॥ हरिः ॐ ॥ विवेकचूडामणिः १ (शङ्कर-भगवत्पाद- विरचितः / विरचिता) || ಹರಿಃ ಓಮ್ || ವಿವೇಕಚೂಡಾಮಣಿ ೧ (ಶಂಕರ-ಭಗವತ್ಪಾದ-ವಿರಚಿತ) १) समर्पणम् / मङ्गलाचरणम् सर्व-वेदान्त-सिद्धान्त-गोचरं तमगोचरम् । गोविन्दं परमानन्दं सद्गुरुं प्रणतोऽस्म्यहम् ॥ १ ॥ (पंचमं लघु सर्वत्र सप्तमं द्विचतुर्थयोः | गुरुषष्ठं च पादानां चतुर्णां स्याद्- अनुष्टुभि ||) ೧) ಸಮರ್ಪಣೆ / ಮಂಗಲಾಚರಣೆ ಸರ್ವ-ವೇದಾನ್ತ-ಸಿದ್ಧಾನ್ತ-ಗೋಚರಂ ತಮಗೋಚರಮ್ । ಗೋವಿನ್ದಂ ಪರಮಾನನ್ದಂ ಸದ್ಗುರುಂ ಪ್ರಣತೋಽಸ್ಮ್ಯಹಮ್ ॥ ೧ ॥ (ಪಂಚಮಂ ಲಘು ಸರ್ವತ್ರ ಸಪ್ತಮಂ ದ್ವಿಚತುರ್ಥಯೋಃ | ಗುರುಷಷ್ಠಂ ಚ ಪಾದಾನಾಂ ಚತುರ್ಣಾಂ ಸ್ಯಾದ್- ಅನುಷ್ಟುಭಿ ||) ಸಮಸ್ತ ವೇದರಾಶಿಯ ಸಾರಸ್ವರೂಪವೂ ಅಂತಿಮಭಾಗವೂ ಆಗಿ ವೇದಾಂತವೆನಿಸಿದ ಉಪನಿಷತ್ತುಗಳ ತಾತ್ಪರ್ಯ (ಪ್ರತಿಪಾದಿತ ಸಿದ್ಧಾಂತ)ಕ್ಕೆ ಮಾತ್ರ ಗೋಚರಿಸುವವನೂ (ನಿಲುಕುವವನೂ, ವಿಷಯವಾಗಿರುವವನೂ), ಮಾತು-ಮನಸ್ಸುಗಳಿಗೆ ಅಗೋಚರನೂ (" यतो वाचो निवर्तन्ते अप्राप्य मनसा सह "— श्रुतिः), ಪರಮಾನಂದ (ಬ್ರಹ್ಮಾನಂದ, ಆತ್ಮಾನಂದ, ಶ್ರೇಷ್ಠವೂ ನಿತ್ಯವೂ ಶಾಶ್ವತವೂ ಆದ ಆನಂದ) ಸ್ವರೂಪನೂ, ಸದ್ಗುರುವೂ (ಜಗದ್ಗುರುವೂ) ಆದ ಗೋವಿಂದ ಭಗವತ್ಪಾದರನ್ನು ( /ವಿಷ್ಣುವನ್ನು) ಪ್ರಣಾಮ ಮಾಡಿದವನಾಗಿದ್ದೇನೆ. २) आध्यात्मिकजीवनस्य ...