಪರಮಾತ್ಮಕ್ಕೆ ನಮಸ್ಕಾರ. ಜ್ಞಾತಾ ಜ್ಞಾನಂ ತಥಾ ಜ್ಞೇಯಂ ದ್ರಷ್ಟಾ ದರ್ಶನದೃಶ್ಯಭೂಃ | ಕರ್ತಾ ಹೇತುಃ ಕ್ರಿಯಾ ಯಸ್ಮಾತ್ತಸ್ಮೈ ಜ್ಞಪ್ತ್ಯಾತ್ಮನೇ ನಮಃ ||೨|| ಯಾವನು ಜ್ಞಾತೃವೂ (ತಿಳಿಯುವವನೂ), ಜ್ಞಾನವೂ (ತಿಳುವಳಿಕೆಯೂ), ಹಾಗೆಯೇ ಜ್ಞೇಯವೂ (ತಿಳಿಯಲ್ಪಡಬೇಕಾದುದೂ); ದ್ರಷ್ಟಾ (ಕಾಣುವವನೂ), ದರ್ಶನ (ಕಾಣುವುದೂ / ಕಂಡದ್ದೂ), ದೃಶ್ಯವೂ (ಕಾಣಬೇಕಾದದ್ದೂ); ಕರ್ತೃವೂ (ಮಾಡುವವನೂ), ಹೇತುವೂ (ಎಲ್ಲಕ್ಕೂ ಕಾರಣನೂ) ಆಗಿರುವನೋ, ಯಾವನಿಂದಾಗಿ ಲೋಕದ ಸಮಸ್ತಕ್ರಿಯೆ...