೧) ಅಗಸ್ತ್ಯಗೀತಾ
೧) ಅಗಸ್ತ್ಯಗೀತಾ (ವರಾಹಪುರಾಣ ಅಧ್ಯಾಯ ೫೧-೬೭) ಶ್ರೀವರಾಹ ಉವಾಚ | ಶ್ರುತ್ವಾ ದುರ್ವಾಸಸೋ ವಾಕ್ಯಂ ಧರಣೀವ್ರತಮುತ್ತಮಮ್ | ಯಯೌ ಸತ್ಯತಪಾಃ ಸದ್ಯೋ ಹಿಮವತ್ಪಾರ್ಶ್ವಮುತ್ತಮಮ್ || ೫೧.೧ || ಶ್ರೀವರಾಹಸ್ವಾಮಿಯು ಹೇಳಿದನು— ಮಹರ್ಷಿ ದುರ್ವಾಸರ ಮಾತನ್ನು ಕೇಳಿ ಸತ್ಯವನ್ನೇ ತನ್ನ ತಪವನ್ನಾಗಿಸಿದ ರಾಜಾ ಸತ್ಯತಪನು ಕೂಡಲೇ ಉತ್ತಮವಾದ ಹಿಮವತ್ಪರ್ವತದ ತಪ್ಪಲಿನಲ್ಲಿ ಉತ್ತಮವಾದ ಧರಣೀವ್ರತವೆಂದು (ಭೂದೇವಿಯು ಹಿಂದೆ ಆಚರಿಸಿ ವರಾಹಸ್ವಾಮಿಯಿಂದ ಉದ್ಧರಿಸಲ್ಪಟ್ಟುದರಿಂದ) ಪ್ರಸಿದ್ಧವಾದ ದಾಮೋದರದ್ವಾದಶೀವ್ರತವನ್ನು ಆಚರಿಸಿದನು. ಪುಷ್ಪಭದ್ರಾನದೀ ಯತ್ರ ಶಿಲಾ ಚಿತ್ರಶಿಲಾ ತಥಾ | ವಟೋ ಭದ್ರವಟೋ ಯತ್ರ ತತ್ರ ತಸ್ಯಾಶ್ರಮೋ ಬಭೌ | ತತ್ರೋಪರಿ ಮಹತ್ ತಸ್ಯ ಚರಿತಂ ಸಮ್ಭವಿಷ್ಯತಿ || ೫೧.೨ || ಎಲ್ಲಿ ಪುಷ್ಪಭದ್ರಾನದಿಯೂ, ವಿಚಿತ್ರತರವಾದ ಕಲ್ಲುಬಂಡೆಗಳೂ, ಮಂಗಲಕರವಾದ ವಟ (ಅಶ್ವತ್ಥ) ವೃಕ್ಷವೂ / ಭದ್ರವಟವೂ ಇದ್ದವೋ ಅಲ್ಲಿ ಆ ರಾಜನ ಆಶ್ರಮವಿತ್ತು. ಅಂತಹ ಆ ರಾಜಾ ಸತ್ಯತಪನ ಚರಿತೆಯು ಅಲ್ಲಿ ಮಹತ್ತರವಾಗಿ ಸಂಭವಿಸುವುದು. ಧರಣ್ಯುವಾಚ— ಬಹುಕಲ್ಪಸಹಸ್ರಾಣಿ ವ್ರತಸ್ಯಾಸ್ಯ ಸನಾತನ | ಮಯಾ ಕೃತಸ್ಯ ತಪಸಃ ತನ್ಮಯಾ ವಿಸ್ಮೃತಂ ಪ್ರಭೋ || ೫೧.೩ || ಭೂದೇವಿಯು ಹೇಳಿದಳು— ಹೇ ಸನಾತನನಾದ ಪ್ರಭುವೇ! ನಾನೀ ವ್ರತವನ್ನೂ, ತಪಸ್ಸನ್ನೂ ಆಚರಿಸಿ ಅನೇಕ ಸಾವಿರಕಲ್ಪಗಳಾದುದರಿಂದ ನನಗೆ ಮರೆತೇಹೋಗಿದ್ದಿತು. ಇದಾನೀಂ ತ್ವತ್ಪ್ರಸಾದೇನ ಸ್ಮರಣಂ ಪ್ರಾಕ್ತನಂ ಮಮ | ಜಾ...